India
YouTube

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಅವರು ಬಿಎಂಡಬ್ಲ್ಯು ಕಾರುಗಳ ದೊಡ್ಡ ಅಭಿಮಾನಿಯಾಗಿದ್ದಾರೆ. ಅವರು ಈಗಾಗಲೇ ಕೆಲವು ಬಿಎಂಡಬ್ಲ್ಯುನ ದುಬಾರಿ ಕಾರುಗಳು ಮತ್ತು ಜರ್ಮನ್ ಬ್ರಾಂಡ್‌ನಿಂದ ತಯಾರಿಸಿದ ಮೋಟಾರ್‌ಸೈಕಲ್‌ಗಳನ್ನು ಹೊಂದಿದ್ದಾರೆ. ಇವುಗಳ ಹೊರತಾಗಿಯೂ ಇದೀಗ ಹೊಸ-ಪೀಳಿಗೆಯ BMW X7 ಅನ್ನು ಖರೀದಿಸಿದ್ದಾರೆ.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಈ ಬಗ್ಗೆ BMW ಚಂಡೀಗಢವು ಮಾಜಿ ಕ್ರಿಕೆಟಿಗನಿಗೆ ಹೊಚ್ಚಹೊಸ X7 ಅನ್ನು ಡೆಲಿವರಿ ನೀಡಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದೆ. ಯುವರಾಜ್ ಸಿಂಗ್ ಅವರು ಟಾಪ್-ಎಂಡ್ ಪೆಟ್ರೋಲ್ ವೇರಿಯೆಂಟ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ತೋರುತ್ತಿದೆ, ಇದು ಸ್ಪೋರ್ಟಿಯರ್ ಟ್ರಿಮ್‌ಗಳೊಂದಿಗೆ ಬರುತ್ತದೆ.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಇತರ ಮಾದರಿಗಳೊಂದಿಗೆ ಹೋಲಿಸಿದರೆ ಈ ಮಾದರಿಯು ಆಕ್ರಮಣಕಾರಿಯಾಗಿ ಕಾಣುತ್ತದೆ. ಯುವರಾಜ್ ಸಿಂಗ್ ಅವರು ತಮ್ಮ X7 ಅನ್ನು ಸುಂದರವಾದ ಫೈಟೋನಿಕ್ ಬ್ಲೂ ಬಣ್ಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ವಿಶಿಷ್ಟವಾದ ಬಣ್ಣವಾಗಿದ್ದು, ವಾಹನವು ಜನಸಂದಣಿಯಲ್ಲಿ ಎದ್ದು ಕಾಣುವಂತೆ ಮಾಡುತ್ತದೆ.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಈ ವೇರಿಯಂಟ್ 3.0-ಲೀಟರ್, ನೇರ ಆರು-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ 335 Bhp ಮತ್ತು 450 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದು 8-ಸ್ಪೀಡ್ ಆಟೋಮೇಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುವುದರಿಂದ ಎಲ್ಲಾ ನಾಲ್ಕು ವೀಲ್‌ಗಳಿಗೆ ಪವರ್ ಒದಗಿಸುತ್ತದೆ.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ BMW X7 ಹಲವು ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿದೆ. ಉನ್ನತ ದರ್ಜೆಯ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಒಳಾಂಗಣದಲ್ಲಿ ಐಷಾರಾಮಿ SUV ವೆರ್ನಾಸ್ಕಾ ವಿನ್ಯಾಸದ ಲೆದರ್ ಹೊದಿಕೆಯನ್ನು ನೀಡಲಾಗಿದ್ದು, ಇದು ಬಿಲ್ಟ್-ಇನ್ ಹೆಡ್ಸ್-ಅಪ್ ಡಿಸ್ಪ್ಲೇಯೊಂದಿಗೆ ಬೃಹತ್ 12.3-ಇಂಚಿನ ಟೂಲ್ ಪ್ಯಾನಲ್‌ದೊಂದಿಗೆ ಬರುತ್ತದೆ.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಎರಡನೇ ಪರದೆಯನ್ನು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಮಾಡಲಾಗಿದೆ. ಈ SUVಯು ಹರ್ಮನ್‌ನಿಂದ ಆಡಿಯೋ ಸಿಸ್ಟಮ್ ಅನ್ನು ಪಡೆದುಕೊಂಡಿದೆ. ಇದರ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸುಧಾರಿತ ಐಡ್ರೈವ್ ಇಂಟರ್‌ಫೇಸ್ ಮತ್ತು ಸಂಪರ್ಕಿತ ತಂತ್ರಜ್ಞಾನದ ಹೋಸ್ಟ್‌ನೊಂದಿಗೆ ಬರುತ್ತದೆ.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಈ ಮೂಲಕ X7 ಅನ್ನು ಗೆಸ್ಚರ್ ನಿಯಂತ್ರಣಗಳ ಮೂಲಕ ನಿಯಂತ್ರಿಸಬಹುದಾಗಿದೆ, ಅಂದರೆ ಕೀಗಳನ್ನು ಸ್ಪರ್ಶಿಸುವ ಅಗತ್ಯವಿಲ್ಲ. ವಾಲ್ಯೂಮ್ ಅನ್ನು ಹೆಚ್ಚಿಸಲು, ವಾಲ್ಯೂಮ್ ಅನ್ನು ಕಡಿಮೆ ಮಾಡಲು ಮತ್ತು ಇತರ ಹೆಚ್ಚಿನ ವೈಶಿಷ್ಟ್ಯಗಳನ್ನು ಚಾಲನೆ ಮಾಡಲು ನೀವು ಕೇವಲ ಗೆಸ್ಚರ್ ಮಾಡಬಹುದು. ವೈರ್‌ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, ಫೋರ್-ಜೋನ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಮ್, ಲೇನ್ ಮಾನಿಟರಿಂಗ್, ಆಟೋ-ಲೆವೆಲಿಂಗ್ ಅಡಾಪ್ಟಿವ್ ಸಸ್ಪೆನ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಹಲವು BMW ಕಾರುಗಳ ಒಡೆಯ ಯುವರಾಜ್ ಸಿಂಗ್

