ಪಿಕ್ ಅಪ್ ಟ್ರಕ್ ನಿರ್ಮಾಣದಲ್ಲಿ 100 ವರ್ಷ ಪೂರೈಸಿದ ಫೋರ್ಡ್ ಮುಂದಿನ ಪ್ಲ್ಯಾನ್ ಏನು?

ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವುದರ ಫೋರ್ಡ್ ಹಿಂದಿನ ಹತ್ತಾರು ಇಂಟ್ರಸ್ಟಿಂಗ್ ಮಾಹಿತಿಗಳು ಇಲ್ಲಿವೆ.

By Praveen

1917ರಿಂದ ಆರಂಭವಾದ ಫೋರ್ಡ್ ಪಿಕ್ ಅಪ್ ವಾಹನಗಳ ತಯಾರಿಕೆಗೆ ಇಂದು 100ರ ಸಂಭ್ರಮ. ವಿಶ್ವ ಆಟೋ ಮೊಬೈಲ್ ಉದ್ಯಮಕ್ಕೆ ತನ್ನದೇ ವಿಶಿಷ್ಟ ಉತ್ಪನ್ನಗಳನ್ನು ನೀಡಿರುವ ಫೋರ್ಡ್, ಇಂದು ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವುದರ ಹಿಂದಿನ ಹತ್ತಾರು ಇಂಟ್ರಸ್ಟಿಂಗ್ ಮಾಹಿತಿಗಳು ಇಲ್ಲಿವೆ.

ಪಿಕ್ ಅಪ್ ಟ್ರಕ್ ನಿರ್ಮಾಣದಲ್ಲಿ 100 ವರ್ಷ ಪೂರೈಸಿದ ಫೋರ್ಡ್..!

1903ರಲ್ಲಿ ಮೊಟ್ಟ ಮೊದಲ ಬಾರಿಗೆ ಹೆನ್ರಿ ಫೋರ್ಡ್ ಅವರಿಂದ ಆರಂಭವಾದ ಫೋರ್ಡ್ ವಾಹನ ಉತ್ಪಾದನಾ ಸಂಸ್ಥೆಯು ಮೊದಮೊದಲು ಅಮೆರಿಕ ಮತ್ತು ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಮಾತ್ರ ತನ್ನ ಕಾರ್ಯಾಚರಣೆ ಹೊಂದಿತ್ತು. ತದನಂತರ 1917ರಲ್ಲಿ ಮೊಟ್ಟ ಮೊದಲ ಬಾರಿಗೆ ಫೋರ್ಡ್ ಸಂಸ್ಥೆಯು ಪಿಕ್ ಅಪ್ ವಾಹನಗಳ ತಯಾರಿಕೆ ಆರಂಭಿಸಿತ್ತು.

ಪಿಕ್ ಅಪ್ ಟ್ರಕ್ ನಿರ್ಮಾಣದಲ್ಲಿ 100 ವರ್ಷ ಪೂರೈಸಿದ ಫೋರ್ಡ್..!

ಸದ್ಯ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಫೋರ್ಡ್ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟ ಕಾರ್ಯಚರಣೆ ಲಭ್ಯವಿದ್ದು, ಹ್ಯಾಚ್‌ಬ್ಯಾಕ್, ಸೆಡಾನ್, ಕ್ರಾಸ್ ಓವರ್, ಸೂಪರ್ ಕಾರ್ ಮತ್ತು ಪಿಕ್ ವಾಹನಗಳ ತಯಾರಿಕೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.

ಪಿಕ್ ಅಪ್ ಟ್ರಕ್ ನಿರ್ಮಾಣದಲ್ಲಿ 100 ವರ್ಷ ಪೂರೈಸಿದ ಫೋರ್ಡ್..!

ಫೋರ್ಡ್ ನಿರ್ಮಾಣದ ಎಫ್-ಸೀರಿಸ್ ಪಿಕ್ ಅಪ್ ವಾಹನವು ಅಮೆರಿಕದಲ್ಲಿ ಸತತ 35 ವರ್ಷಗಳ ಕಾಲ ನಂ.1 ಬೆಸ್ಟ್ ಸೇಲೀಂಗ್ ಪಿಕ್ಅಪ್ ವಾಹನವಾಗಿ ಹೊರಹೊಮ್ಮಿದಲ್ಲದೇ ಕೆನಡಾದಲ್ಲಿ 51 ವರ್ಷಗಳ ಕಾಲ ಪಿಕ್ ಅಪ್ ವಾಹನಗಳ ಮಾರಾಟ ತನ್ನದೇ ಪ್ರಾಬಲ್ಯತೆ ಹೊಂದಿತ್ತು.

ಪಿಕ್ ಅಪ್ ಟ್ರಕ್ ನಿರ್ಮಾಣದಲ್ಲಿ 100 ವರ್ಷ ಪೂರೈಸಿದ ಫೋರ್ಡ್..!

ಫೋರ್ಡ್ ನಿರ್ಮಾಣದ ಮತ್ತೊಂದು ಪಿಕ್ ಅಪ್ ವಾಹನ ಎಫ್-150 ಸೀರಿಸ್ ಕೂಡಾ ಭಾರೀ ಜನಪ್ರಿಯತೆ ಗಳಿಸುವ ಮೂಲಕ, ಸಾಗರೋತ್ತರ ವ್ಯವಹಾರಗಳನ್ನು ಇಮ್ಮುಡಿಗೊಳ್ಳಲು ಸಹಕಾರಿಯಾಯಿತು.

ಪಿಕ್ ಅಪ್ ಟ್ರಕ್ ನಿರ್ಮಾಣದಲ್ಲಿ 100 ವರ್ಷ ಪೂರೈಸಿದ ಫೋರ್ಡ್..!

