ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ಬ್ರಿಟನ್ ರಾಜವಂಶದ ಮಾಜಿ ಸೊಸೆ ದಿವಂಗತ ಪ್ರಿನ್ಸೆಸ್ ಡಯಾನಾ ಅವರು ಬಳಸುತ್ತಿದ್ದ ಸೂಪರ್ ಫೋರ್ಡ್ ಕಾರನ್ನು ಹರಾಜಿಗೆ ಇಡಲಾಗಿದ್ದು, ಯಾರೂ ನಿರೀಕ್ಷಿಸದ ಬೆಲೆಗೆ ಈ ಕಾರು ಹರಾಜಾಗಿದೆ ಎಂದು ಮೂಲಗಳು ತಿಳಿಸಿವೆ.

Recommended Video

590 ಕಿ.ಮೀ ಮೈಲೇಜ್ ನೀಡುವ BMW i4 ಬಿಡುಗಡೆ | 340bhp, 430Nm, 0-100 In 5.7 Seconds & More

ಪ್ರಿನ್ಸೆಸ್ ಡಯಾನಾ ಅವರು ಬ್ರಿಟಿಷ್ ರಾಜಮನೆತನದ ಸದಸ್ಯರಾಗಿದ್ದರು. ಬ್ರಿಟಿಷ್ ರಾಜಕುಮಾರರಾಗಿದ್ದ ಚಾರ್ಲ್ಸ್‌ ಅವರ ಮೊದಲ ಪತ್ನಿಯಾಗಿದ್ದು, ಕಾರಣಾಂತರಗಳಿಂದ ಚಾರ್ಲ್ಸ್‌ ಅವರೊಂದಿಗೆ ವಿಚ್ಚೇದನ ಪಡೆದಿದ್ದರು. ಬಳಿಕ ಡಯಾನಾ ಅವರ ಕ್ರಿಯಾಶೀಲತೆ ಮತ್ತು ಗ್ಲಾಮರ್‌ನಿಂದಾಗಿ ಅಂತರರಾಷ್ಟ್ರೀಯ ಐಕಾನ್ ಆಗಿ ಮಿಂಚಿದ್ದರು.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ವಿಚ್ಚೇದನದ ಬಳಿಕ ಕೆಲ ವರ್ಷಗಳು ಒಬ್ಬಂಟಿ ಜೀವನ ನಡೆಸಿದ್ದ ಅವರು, 1997ರಲ್ಲಿ ತಮ್ಮ ಸ್ನೇಹಿತನೊಂದಿಗೆ ಪ್ರಯಾಣಿಸುತ್ತಿದ್ದಾಗ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಸಾವಿಗೂ ಮುನ್ನ ವಿಶ್ವದ ಹಲವೆಡೆ ಸಂಚರಿಸಿ ಹಲವು ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಭಾರತಕ್ಕೂ ಭೇಟಿ ನೀಡಿದ್ದರು.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ತಮ್ಮ ಆಸ್ತಿಯಲ್ಲಿ ಬಹುಪಾಲನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದ ಅವರು ಹಲವು ಐಷಾರಾಮಿ ಕಾರುಗಳು, ಬೆಳೆಬಾಳುವ ವಸ್ತುಗಳ ಮಾಲೀಕರಾಗಿದ್ದರು. ಅವರು ಬದುಕಿದ್ದಾಗ ಬಳಸಿದ್ದ ಕಾರೊಂದು ಈಗ ಹರಾಜಾಗಿದೆ. ಅವರು ಉಸಿರು ಚೆಲ್ಲಿ 25 ವರ್ಷ ಕಳೆದರೂ ಸಾರ್ವಜನಿಕರಲ್ಲಿ ಅವರಿಗಿರುವ ಜನಪ್ರಿಯತೆಯಿಂದಲೇ ಅವರ ಕಾರು ಭಾರೀ ಮೊತ್ತಕ್ಕೆ ಹರಾಜಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ಫೋರ್ಡ್ ಎಸ್ಕಾರ್ಟ್ ಆರ್ಎಸ್ ಟರ್ಬೊ ಕಾರು ಹರಾಜು