ಯುವರಾಜ್ ಸಿಂಗ್ "M" ಬ್ಯಾಡ್ಜ್ ಹೊಂದಿರುವ ಹಲವಾರು ಉನ್ನತ-ಕಾರ್ಯಕ್ಷಮತೆಯ BMW ಕಾರುಗಳನ್ನು ಹೊಂದಿದ್ದಾರೆ. ಇದರಲ್ಲಿ ಅವರ ಮೊದಲನೆಯದ್ದು E46 M3, ಇದು IPL ನಲ್ಲಿ ಅವರ ಆರಂಭಿಕ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಯಿತು. ಫಿಯೋನಿಕ್ಸ್ ಹಳದಿ ಮೆಟಾಲಿಕ್ ಶೇಡ್‌ನಲ್ಲಿರುವ ಕನ್ವರ್ಟಿಬಲ್ ಕಾರಿನೊಂದಿಗೆ ಯುವರಾಜ್ ಸಿಂಗ್‌ ಅವರು ಹಲವಾರು ಬಾರಿ ಡ್ರೈವ್‌ ಮಾಡುತ್ತಾ ಕಾಣಿಸಿಕೊಂಡಿದ್ದರು.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಅಲ್ಲದೇ ಐಪಿಎಲ್ ಸಮಯದಲ್ಲಿ ಈ ಕಾರನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ ತನ್ನ ಸಹ ಆಟಗಾರರಿಗೆ ಲಿಫ್ಟ್ ನೀಡುತ್ತಿದ್ದ ಸಂದರ್ಭದಲ್ಲಿ ಮೀಡಿಯಾ ಕಣ್ಣಿಗೂ ಬಿದ್ದಿದ್ದರು. ಈ ಕನ್ವರ್ಟಿಬಲ್ ಮಾದರಿಯನ್ನು ಜರ್ಮನ್ ಕಾರು ತಯಾರಕರು ಭಾರತದಲ್ಲಿ ಅಧಿಕೃತವಾಗಿ ಎಂದೂ ಮಾರಾಟ ಮಾಡಿಲ್ಲ.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಆದರೆ ಈ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲು ಹಣವಿದ್ದರೆ ಸಾಕು, ಯುವರಾಜ್ ಮಾಡಿದಂತೆಯೇ ನೀವು ಯಾವಾಗಲಾದರೂ ಅದನ್ನು ಆಮದು ಮಾಡಿಕೊಳ್ಳಬಹುದು.ಯುವರಾಜ್ ಸಿಂಗ್ ಅದ್ಭುತವಾದ ಇಂಟರ್‌ಲಾಗೋಸ್ ನೀಲಿ ಬಣ್ಣದಲ್ಲಿ E60 M5 ಅನ್ನು ಸಹ ಹೊಂದಿದ್ದರು. ಇದರ ನಂತರ ಅವರು F86 BMW X6M ಅನ್ನು ಖರೀದಿಸಿದರು.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಈ SUV 4.4-ಲೀಟರ್ V8 ಎಂಜಿನ್‌ನೊಂದಿಗೆ ಬರುತ್ತದೆ. ಇದು ಗರಿಷ್ಠ 567 Bhp ಪವರ್ ಮತ್ತು 750 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆಯುತ್ತದೆ, ಇದು ಕೇವಲ 4.2 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಅವರು ಸೆಕೆಂಡ್ ಹ್ಯಾಂಡ್‌ನಲ್ಲಿ BMW F10 M5 ಅನ್ನು ಸಹ ಖರೀದಿಸಿದ್ದರು. ಯುವರಾಜ್ ಈ M5 ಅನ್ನು ಅದೇ ಲಾಂಗ್ ಬೀಚ್ ನೀಲಿ ಬಣ್ಣದಲ್ಲಿ ಪಡೆದುಕೊಂಡಿದ್ದಾರೆ, ಇದು ವಾಹನಕ್ಕೆ ಅದ್ಭುತ ನೋಟವನ್ನು ನೀಡುತ್ತದೆ. ಹೀಗೆ ಬಿಎಂಡಬ್ಲ್ಯು ಕಾರುಗಳೆಂದರೆ ಯುವರಾಜ್ ಅವರಿಗೆ ಸಖತ್ ಕ್ರೇಜ್ ಇದೆ. ಮುಂಬರುವ ದಿನಗಳಲ್ಲಿ ಬಿಎಂಡಬ್ಲ್ಯುನ ಇನ್ನಷ್ಟು ಹೊಸ ಮಾದರಿಗಳನ್ನು ಖರೀದಿಸಲಿದ್ದಾರೆ.

