ಹೊಸ ಟ್ರಾಕ್ಟರ್ ನೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡ ಟೀಂ ಇಂಡಿಯಾ ಮಾಜಿ ನಾಯಕ

ನಮಗೆಲ್ಲಾ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಜೊತೆಗೆ ವಾಹನಗಳ ಮೇಲೂ ಕ್ರೇಜ್ ಹೊಂದಿದ್ದಾರೆ. ಧೋನಿ ಅನೇಕ ಅಪರೂಪದ ಹಾಗೂ ಆಕರ್ಷಕವಾದ ಬೈಕುಗಳ ಸಂಗ್ರಹವನ್ನು ಹೊಂದಿದ್ದಾರೆ.

ಹೊಸ ಟ್ರಾಕ್ಟರ್ ನೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡ ಟೀಂ ಇಂಡಿಯಾ ಮಾಜಿ ನಾಯಕ

ಇವುಗಳಲ್ಲಿ ಯಮಹಾ ಆರ್ ಡಿ 350, ಯಮಹಾ ಆರ್ ಎಕ್ಸ್ 100, ಕವಾಸಕಿ ನಿಂಜಾ ಝಡ್ 12 ಆರ್, ಕವಾಸಕಿ ಹೆಚ್ 2 ಆರ್ ಬೈಕ್ ಗಳು ಸೇರಿವೆ. ಧೋನಿ ಬೈಕ್ ಗಳನ್ನು ಮಾತ್ರವಲ್ಲದೆ ಆಕರ್ಷಕ ಕಾರುಗಳನ್ನೂ ಹೊಂದಿದ್ದಾರೆ. ಧೋನಿ ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳನ್ನು ಚಾಲನೆ ಮಾಡುವ ಹಲವಾರು ವೀಡಿಯೊಗಳು ವೈರಲ್ ಆಗಿವೆ. ಧೋನಿ ಲಾಕ್‌ಡೌನ್ ಅವಧಿಯಲ್ಲಿ ತಮ್ಮ ನೆಚ್ಚಿನ ವಾಹನಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಹೊಸ ಟ್ರಾಕ್ಟರ್ ನೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡ ಟೀಂ ಇಂಡಿಯಾ ಮಾಜಿ ನಾಯಕ

ಈ ಬಗ್ಗೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಮಾತನಾಡಿರುವ ಅವರ ಪತ್ನಿ ಸಾಕ್ಷಿ ಧೋನಿ ತಮ್ಮ ಹೆಚ್ಚಿನ ಸಮಯವನ್ನು ಬೈಕುಗಳೊಂದಿಗೆ ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಬೈಕುಗಳನ್ನು ಡಿಸ್ಅಸೆಂಬಲ್ ಮಾಡಿ ಅವುಗಳನ್ನು ಮತ್ತೆ ಅಸೆಂಬಲ್ ಮಾಡುವುದು ಧೋನಿಯವರ ಹವ್ಯಾಸವಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಹೊಸ ಟ್ರಾಕ್ಟರ್ ನೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡ ಟೀಂ ಇಂಡಿಯಾ ಮಾಜಿ ನಾಯಕ

ಕ್ರಿಕೆಟ್‌ನ ಹೊರತಾಗಿ, ಧೋನಿ ವಾಹನಗಳಿಗೆ ಸಂಬಂಧಿಸಿದಂತೆ ಆಗಾಗ್ಗೆ ಸುದ್ದಿಯಾಗುತ್ತಾರೆ. ಧೋನಿ ಇತ್ತೀಚಿಗಷ್ಟೇ ಸ್ವರಾಜ್ ಕಂಪನಿಯ 963 ಟ್ರಾಕ್ಟರ್ ಖರೀದಿಸಿದ್ದಾರೆ. ಧೋನಿ ತಮ್ಮ ಫಾರಂ ಹೌಸ್ ನಲ್ಲಿ ನೈಸರ್ಗಿಕ ಕೃಷಿಗಾಗಿ ಟ್ರ್ಯಾಕ್ಟರ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಹೊಸ ಟ್ರಾಕ್ಟರ್ ನೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡ ಟೀಂ ಇಂಡಿಯಾ ಮಾಜಿ ನಾಯಕ

ವೈರಲ್ ಆಗಿರುವ ವೀಡಿಯೊದಲ್ಲಿ ಧೋನಿ ಸ್ವರಾಜ್ ಕಂಪನಿಯ ಸೇಲ್ಸ್ ಎಕ್ಸಿಕ್ಯೂಟಿವ್ ಜೊತೆಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಧೋನಿರವರೇ ಉಳುಮೆ ಮಾಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೊಸ ಟ್ರಾಕ್ಟರ್ ನೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡ ಟೀಂ ಇಂಡಿಯಾ ಮಾಜಿ ನಾಯಕ

