ವಿದೇಶಿಗರೇ ನಿಮ್ಮ ವರ್ತನೆ ಸರಿಯಲ್ಲ: ಯಾವುದೇ ಭಾರತೀಯ ನಿಮ್ಮ ದೇಶಗಳಲ್ಲಿ ಹೀಗೆ ನಡೆದುಕೊಳ್ಳುವುದಿಲ್ಲ!

ಪ್ರವಾಸಿ ದಂಪತಿಯೊಂದು ಗೋವಾದ ಬೀದಿಗಳಲ್ಲಿ ಚಲಿಸುತ್ತಿರುವ ಕಾರಿನ ಮೇಲೆ ಸಾಹಸ ಪ್ರದರ್ಶಿಸುತ್ತಿರುವ ವೀಡಿಯೊ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋವನ್ನು ಇತ್ತೀಚೆಗಷ್ಟೇ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ಗೋವಾ ನ್ಯೂಸ್ ಹಬ್ ಕೂಡ ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದೆ.

ಗೋವಾ ವಿದೇಶಿ ಪ್ರಜೆಗಳ ಯೋಗ್ಯ ಜನಸಂಖ್ಯೆಯನ್ನು ಹೊಂದಿದೆ. ಹಲವರು ವಿದೇಶಿಗರು ಇಲ್ಲಿ ವ್ಯಾಪಾರ ಸಹ ನಡೆಸುತ್ತಿದ್ದಾರೆ. ಇವರೆಲ್ಲರಿಗೂ ಇಂತಹ ಚಟುವಟಿಕೆಗಳು ಕಾನೂನು ಬಾಹಿರವೆಂದು ತಿಳಿದಿರುವ ಕಾರಣ ವಿದೇಶಿ ವ್ಯಾಪಾರಸ್ಥರು ಇಂತಹ ಹುಚ್ಚಾಟಗಳಿಂದ ದೂರವಿರುತ್ತಾರೆ. ಹಾಗಾಗಿ ಇವರು ಪ್ರವಾಸಿಗರೆ ಎಂದು ಹೇಳಲಾಗುತ್ತಿದೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

foreign-tourist-stunts-moving-car-goa

ಈ ಘಟನೆ ನಡೆದ ಸ್ಥಳದ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಕಾರಿನ ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ವೀಡಿಯೊದಲ್ಲಿ, ಖಾಸಗಿ ಕಾರಿನ ರೂಫ್ ಮೇಲೆ ವ್ಯಕ್ತಿಯೊಬ್ಬರು ಕುಳಿತಿರುವುದನ್ನು ನಾವು ನೋಡಬಹುದು. ಹಾಗಯೇ ಯುವತಿಯೊಬ್ಬರು ಕಾರಿನ ಕಿಟಕಿಯಿಂದ ಹೊರಬಂದು ಕೈಯಲ್ಲಿ ಮದ್ಯವನ್ನಿಡಿದು ಕಿರುಚಾಡುವುದು ಕಂಡುಬಂದಿದೆ.

ಅವರು ಈ ಸಾಹಸಗಳನ್ನು ಮಾಡುತ್ತಿದ್ದಾಗ, ಕಾರು ಚಲನೆಯಲ್ಲಿತ್ತು. ಇದು ರಾತ್ರಿ ವೇಳೆ ನಡೆದಿದ್ದು, ರಸ್ತೆಯಲ್ಲಿ ಹೆಚ್ಚು ವಾಹನಗಳಿರಲಿಲ್ಲ. ಇವರೆಲ್ಲರೂ ಗೋವಾದ ಕಿರಿದಾದ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಕಾರು ಮುಂದೆ ಸಾಗುತ್ತಿದ್ದಂತೆಯೇ ಮತ್ತೊಬ್ಬ ವ್ಯಕ್ತಿ ಕಾರಿನ ಎಡಭಾಗದ ಕಿಟಕಿಯಿಂದ ಹೊರಬಂದ್ದಿದ್ದಾನೆ. ಮೂವರೂ ಪ್ರವಾಸಿಗರು ತಮ್ಮ ಹಿಂದೆ ಸ್ಕೂಟರ್‌ನಲ್ಲಿದ್ದ ವ್ಯಕ್ತಿಯನ್ನು ನೋಡಿ ಭಯವಿಲ್ಲದೇ ಕ್ಯಾಮೆರಾಗೆ ಕೈ ಬೀಸುತ್ತಿರುವುದನ್ನು ಕಾಣಬಹುದು.

