ವಾಹನ ಸವಾರರಿಗೆ ನೆರವಾಗಲು 8 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿಯೇ ನಿಂತ ಹೂ ಮಾರುವ ಮಹಿಳೆ

ಭಾರತದಲ್ಲಿ ಭಾರಿ ಮಳೆ ಬಿದ್ದ ಸಂದರ್ಭಗಳಲ್ಲಿ ರಸ್ತೆಗಳು ಮಳೆ ನೀರಿನಿಂದ ಜಲಾವೃತವಾಗಿರುತ್ತವೆ. ರಸ್ತೆಯಲ್ಲಿ ನಿಂತ ನೀರು ಹರಿದು ಹೋಗಲು ಹೆಚ್ಚು ಸಮಯ ಬೇಕಾಗುವುದರಿಂದ ವಾಹನ ಸವಾರರು ನಾನಾ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ. ಇದು ಕೆಲವೊಮ್ಮೆ ರಸ್ತೆ ಅಪಘಾತಕ್ಕೂ ಕಾರಣವಾಗುತ್ತದೆ.

ವಾಹನ ಸವಾರರಿಗೆ ನೆರವಾಗಲು 8 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿಯೇ ನಿಂತ ಹೂ ಮಾರುವ ಮಹಿಳೆ

ಮಳೆ ನೀರಿನಿಂದ ರಸ್ತೆ ಗುಂಡಿಗಳು ಕಾಣದೇ ಇರುವುದರಿಂದ ವಾಹನ ಸವಾರರು ಗಾಯಗೊಂಡು ಸಾವನ್ನಪ್ಪುವ ಸಾಧ್ಯತೆಗಳೂ ಇರುತ್ತವೆ. ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಿರಲಿ ಎಂಬ ಸದ್ದುದೇಶದಿಂದ ಮಹಿಳೆಯೊಬ್ಬರು ಸುಮಾರು 8 ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ನಿಂತು ವಾಹನ ಸವಾರರಿಗೆ ಮ್ಯಾನ್ ಹೋಲ್ ಬಗ್ಗೆ ಎಚ್ಚರಿಕೆ ನೀಡುತ್ತಿದ್ದ ಘಟನೆ ನಡೆದಿದೆ.

ವಾಹನ ಸವಾರರಿಗೆ ನೆರವಾಗಲು 8 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿಯೇ ನಿಂತ ಹೂ ಮಾರುವ ಮಹಿಳೆ

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಪ್ರತಿವರ್ಷ ಭಾರೀ ಪ್ರಮಾಣದ ಮಳೆಯಾಗುತ್ತದೆ. ಈ ವರ್ಷ ಇನ್ನೂ ಹೆಚ್ಚಿನ ಮಳೆಯಾಗುತ್ತಿದೆ. ಅದರಲ್ಲೂ ಆಗಸ್ಟ್ 4ರಂದು ಭಾರಿ ಪ್ರಮಾಣದ ಮಳೆಯಾಯಿತು. ಇದರಿಂದಾಗಿ ಮುಂಬೈನ ರಸ್ತೆಗಳು ಮಳೆನೀರಿನಲ್ಲಿ ಮುಳುಗಿದವು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ವಾಹನ ಸವಾರರಿಗೆ ನೆರವಾಗಲು 8 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿಯೇ ನಿಂತ ಹೂ ಮಾರುವ ಮಹಿಳೆ

ಇದೇ ವೇಳೆ ರಸ್ತೆಯಲ್ಲಿದ್ದ ಮ್ಯಾನ್ ಹೋಲ್ ನ ಮುಚ್ಚಳ ತೆರೆದುಕೊಂಡಿತ್ತು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುವುದು ಖಚಿತ ಎಂಬುದನ್ನು ಅರಿತ 55 ವರ್ಷದ ಮಹಿಳೆ ಸುರಿಯುವ ಮಳೆಯಲ್ಲಿಯೇ ಆ ಮ್ಯಾನ್ ಹೋಲ್ ಬಳಿ ನಿಂತು ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದರು.

ವಾಹನ ಸವಾರರಿಗೆ ನೆರವಾಗಲು 8 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿಯೇ ನಿಂತ ಹೂ ಮಾರುವ ಮಹಿಳೆ

ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಲು ಆ ಮಹಿಳೆ ಸುಮಾರು 8 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿಯೇ ಒಂದೇ ಸ್ಥಳದಲ್ಲಿ ನಿಂತಿದ್ದರು ಎಂಬುದು ಗಮನಾರ್ಹ. ಕಂದ ಮೂರ್ತಿ ಎಂಬ ಮಹಿಳೆಯೇ ಈ ರೀತಿ ಸುಮಾರು 8 ಗಂಟೆಗಳ ಕಾಲ ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ನೇರವಾದ ಮಹಿಳೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವಾಹನ ಸವಾರರಿಗೆ ನೆರವಾಗಲು 8 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿಯೇ ನಿಂತ ಹೂ ಮಾರುವ ಮಹಿಳೆ