ಅಂದ ಹಾಗೆ ಧೋನಿರವರು ಖರೀದಿಸಿರುವುದು ಸ್ವರಾಜ್ ಕಂಪನಿಯ ದುಬಾರಿ ಬೆಲೆಯ ಟ್ರಾಕ್ಟರ್ ಅನ್ನು. ಈ ಟ್ರಾಕ್ಟರ್ ಭಾರತದ ಅತ್ಯಂತ ಶಕ್ತಿಶಾಲಿ ಮಾದರಿಯ ಟ್ರಾಕ್ಟರ್ ಆಗಿದೆ. 963 ಎಫ್‌ಇ ಮಾದರಿಯ ಈ ಟ್ರಾಕ್ಟರ್ 12 ಸ್ಪೀಡ್ ಫಾರ್ವರ್ಡ್ ಹಾಗೂ 2 ಸ್ಪೀಡ್ ರಿವರ್ಸ್ ಗೇರ್‌ಗಳನ್ನು ಹೊಂದಿದೆ.

ಹೊಸ ಟ್ರಾಕ್ಟರ್ ನೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡ ಟೀಂ ಇಂಡಿಯಾ ಮಾಜಿ ನಾಯಕ

ಈ ಟ್ರಾಕ್ಟರ್ ನಲ್ಲಿ 4x4 ಸಿಸ್ಟಂ ನೀಡಲಾಗಿದೆ. ಈ ಸಿಸ್ಟಂನಿಂದಾಗಿ ಕೃಷಿ ಭೂಮಿಯಲ್ಲಿ ಉಳುಮೆ ಮಾಡುವಾಗ ಮಣ್ಣು ಟ್ರಾಕ್ಟರ್ ನಲ್ಲಿ ಸಿಲುಕಿಕೊಳ್ಳುವುದಿಲ್ಲ. ಸ್ವರಾಜ್ 963 ಎಫ್‌ಇ ಟ್ರಾಕ್ಟರ್ 3.5 ಲೀಟರಿನ 3 ಸಿಲಿಂಡರ್ ಎಂಜಿನ್ ಹೊಂದಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಹೊಸ ಟ್ರಾಕ್ಟರ್ ನೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡ ಟೀಂ ಇಂಡಿಯಾ ಮಾಜಿ ನಾಯಕ

ಈ ಎಂಜಿನ್ 62 ಬಿಹೆಚ್ ಪಿ ಪವರ್ ಉತ್ಪಾದಿಸುತ್ತದೆ. ಧೋನಿ ಹೊಸ ಟ್ರ್ಯಾಕ್ಟರ್‌ನಲ್ಲಿ ಕೃಷಿ ಭೂಮಿಯನ್ನು ಉಳುಮೆ ಮಾಡುತ್ತಿರುವ ವೀಡಿಯೊವನ್ನು ವಿಮಲ್ ಎಂಬ ಯೂಟ್ಯೂಬ್ ಚಾನೆಲ್ ಅಪ್ ಲೋಡ್ ಮಾಡಿದೆ.

ಮಹೇಂದ್ರ ಸಿಂಗ್ ಧೋನಿ ತಮ್ಮ ದುಬಾರಿ ಬೆಲೆಯ ಬೈಕುಗಳಲ್ಲಿ ಚೆನ್ನೈ ಹಾಗೂ ರಾಂಚಿ ಸೇರಿದಂತೆ ಭಾರತದ ವಿವಿಧ ನಗರಗಳ ರಸ್ತೆಗಳಲ್ಲಿ ಕಾಣಿಸಿಕೊಂಡಿರುವ ಹಲವಾರು ವೀಡಿಯೊಗಳು ವೈರಲ್ ಆಗಿವೆ.

MOST READ: ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಹೊಸ ಟ್ರಾಕ್ಟರ್ ನೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡ ಟೀಂ ಇಂಡಿಯಾ ಮಾಜಿ ನಾಯಕ

ಇದೇ ಮೊದಲ ಬಾರಿಗೆ ಟ್ರಾಕ್ಟರ್ ನಲ್ಲಿ ಕೃಷಿ ಭೂಮಿಯನ್ನು ಉಳುಮೆ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಕ್ರಿಕೆಟ್ ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದ ಧೋನಿ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಸಂಚಲನವನ್ನುಂಟು ಮಾಡಿದೆ.

Most Read Articles

Kannada
English summary
Former India cricket captain Dhoni buys new Swaraj tractor. Read in Kannada.
Story first published: Wednesday, July 8, 2020, 10:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X