foreign-tourist-stunts-moving-car-goa

ಕಾರು ಚಾಲಕ ಪಾನಮತ್ತನಾಗಿದ್ದಾನೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆತ ಕಾರನ್ನು ವೇಗವಾಗಿ ಓಡಿಸುತ್ತಿರುವುದನ್ನು ಕಾಣಬಹುದು, ಬಹುಶಃ ಕ್ಯಾಮೆರಾವನ್ನು ತಪ್ಪಿಸಲು ಪ್ರಯತ್ನಿಸುತ್ತಿರಬಹುದಾಗಿದೆ. ಬಲಭಾಗದ ಹಿಂಬದಿಯ ಕಿಟಕಿಯ ಮೇಲೆ ಕುಳಿತಿರುವ ಹುಡುಗಿ ವಾಸ್ತವವಾಗಿ ಚಾಲಕನ ನೋಟಕ್ಕೆ ಅಡ್ಡವಾಗಿ ಕುಳಿತಿದ್ದಾರೆ. ಇದು ಹಿಂಬದಿಯಿಂದ ಬರುವ ವಾಹನಗಳ ಬಗ್ಗೆ ತಿಳಿಯದೇ ಅಪಘಾತವಾಗುವ ಸಂಭವ ಕೂಡ ಹೆಚ್ಚು.

ಚಲಿಸುವ ಕಾರಿನಲ್ಲಿ ಸನ್‌ರೂಫ್‌ನಿಂದ ಹೊರಬರುವುದು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುವ ಹಲವು ವೀಡಿಯೊಗಳನ್ನು ನಾವು ಈ ಹಿಂದೆ ನೋಡಿದ್ದೇವೆ. ಅದೇ ಅಪಾಯ ಇಲ್ಲಿಯೂ ಅನ್ವಯಿಸುತ್ತದೆ. ಯಾವುದೋ ಕಾರಣಕ್ಕೆ ಚಾಲಕ ಹಠಾತ್ ಬ್ರೇಕ್ ಹಾಕಬೇಕಾದರೆ ಛಾವಣಿಯ ಮೇಲೆ ಕುಳಿತ ವ್ಯಕ್ತಿಗೆ ಕಂಡಿತ ಅಪಾಯ ಕಟ್ಟಿಟ್ಟ ಬುತ್ತಿ.

foreign-tourist-stunts-moving-car-goa

ಸಾರ್ವಜನಿಕ ರಸ್ತೆಗಳು ಸ್ಟಂಟ್ ಮಾಡುವ ಸ್ಥಳವಲ್ಲ, ಅಂತಹ ಸಾಹಸಗಳನ್ನು ಮಾಡುವುದರಿಂದ ತಮ್ಮ ಪ್ರಾಣವನ್ನು ಮಾತ್ರವಲ್ಲದೆ ಇತರ ರಸ್ತೆ ಬಳಕೆದಾರರ ಪ್ರಾಣಕ್ಕೂ ಅಪಾಯವಾಗುವ ಸಾಧ್ಯೆತೆಗಳು ಹೆಚ್ಚಾಗಿರುತ್ತವೆ. ಕಾರಿನ ನೋಂದಣಿ ಸಂಖ್ಯೆ ವಿಡಿಯೋದಲ್ಲಿ ಗೋಚರಿಸುತ್ತಿದ್ದು, ಪೊಲೀಸರು ಇದನ್ನು ಆಧರಿಸಿ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ನಮ್ಮ ಭಾರತೀಯ ನವವಿವಾಹಿತರು ಇತ್ತೀಚೆಗೆ ನ್ಯೂಜಿಲ್ಯಾಂಡ್‌ನಲ್ಲಿ ವೇಗದ ಮಿತಿ ತಿಳಿಯದೇ ಅತಿವೇಗದಲ್ಲಿ ವಾಹನ ಚಲಾಯಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆ ವೇಳೆ ಪತಿಯ ಲೈಸೆನ್ಸ್ ಅನ್ನು 28 ದಿನಗಳ ಕಾಲ ರದ್ದುಗೊಳಿಸಿದ್ದರು. ಇದು ವಿದೇಶಗಳಲ್ಲಿ ಕಾನೂನು ಎಷ್ಟು ಕಠಿಣವಾಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಅದೇ ವಿದೇಶಿಗರು ಭಾರತದಲ್ಲಿ ಈ ರೀತಿ ಮನಬಂದಂತೆ ವರ್ತಿಸುವುದು ಎಷ್ಟು ಸರಿ? ಕಮೆಂಟ್‌ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ.

Video Code:

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Goa News Hub

Link: https://www.facebook.com/goanewshub

Article Published On: Wednesday, September 20, 2023, 17:28 [IST]
English summary
Foreign tourist stunts moving car goa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+