ಭೀಕರ ಅಪಘಾತದಿಂದ ಪಾರಾದ ಪ್ರವೀಣ್ ಕುಮಾರ್ ಮತ್ತು ಆತನ ಮಗ: ರಿಷಭ್ ಪಂತ್ ರೀತಿಯ ಮತ್ತೊಂದು ಅಪಘಾತ
ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಭಾರತದ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಬ್ಯಾಟ್ಸ್‌ಮಾನ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಭೀಕರ ಕಾರು ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಷಯ ಎಲ್ಲರಿಗೂ ತಿಳಿದಿದೆ. ಇದೀಗ ಆ ಘಟನೆ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ.
ಹೌದು, ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ವೇಲೆ ಭಾರತೀಯ ಮಾಜಿ ಕ್ರಿಕೆಟಿಗನೊಬ್ಬ ಅಪಘಾತಕ್ಕೆ ಒಳಗಾಗಿರುವ ಘಟನೆಯೊಂದು ನಡೆದಿದೆ. ಭಾರತದ ಮಾಜಿ ಆಲ್‌ರೌಂಡರ್ ಪ್ರವೀಣ್ ಕುಮಾರ್ ತನ್ನ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುವ ವೇಳೆ ಅಪಘಾತಕ್ಕೆ ಒಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರವೀಣ್ ಕುಮಾರ್ ತಮ್ಮ ಕಾರ್ ಆದ ಲ್ಯಾಂಡ್ ರೋವರ್ ಡಿಫೆಂಡರ್ ನಲ್ಲಿ (Land Rover Defender) ಪ್ರಯಾಣ ಮಾಡುತ್ತಿದ್ದ ವೇಲೆ ಅಪಘಾತ ಸಂಭವಿಸಿದೆ. ಬುಧವಾರ ಈ ಘಟನೆ ನಡೆದಿದ್ದು ತಮ್ಮ ಕಾರು ಟ್ರಕ್ ನೊಂದಿಗೆ ಗುದ್ದಿ ಅಪಘಾತವಾಗಿದ್ದು ಪ್ರವಿಣ್ ಕುಮಾರ್ ಯಾವುದೇ ಪ್ರಾಣಾಪಾಯ ಇಲ್ಲದೆ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇನ್ನು ಉತ್ತರ ಪ್ರದೇಶದ ಮೀರತ್‌ನಲ್ಲಿ ಘಟನೆ ಸಂಭವಿಸಿದ್ದು, ವರದಿಗಳ ಪ್ರಕಾರ ಅಪಘಾತವಾಗುವ ವೇಲೆ ಪ್ರವೀಣ್ ಕುಮಾರ್ ಅವರ ಲ್ಯಾಂಡ್ ರೋವರ್ ಡಿಫೆಂಡರ್ ಲಕ್ಷುರಿ ಕಾರಿನಲ್ಲಿ ಅವರ ಮಗನೂ ಇದ್ದು, ಅವರೂ ಸಹ ಪಾರಾಗಿದ್ದು ಅದೃಷ್ಟವೇ ಸರಿ. ಮೀರತ್ ನಗರದ ಪಾಂಡವ್ ನಗರ್ ಏರಿಯಾದಲ್ಲಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಪ್ರವೀಣ್ ಅವರ ಲ್ಯಾಂಡ್ ರೋವರ್ ಡಿಫೆಂಡರ್ ಕಾರಿಗೆ ಹಾನಿಯಾಗಿದ್ದರೂ ಸರಿಯಾದ ಸಮಯದಲ್ಲಿ ಅಲ್ಲಿ ಜನರು ಮತ್ತು ಪೊಲೀಸ್ ನೆರವು ನೀಡಿದ್ದರಿಂದ ಪ್ರವೀಣ್ ಕುಮಾರ್ ಮತ್ತು ಅವರ ಮಗ ಕಾರಿನಿಂದ ಹೊರಬರಲು ಸಾಧ್ಯವಾಗಿದ್ದು, ಹೆಚ್ಚಿನ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಪೊಲೀಸರ ತನಿಖೆಯ ಪ್ರಕಾರ ಟ್ರಕ್ ಡ್ರೈವರ್ ಮಾಡಿದ ತಪ್ಪಿನಿಂದಾಗಿಯೆ ಅಒಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆಯ ಕುರಿತಾಗಿ ಅಪಘಾತದ ನಂತರ ಪ್ರವೀಣ್ ಕುಮಾರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅಪಘಾತದ ತೀವ್ರತೆ ಹೇಗಿರುತ್ತಿತ್ತು ಎಂದು ಯೋಚಿಸಲು ಸಾಧ್ಯವಿಲ್ಲ ಎಂದು ಅವರು ಹಂಚಿಕೊಂಡಿದ್ದಾರೆ.

