ಐಷಾರಾಮಿ ಎಂಜಿ ಗ್ಲೊಸ್ಟರ್ ಕಾರು ಖರೀದಿಸಿದ ಮಾಜಿ ಹಾಕಿ ಆಟಗಾರ ಧನರಾಜ್ ಪಿಳ್ಳೈ
ಧನರಾಜ್ ಪಿಳ್ಳೈ ಅವರು ಖ್ಯಾತ ಅಂತರರಾಷ್ಟ್ರೀಯ ಹಾಕಿ ಆಟಗಾರ ಮತ್ತು ಭಾರತೀಯ ಹಾಕಿ ತಂಡದ ನಾಯಕರಾಗಿದ್ದರು. ದ್ಯಾನ್ ಚಂದ್ ಬಳಿಕ ಹಾಕಿ ಲೋಕದಲ್ಲಿ ಸೂಪರ್ ಸ್ಟಾರ್ ಆಗಿ ಮೆರದ ಧನರಾಜ್ ಪಿಳ್ಳೈ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಲಭಿಸಿದೆ.

ಧನರಾಜ್ ಅವರು ಒಲಿಂಪಿಕ್ ಫೈನಲ್ಸ್, ಏಷ್ಯನ್ ಗೇಮ್ಸ್, 4 ವಿಶ್ವಕಪ್ ಮತ್ತು ಚಾಂಪಿಯನ್ ಟ್ರೋಫಿಗಳಲ್ಲಿ ಭಾಗವಹಿಸಿದ್ದಾರೆ. ಇವರು ಬಹಳಷ್ಟು ವಿದೇಶಿ ಕ್ಲಬ್ ಗಳಲ್ಲೂ ಆಡಿದ್ದಾರೆ. ಧನರಾಜ್ ಪಿಳ್ಳೈ ತಮ್ಮ 15 ವರ್ಷಗಳ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ನಾಯಕ ಮತ್ತು ಆಟಗಾರನಾಗಿ, ಅವರು ಭಾರತೀಯ ಹಾಕಿ ತಂಡಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಧನರಾಜ್ ಪಿಳ್ಳೈ ಅವರು ಐಷಾರಾಮಿ ಎಂಜಿ ಗ್ಲೊಸ್ಟರ್ ಎಸ್‍ಯುವಿ ಕಾರನ್ನು ಖರೀದಿಸಿದ್ದಾರೆ. ಇವರು ತಮ್ಮ ಹುಟ್ಟುಹಬ್ಬದ ದಿನದಂದೇ ಹೊಸ ಎಂಜಿ ಗ್ಲೊಸ್ಟರ್ ಎಸ್‍ಯುವಿಯ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಎಂ.ಜಿ ಮುಂಬೈನ ನಿರ್ದೇಶಕ ನಿಧಿ ಮೋದಿ ಈ ಐಷಾರಾಮಿ ಕಾರಿನ ಕೀಯನ್ನು ಧನರಾಜ್ ಅವರಿಗೆ ಹಸ್ತಾಂತರಿಸಿದರು.

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ಎಂಬ ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಮಾದರಿಗಳನ್ನು ಆಯ್ಕೆ ಮಾಡಬಹುದು.

ಎಂಜಿ ಗ್ಲೊಸ್ಟರ್ ಎಸ್‍ಯುವಿ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಇದು 2.0-ಲೀಟರ್ ಸಿಂಗಲ್ ಟರ್ಬೊ ಡೀಸೆಲ್ ಮತ್ತು 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್‌ಗಳಾಗಿದೆ. 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಅನ್ನು ಟಾಪ್ ಎಂಡ್ ಮಾದರಿಯಲ್ಲಿ ಮಾತ್ರ ಲಭ್ಯವಿರುತ್ತದೆ.

ಇದರಲ್ಲಿ 2.0-ಲೀಟರ್ ಸಿಂಗಲ್ ಟರ್ಬೊ ಡೀಸೆಲ್ ಎಂಜಿನ್ 160-ಬಿಹೆಚ್‌ಪಿ ಮತ್ತು 375-ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ 215 ಬಿಹೆಚ್‍ಪಿ ಪವರ್ ಮತ್ತು 480 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಎಂಜಿ ಗ್ಲೊಸ್ಟರ್ ಎಸ್‍ಯುವಿಯಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿವೆ. ಇದರಲ್ಲಿ ಅಟೊನೊಮಸ್ ಲೆವಲ್ 1 ಫೀಚರ್ಸ್‌ಗಳಾದ ಆಟೋ ಪಾರ್ಕ್ ಅಸಿಸ್ಟ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್(ಎಇಬಿ), ಫಾರ್ವರ್ಡ್ ಕೂಲಿಷನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ಲೇನ್ ಎಕ್ಸಿಟ್ ವಾರ್ನಿಂಗ್ ಸಿಸ್ಟಂ ಅನ್ನು ಹೊಂದಿದೆ.

ಇನ್ನು ಈ ಎಸ್‍ಯುವಿಯಲ್ಲಿ ಎಲ್‌ಇಡಿ ಲೈಟಿಂಗ್, ಆಟೋ ಲೆವೆಲಿಂಗ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳು, ಎಂಜಿ ಲೋಗೋ ಹೊಂದಿರುವ ಒಆರ್‌ವಿಎಂ, ಪನೊರಮಿಕ್ ಸನ್‌ರೂಫ್, 19 ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್, ಫ್ರಂಟ್-ರಿಯರ್ ಫಾಗ್ ಲ್ಯಾಂಪ್, ಸ್ಟೀರಿಂಗ್-ಅಸಿಸ್ಟ್ ಕಾರ್ನರಿಂಗ್ ಲ್ಯಾಂಪ್ ಮತ್ತು ಡ್ಯುಯಲ್-ಬ್ಯಾರೆಲ್ ಟ್ವಿನ್ ಕ್ರೋಮ್ ಎಕ್ಸಾಸ್ಟ್ ಹೊಂದಿದೆ.

ಎಂಜಿ ಗ್ಲೊಸ್ಟರ್ ಎಸ್‍ಯುವಿಯ ಒಳಭಾಗದಲ್ಲಿ ಲೆದರ್ ಸೀಟ್ ಮತ್ತು ಎರಡನೇ ಸಾಲಿನಲ್ಲಿ ಪರ್ಸನಲ್ ಕ್ಯಾಪ್ಟನ್ ಸೀಟ್ ಅನ್ನು ಅಳವಡಿಸಲಾಗಿದೆ. ಇನ್ನು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅಳವಡಿಸಿದ್ದು, ಇದರಲ್ಲಿ ಆ್ಯಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಎಂಜಿ ಕಂಪನಿಯ ಹೊಸ ಐ-ಸ್ಮಾರ್ಟ್ ಕನೆಕ್ಟೆಡ್ ಟೆಕ್ನಾಲಜಿ ಹೊಂದಿದೆ.


Click it and Unblock the Notifications