ಬೇಬಿ ಬಂಪ್ ಫೋಟೋ ಶೂಟ್: ಐಷಾರಾಮಿ ಹಾರ್ಲೆ ಡೇವಿಡ್ಸನ್ ಬೈಕ್ ಏರಿ ಬಂದ ಮಾಜಿ ಕರ್ನಾಟಕ ಸುಂದಿರಿ
ಪ್ರತಿಯೊಬ್ಬರು ತಮ್ಮ ಬದುಕಿನ ಪ್ರತಿಯೊಂದು ಸುಂದರ ಕ್ಷಣಗಳನ್ನೂ ದಾಖಲು ಮಾಡಿ ಇಟ್ಟುಕೊಳ್ಳುಲು ಬಯಸುತ್ತಾರೆ. ಒಂದು ಗಂಡು ಹೆಣ್ಣು ಮದುವೆಯ ಮೂಲಕ ಜೊತೆಯಾಗುವುದು ಅತ್ಯಂತ ಸಂತೋಷದ ಕ್ಷಣವಾದ್ದರಿಂದ ಮದುವೆಗೂ ಮೊದಲು ಪ್ರೀ ವೆಡ್ಡಿಂಗ್ ಶೂಟ್ ಎನ್ನುವ ಟ್ರೆಂಡ್ ಇದೆ.

ಮದುವೆಯ ನಂತರ ಹೆಣ್ಣಿನ ಪಾಲಿಗೆ ಸಿಗುವ ಮೊದಲ ದೊಡ್ಡ ಖುಷಿ ಎಂದರೆ ತಾಯ್ತನ. ಅದನ್ನೂ ಭಿನ್ನವಾಗಿ ದಾಖಲು ಮಾಡಿಟ್ಟುಕೊಳ್ಳುಲು ಬೇಬಿ ಬಂಪ್ ಫೋಟೋ ಶೂಟ್ ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಟ್ರೆಂಡ್ ಆಗಿದೆ. ಇತ್ತೀಚೆಗೆ ಮಾಜಿ ಮಿಸ್ ಕರ್ನಾಟಕ ಬೆಡಗಿ ಐಷಾರಾಮಿ ಹಾರ್ಲೇ ಡೇವಿಡ್ಸನ್ ಬೈಕ್ ಚಲಾಯಿಸಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಏಳುವರೆ ತಿಂಗಳ ತುಂಬು ಗರ್ಭಿಣಿಯಾಗಿರುವ ಮಾಜಿ ಮಿಸ್ ಕರ್ನಾಟಕ ಬೆಡಗಿ ರಕ್ಷಿತಾ ತಮ್ಮ ಪತಿಯ ಬಯಕೆಯಂತೆ ಹಾರ್ಲೇ ಡೇವಿಡ್ಸನ್ ಬೈಕ್ ಚಲಾಯಿಸಿ ವಿಭಿನ್ನವಾಗಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿದ್ದಾರೆ. ಇವರು ತುಂಬು ಗರ್ಭಿಣಿಯಾಗಿದ್ದರು ಬೈಕ್ ರೈಡ್ ಮಾಡಿ ಸಹಾಸ ಮೆರದಿದ್ದಾರೆ.

ರಕ್ಷಿತಾ ಅವರು ಶಿವಮೊಗ್ಗದ ಮಾಚೇನಹಳ್ಳಿಯ ನಿವಾಸಿಯಾಗಿದ್ದಾರೆ. ಇವರು ಮಿಸ್ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇವರ ಪತಿ ಮೋಹಿತ್ ಚಕ್ರವರ್ತಿ ಅವರ ಸಹಕಾರದೊಂದಿಗೆ ಐಷಾರಾಮಿ ಹಾರ್ಲೇ ಡೇವಿಡ್ಸನ್ ಬೈಕ್ ರೈಡ್ ಮಾಡಿದ್ದಲ್ಲದೆ, ವಿಭಿನ್ನ ಸ್ಟೈಲ್ ಪೋಸ್ ಕೊಟ್ಟು ಫೋಟೋ ಶೂಟ್ ಮಾಡಿದ್ದಾರೆ.

ರಕ್ಷಿತಾ ಅವರು ರೈಡ್ ಮಾಡಿದ ಬೈಕ್ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್ ಆಗಿದೆ. ಈ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ ಬೈಕಿನಲ್ಲಿ 749 ಸಿಸಿ ವಿ ಟ್ವಿನ್ ಲಿಕ್ವಿಡ್ ಕೂಲ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಈ ಎಂಜಿನ್ 3,750 ಆರ್‌ಪಿಎಂನಲ್ಲಿ 65 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ಗೆ ಆರು ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕಿನಲ್ಲಿ ವಿಶಾಲವಾದ ಹ್ಯಾಂಡಲ್‌ಬಾರ್, ಟಿಯರ್-ಡ್ರಾಪ್ ಆಕಾರದ ಉದ್ದವಾದ ಫ್ಯೂಯಲ್ ಟ್ಯಾಂಕ್, ದೈತ್ಯ ರೇಡಿಯೇಟರ್, ದುಂಡಗಿನ ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್-ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್ಸ್ ಅನ್ನು ಹೊಂದಿದೆ.

