ಫುಡ್ ವಿಡಿಯೋ ಮಾಡಿ ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ಬ್ಲಾಗರ್

ಕೊರೋನಾ ಬಳಿಕ ಬ್ಲಾಗರ್‌ಗಳ ಸಂಖ್ಯೆ ಹೆಚ್ಚಾಗಿದೆ. ಜನರು ಯೂಟ್ಯೂಬ್‌ನ ಸಾಧ್ಯತೆಗಳನ್ನು ಅರಿತುಕೊಂಡು ಬಹುತೇಕ ಜನರು ಯೂಟ್ಯೂಬ್ ಚಾನೆಲ್ ಗಳನ್ನು ಪ್ರಾರಂಭಿಸಿದ್ದಾರೆ. ಅದರಲ್ಳೂ ಫುಡ್ ಬ್ಲಾಗರ್‌ಗಳ ಸಂಖ್ಯೆಯು ಹೆಚ್ಚಾಗಿದೆ. ಸ್ಪೆಷಲ್ ಆಹಾರ ತಯಾರಿಸುವುದು ಮತ್ತು ಆಹಾರದ ರುಚಿಯನ್ನು ಸವಿದು ಅದರ ಬಗ್ಗೆ ಅಭಿಪ್ರಾಯ ಹೇಳುವುದು ಒಂದು ಕಲೆ ಎಂದು ಹೇಳಬಹುದು.

ಎಬಿನ್ ಜೋಸ್ (Ebbin Jose) ಅವರು ಪಕ್ಕದ ರಾಜ್ಯ ಕೇರಳದ ಜನಪ್ರಿಯ ಫುಡ್ ಬ್ಲಾಗರ್ ಆಗಿದ್ದಾರೆ. ಎಬಿನ್ ಜೋಸ್ ಅವರ ಚಾನೆಲ್ ವಿಶಿಷ್ಟವಾದ ರುಚಿಗಳನ್ನು ಪರಿಚಯಿಸುವುದರ ಜೊತೆಗೆ ಪ್ರಯಾಣದ ಬಗ್ಗೆ ಮಾಹಿತಿಗಳನ್ನು ನೀಡುತ್ತಾರೆ. ಇದೀಗ ಎಬಿನ್ ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ. ಎಂಜಿಯ ಅತ್ಯಂತ ಚಿಕ್ಕ ಎಲೆಕ್ಟ್ರಿಕ್ ಕಾರ್ ಎಂಜಿ ಕಾಮೆಟ್ ಇವಿಯನ್ನು (MG Comet EV) ಕೊಚ್ಚಿಯಲ್ಲಿ ಖರೀದಿಸಿದ್ದಾರೆ.

Ebbin Jose Buys New MG Comet EV

ಎಬಿನ್ ಜೋಸ್ ಅವರು ಕೊಟ್ಟಾಯಂ ಚಂಗನಾಶ್ಶೇರಿ ಮೂಲದವರಾಗಿದ್ದರೂ, ಇವರು ಫುಡ್ ಮತ್ತು ಟ್ರ್ರಾವೆಲ್ ಎಂಬ ಯೂಟ್ಯೂಬ್ ಚಾನೆಲ್‌ ಅನ್ನು ಹೊಂದಿದ್ದಾರೆ. ಇವರು ಮಹೀಂದ್ರಾದ XUV700 ಪ್ರೀಮಿಯಂ ಎಸ್‍ಯುವಿಯನ್ನು ಹೊಂದಿದ್ದಾರೆ. ಆದರೆ ಕೊಚ್ಚಿ ಸಿಟಿಯಲ್ಲಿ ಓಡಾಡಲು ಈಗ ಅವರು ಪುಟ್ಟ ಎಂಜಿ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ಡಾರೆ. ಇದು ಟ್ರಾಫಿಕ್ ನಲ್ಲಿ ಹೋಗಲು ಮತ್ತು ಸುಲಭವಾಗಿ ಪಾರ್ಕಿಂಗ್ ಮಾಡಲು ಉತ್ತಮವಾಗಿದೆ.