ಕಂದ ಮೂರ್ತಿ ಹೂ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರು ತೆರೆದುಕೊಂಡಿದ್ದ ಮ್ಯಾನ್ ಹೋಲ್ ಬಳಿ ದೀರ್ಘಕಾಲ ನಿಂತು ವಾಹನ ಸವಾರರಿಗೆ ನೆರವಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಾಹನ ಸವಾರರಿಗೆ ನೆರವಾಗಲು 8 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿಯೇ ನಿಂತ ಹೂ ಮಾರುವ ಮಹಿಳೆ

ಪ್ರಶಂಸೆ ಮಾತ್ರವಲ್ಲದೇ, ಹಲವರು ದೇಣಿಗೆಗಳನ್ನು ಸಹ ನೀಡುತ್ತಿದ್ದಾರೆ. ಈ ಘಟನೆ ನಡೆದ ದಿನ ಭಾರೀ ಮಳೆಯಿಂದಾಗಿ ಅವರ ಮನೆ ಕೂಡ ಪ್ರವಾಹಕ್ಕೆ ಸಿಲುಕಿತ್ತು. ಪ್ರವಾಹದ ನೀರು ಹರಿದು ಹೋಗಲಿ ಎಂಬ ಕಾರಣಕ್ಕೆ ಮ್ಯಾನ್ ಹೋಲ್ ಮುಚ್ಚಳವನ್ನು ತೆರೆದು ಅದರ ಪಕ್ಕದಲ್ಲಿ ನಿಂತು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವಾಹನ ಸವಾರರಿಗೆ ನೆರವಾಗಲು 8 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿಯೇ ನಿಂತ ಹೂ ಮಾರುವ ಮಹಿಳೆ

ಮುಂಬೈ ಕಾರ್ಪೊರೇಷನ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮ್ಯಾನ್ ಹೋಲ್ ಮುಚ್ಚಳ ತೆರೆದ ಕಾರಣಕ್ಕೆ ಕಂದ ಮೂರ್ತಿಯವರನ್ನು ಅಧಿಕಾರಿಗಳು ಗದರಿಸಿದ್ದಾರೆ ಎಂದು ವರದಿಗಳಾಗಿವೆ. ಆದರೆ ಇದರ ಬಗ್ಗೆ ಕಂದ ಮೂರ್ತಿಯವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ವಾಹನ ಸವಾರರಿಗೆ ನೆರವಾಗಲು 8 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿಯೇ ನಿಂತ ಹೂ ಮಾರುವ ಮಹಿಳೆ

ಪೊಲೀಸರು ಹಾಗೂ ವಾಹನ ಸವಾರರು ಕಂದ ಮೂರ್ತಿಯವರನ್ನು ಶ್ಲಾಘಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಮುಂಬೈ ಕಾರ್ಪೊರೇಷನ್ ಅಧಿಕಾರಿಗಳು ಮಾತ್ರ ಕಂದ ಮೂರ್ತಿಯವರನ್ನೇ ಗದರಿಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಂದ ಮೂರ್ತಿಯವರು ಮ್ಯಾನ್ ಹೋಲ್ ಮುಚ್ಚಳವನ್ನು ತೆರೆಯದೇ ಹೋಗಿದ್ದರೆ ರಸ್ತೆಯಲ್ಲಿ ಮಳೆ ನೀರು ಇನ್ನೂ ಹೆಚ್ಚು ಕಾಲದವರೆಗೆ ಇರುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಮಳೆಗಾಲದಲ್ಲಿ ಭಾರತದ ರಸ್ತೆಗಳು ಪ್ರವಾಹಕ್ಕೆ ಸಿಲುಕುವುದು ಸಾಮಾನ್ಯ ಸಂಗತಿಯಾಗಿದೆ.

ವಾಹನ ಸವಾರರಿಗೆ ನೆರವಾಗಲು 8 ಗಂಟೆಗಳ ಕಾಲ ಸುರಿಯುವ ಮಳೆಯಲ್ಲಿಯೇ ನಿಂತ ಹೂ ಮಾರುವ ಮಹಿಳೆ

ಅದರಲ್ಲೂ ಅಭಿವೃದ್ಧಿ ಹೊಂದಿದ ನಗರ ಎಂದು ಹೆಸರಾದ ಮುಂಬೈನಲ್ಲಿಯೇ ಕೆಲವು ಗಂಟೆಗಳ ಕಾಲ ಮಳೆ ಸುರಿದರೆ, ರಸ್ತೆಗಳು ಪ್ರವಾಹಕ್ಕೆ ಒಳಗಾಗುತ್ತವೆ. ಆದ್ದರಿಂದ ಮಳೆ ಬಂದಾಗ ಮನೆಯೊಳಗೆ ಇರುವುದು ಒಳ್ಳೆಯದು.

Most Read Articles

Kannada
English summary
Flower seller woman in Mumbai stands 8 hours in rain to warn motorists about open manhole. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X