ಅಪಘಾತವಾದ ವೇಗಕ್ಕೆ ಇದರ ತೀವ್ರತೆ ಇನ್ನೂ ಅಧಿಕವಾಗಿರುತ್ತಿತ್ತು. ದೇವರ ದಯೆಯಿಂದ ಮಾತ್ರವೇ ನಾನು ಮತ್ತು ನನ್ನ ಮಗ ಇಂದು ಜೀವಂತವಾಗಿದ್ದೇವೆ. ರಾತ್ರಿ ಸುಮಾರು 9.30 ರ ವೇಲೆಗೆ ಅಪಘಾತವಾಗಿದ್ದು, ವೇಗವಾಗಿ ಬಂದ ಟ್ರಕ್ ನನ್ನ ಲ್ಯಾಂಡ್ ರೋವರ್ ಡಿಫೆಂಡರ್ ಕಾರಿನ ಹಿಂಭಾಗಕ್ಕೆ ಗುದ್ದಿದೆ ಎಂದು ಅವರು ತಮ್ಮ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದೊಂದು ಬಲಿಷ್ಟ ಎಸ್‌ಯುವಿ ಆಗಿರುವುದಕ್ಕೆ ನಾನು ಮತ್ತು ನನ್ನ ಮಗ ಈ ಸಂಧರ್ಭದಲ್ಲಿ ಜೀವಂತವಾಗಿದ್ದೇವೆ. ಇಲ್ಲದಿದ್ದರೆ ಇಬ್ಬರ ಪ್ರಾಣ ಪಕ್ಷಿಯೂ ಹಾರಿ ಹೋಗಿರುತ್ತಿತ್ತು, ದೇವರು ದೊಡ್ಡವನು ಎಂದು ಅವರು ಇದೇ ಸಂಧರ್ಭದಲ್ಲಿ ಹೇಳಿದ್ದಾರೆ. ಪ್ರವೀಣ್ ಕುಮಾರ್ ಅವರ ಪ್ರಕಾರ ಮೊದಲಿಗೆ ಕೇವಲ ಕಾರಿನ ಬಂಪರ್ ಮಾತ್ರ ಹೋಗಿರಬಹುದು ಎಂದುಕೊಂಡಿದ್ದರು.
ಆದರೆ ಅಪಘಾತವಾಗಿ ಆನಂತರದಲ್ಲಿ ಪರೀಕ್ಷಿಸಿದಾಗಲೇ ಗೊತ್ತಾಗಿದ್ದು, ಕಾರು ವಿಪರೀತವಾಗಿ ಹಾನಿಗೆ ಒಳಗಾಗಿದೆ ಎಂಬುದು. ಪ್ರವೀಣ್ ಕುಮಾರ್ ಭಾರತದ ಮಾಜಿ ಆಲ್‌ರೌಂಡರ್ ಆಗಿದ್ದರು. ಭಾರತ ಕ್ರಿಕೆಟ್ ತಂಡದ ಪರ ಸುಮಾರು 68 ಏಕದಿನ ಪಂದ್ಯಗಳನ್ನು ಆಡಿದ್ದು 78 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications