ಡೆಟ್ರಾಯಿಟ್ ‌ಆಟೋ ಶೋನಲ್ಲಿ ಸದ್ದು ಮಾಡಿದ ಜಪಾನ್ ಫ್ಲೈಯಿಂಗ್ ಬೈಕ್: ಶೀಘ್ರದಲ್ಲೇ ಮಾರುಕಟ್ಟೆಗೆ

ಜಪಾನಿನ ಸ್ಟಾರ್ಟ್‌ಅಪ್ ಕಂಪನಿ ಏರ್‌ವಿನ್ಸ್ ಟೆಕ್ನಾಲಜೀಸ್ ಗುರುವಾರ (ಸೆಪ್ಟೆಂಬರ್ 15) ಯುಎಸ್‌ಎಯ ಡೆಟ್ರಾಯಿಟ್‌ನಲ್ಲಿ ನಡೆಯುತ್ತಿರುವ ಆಟೋ ಶೋನಲ್ಲಿ ತನ್ನ ಮೊದಲ ಹೋವರ್‌ಬೈಕ್ ಎಕ್ಸ್‌ಟೂರಿಸ್ಮೊವನ್ನು ಬಹಿರಂಗಪಡಿಸಿದೆ.

ಡೆಟ್ರಾಯಿಟ್ ‌ಆಟೋ ಶೋನಲ್ಲಿ ಸದ್ದು ಮಾಡಿದ ಜಪಾನ್ ಫ್ಲೈಯಿಂಗ್ ಬೈಕ್: ಶೀಘ್ರದಲ್ಲೇ ಮಾರುಕಟ್ಟೆಗೆ

ಈ ಫ್ಲೈಯಿಂಗ್ ಬೈಕ್ ಮುಂದಿನ ವರ್ಷ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬೈಕ್ ಸಂಪೂರ್ಣವಾಗಿ ಬ್ಯಾಟರಿ ಚಾಲಿತವಾಗಿದ್ದು, ಒಬ್ಬ ವ್ಯಕ್ತಿಯೊಂದಿಗೆ ಹಾರಾಟ ನಡೆಸಬಹುದಾಗಿದೆ. ಈ ಬೈಕ್ 40 ನಿಮಿಷಗಳ ಕಾಲ ಗಾಳಿಯಲ್ಲಿ ಹಾರಬಲ್ಲದು ಎಂದು ಹೋವರ್ ಬೈಕ್ ಅನ್ನು ತಯಾರಿಸಿರುವ ಕಂಪನಿ ಹೇಳಿಕೊಂಡಿದೆ.

ಈ ಹಾರುವ ಬೈಕ್ ಗಂಟೆಗೆ 60 ಮೈಲುಗಳ ವೇಗದಲ್ಲಿ ಅಂದರೆ ಸುಮಾರು 100 ಕಿ.ಮೀ ವೇಗದಲ್ಲಿ ಹಾರಬಲ್ಲದು. ಈ ಹಾರುವ ಹೋವರ್‌ಬೈಕ್‌ನ ತೂಕವನ್ನು ಕಡಿಮೆ ಮಾಡಲು, ಇದನ್ನು ಸಂಪೂರ್ಣವಾಗಿ ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಚಾಲಕನ ತೂಕವನ್ನು ಸರಿಹೊಂದಿಸಿ ಬೈಕ್ ಹಾರಿಸಲು ಸಹಕಾರಿಯಾಗುತ್ತದೆ.

