Fly BLADE India: ಬೆಳಗ್ಗೆ ದರ್ಶನ ಪಡೆದು ಸಂಜೆ ಹಿಂತಿರುಗಿ... ಬೆಂಗಳೂರು-ತಿರುಪತಿಗೆ ಸೇವೆ ಆರಂಭ

ಹಂಚ್ ವೆಂಚರ್ಸ್ ಮತ್ತು ಬ್ಲೇಡ್ ಏರ್ ಮೊಬಿಲಿಟಿ ಇಂಕ್ ನಡುವಿನ ಜಂಟಿ ಉದ್ಯಮವಾಗಿರುವ Fly BLADE India, ತಿರುಮಲ ತಿರುಪತಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗಾಗಿ ಬೆಂಗಳೂರಿನಿಂದ ಒಂದೇ ದಿನದಲ್ಲಿ ಹೋಗಿ-ಬರುವ ಹೆಲಿಕಾಪ್ಟರ್ ಸೇವೆಗಳನ್ನು ಪರಿಚಯಿಸಿದೆ. ಬೆಲೆ, ಪ್ರಯಾಣ ಕುರಿತ ವಿವಿರಗಳನ್ನು ಇಲ್ಲಿ ನೋಡೋಣ.

ಬೆಂಗಳೂರು- ತಿರುಮಲ ತಿರುಪತಿ ಹೆಲಿಕಾಪ್ಟರ್ ಸೇವೆಯು ತಿರುಪತಿಗೆ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಯಾತ್ರಾರ್ಥಿಗಳಿಗೆ, ವಿಶೇಷವಾಗಿ ಹಿರಿಯರಿಗೆ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ಹಾಗೂ ಪ್ರಯಾಣ ಸಮಯವನ್ನು ತಗ್ಗಿಸಲು ಈ ಮಾರ್ಗವು ಈಗ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಹೆಲಿಕಾಪ್ಟರ್‌ಗಳು ಬೇಡಿಕೆಯ ಆಧಾರದ ಮೇಲೆ ಲಭ್ಯವಿರುತ್ತವೆ ಎಂದು ಫ್ಲೈಬ್ಲೇಡ್ ಇಂಡಿಯಾ ತಿಳಿಸಿದೆ.

Fly BLADE India

ಈ ಹೆಲಿಕಾಪ್ಟರ್ ಮೂಲಕ ಏಕಕಾಲದಲ್ಲಿ 5 ಮಂದಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, ಒಮ್ಮೆ ಬುಕ್ ಮಾಡಿಕೊಂಡರೆ ಐದು ಮಂದಿಗೆ ರೂ. 3,50,000 (+ GST) ವಾಗುತ್ತದೆ. ಬೆಂಗಳೂರಿನ HAL ವಿಮಾನ ನಿಲ್ದಾಣದಿಂದ ತಿರುಪತಿ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 09:15 ರಿಂದ 09:30 ರವರೆಗೆ ಮತ್ತು ಸಂಜೆ 04:00 ರಿಂದ 4:15 ಕ್ಕೆ ಹಿಂದಿರುಗಿಸುತ್ತದೆ.

ಹಾಗೆಯೇ ಇಂಟರ್ ಸ್ಟೆಟ್ ಸೇವೆಗಳು ಕೂಡ ಇದ್ದು, ಬೆಂಗಳೂರನ್ನು ಕೂರ್ಗ್ ಮತ್ತು ಕಬಿನಿಗೆ ಸಂಪರ್ಕಿಸುವ ಮಾರ್ಗವನ್ನು ತೆರೆದಿದೆ. ಈ ಮಾರ್ಗದಲ್ಲಿ ಬೆಲೆಗಳು ಪ್ರತಿ ವ್ಯಕ್ತಿಗೆ ರೂ. 20,000 ದಿಂದ ಪ್ರಾರಂಭವಾಗುತ್ತವೆ. ಪ್ರತಿ ವ್ಯಕ್ತಿಗೆ ರೂ. 4,500 ಕ್ಕೆ ನಗರ ಕೇಂದ್ರ ಬಿಐಎಎಲ್ ಅನ್ನು ಸಂಪರ್ಕಿಸುತ್ತದೆ ಎಂದು ಫ್ಲೈಬ್ಲೇಡ್ ಇಂಡಿಯಾ ತಿಳಿಸಿದೆ.