ತದನಂತರ ಬಂದಿದ್ದೇ ಫೋರ್ಡ್ ಟಿಟಿ ಪಿಕ್ಅಪ್ ವಾಹನಗಳು. ಮೊದಲ ಮಹಾಯುದ್ದ ಸಂದರ್ಭದಲ್ಲಿ ವಿವಿಧ ಕಾರ್ಯಾಚರಣೆಗೆ ಬಳಕೆಯಾದ ಟಿಟಿ ಪಿಕ್ಅಪ್ ವಾಹನಗಳು 1928ರ ವೇಳೆಗೆ ವಿಶ್ವಾದ್ಯಂತ 13 ಲಕ್ಷ ವಾಹನಗಳನ್ನು ಮಾರಾಟ ಮಾಡಿತ್ತು. ಆಗ ಅದರ ಬೆಲೆ 600 ಡಾಲರ್(ರೂ.1,880 ಭಾರತೀಯ ರೂಪಾಯಿ ಮೌಲ್ಯದಲ್ಲಿ)

ಪಿಕ್ ಅಪ್ ಟ್ರಕ್ ನಿರ್ಮಾಣದಲ್ಲಿ 100 ವರ್ಷ ಪೂರೈಸಿದ ಫೋರ್ಡ್..!

1940ರ ನಂತರ ತನ್ನ ಉತ್ಪನ್ನ ಗಣನೀಯ ಬದಲಾವಣೆ ತಂದ ಫೋರ್ಡ್ ಸಂಸ್ಥೆಯು ಹೆವಿ ಡ್ಯೂಟಿ ವಾಹನಗಳ ಉತ್ಪಾದನೆ ಹೆಚ್ಚಿನ ಒತ್ತು ನೀಡಿತು. ಇದರ ಪರಿಣಾಮವೇ 2ನೇ ಮಹಾಯುದ್ದ ವೇಳೆ ಫೋರ್ಡ್ ನಿರ್ಮಾಣದ ಅನೇಕ ಯುದ್ಧ ವಾಹನಗಳನ್ನು ಕಾಣಬಹುದಾಗಿದೆ.

Recommended Video

Tata Nexon: Tata's New SUV (Nexon) For India | First Look - DriveSpark
ಪಿಕ್ ಅಪ್ ಟ್ರಕ್ ನಿರ್ಮಾಣದಲ್ಲಿ 100 ವರ್ಷ ಪೂರೈಸಿದ ಫೋರ್ಡ್..!

ಇದಾದ ಬಳಿಕ 946ರ ನಂತರ ಪಿಕ್ಅಪ್ ವಾಹನ ಉತ್ಪಾದನೆ ಜೊತೆ ಜೊತೆಗೆ ಕಾರು ಉತ್ಪಾದನೆಗೂ ಹೆಚ್ಚಿನ ಗಮನ ನೀಡಿದ ಫೋರ್ಡ್, ಯುಟಿಲಿಟಿ ವಾಹನಗಳ ಉತ್ಪಾದನೆಯಲ್ಲೂ ನಂ.1 ಸ್ಥಾನಕ್ಕೆ ಏರುವಲ್ಲಿ ಯಶಸ್ಸಿಯಾಯಿತು.

ಪಿಕ್ ಅಪ್ ಟ್ರಕ್ ನಿರ್ಮಾಣದಲ್ಲಿ 100 ವರ್ಷ ಪೂರೈಸಿದ ಫೋರ್ಡ್..!

ಇನ್ನೊಂದು ವಿಶೇಷ ಅಂದ್ರೆ ಕೇವಲ ವಾಣಿಜ್ಯ ಚಟುವಟಿಕೆಗಾಗಿ ಆರಂಭವಾದ ಫೋರ್ಡ್ ಪಿಕ್ ಅಪ್ ವಾಹನಗಳು ಇಂದು ಐಷಾರಾಮಿ ವಾಹನವಾಗಿ ಗುರುತಿಕೊಂಡಿದ್ದು, ಭಾರತದಲ್ಲಿ ಇದುವರೆಗೂ ಒಂದೇ ಒಂದು ಪಿಕ್ಅರಪ್ ವಾಹನಗಳು ಬಿಡುಗಡೆಯಾಗದಿರುವುದು ಫೋರ್ಡ್ ಅಭಿಮಾನಿಗಳಿಗೆ ಅಸಮಾಧಾನವು ಇದೆ.

ಪಿಕ್ ಅಪ್ ಟ್ರಕ್ ನಿರ್ಮಾಣದಲ್ಲಿ 100 ವರ್ಷ ಪೂರೈಸಿದ ಫೋರ್ಡ್..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಳೆದ 100 ವರ್ಷಗಳ ಕಾಲ ಹಲವು ಏಳು ಬೀಳುಗಳೊಂದಿಗೆ ಇಂದು ಜನಪ್ರಿಯ ಆಟೋ ಉತ್ಪಾದನೆ ಸಂಸ್ಥೆಯಾಗಿ ಹೊರಹೊಮ್ಮಿರುವ ಫೋರ್ಡ್, ಭಾರತದಲ್ಲೂ ತನ್ನ ಪಿಕ್ಅಪ್ ವಾಹನಗಳನ್ನು ಬಿಡುಗಡೆ ಮಾಡಿದಲ್ಲಿ ಮತ್ತಷ್ಟು ಸಹಕಾರಿಯಾಗಲಿದೆ.

Most Read Articles

Kannada
Read more on ಫೋರ್ಡ್ ford
English summary
Read in Kannada about Ford Celebrates 100 Years Of Building Pickup Trucks.
Story first published: Friday, July 28, 2017, 11:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X