ಇನ್ನು ಈ ಹಾರ್ಲೆ ಡೇವಿಡ್ಸನ್ ಬೈಕಿನಲ್ಲಿ ಲಾಂಗ್ ಎಕ್ಸಾಸ್ಟ್, ಫ್ರಂಟ್-ಸೀಟ್ ಫುಟ್‌ಪೆಗ್ಸ್ ಮತ್ತು ಉತ್ತಮವಾದ ಮೆತ್ತನೆಯ ರೈಡರ್ ಮತ್ತು ಪಿಲಿಯನ್ ಸೀಟುಗಳನ್ನು ಒಳಗೊಂಡಿದೆ . ಇದರಿಂದ ಈ ಬೈಕ್ ಅನ್ನು ಆರಾಮದಾಯಕವಾಗಿ ರೈಡ್ ಮಾಡಬಹುದು.

ಈ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ರಿಯರ್ ಸಂಸ್ಪೆಕ್ಷನ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ನೊಂದಿಗೆ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಈ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಹಾಗೂ ಇಂಟರ್‌ಸೆಪ್ಟರ್ 650 ಬೈಕುಗಳಿಗೆ ಪೈಪೋಟಿ ನೀಡುತ್ತಿತ್ತು. ಹಾರ್ಲೆ-ಡೇವಿಡ್ಸನ್ ಹೆಚ್ಚು ಕ್ರೂಸರ್ ಬೈಕ್ ಗಳಿಗೆ ಜನಪ್ರಿಯತೆಯನ್ನು ಗಳಿಸಿದೆ.

ಇನ್ನು ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್'ನ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ಹಾರ್ಲೆ-ಡೇವಿಡ್ಸನ್ ತನ್ನದೇ ಆದ ಮೋಡಿ ಮಾಡುತ್ತಿದೆ. ಇದು ಇಂದಿಗೂ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಬ್ರ್ಯಾಂಡ್ ಆಗಿದೆ. ಅಡ್ವೆಂಚರ್ ಬೈಕ್ ಗಳ ಜನಪ್ರಿಯತೆ ಏರುತ್ತಿರುವುದರಿಂದ , ಹಾರ್ಲೆ-ಡೇವಿಡ್ಸನ್ ಪ್ಯಾನ್ ಅಮೇರಿಕಾವನ್ನು ಪ್ರಾರಂಭಿಸಿತು. ಇದುವರೆಗೆ ದೊಡ್ಡದಾದ, ಪವರ್ ಫುಲ್, ವಿ-ಟ್ವಿನ್ ಕ್ರೂಸರ್‌ಗಳನ್ನು ಮಾತ್ರ ತಯಾರಿಸುತ್ತಿರುವ ಹಾರ್ಲೆಯ ಮೊದಲ ಅಡ್ವೆಂಚರ್ ಇದಾಗಿದೆ.

ಭಾರತದಲ್ಲಿ ಐಷಾರಾಮಿ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಕಂಪನಿಯು ಹೇಳಿದೆ. ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯು ಬಿಡುಗಡೆಗೊಳಿಸಿದ ಮೊದಲ ಅಡ್ವೆಂಚರ್ ಬೈಕ್ ಆಗಿದೆ. ಭಾರತದಲ್ಲಿ ಈ ಜನಪ್ರಿಯ ಅಡ್ವೆಂಚರ್-ಟೂರರ್ ಬೈಕ್ ಅನ್ನು ಮೊದಲ ವಿತರಣೆಯನ್ನು ಪಡೆದವರು ಲೇಡೀಸ್ ಆಫ್ ಹಾರ್ಲೆಯ ಸಹಾಯಕ ನಿರ್ದೇಶಕಿ ಅನುಶ್ರೀಯ ಗುಲಾಟಿ ಅವರು ಅಗಿದ್ದಾರೆ. ಈ ಹೊಸ ಬೈಕಿನ ಎರಡು ಬೈಕಿನಲ್ಲಿ ವಿಭಿನ್ನವಾಗಿ ಫೀಚರ್ ಗಳನ್ನು ನೀಡಲಾಗಿದೆ. ಆದರೆ ಕೆಲವು ಫೀಚರ್ ಗಳು ಎರಡು ರೂಪಾಂತರಗಳಲ್ಲಿ ಒಂದೇ ರೀತಿಯಲ್ಲಿ ನೀಡಿದ್ದಾರೆ.

ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ ಐದು ರೈಡಿಂಗ್ ಮೋಡ್ ಗಳನ್ನು ಪಡೆಯುತ್ತದೆ. ಇವುಗಳು ನಾಲ್ಕು ಪ್ರಿ-ಪ್ರೊಗಾಮ್ ಮಾಡಲಾದ ರೋಡ್, ಸ್ಪೋರ್ಟ್, ರೈನ್, ಆಫ್-ರೋಡ್ ಮತ್ತು ಒಂದು ಕಸ್ಟಮ್ ಮೋಡ್ ಅನ್ನು ರೈಡರ್ ತನ್ನ ಸ್ವಂತ ಆದ್ಯತೆಯ ಪ್ರಕಾರ ಹೊಂದಿಸಬಹುದು.


Click it and Unblock the Notifications