ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು!

By Nagaraja

'ಫೈಟ್ ಆಫ್ ಸೆಂಚುರಿ' ಅಥವಾ ಶತಮಾನದ ಬಾಕ್ಸಿಂಗ್ ಪಂದ್ಯದಲ್ಲಿ ಫಿಲಿಪಿನ್ಸ್‌ನ ಮ್ಯಾನಿ ಪ್ಯಾಕ್ವಿಯೊ ಅವರನ್ನು ಮಣಿಸಿರುವ ಅಮೆರಿಕದ ಫ್ಲಾಯ್ಡ್ ಮೇವೆದರ್ ಜೂನಿಯರ್ ಶತಮಾನದ ಬಾಕ್ಸರ್ ಆಗಿ ಹೊರ ಹೊಮ್ಮಿದ್ದರು.

ಇಂತಹ ಮೇವೆದರ್ ಶತಕೋಟಿ ರು.ಗಿಂತಲೂ ಬೆಲೆಬಾಳುವ ಕಾರು ಅಥವಾ ವಾಹನಗಳ ಒಡೆಯರಾಗಿದ್ದಾರೆ. ಅಂದರೆ ಐಷಾರಾಮಿ ವಾಹನಗಳ ಸಂಪಾದಿಸುವ ವಿಚಾರಕ್ಕೆ ಬಂದಾಗ ಮೇವೆದರ್ ಅವರವನ್ನು ಮೀರಿಸುವುದು ಸದ್ಯಕ್ಕೆ ಯಾರಿಗೂ ಸಾಧ್ಯವಿಲ್ಲ. ಯಾಕೆಂದರೆ ಬರೋಬ್ಬರಿ 345 ಕೋಟಿ ರು.ಗಿಂತಲೂ (£35m) ಹೆಚ್ಚು ಬೆಲೆಬಾಳುವ ವಾಹನಗಳ ಒಡೆಯರಾಗಿದ್ದಾರೆ.

ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು!

ವಿಶ್ವ ಕ್ರೀಡೆಯಲ್ಲೇ ಅತಿ ಹೆಚ್ಚು ಸಂಪಾದನೆ ಪಡೆಯುವ ಕ್ರೀಡಾಪಟು ಎಂದೆನಿಸಿಕೊಂಡಿರುವ ಮೇವೆದರ್ ತಮ್ಮ ಸಂಪಾದನೆಯ ಬಹು ಭಾಗವನ್ನು ಐಷಾರಾಮಿ ಜೀವನಕ್ಕಾಗಿ ವಿನಿಯೋಗಿಸುತ್ತಾರೆ.

ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು!

ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ ಪ್ರಕಾರ ಕಳೆದ ವರ್ಷ 66.1 ಮಿಲಿಯನ್ ಪೌಂಡ್ ಸಂಪಾದನೆ ಮಾಡಿರುವ ಮೇವೆದರ್, ದುಡ್ಡು ಒಂದು ಸಮಸ್ಯೆಯಲ್ಲದಿದ್ದರೆ ಏನೆಲ್ಲ ತಮ್ಮದಾಗಿಸುಬಹುದು ಎಂಬುದನ್ನು ತೋರಿಸಿಕೊಂಡಿದ್ದಾರೆ.

ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು!

ಮಿನುಮಿನುಗುವ ಐಷಾರಾಮಿ ಕಾರು ಹಾಗೂ ಖಾಸಗಿ ಜೆಟ್ ಮುಂದೆ ಫೋಸ್ ಕೊಟ್ಟ ದೃಢಕಾಯಾದ ಮೇವೆದರ್ ಹೇಳಿದಿಷ್ಟೇ - "ನನ್ನ ಆಟಿಕೆ ಜಗತ್ತಿಗೆ ನಿಮಗೂ ಸ್ವಾಗತ, ಯಾರೆಲ್ಲ ಆಡಲು ಬಯಸುವೀರಾ"?

ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು!

