Just In
- 8 hrs ago
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್‌ವ್ಯಾಗನ್ ಪೊಲೊ
- 10 hrs ago
ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
- 12 hrs ago
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- 22 hrs ago
ಎಕ್ಸ್ಯುವಿ700 ಎಸ್ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
Don't Miss!
- News
ಕರ್ನಾಟಕಕ್ಕೆ ಆಘಾತ: 24 ಗಂಟೆಗಳಲ್ಲಿ 10250 ಮಂದಿಗೆ ಕೊರೊನಾವೈರಸ್!
- Movies
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- Sports
IPL: SRH vs KKR, Live: ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೆಲಸದಿಂದ ತೆಗೆದು ಹಾಕಿದ ಕಂಪನಿಯ ಮೇಲೆ ಮಾಜಿ ಉದ್ಯೋಗಿ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ
ಪ್ರತಿದಿನ ವಿಶ್ವಾದ್ಯಂತ ಸಾವಿರಾರು ರಸ್ತೆ ಅಪಘಾತಗಳು ಸಂಭವಿಸುತ್ತವೆ. ಈ ರಸ್ತೆ ಅಪಘಾತಗಳಿಗೆ ಹಲವಾರು ಕಾರಣಗಳಿರುತ್ತವೆ. ಹೆಚ್ಚಿನ ರಸ್ತೆ ಅಪಘಾತಗಳು ಡ್ರಿಂಕ್ ಅಂಡ್ ಡ್ರೈವ್, ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವಂತಹ ಸಂಚಾರ ನಿಯಮಗಳ ಉಲ್ಲಂಘನೆಯಿಂದ ಸಂಭವಿಸುತ್ತವೆ.

ಆದರೆ ಅಮೆರಿಕಾದಲ್ಲಿ ಉದ್ದೇಶಪೂರ್ವಕವಾಗಿಯೇ ಅಪಘಾತವಾದ ಘಟನೆಯೊಂದು ವರದಿಯಾಗಿದೆ. ಕೆಲಸದಿಂದ ತೆಗೆದುಹಾಕಿದ ಕಾರಣಕ್ಕೆ ಮಾಜಿ ಉದ್ಯೋಗಿಯೊಬ್ಬ ಈ ಅಪಘಾತವನ್ನುಂಟು ಮಾಡಿದ್ದಾನೆ. ಕೆಲಸದಿಂದ ಉದ್ಯೋಗಿಗಳನ್ನು ವಜಾ ಮಾಡುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.

ಕೆಲವರು ಅವುಗಳನ್ನು ಸಮಾಧಾನ ಚಿತ್ತದಿಂದ ಸ್ವೀಕರಿಸಿದರೆ, ಇನ್ನೂ ಕೆಲವರು ಕೋಪ, ಹತಾಶೆಯನ್ನು ಯಾವುದಾದರೂ ರೀತಿಯಲ್ಲಿ ವ್ಯಕ್ತ ಪಡಿಸುತ್ತಾರೆ.32 ವರ್ಷದ ಲ್ಯಾಸಿ ಕಾರ್ಡೆಲ್ ಜೆಂಟ್ರಿ ಎಂಬಾತ ಕೆಲಸದಿಂದ ತೆಗೆದು ಹಾಕಿದ ಕಾರಣಕ್ಕೆ ತನ್ನ ಹಳೆ ಕಂಪನಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾನೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆತ ವಾಲ್‌ಮಾರ್ಟ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಆತನನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದಂತೆ ನಿರಾಶೆಗೊಂಡಿದ್ದಾನೆ. ಈ ಕಾರಣಕ್ಕೆ ವಾಲ್‌ಮಾರ್ಟ್ ಸ್ಟೋರ್ ಮುಂಭಾಗದ ಬಾಗಿಲಿಗೆ ಕಾರಿನಿಂದ ಗುದ್ದಿ ತನ್ನ ಆಕ್ರೋಶವನ್ನು ಹೊರಹಾಕಿದ್ದಾನೆ.