ಫೋರ್ಡ್ ಎಸ್ಕಾರ್ಟ್ ಆರ್ಎಸ್ ಟರ್ಬೊ ಕಾರು ಪ್ರಿನ್ಸೆಸ್ ಡಯಾನಾ ಬಳಸುವ ಕಾರುಗಳಲ್ಲಿ ಒಂದಾಗಿದೆ. ಕೆಲವು ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಅವರು ಬಳಸಿದ ವಾಹನಗಳಲ್ಲಿ ಇದು ಕೂಡ ಒಂದಾಗಿದೆ. ಈ ವಾಹನವನ್ನು ಕಳೆದ ಶನಿವಾರ ಹರಾಜು ಮಾಡಲಾಯಿತು.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ಈ ಹರಾಜಿನಲ್ಲಿ ಡಯಾನಾ ಫೇವರೆಟ್ ಕಾರು ನಂಬಲಾಗದಷ್ಟು ಹೆಚ್ಚಿನ ಬೆಲೆಗೆ ಹರಾಜಾಗಿದೆ. ಸುಮಾರು 6,50,000 ಸಾವಿರ ಪೌಂಡ್‌ಗಳಿಗೆ ವಾಹನ ಹರಾಜಾಗಿದೆ ಎಂದು ದೇಶದ ಮಾಧ್ಯಮಗಳು ವರದಿ ಮಾಡಿವೆ. ಇದು ಭಾರತೀಯ ಕರೆನ್ಸಿಯಲ್ಲಿ ರೂ. 5.20 ಕೋಟಿಗೂ ಹೆಚ್ಚು. ಪ್ರಿನ್ಸೆಸ್ ಡಯಾನಾ ಬಳಸುತ್ತಿದ್ದ ಕಾರನ್ನು ಉದ್ಯಮಿಯೊಬ್ಬರು ಖರೀದಿಸಿದ್ದಾರೆ.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ಖರೀದಿದಾರರ ಹೆಸರು ಮತ್ತು ಇತರ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಈ ಕಾರನ್ನು ಸಿಲ್ವರ್‌ಸ್ಟೋನ್ ಹರಾಜು ಸಂಸ್ಥೆ ಮಾರಾಟಕ್ಕೆ ತಂದಿದೆ. ಇದು ಕ್ಲಾಸಿಕ್ ಕಾರುಗಳನ್ನು ಹರಾಜು ಮಾಡಲು ಮೀಸಲಾಗಿರುವ ವಿಶೇಷ ಕಂಪನಿಯಾಗಿದೆ. ಕಂಪನಿಯ ಪ್ರಕಾರ, ಹರಾಜು ಸಮಯದಲ್ಲಿ ಕಾರನ್ನು ಖರೀದಿಸಲು ಸಾಕಷ್ಟು ಪೈಪೋಟಿ ಇತ್ತು.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ಈ ಹಂತದಲ್ಲಿ ರಾಜಕುಮಾರಿಯ ಕಾರು ಅಂತಿಮವಾಗಿ 6.50 ಲಕ್ಷ ಪೌಂಡ್‌ಗಳಿಗೆ ಹರಾಜಾಗಿದೆ. ಇದು ನಿಗದಿತ ಬೆಲೆಗಿಂತ ಅಧಿಕವಾಗಿದೆ ಎಂದು ಹರಾಜು ಸಂಸ್ಥೆ ತಿಳಿಸಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕಂಪನಿಯು ನಿರೀಕ್ಷಿಸಿದ್ದಕ್ಕಿಂತ ಶೇಕಡಾ 12.5 ರಷ್ಟು ಹೆಚ್ಚಿನ ಪ್ರೀಮಿಯಂಗೆ ಕಾರನ್ನು ಹರಾಜು ಮಾಡಲಾಗಿದೆ.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ಈ ಫೋರ್ಡ್ ಎಸ್ಕಾರ್ಟ್ ಆರ್ಎಸ್ ಟರ್ಬೊ 1980ರ ದಶಕದಲ್ಲಿ ಬ್ರಿಟನ್ ರಾಜಕುಮಾರಿ ಡಯಾನಾರ ಫೇವರೆಟ್ ಕಾರು. ಕಪ್ಪು ಬಣ್ಣದಲ್ಲಿ ಅಲಂಕೃತವಾಗಿರುವ ಈ ವಾಹನ ಇನ್ನೂ ಹೊಚ್ಚಹೊಸದಾಗಿ ಕಾಣುತ್ತಿದೆ. ರಾಜಕುಮಾರಿಯ ಮರಣದ 25 ನೇ ವಾರ್ಷಿಕೋತ್ಸವದ ಮೊದಲು ವಾಹನವನ್ನು ಹರಾಜು ಮಾಡಲಾಗಿದೆ.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ರಾಜಕುಮಾರಿ ಡಯಾನಾ ಕಾರುಗಳು ಮತ್ತು ಡ್ರೈವಿಂಗ್ ಅನ್ನು ತುಂಬಾ ಇಷ್ಟಪಡುತ್ತಿದ್ದರು. ಪ್ರಸ್ತುತ ಹರಾಜಾಗಿರುವ ಎಸ್ಕಾರ್ಟ್ ಕಾರನ್ನು ಅವರು 1985 ರಿಂದ 1988 ರವರೆಗೆ ಬಳಸಿದ್ದರು. ಈ ಕಾರಿನೊಂದಿಗೆ ಅವರು ಇಂಗ್ಲೆಂಡ್‌ನ ವಿವಿಧ ಭಾಗಗಳಲ್ಲಿ ಸುತ್ತಿದ್ದಾರೆ.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ಅಂದಹಾಗೆ, ಪ್ಯಾರಿಸ್‌ನ ವಿವಿಧೆಡೆ ಅವರು ಕಾರಿನೊಂದಿಗೆ ತೆಗೆಸಿಕೊಂಡ ಕೆಲವು ಫೋಟೋಗಳು ಈಗಲೂ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿವೆ. ಹೆಚ್ಚಿನ ಫೋಟೋಗಳಲ್ಲಿ ಅವರೇ ಡ್ರೈವರ್ ಸೀಟಿನಲ್ಲಿದ್ದರೆ ಅವರ ಭದ್ರತಾ ಸಿಬ್ಬಂದಿ ಹಿಂದೆ ಕುಳಿತಿದ್ದಾರೆ.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ಫೋರ್ಡ್ ಎಸ್ಕಾರ್ಟ್ ಆರ್ಎಸ್ ಟರ್ಬೊ ಸೀರೀಸ್‌ನಲ್ಲಿ ಕೇವಲ 1 ನ್ನು ಮಾತ್ರ ಬಿಳಿ ಬಣ್ಣದಲ್ಲಿ ಉತ್ಪಾದಿಸಿತ್ತು. ಆದರೆ ಡಯಾನಾ ಈ ಬಣ್ಣದ ಬದಲು ಕಪ್ಪು ಕಾರನ್ನು ಆಯ್ಕೆ ಮಾಡಿಕೊಂಡಿದ್ದರು. ಇದರೊಂದಿಗೆ ತಮ್ಮ ಸುರಕ್ಷತೆಗಾಗಿ ಈ ಕಾರಿನಲ್ಲಿ ವಿವಿಧ ವಿಶೇಷ ಭದ್ರತಾ ವೈಶಿಷ್ಟ್ಯಗಳನ್ನು ಕಸ್ಟಮೈಸ್ ಮಾಡಿಸಿದ್ದರು.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ಡಯಾನಾ ಈ ಕಾರನ್ನು ಕೇವಲ 25,000 ಮೈಲುಗಳು ಮಾತ್ರ ಬಳಸಿದ್ದಾರೆ. ಆದ್ದರಿಂದ, ಅದರ ಎಂಜಿನ್ ಇನ್ನೂ ಹೊಸ ರೀತಿಯಲ್ಲಿ ಚಲಿಸುತ್ತದೆ ಎಂದು ಊಹಿಸಬಹುದು. ಈ ಕಾರು ಸೂಪರ್ ಐಷಾರಾಮಿ ಕಾರಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಆದರೂ ಆ ದಿನಗಳಲ್ಲಿ ಇದು ಇಂಗ್ಲೆಂಡ್‌ನಲ್ಲಿ ಉತ್ತಮವಾಗಿ ಮಾರಾಟವಾಯಿತು.