ಡೆಟ್ರಾಯಿಟ್ ‌ಆಟೋ ಶೋನಲ್ಲಿ ಸದ್ದು ಮಾಡಿದ ಜಪಾನ್ ಫ್ಲೈಯಿಂಗ್ ಬೈಕ್: ಶೀಘ್ರದಲ್ಲೇ ಮಾರುಕಟ್ಟೆಗೆ

ಇದೇ ವೇಳೆ ಬೈಕ್ ಹಾರಲು ನೆರವಾಗಲು ನಾಲ್ಕು ಚಿಕ್ಕ ಹಾಗೂ ಎರಡು ದೊಡ್ಡ ರೋಟರ್ ಅಳವಡಿಸಲಾಗಿದೆ. ಮಾಹಿತಿಯ ಪ್ರಕಾರ, ಈ ಬೈಕ್ ಡ್ರೋನ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಲಂಬವಾದ ಟೇಕಾಫ್ ಮತ್ತು ಲ್ಯಾಂಡಿಂಗ್ ಅನ್ನು ಬಹಳ ಸುಲಭವಾಗಿ ಮಾಡಬಹುದು. ಈ ಹೋವರ್‌ಬೈಕ್ ಅನ್ನು ಈಗಾಗಲೇ ಜಪಾನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಡೆಟ್ರಾಯಿಟ್ ‌ಆಟೋ ಶೋನಲ್ಲಿ ಸದ್ದು ಮಾಡಿದ ಜಪಾನ್ ಫ್ಲೈಯಿಂಗ್ ಬೈಕ್: ಶೀಘ್ರದಲ್ಲೇ ಮಾರುಕಟ್ಟೆಗೆ

ಏರ್‌ವಿನ್ಸ್ ಸಂಸ್ಥಾಪಕ ಮತ್ತು ಸಿಇಒ ಶುಹೇ ಕೊಮಾಟ್ಸು ಅವರು 2023 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಣ್ಣ ಆವೃತ್ತಿಯನ್ನು ಮಾರಾಟ ಮಾಡುವ ಯೋಜನೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಈ ಬೈಕ್ ಹಾರಿಸಿದ ಅನುಭವ ಸ್ಟಾರ್‌ವಾರ್ ನಲ್ಲಿ ಹೋವರ್ ಬೈಕ್ ಹಾರಿಸಿದಂತೆ ಎಂದು ಡೆಟ್ರಾಯಿಟ್ ನಲ್ಲಿ ಬೈಕ್ ಹಾರಿಸಿದ ಇನ್ಸ್ ಪೆಕ್ಟರ್ ಥಾಡ್ ಜೋಟ್ ಹೇಳಿದ್ದಾರೆ.

ಡೆಟ್ರಾಯಿಟ್ ‌ಆಟೋ ಶೋನಲ್ಲಿ ಸದ್ದು ಮಾಡಿದ ಜಪಾನ್ ಫ್ಲೈಯಿಂಗ್ ಬೈಕ್: ಶೀಘ್ರದಲ್ಲೇ ಮಾರುಕಟ್ಟೆಗೆ

ಬೆಲೆ ?

ಕಂಪನಿಯು ಯುಎಸ್‌ನಲ್ಲಿ ಈ ಹೋವರ್‌ಬೈಕ್‌ನ ಬೆಲೆಯನ್ನು $ 7,77,000 ಎಂದು ನಿಗದಿಪಡಿಸಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 6 ಕೋಟಿ ರೂ. ಇರಬಹುದು. 2025 ರ ವೇಳೆಗೆ, ಅದರ ಸಣ್ಣ ಘಟಕವನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು ಎಂದು ಕಂಪನಿ ಹೇಳಿಕೊಂಡರೂ, ಇದು ಸುಮಾರು $ 50,000 ವೆಚ್ಚವಾಗಬಹುದು.

ಡೆಟ್ರಾಯಿಟ್ ‌ಆಟೋ ಶೋನಲ್ಲಿ ಸದ್ದು ಮಾಡಿದ ಜಪಾನ್ ಫ್ಲೈಯಿಂಗ್ ಬೈಕ್: ಶೀಘ್ರದಲ್ಲೇ ಮಾರುಕಟ್ಟೆಗೆ

ಈಗ ಪ್ರಪಂಚದಾದ್ಯಂತ ಅನೇಕ ಕಂಪನಿಗಳು ಹಾರುವ ಕಾರುಗಳು ಮತ್ತು ಬೈಕ್‌ಗಳನ್ನು ತಯಾರಿಸುತ್ತಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳಿಗೆ ಭಾರಿ ಬೇಡಿಕೆಯಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಇತ್ತೀಚೆಗೆ, ಇಟಾಲಿಯನ್ ಸ್ಟಾರ್ಟ್ಅಪ್ ಕಂಪನಿ ಜೆಟ್ಸನ್‌ನ ಹಾರುವ ಕಾರು ಜೆಟ್ಸನ್ ಒನ್ ಸಂಪೂರ್ಣವಾಗಿ ಮಾರಾಟವಾಗಿದೆ.