ಈ ಎಂಜಿ ಕಾಮೆಟ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ ಎರಡೂ ಡೋರಿನ, ನಾಲ್ಕು ಸೀಟರ್ ಮಿನಿ ಎಲೆಕ್ಟ್ರಿಕ್ ಕಾರು. ಎಂಜಿ ಕಾಮೆಟ್ ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಆಗಿದೆ. ಎಂಜಿ ಕಾಮೆಟ್ ಎಂಬ ಕಾರಿನ ಹೆಸರು ಇಂಗ್ಲೆಂಡ್-ಆಸ್ಟ್ರೇಲಿಯಾ ಮ್ಯಾಕ್‌ರಾಬರ್ಟ್‌ಸನ್ ಏರ್ ರೇಸ್‌ನಲ್ಲಿ ಭಾಗವಹಿಸಿದ 1934 ರ ಸಾಂಪ್ರದಾಯಿಕ ಬ್ರಿಟಿಷ್ ವಿಮಾನದಿಂದ ಸ್ಫೂರ್ತಿ ಪಡೆದಿದೆ.

Ebbin Jose Buys New MG Comet EV

ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಎಂಟ್ರಿ ಲೆವೆಲ್ ಪೇಸ್ ರೂಪಾಂತರದಲ್ಲಿ 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕೀಲೆಸ್ ಎಂಟ್ರಿಯನ್ನು ಹೊಂದಿದೆ. ಇದರೊಂದಿಗೆ, ಬ್ಲೂಟೂತ್ ಕನೆಕ್ಟಿವಿಟಿ ಸಿಸ್ಟಂ,ಮ್ಯಾನುಯಲ್ ಎಸಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, 2 ಸ್ಪೀಕರ್‌ಗಳು, 3 ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಸ್ಪ್ಲಿಟ್ ಫೋಲ್ಡಿಂಗ್ ರಿಯರ್ ಸೀಟ್‌ಗಳು, ಪವರ್ ಹೊಂದಾಣಿಕೆಯಂತಹ ಫೀಚರ್ಸ್ ಗಳನ್ನು ನೀಡುತ್ತದೆ.

ಇನ್ನು ORVM ಗಳು, ಬ್ಲ್ಯಾಕ್ ಆಂತರಿಕ ಥೀಮ್, ಫ್ಯಾಬ್ರಿಕ್ ಅಪ್ಹೋಲ್ಸ್ಟರಿ, ಎಲೆಕ್ಟ್ರಿಕ್ ಅಡ್ಜೆಸ್ಟ್ ಮಾಡಬಹುದಾದ ವಿಂಗ್ ಮಿರರ್‌ಗಳನ್ನು ಹೊಂದಿದೆ. ಇಷ್ಟೇ ಅಲ್ಲದೇ ರಿಮೋಟ್ ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, EBD ಜೊತೆಗೆ ABS, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ರಿವರ್ಸ್ ಪಾರ್ಕಿಂಗ್ ಸೀಟ್‌ಗಳಿವೆ.

Ebbin Jose Buys New MG Comet EV

ಈ ಕಾಮೆಟ್ ರೋಟರಿ ಡ್ರೈವ್ ಸೆಲೆಕ್ಟರ್ ಅನ್ನು ಸಹ ಹೊಂದಿದೆ. ಇನ್ನು ಈ ಕಾರಿನಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮತ್ತು ಮ್ಯಾನುಯಲ್ ಎಸಿ ಕಂಟ್ರೋಲ್ ಹೊಂದಿವೆ. ಇದರೊಂದಿಗೆ ಕೀಲೆಸ್ ಎಂಟ್ರಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಮೂರು ಯುಎಸ್‌ಬಿ ಪೋರ್ಟ್‌ಗಳು ಮತ್ತು 55 ಕ್ಕೂ ಹೆಚ್ಚು ಕನೆಕ್ಟಿವಿಟಿಗಳನ್ನು ಪಡೆಯುತ್ತದೆ. ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆ ಫೀಚರ್ಸ್ ಗಳಿಗೆ ಹೆಚ್ಚು ಪ್ರಾಮುಖ್ಯಯತೆಯನ್ನು ನೀಡಲಾಗಿದೆ.

ಈ ಎಂಜಿ ಕಾರಿನಲ್ಲಿ 3.3kW ಆನ್‌ಬೋರ್ಡ್ ಚಾರ್ಜರ್ ಅನ್ನು ಸಹ ನೀಡುತ್ತಿದೆ, ಇದು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಏಳು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಎಂಜಿ ಕಾಮೆಟ್ 42hp ಮತ್ತು 110Nm ಟಾರ್ಕ್ ಅನ್ನು ಉತ್ಪಾದಿಸುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಇದು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮೂಲಕ ಹಿಂದಿನ ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ. ಇನ್ನು ಇದರಲ್ಲಿ 17.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದುದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, March 5, 2024, 19:29 [IST]
English summary
Food n travel vlogger ebbin jose buys new mg comet electric car details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+