ಪ್ರಿನ್ಸೆಸ್ ಡಯಾನಾ ಕಾರು ದಾಖಲೆಯ ಮೊತ್ತಕ್ಕೆ ಹರಾಜು: ಮರೆಯಾಗಿ 25 ವರ್ಷ ಕಳೆದ್ರೂ ಅಭಿಮಾನ ಜೀವಂತ

ಈ ಕಾರು ಆಕರ್ಷಕ ನೋಟ ಮತ್ತು ಹೆಚ್ಚಿನ ಸಾಮರ್ಥ್ಯವನ್ನು ಹೊರಸೂಸುವ ಶಕ್ತಿಶಾಲಿ ಮೋಟಾರನ್ನು ಒಳಗೊಂಡಿರುವ ಕಾರಣ ಬ್ರಿಟಿಷ್ ಜನರಲ್ಲಿ ಅಗಾಧ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಬ್ರಿಟನ್ ಉದ್ಯಮಿಯೊಬ್ಬರು ಇದೀಗ ಈ ಸೂಪರ್ ಕಾರನ್ನು ಖರೀದಿಸಿದ್ದಾರೆ. ಈ ಮೊದಲು ಡಯಾನಾ ಬಳಸುತ್ತಿದ್ದ ಮತ್ತೊಂದು ಕಾರನ್ನು ಇತ್ತೀಚೆಗೆ ಹರಾಜಿಗೆ ಇಡಲಾಗಿತ್ತು.

Most Read Articles

Kannada
English summary
Former British princess Princess Dianas car auctioned for record sum
Story first published: Monday, August 29, 2022, 19:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X