ಭಾರತದಲ್ಲಿ ಸ್ಥಗಿತಗೊಂಡ ಫೋರ್ಡ್ ಎಂಡೀವರ್ ಖರೀದಿಸಲು ಥೈಲ್ಯಾಂಡ್‌ಗೆ ತೆರಳಿದ ಯೂಟ್ಯೂಬರ್
ಅಮೆರಿಕಾ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋರ್ಡ್ 1990ರ ದಶಕದಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿತ್ತು. ಈ ಫೋರ್ಡ್ ಕಂಪನಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯಚರಣೆ ನಡೆಸುತ್ತಿರುವ ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಆದರೆ ಭಾರತದಲ್ಲಿ ಹಲವು ವರ್ಷಗಳಿಂದ ಭಾರೀ ನಷ್ಟವನ್ನು ಅನುಭವಿಸಿದ ಕಾರಣ ಕಾರ್ಯಚರಣೆ ಸ್ಥಗಿತಗೊಳಿಸಿತ್ತು.
ಫೋರ್ಡ್ ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಸುದ್ದಿಯಯು ಫೋರ್ಡ್ ಅಭಿಮಾನಿಗಳು ಮಾತ್ರವಲ್ಲ, ವಿಮರ್ಶಕರಿಗೂ ಬೇಸರವಾಗಿತ್ತು. ಫೋರ್ಡ್ 25 ವರ್ಷಗಳಿಗಿಂತ ಹೆಚ್ಚು ಕಾಲ ಭಾರತದಲ್ಲಿ ಕಾರ್ಯಚರಣೆಯನ್ನು ನಡೆಸಿದೆ. ಭಾರತದಲ್ಲಿ ಉತ್ಪಾದನೆಯನ್ನು ನಿಲ್ಲಿಸುವ ಮುನ್ನ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಎಂಡೀವರ್ ಎಸ್‍ಯುವಿಯನ್ನು ಉಳಿಸಲು ಪ್ರಯತ್ನಿಸಿತು. ಫೋರ್ಡ್ ಮತ್ತೊಂದು ಕಾರು ತಯಾರಕರೊಂದಿಗೆ ಒಪ್ಪಂದದ ಆಧಾರದ ಮೇಲೆ ಎಂಡೀವರ್ ಅನ್ನು ಉತ್ಪಾದಿಸಲು ಪ್ರಯತ್ನಿಸಿತು. ಆದರೆ ಈ ಒಪ್ಪಂದ ಪ್ರಯತ್ನಯು ವಿಫಲವಾಯ್ತು.

ಆದರೂ ಭಾರತದಲ್ಲಿ ಈ ಫೋರ್ಡ್ ಎಂಡೀವರ್ ಎಸ್‍ಯುವಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈ ಫೋರ್ಡ್ ಎಂಡೀವರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎವರೆಸ್ಟ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಫೋರ್ಡ್ ಎಂಡೀವರ್ ಅಭಿಮಾನಿಯೊಬ್ಬರು ಈ ಫೋರ್ಡ್ ಎಂಡೀವರ್ (ಎವರೆಸ್ಟ್) ಎಸ್‍ಯುವಿಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಎಂಡೀವರ್ ಭಾರತದ ಎಸ್‍ಯುವಿ ಪ್ರೇಮಿಗಳ ಹೃದಯ ಗೆದ್ದ ಮಾದರಿಯಾಗಿದೆ.
ಭಾರತದ ಎಸ್‍ಯುವಿ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿತ್ತು. ಯೂಟ್ಯೂಬ್‌ನಲ್ಲಿ ರವಿಬೊಕೆನ್ 9007 ವ್ಲಾಗ್‌ಗಳಿಂದ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. YouTuber ಥೈಲ್ಯಾಂಡ್‌ನಲ್ಲಿರುವ ಫೋರ್ಡ್ ಡೀಲರ್‌ಶಿಪ್‌ಗೆ ಭೇಟಿ ನೀಡುತ್ತಾರೆ. ಅವರು ಹೊಸ ಎಂಡೀವರ್ (ಎವರೆಸ್ಟ್) ಅನ್ನು ಪರಿಶೀಲಿಸುತ್ತಾರೆ. ಅವರು ಈ ಎಸ್‍ಯುವಿಯನ್ನು ಟೆಸ್ಟ್ ಡ್ರೈವ್‌ನಲ್ಲಿ ತೆಗೆದುಕೊಳ್ಳುತ್ತಾರೆ. ಅಲ್ಲದೆ, ಅವರು ಒಳಾಂಗಣದಿಂದ ಸಂಪೂರ್ಣವಾಗಿ ಆಕರ್ಷಕವಾಗಿದೆ.

