ಫುಡ್ ವಿಡಿಯೋ ಮಾಡಿ ದುಬಾರಿ ರಾಯಲ್‌ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಬ್ಲಾಗರ್

ರಾಯಲ್‌ ಎನ್‌ಫೀಲ್ಡ್‌ (Royal Enfield) ಬೈಕ್‌ಗಳ ಮೇಲೆ ಜನರಿಗಿರುವ ಕ್ರೇಜ್‌ ಇಂದು ನೆನ್ನೆಯದಲ್ಲ, ಅದು ಹಲವಾರು ದಶಕಗಳಿಂದ ಇರುವ ಕ್ರೇಜ್. ಇಂದಿಗೂ ರಾಯಲ್ ಎನ್‍ಫೀಲ್ಡ್ ಬೈಕ್ ಯುವಕರ ಕನಸಿನ ಬೈಕ್ ಮಾತ್ರವಲ್ಲ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ. ರಾಯಲ್ ಎನ್‍ಫೀಲ್ಡ್ ತನ್ನ ಕ್ಲಾಸಿಕ್ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್.

ಜನಪ್ರಿಯ ನಟರಾದ ಮೋಹನ್ ಲಾಲ್, ಜಾನ್ ಅಬ್ರಹಾಂ, ವರುಣ್ ಧವನ್, ನಾನಾ ಪಾಟೇಕರ್, ಜಾಕಿ ಶ್ರಾಫ್ ಮತ್ತು ಕ್ರಿಕೆಟಿಗ ಜಾಂಟಿ ರೋಡ್ಸ್ ಅವರಂತಹ ಪ್ರಸಿದ್ಧ ನಟರು ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಹೊಂದಿದ್ದಾರೆ. ಇತ್ತೀಚೆಗೆ ಜನಪ್ರಿಯ ಫುಡ್ ಬ್ಲಾಗರ್ ಕರಣ್ ದುವಾ (Karan Dua) ಅವರು ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ ಅನ್ನು ಖರೀದಿಸಿದ್ದಾರೆ. ಇವರು ಈ ಹೊಸ ಬೈಕಿನ ವಿತರಣೆ ಪಡೆಯುವ ವೀಡಿಯೊ ವೈರಲ್ ಆಗಿದೆ.

Karan Dua Buys Royal Enfield Shotgun 650

ಕರಣ್ ದುವಾ ಅವರು ಜನಪ್ರಿಯ ಫುಡ್ ಬ್ಲಾಗರ್ ಆಗಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ Dilsefoodie ಆಗಿದೆ. ಅವರ್ ಯೂಟ್ಯೂಬ್ ಚಾನೆಲ್ ನಲ್ಲಿ 20 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್ಸ್‌ ಹೊಂದಿದ್ದಾರೆ. ಮತ್ತೊಂದೆಡೆ, ಇನ್ಸ್ಟಾಗ್ರಾಮ್ನಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಫಾಲೋವರ್ಸ್ ಹೊಂದಿದ್ದಾರೆ. ಕರಣ್ ದುವಾ ಇದೀಗ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ ಖರೀದಿಸಿ ಸುದ್ದಿಯಾಗಿದ್ದಾರೆ.

ಫುಡ್ ಬ್ಲಾಗರ್ ಪ್ರಭಾವಿ ಕರಣ್ ದುವಾ ಖರೀದಿಸಿದ ಬೈಕ್ ಬಗ್ಗೆ ಹೇಳುವುದಾದರೆ, ಇದು ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 (Royal Enfield Shotgun 650) ಬೈಕ್ ಆಗಿದೆ. ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಅನ್ನು ಇಂಟರ್‌ಸೆಪ್ಟರ್ 650 ಮತ್ತು ಸೂಪರ್ ಮೆಟಿಯರ್ 650 ನಡುವೆ ಇರಿಸಲಾಗಿದೆ. ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ ಇದು ಅದೇ ಸ್ಟೀಲ್ ಟ್ಯೂಬುಲರ್ ಸ್ಟೀಲ್ ಫ್ರೇಮ್ ಅನ್ನು ಆಧರಿಸಿದೆ.

Karan Dua Buys Royal Enfield Shotgun 650

ಅದು ಸೂಪರ್ ಮೀಟಿಯರ್ 650 ಬೈಕಿಗೆ ಕೂಡ ಇದನ್ನೇ ಆಧರಿಸಿದೆ. ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕಿನಲ್ಲಿ ಅದೇ 648cc, ಪ್ಯಾರಲಲ್ ಟ್ವಿನ್, 4-ಸ್ಟ್ರೋಕ್, ಎಸ್‌ಒಹೆಚ್‌ಸಿ, ಏರ್-ಆಯಿಲ್ ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 7250rpm ನಲ್ಲಿ 46.4bhp ಮತ್ತು 5,650rpm ನಲ್ಲಿ 52.3Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಈ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ 22 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಬೈಕ್ ಸೂಪರ್ ಮೀಟಿಯರ್‌ನಂತೆಯೇ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಈ ಬೈಕ್ ಎಲ್‌ಇಡಿ ಹೆಡ್‌ಲೈಟ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಅನ್ನು ಒಳಗೊಂಡಿದೆ. ಗ್ರಾಹಕರು ಸಿಂಗಲ್ ಸೀಟರ್ ಅಥವಾ ಪಿಲಿಯನ್ ಸೀಟನ್ನು ಆಯ್ಕೆ ಮಾಡಬಹುದು.

Karan Dua Buys Royal Enfield Shotgun 650

ಹೆಚ್ಚು ನೇರವಾದ ಸೀಟುಗಳೊಂದಿಗೆ ಫ್ಲಾಟರ್ ಹ್ಯಾಂಡಲ್‌ಬಾರ್ ಮತ್ತು ಹೆಚ್ಚು ಮಧ್ಯ-ಸೆಟ್ ಫುಟ್‌ಪೆಗ್‌ಗಳೊಂದಿಗೆ ಬರುತ್ತದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ 1465 ಎಂಎಂ ಉದ್ದದ ವೀಲ್‌ಬೇಸ್‌ ಅನ್ನು ಹೊಂದಿದೆ ಮತ್ತು 140 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇನ್ನು ಹೊಸ ಶಾಟ್‌ಗನ್ 650 2170mm ಉದ್ದ, 820mm ಅಗಲ ಮತ್ತು 1105mm ಎತ್ತರವನ್ನು ಹೊಂದಿದೆ.

ಈ ಬಾಬರ್ 240 ಕೆಜಿ ತೂಕವನ್ನು ಹೊಂದಿದೆ ಮತ್ತು 428 ಕೆಜಿ ಗರಿಷ್ಠ ಒಟ್ಟು ವಾಹನ ತೂಕ (GVW) ಹೊಂದಿದೆ. ಇದು 13.8-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಹೊಸ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, USD ಫ್ರಂಟ್ ಫೋರ್ಕ್‌ನೊಂದಿಗೆ 120mm ಟ್ರ್ಯಾವೆಲ್ ನೊಂದಿಗೆ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ.

ಇನ್ನು ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ ಬ್ರೇಂಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 320mm ಫ್ರಂಟ್ ಡಿಸ್ಕ್ ಮತ್ತು 300mm ಹಿಂಭಾಗದ ಡಿಸ್ಕ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.

Article Published On: Monday, March 4, 2024, 17:33 [IST]
English summary
Food vlogger karan dua buys new royal enfield shotgun 650 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+