ಅಮೆರಿಕಾದ ನಾರ್ತ್ ಕೆರೊಲಿನಾದಲ್ಲಿರುವ ವಾಲ್‌ಮಾರ್ಟ್ ಸ್ಟೋರ್'ನಲ್ಲಿ ಈ ಘಟನೆ ನಡೆದಿದೆ. ಸ್ಟೋರ್'ನ ಮುಂಭಾಗಕ್ಕೆ ಗಂಭೀರ ಹಾನಿಯಾದರೂ ಸಹ ಲ್ಯಾಸಿ ಕಾರ್ಡೆಲ್ ಜೆಂಟ್ರಿಯ ಕೋಪ ತಣ್ಣಗಾಗಿಲ್ಲ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ನಂತರವೂ ಆತ ತನ್ನ ಕಾರನ್ನು ಅಂಗಡಿಯೊಳಗೆ ಚಾಲನೆ ಮಾಡಿ ಮತ್ತಷ್ಟು ಹಾನಿಯನ್ನುಂಟು ಮಾಡಿದ್ದಾನೆ. ಕಾರು, ಸ್ಟೋರ್'ನಲ್ಲಿದ್ದ ದೊಡ್ಡ ಡಿಸ್ ಪ್ಲೇಗೆ ಡಿಕ್ಕಿ ಹೊಡೆದ ನಂತರ ಲ್ಯಾಸಿ ಕಾರ್ಡೆಲ್ ಕಾರ್ ಅನ್ನು ನಿಲ್ಲಿಸಿದ್ದಾನೆ.

ಲ್ಯಾಸಿ ಕಾರ್ಡೆಲ್ ಜೆಂಟ್ರಿ 2015ರ ಮಾಡೆಲ್ ಫೋಕ್ಸ್‌ವ್ಯಾಗನ್ ಪಾಸಾಟ್ ಕಾರನ್ನು ಬಳಸಿ ಇಷ್ಟೆಲ್ಲಾ ರಾದ್ದಾಂತ ಸೃಷ್ಟಿಸಿದ್ದಾನೆ. ಆತ್ಮಹತ್ಯೆಗೆ ಸಂಚು ರೂಪಿಸಲಾದ ಆರೋಪದ ಮೇಲೆ ಪೊಲೀಸರು ಲ್ಯಾಸಿ ಕಾರ್ಡೆಲ್ ಜೆಂಟ್ರಿಯನ್ನು ಬಂಧಿಸಿದ್ದಾರೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕೆಲಸದಿಂದ ತೆಗೆದ ಮರುದಿನ ಬೆಳಿಗ್ಗೆ 6 ಗಂಟೆಗೆ ವಾಲ್‌ಮಾರ್ಟ್ ಸ್ಟೋರ್'ಗೆ ತನ್ನ ಕಾರಿನಲ್ಲಿ ಬಂದು ಈ ಅವಾಂತರ ಮಾಡಿದ್ದಾನೆ. ಈ ಘಟನೆಯು ಅಮೆರಿಕಾದಲ್ಲಿ ಕೋಲಾಹಲವನ್ನುಂಟು ಮಾಡಿದೆ. ಆದರೆ ಅಮೆರಿಕಾದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ ಎಂಬುದು ಗಮನಾರ್ಹ.

ಈ ಹಿಂದೆಯೂ ಕೆಲಸದಿಂದ ವಜಾಗೊಂಡ ಹಲವು ಕಂಪನಿಗಳ ಮಾಜಿ ಉದ್ಯೋಗಿಗಳು ಇದೇ ರೀತಿಯ ಘಟನೆಗಳಲ್ಲಿ ಭಾಗಿಯಾಗಿದ್ದರು. ಈ ರೀತಿಯ ಘಟನೆಗಳು ಚಾಲಕನಿಗೆ ಮಾತ್ರವಲ್ಲದೆ ಅಲ್ಲಿರುವ ಜನರ ಜೀವಕ್ಕೂ ಅಪಾಯವನ್ನುಂಟು ಮಾಡುತ್ತವೆ.
ಚಿತ್ರಕೃಪೆ: ಸಿಟಿ ಆಫ್ ಕಾನ್ಕಾರ್ಡ್, ಎನ್‌ಸಿ - ಪೊಲೀಸ್ ಇಲಾಖೆ