ಈ ಎಸ್‍ಯುವಿಯ ಒಳಭಾಗದಲ್ಲಿ, ಕ್ಯಾಬಿನ್ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್ ನಿಂದ ದುಬಾರಿಯಾಗಿದೆ, ವಿಶೇಷವಾಗಿ ಭಾರತದಲ್ಲಿ ಮಾರಾಟವಾದ ಮಾದರಿಗೆ ಹೋಲಿಸಿದರೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, ದೊಡ್ಡ ಸ್ಟೋರೇಜ್ ಸ್ಪೇಸ್‌ಗಳು ಮತ್ತು ಕನೆಕ್ಟಿವಿಟಿ ಫೀಚರ್ಸ್ ಗಳನ್ನು ಹೊಂದಿವೆ. ಈ ಎಸ್‍ಯುವಿಯಲ್ಲಿ ವಿಶಾಲವಾದ ಒಳಾಂಗಣ, ಒರಟಾದ ಬಿಲ್ಟ್, ಪ್ರೀಮಿಯಂ ಮೆಟೀರಿಯಲ್ ಮತ್ತು ಹೆಚ್ಚಿನವುಗಳನ್ನು ಹೊಂದಿವೆ.
ಇನ್ನು ಆಕರ್ಷಕ ಟಚ್‌ಸ್ಕ್ರೀನ್ ಅನ್ನು ಹೊಂದಿದ್ದು, ಇದು ಹಳೆಯ ಮಾದರಿಗೆ ಹೋಲಿಸಿದರೆ ಹೊಸ ನವೀಕರಣವನ್ನು ಪಡೆದುಕೊಂದಿದೆ. ಥೈಲ್ಯಾಂಡ್‌ನಲ್ಲಿರುವ ಫೋರ್ಡ್ ಎಂಡೀವರ್ (ಎವರೆಸ್ಟ್) ಎಸ್‍ಯುವಿಗಳಲ್ಲಿ 2 ಎಂಜಿನ್‌ಗಳನ್ನು ಹೊಂದಿವೆ. ಇದು 2.0-ಲೀಟರ್ ಟರ್ಬೊ ಮತ್ತು 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಗಿದೆ. ಇದರಲ್ಲಿ 2.0-ಲೀಟರ್ ಟರ್ಬೊ ಎಂಜಿನ್ 170 ಬಿಹೆಚ್‍ಪಿ ಪವರ್ ಮತ್ತು 405 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ 210 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ MT (ಸಿಂಗಲ್ ಟರ್ಬೊ ಎಂಜಿನ್‌ನೊಂದಿಗೆ) ಅಥವಾ 10-ಸ್ಪೀಡ್ AT (ಟ್ವಿನ್-ಟರ್ಬೊ ಎಂಜಿನ್‌ನೊಂದಿಗೆ) ಆಯ್ಕೆಗಳಿವೆ. ಯೂಟ್ಯೂಬರ್‌ಗಳು ಚಾಲನೆ ಮಾಡುತ್ತಿರುವುದು 4×4 ಮಾದರಿ ಎಂದು ಹೇಳಲಾಗುತ್ತಿದೆ, ಇವರು ಭಾರತಕ್ಕೆ ಈ ಎಸ್‍ಯುವಿಯನ್ನು ಆಮದು ಮಾಡಿಕೊಂಡರೆ, ತೆರಿಗೆಯಿಂದ ಬೆಲೆಯು ದ್ವಿಗುಣವಾಗುತ್ತದೆ.
ಈ ಫೋರ್ಡ್ ಎಂಡೀವರ್ ಮಾದರಿಯು ಸಮರ್ಥ ಆನ್ ರೋಡ್ ಮತ್ತು ಆಪ್ ರೋಡ್ ಎಸ್‍ಯುವಿಯಾಗಿದೆ. ಅಫ್-ರೋಡ್ ವಿಭಾಗದಲ್ಲಿಯು ಫೋರ್ಡ್ ಎಂಡೀವರ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ ಎಸ್‍ಯುವಿಯಾಗಿದೆ. ಫೋರ್ಡ್ ಎಂಡೀವರ್ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4, ಎಂಜಿ ಗ್ಲೋಸ್ಟರ್ ಮತ್ತು ಇಸುಝು ಎಂಯು-ಎಕ್ಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡಲಾಗುತ್ತಿತ್ತು.


Click it and Unblock the Notifications