Fly BLADE India

ಎಲೆಕ್ಟ್ರಿಕ್ ವರ್ಟಿಕಲ್ ಏರ್‌ಕ್ರಾಫ್ಟ್ಸ್ ಜೊತೆಗೆ ಸಾಂಪ್ರದಾಯಿಕ ಹೆಲಿಕಾಪ್ಟರ್‌ಗಳ ಸಾಧನಗಳ ವಿನಿಮಯಕ್ಕಾಗಿ ಸಿದ್ಧಪಡಿಸಲು ಬ್ಲೇಡ್ ಇಂಡಿಯಾ ಈವ್ ಏರ್ ಮೊಬಿಲಿಟಿಯಂತಹ ಇವಿಎ ತಯಾರಕ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಸಹ ಹೊಂದಿದೆ. ಈ ಪಾಲುದಾರಿಕೆ ಅಡಿಯಲ್ಲಿ, ಬ್ಲೇಡ್ ಇಂಡಿಯಾ 2026 ರ ವೇಳೆಗೆ EVE ಯ 200 ವಿಮಾನಗಳನ್ನು ಪಡೆಯಲಿದೆ ಎಂದು ತಿಳಿದುಬಂದಿದೆ.

ತಿರುಪತಿಯಲ್ಲಿ ಫ್ಲೈಬ್ಲೇಡ್ ಇಂಡಿಯಾ ಸೇವೆಗಳ ಪ್ರಾರಂಭದ ಕುರಿತು ಪ್ರತಿಕ್ರಿಯಿಸಿದ ಬ್ಲೇಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಮಿತ್ ದತ್ತಾ, "ಭಾರತದಲ್ಲಿ ವಯಸ್ಸಾದವರಿಗೆ ತೀರ್ಥಯಾತ್ರೆ ಮಾಡುವುದು ಸವಾಲುಗಳಿಂದ ಕೂಡಿದೆ. ದೇಶದಲ್ಲಿ ತಿರುಪತಿಯು ಭಕ್ತಿಯ ಬೆಳಕಾಗಿ ನಿಂತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಬ್ಲೇಡ್ ಇಂಡಿಯಾ ಈ ಆಧ್ಯಾತ್ಮಿಕ ತಾಣಕ್ಕೆ ಸಂಪರ್ಕವನ್ನು ಸುಧಾರಿಸಲು ಪ್ರಯತ್ನಿಸುತ್ತದೆ ಎಂದರು.

Fly BLADE India

ಸುಧೀರ್ಘ ಪ್ರಯಾಣದಿಂದ ಪರದಾಡುತ್ತಿದ್ದ ಪ್ರಯಾಣಿಕರು ಬ್ಲೇಡ್ ಇಂಡಿಯಾದಿಂದ ಬಿಡುವು ಪಡೆಯಬಹುದು. ಯಾತ್ರಿಕರು ಈಗ ಆಕಾಶ ಪ್ರಯಾಣವನ್ನು ಮಾಡಿ, ಅದೇ ದಿನದಲ್ಲಿ ನಗರಕ್ಕೆ ಹಿಂತಿರುಗಬಹುದು. ಅನುಕೂಲತೆ, ವೇಗ ಮತ್ತು ಟೈಮ್‌ಲೆಸ್ ಪ್ರಯಾಣ ಪರಿಣಾಮಕಾರಿಯಾಗಿರುತ್ತದೆ. ಮುಂದಿನ ದಿನಗಳಲ್ಲಿ ಪ್ರಯಾಣಗಳನ್ನು ಇನ್ನೂ ಸುಲಭಗೊಳಿಸಿ ಪ್ರಯಾಣಿಕರಿಗೆ ಇತರ ನಗರಳ ನಡುವೆ ಪ್ರಯಾಣಿಸುವಂತೆ ಮಾಡಲು ಬ್ಲೇಡ್ ಇಂಡಿಯಾ ಸಜ್ಜುಗೊಳ್ಳುತ್ತಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 9, 2023, 13:45 [IST]
English summary
Fly blade india bengaluru tirupati helicopter service started
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+