ಹೌದು, ನಿಜಕ್ಕೂ ಐಷಾರಾಮಿ ಕಾರುಗಳು ಮೇವೆದರ್ ಪಾಲಿಗೆ ಆಟಿಕೆ ವಸ್ತುಗಳಿಗೆ ಸಮಾನ. ಅಲ್ಲದೆ ಆಟಿಕೆಯನ್ನು ಕೊಂಡುಕೊಳ್ಳುವಷ್ಟು ಸಲೀಸಾಗಿ ಇವೆನ್ನೆಲ್ಲ ತಮ್ಮದಾಗಿಸಿದ್ದಾರೆ.

ಮೇವೇದರ್ ಬಳಿರುವ ಐಷಾರಾಮಿ ಕಾರುಗಳು ಹಾಗೂ ಅವುಗಳ ಬೆಲೆಯತ್ತ ಸಣ್ಣ ರೌಂಡ್ ಹಾಕೋಣವೇ?

ಮೇವೇದರ್ ಬಳಿರುವ ಐಷಾರಾಮಿ ಕಾರುಗಳು ಹಾಗೂ ಅವುಗಳ ಬೆಲೆಯತ್ತ ಸಣ್ಣ ರೌಂಡ್ ಹಾಕೋಣವೇ?

  • ಫೆರಾರಿ 599 ಜಿಟಿಬಿ (2 ಲಕ್ಷ ಬ್ರಿಟಿಷ್ ಪೌಂಡ್), - ಗರಿಷ್ಠ ವೇಗ 208 mph
  • ಪೋರ್ಷೆ 911 ಟರ್ಬೊ ಎಸ್ (1.5 ಲಕ್ಷ ಬ್ರಿಟಿಷ್ ಪೌಂಡ್), ಗರಿಷ್ಠ ವೇಗ 198 mph
  • ಲಂಬೋರ್ಗಿನಿ ಅವೆಂಟಡೊರ್ (3 ಲಕ್ಷ ಬ್ರಿಟಿಷ್ ಪೌಂಡ್), ಗರಿಷ್ಠ ವೇಗ 217 mph
  • ಫೆರಾರಿ 458 ಸ್ಪೈಡರ್ (2 ಲಕ್ಷ ಬ್ರಿಟಿಷ್ ಪೌಂಡ್), ಗರಿಷ್ಠ ವೇಗ 202 mph
  • ಮೇವೆದರ್ ಬಳಿರುವ ಐಷಾರಾಮಿ ಕಾರುಗಳು ಹಾಗೂ ಅವುಗಳ ಬೆಲೆಯತ್ತ ಸಣ್ಣ ರೌಂಡ್ ಹಾಕೋಣವೇ?

    ಮೇವೆದರ್ ಬಳಿರುವ ಐಷಾರಾಮಿ ಕಾರುಗಳು ಹಾಗೂ ಅವುಗಳ ಬೆಲೆಯತ್ತ ಸಣ್ಣ ರೌಂಡ್ ಹಾಕೋಣವೇ?

    • ಗಲ್ಫ್ಸ್ ಸ್ಟ್ರೀಮ್ ವಿ (30 ಮಿಲಿಯನ್ ಬ್ರಿಟಿಷ್ ಪೌಂಡ್),
    • ಬುಗಾಟಿ ವೆರೋನ್ (1.5 ಮಿಲಿಯನ್ ಬ್ರಿಟಿಷ್ ಪೌಂಡ್), ಗರಿಷ್ಠ ವೇಗ 267 mph
    • ರೋಲ್ಸ್ ರಾಯ್ಸ್ ಘೋಸ್ಟ್, ಬೆಂಟ್ಲಿ ಮುಲ್ಸಾನ್
    • ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು!

      ವಿಶೇಷವೆಂದರೆ ತಲಾ ಎರಡೆರಡು ಬುಗಾಟಿ ವರೋನ್ ಹಾಗೂ ಫೆರಾರಿ 458 ಸ್ಪೈಡರ್ ಕಾರುಗಳನ್ನು ಮೇವೆದರ್ ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಈ ಪೈಕಿ ಅತಿ ವೇಗ ಕಾರೆನಿಸಿಕೊಂಡಿರುವ ಬುಗಾಟಿ ವೆರೋನ್ ಗಂಟೆಗೆ 267 ಮೈಲು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

      ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು!

