BMTC: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಮಾಜಿ ಕ್ರಿಕೆಟಿಗ.. ಮೆಚ್ಚುಗೆ

ಬೆಂಗಳೂರಿನ ಜೀವನಾಡಿಯಾಗಿ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ - BMTC) ಖ್ಯಾತಿಗಳಿಸಿದೆ. ಪ್ರತಿದಿನ ಲಕ್ಷಂತಾರ ಪ್ರಯಾಣಿಕರನ್ನು ನಿರ್ದಿಷ್ಟ ಗಮ್ಯ ಸ್ಥಾನ ತಲುಪಿಸುವ ಮೂಲಕ ಮನೆಮಾತಾಗಿದ್ದು, ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಿದ್ದಾರೆ. ಈಗ, ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ವಾಯು ವಜ್ರ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ.

ಈ ಬಗ್ಗೆ ಸ್ವತಃ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ದೊಡ್ಡ ಗಣೇಶ್ (Dodda Ganesh) ಅವರು, 'ಕಛೇರಿಗೆ ಹೋಗುವ ದಾರಿಯಲ್ಲಿ ನನ್ನ ಕಾರು ಕೆಟ್ಟು ನಿಂತಿತು, ಚಿತ್ರದಲ್ಲಿರುವ ಕಂಡಕ್ಟರ್ ರಮೇಶ್ ಬಾಬು, ಚಾಲಕ ಸಿದ್ದರಾಜು ಅವರಿಗೆ ಹೇಳಿ, ಬಸ್ ನಿಲ್ಲಿಸಿ ನನ್ನನ್ನು ಹತ್ತಿಸಿಕೊಂಡು ಕರೆದುಕೊಂಡು ಹೋದರು. ಬಿಎಂಟಿಸಿ ಸೇವೆಗೆ ಧನ್ಯವಾದ' ಎಂದು ಬರೆದುಕೊಂಡಿದ್ದಾರೆ.

BMTC: ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯರಂತೆ ಪ್ರಯಾಣಿಸಿದ ಮಾಜಿ ಕ್ರಿಕೆಟಿಗ.. ಮೆಚ್ಚುಗೆ

ದೊಡ್ಡ ಗಣೇಶ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ, ಸೆಪ್ಟೆಂಬರ್ 11 ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ ಗೆ ಕರೆ ನೀಡಿತ್ತು. ಪರಿಣಾಮ, ಖಾಸಗಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಅಂದು ಅನಿಲ್ ಕುಂಬ್ಳೆ ಅವರು, ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿದ್ದರು. ಆ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇವೆಲ್ಲ ಒಂದು ಕಡೆಯಾದರೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವಾಯು ವಜ್ರ ಬಸ್‌ಗಳು ಬಿಎಂಟಿಸಿಗೆ ಕಾಮಧೇನುವಾಗಿ ಮಾರ್ಪಟ್ಟಿದೆ ಎಂದು ಕಳೆದ ಅಕ್ಟೋಬರ್ ತಿಂಗಳಲ್ಲಿ ವರದಿಯಾಗಿತ್ತು. ಸಂಪೂರ್ಣ ಹವಾನಿಯಂತ್ರಿತ ವಾಯು ವಜ್ರ ಬಸ್‌ಗಳು ವಿಮಾನ ಪ್ರಯಾಣಿಕರನ್ನು ಆಕರ್ಷಿಸಿವೆ. ಕೊರೋನಾ ನಂತರ ಈ ಬಸ್‌ ಉಪಯೋಗಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ.

BMTC: ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯರಂತೆ ಪ್ರಯಾಣಿಸಿದ ಮಾಜಿ ಕ್ರಿಕೆಟಿಗ.. ಮೆಚ್ಚುಗೆ

ಬಿಎಂಟಿಸಿ ಅಧಿಕಾರಗಳ ಪ್ರಕಾರ, ಪ್ರತಿನಿತ್ಯ ವಾಯು ವಜ್ರ ಬಸ್‌ಗಳಲ್ಲಿ 13,000 ಮಂದಿ ಪ್ರಯಾಣಿಸುತ್ತಿದ್ದು, ನಿಗಮಕ್ಕೆ ರೂ.32 ಲಕ್ಷ ಆದಾಯ ಬರುತ್ತಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಸಾಮಾನ್ಯವಾಗಿ, ಐಟಿ ಕಂಪನಿಗಳಿರುವ ಏರಿಯಾಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಯು ವಜ್ರ ಬಸ್‌ಗಳು ಸಂಚರಿಸುತ್ತವೆ. ಕೊರೋನಾ ಕಾರಣ, ವಿವಿಧ ಕಂಪನಿಗಳು ಮನೆಯಲ್ಲಿ ಕೆಲಸ ಮಾಡುವ ನಿಯಮ ಜಾರಿಗೊಳಿಸಿದ್ದವು. ಇದರಿಂದ ಈ ಬಸ್‌ಗಳು ತುಂಬಾ ನಷ್ಟ ಅನುಭವಿಸಿದ್ದವು.

ಟಿಕೆಟ್ ದರದಲ್ಲಿ 54% ಇಳಿಕೆ ಮಾಡಲಾದರೂ ನಷ್ಟದಿಂದ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ. ಆದರೆ, ಕ್ಯಾಬ್ ಸೇವೆ ಹಾಗೂ ಹೆಚ್ಚಿನ ಸಂಚಾರ ದಟ್ಟಣೆ ನಡುವೆಯೂ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವಾಯು ವಜ್ರ (ವೋಲ್ವೋ) ಬಸ್‌ಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರವುದು ಸಂತಸದ ವಿಚಾರವಾಗಿದೆ. ಜೊತೆಗೆ ಬಿಎಂಟಿಸಿ ನಗರದ ಪ್ರಯಾಣಿಕರ ಅನುಕೂಲಕ್ಕಾಗಿ ಡಬಲ್ ಡೆಕ್ಕರ್ ಬಸ್‌ ಸೇವೆ ಒದಗಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಇನ್ನು, ದೊಡ್ಡ ಗಣೇಶ್ ಅವರ ಬಗ್ಗೆ ಕಿರು ಪರಿಚಯವನ್ನು ಮಾಡಿಕೊಡುವುದಾದರೆ, ಬೆಂಗಳೂರಿನವರಾದ ಅವರು, ಭಾರತ ತಂಡ ಹಾಗೂ ಕರ್ನಾಟಕದ ರಣಜಿ ತಂಡವನ್ನು ಪ್ರತಿನಿಧಿಸಿದ್ದಾರೆ. ಟೀಮ್ ಇಂಡಿಯಾ ಪರವಾಗಿ 1997ರಲ್ಲಿ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯವನ್ನು ಆಡಿದ್ದಾರೆ. ಬೌಲರ್ ಆಗಿರುವ ದೊಡ್ಡ ಗಣೇಶ್ ಅವರು, 104 ಪ್ರಥಮ ದರ್ಜೆ ಪಂದ್ಯಗಳಿಂದ 365 ವಿಕೆಟ್‌ ಪಡೆದಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 29, 2023, 13:18 [IST]
English summary
Former cricketer dodda ganesh traveling bmtc vayu vajra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+