ಡೆಟ್ರಾಯಿಟ್ ‌ಆಟೋ ಶೋನಲ್ಲಿ ಸದ್ದು ಮಾಡಿದ ಜಪಾನ್ ಫ್ಲೈಯಿಂಗ್ ಬೈಕ್: ಶೀಘ್ರದಲ್ಲೇ ಮಾರುಕಟ್ಟೆಗೆ

ಈ ಕಾರನ್ನು ಪ್ರಪಂಚದಾದ್ಯಂತ ಜನರು ಇಷ್ಟಪಡುತ್ತಿದ್ದಾರೆ ಎಂದು ಕಂಪನಿ ಹೇಳಿದೆ. ಜೆಟ್ಸನ್ ಒನ್ ಫ್ಲೈಯಿಂಗ್ ಕಾರ್ ಮೇಲ್ಮೈಯಿಂದ 1,500 ಅಡಿ ಎತ್ತರದಲ್ಲಿ ಹಾರಬಲ್ಲದು. ಈ ಹಾರುವ ಕಾರು ಸಂಪೂರ್ಣ ಬ್ಯಾಟರಿ ಚಾಲಿತವಾಗಿದ್ದು, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 32 ಕಿ.ಮೀ ದೂರದವರೆಗೆ ಹಾರಾಟ ನಡೆಸಬಹುದಾಗಿದೆ.

ಡೆಟ್ರಾಯಿಟ್ ‌ಆಟೋ ಶೋನಲ್ಲಿ ಸದ್ದು ಮಾಡಿದ ಜಪಾನ್ ಫ್ಲೈಯಿಂಗ್ ಬೈಕ್: ಶೀಘ್ರದಲ್ಲೇ ಮಾರುಕಟ್ಟೆಗೆ

ಇದು ಗರಿಷ್ಠ 102 ಕಿ.ಮೀ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ. ಕಂಪನಿಯು ತನ್ನ ಪ್ರಾರಂಭಕ್ಕೂ ಮೊದಲೇ ಕೆಲವು ಘಟಕಗಳನ್ನು ಉತ್ಪಾದಿಸಿದೆ, ಕಂಪನಿಯು ವರ್ಷವಿಡೀ ಮಾರಾಟ ಮಾಡುವ ಗುರಿಯನ್ನು ಹೊಂದಿತ್ತು. ಆದರೆ ಭಾರೀ ಬೇಡಿಕೆಯಿಂದಾಗಿ, ಅದರ ಎಲ್ಲಾ ಘಟಕಗಳನ್ನು ಮೊದಲ ದಿನದಲ್ಲಿ ಮಾರಾಟ ಮಾಡಲಾಯಿತು.