ದುಬಾರಿ ಬೆಲೆಯ BMW X7 ಕಾರು ಖರೀದಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಸೆಲಬ್ರಿಟಿಗಳಿಗೆ ಕಾರುಳೆಂದರೆ ಸಖತ್ ಕ್ರೇಜ್ ಇದೆ. ಹಾಗಾಗಿಯೇ ಮಾರುಕಟ್ಟೆಗೆ ಲಗ್ಗೆಯಿಡುವ ಪ್ರತಿಯೊಂದು ಕಾರನ್ನು ಪರಿಶೀಲಿಸಿ ಖರೀದಿಸುತ್ತಾರೆ. ಯುವರಾಜ್ ಸಿಂಗ್ ಕೂಡ ಮಾರುಕಟ್ಟೆಯಲ್ಲಿ ಸದ್ದು ಮಾಡುವ ಬಿಎಂಡಬ್ಲ್ಯು ಕಾರಗಳನ್ನು ಖರೀದಿಸುತ್ತಾರೆ. ಆದರೆ ಅವರು ಈ ಕಾರುಗಳಲ್ಲಿ ಪ್ರಯಾಣಿಸುವುದು ಅತಿ ವಿರಳವಾದರೂ ಗ್ಯಾರೇಜ್‌ನಲ್ಲಿ ಶೇಕರಿಸಿಡುವುದು ಅವರಿಗೆ ಅಭ್ಯಾಸವಾಗಿದೆ.

Most Read Articles

Kannada
English summary
Former cricketer Yuvraj Singh bought an expensive BMW X7 car
Story first published: Friday, August 5, 2022, 16:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X