      ಬರಿ ಕಾರುಗಳನ್ನು ಮಾತ್ರ ಪರಿಗಣಿಸಿದರೆ ಮೇವೆದರ್ ಅವರು ಒಟ್ಟು 55 ಕೋಟಿ ರು.ಗಳಷ್ಟು ಮೌಲ್ಯದ ಸೂಪರ್ ಕಾರುಗಳನ್ನು ಹೊಂದಿದ್ದಾರೆ. ಇನ್ನು ಖಾಸಗಿ ಪಯಣಕ್ಕಾಗಿ ಕೋಟಿ ಬೆಲೆ ಬಾಳುವ ಜೆಟ್ ವಿಮಾನವನ್ನು ಬಳಕೆ ಮಾಡುತ್ತಾರೆ.

      ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು!

      37 ಹರೆಯದ ಓಟ ಇಲ್ಲಿಗೆ ನಿಲ್ಲುವುದಿಲ್ಲ. ಅಲ್ಲದೆ ಇತರೆ ಬಿಲಿಯನೇರ್ ಗಳಂತೆ ಕಳೆದ 13 ವರ್ಷಗಳಲ್ಲಿ ಸಂಪಾದಿಸಿರುವ ತಮ್ಮ ಸಂಪತ್ತನ್ನು ಜಗತ್ತಿಗೆ ತೋರಿಸಲು ಹಿಂಜರಿದವರಲ್ಲ. ಕಾರುಗಳ ಜೊತೆ ಜೊತೆಗೆ ತಾವು ಸಂಗ್ರಹಿಸಿರುವ ಶೂಗಳು, ಸನ್ ಗ್ಲಾಸ್ ಹಾಗೂ ವಾಚ್ ಗಳನ್ನು ಜಗತ್ತಿನ ಮುಂದೆ ಬಹಿರಂಗಪಡಿಸಿದ್ದಾರೆ.

      ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು!

      ತಮ್ಮ ಸಂಪತ್ತನ್ನು ಜಗತ್ತಿಗೆ ತೋರಿಸಲು ಸದಾ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕದಲ್ಲಿರುವ ಮೇವೆದರ್ ಕಳೆದ ವರ್ಷ ಎರಡು ದೊಡ್ಡ ಬಾಕ್ಸಿಂಗ್ ಹೋರಾಟದಲ್ಲಿ ಲಭಿಸಿದ 60 ಮಿಲಿಯನ್ ಪೌಂಡ್ ಮೊತ್ತವನ್ನು ಇಸ್ಟಾಗ್ರಾಂನಲ್ಲಿ ಹಾಕಿದ್ದರು.

      ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು!

      ಮೇವೆದರ್ ವೃತ್ತಿ ಜೀವನದ ಉದ್ದಕ್ಕೂ ವಿವಾದದ ಹುತ್ತವೂ ಹಿಂಬಾಲಿಸುತ್ತಲೇ ಬಂದಿದೆ. ಆದರೆ ಇವೆಲ್ಲಕ್ಕೂ ದುಡ್ಡಿನಿಂದಲೇ ಪರಿಹಾರವನ್ನು ಕಂಡುಕೊಂಡಿದ್ದಾರೆ ಅಂದರೆ ತಪ್ಪಾಗಲಾರದು.

      ಶತಮಾನದ ಬಾಕ್ಸರ್ ಮೇವೆದರ್ ಶತಕೋಟಿಯ ಕಾರುಗಳು!

      ಪ್ಯಾಕ್ವಿಯೊ ವಿರುದ್ಧದ ಶತಮಾನದ ಫೈಟಿಂಗ್ ಸೇರಿದಂತೆ ಬಾಕ್ಸಿಂಗ್ ಬದುಕಿನ 48 ಹೋರಾಟಗಳಲ್ಲೂ 48 ಬಾರಿಯೂ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿರುವ ಮೇವೆದರ್ ಇಂದಿಗೂ ಸೋಲರಿಯದ ಸರದಾರನಾಗಿ ಮುನ್ನುಗ್ಗುತ್ತಿದ್ದಾರೆ.

More from DriveSpark

Article Published On: Thursday, June 11, 2015, 10:40 [IST]
English summary
Floyd Mayweather's super fleet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+