ಡೆಟ್ರಾಯಿಟ್ ‌ಆಟೋ ಶೋನಲ್ಲಿ ಸದ್ದು ಮಾಡಿದ ಜಪಾನ್ ಫ್ಲೈಯಿಂಗ್ ಬೈಕ್: ಶೀಘ್ರದಲ್ಲೇ ಮಾರುಕಟ್ಟೆಗೆ

ಕಂಪನಿಯು ಹಾರುವ ಕಾರಿನ ಬೆಲೆಯನ್ನು US$ 90,000 ಎಂದು ನಿಗದಿಪಡಿಸಿದೆ, ಇದು ಭಾರತೀಯ ಕರೆನ್ಸಿಯಲ್ಲಿ ಅಂದಾಜು 71 ಲಕ್ಷ ರೂ. ಇರಬಹುದು ಎನ್ನಲಾಗಿದೆ. ಈ ಹಾರುವ ಕಾರನ್ನು ಪ್ರಪಂಚದಾದ್ಯಂತ ಎಲ್ಲಾ ರೀತಿಯ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಡೆಟ್ರಾಯಿಟ್ ‌ಆಟೋ ಶೋನಲ್ಲಿ ಸದ್ದು ಮಾಡಿದ ಜಪಾನ್ ಫ್ಲೈಯಿಂಗ್ ಬೈಕ್: ಶೀಘ್ರದಲ್ಲೇ ಮಾರುಕಟ್ಟೆಗೆ

ಜೆಟ್ಸನ್ ಒನ್ ಲಂಬವಾದ ಟೇಕಾಫ್ ಮತ್ತು ಲ್ಯಾಂಡಿಂಗ್ (VTOL) ವಾಹನವಾಗಿದ್ದು, ಇದನ್ನು ಅಕ್ಟೋಬರ್ 2022 ರಲ್ಲಿ ಪ್ರಾರಂಭಿಸಲಾಯಿತು. ಇದು 86 ಕೆ.ಜಿ ತೂಗುತ್ತದೆ ಮತ್ತು ಗಂಟೆಗೆ 102 ಕಿ.ಮೀ ವೇಗದಲ್ಲಿ 20 ನಿಮಿಷಗಳ ಕಾಲ ಹಾರಬಲ್ಲದು. ಇದು ಕಾರ್ಯನಿರ್ವಹಿಸಲು ಹಾರುವ ಪರವಾನಗಿ ಅಗತ್ಯವಿಲ್ಲದ ವಿಶ್ವದ ಮೊದಲ ಹಾರುವ ಕಾರು ಎಂದು ಜೆಟ್ಸನ್ ಹೇಳಿಕೊಂಡಿದೆ. ಇದರಲ್ಲಿ ಕೇವಲ ಒಬ್ಬ ಪ್ರಯಾಣಿಕ ಮಾತ್ರ ಹಾರಲು ಸಾಧ್ಯ.

ಡೆಟ್ರಾಯಿಟ್ ‌ಆಟೋ ಶೋನಲ್ಲಿ ಸದ್ದು ಮಾಡಿದ ಜಪಾನ್ ಫ್ಲೈಯಿಂಗ್ ಬೈಕ್: ಶೀಘ್ರದಲ್ಲೇ ಮಾರುಕಟ್ಟೆಗೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪ್ರಪಂಚದಾದ್ಯಂತ ಅನೇಕ ಕಂಪನಿಗಳು ತಮ್ಮ ಹಾರುವ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದರೇ, ಕೆಲವು ಕಂಪನಿಗಳು ಈ ಕಾರುಗಳ ತಂತ್ರಜ್ಞಾನವನ್ನು ಸುಧಾರಿಸುವಲ್ಲಿ ತೊಡಗಿವೆ. ಇಟಲಿಯ ಟಸ್ಕನಿ ಮೂಲದ ಸ್ಟಾರ್ಟ್‌ಅಪ್ ಕಂಪನಿಯಾದ ಜೆಟ್‌ಸನ್ ಕಳೆದ ವರ್ಷ ತನ್ನ ಫ್ಲೈಯಿಂಗ್ ಕಾರ್ ಜೆಟ್‌ಸನ್ ಒನ್ ಅನ್ನು ಬಿಡುಗಡೆ ಮಾಡಿದೆ. ಇದು ಹೀಗಿದ್ದರೇ ಜಪಾನ್ ಕಂಪನಿ ಕೂಡ ತನ್ನ ಹಾರುವ ಬೈಕನ್ನು ಎಲ್ಲರಿಗಿಂತ ಮುಂಚಿತವಾಗಿ ಹಾರುವ ಬೈಕನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ.

Most Read Articles

Kannada
English summary
Flying bike made attention at Detroit Auto Show Launch next year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X