ಫಾರ್ಮುಲಾ ಆಫ್ ರೋಡ್ ಬ್ಯಾಕ್‌ಡೋರ್ ಚಾಲೆಂಜ್
ರೇಸ್‌ಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ರುಯಿಂ ರುಯಿಂ ಶಬ್ದ ಮಾಡುತ್ತಾ ಶರವೇಗದಲ್ಲಿ ಸಾಗುವ ಫಾರ್ಮುಲಾ ಒನ್ ರೇಸ್‌ಗಳು ಹೆಚ್ಚು ರೋಚಕತೆ ಸೃಷ್ಟಿ ಮಾಡುತ್ತದೆ.
ಜಗತ್ತಿನ ಅತಿ ದುಬಾರಿ ಕ್ರೀಡೆಗಳಲ್ಲಿ ಒಂದಾಗಿರುವ ಎಫ್1 ರೇಸ್, ಸಾಮಾನ್ಯ ರೇಸ್ ಟ್ರ್ಯಾಕ್‌ಗಿಂತ ಭಿನ್ನವಾಗಿ ಆಫ್ ರೋಡ್‌ಗಿಳಿದರೆ ಹೇಗಿರಬಹುದು? ಹೌದು, ಕೆಳಗೆ ಕೊಟ್ಟಿರುವ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿ. ಇದು ಫಾರ್ಮುಲಾ ಆಫ್ ರೋಡ್ ಬ್ಯಾಕ್‌ಡೋರ್ ಚಾಲೆಂಜ್ ಆಗಿದೆ.

ಆಫ್ ರೋಡ್ ರೇಸ್ ಹಾಗೂ 4x4 ಮೋಟಾರುಸ್ಪೋರ್ಟ್ಸ್ ಮೂಲವಾಗಿರುವ ಇದು ಐಲ್ಯಾಂಡ್‌ನಲ್ಲಿ ಜನ್ಮತಾಳಿದೆ. ಇದೀಗ ವಿಶ್ವದೆಲ್ಲಡೆ ಪಸರಿಸುತ್ತಿದೆ.
ಇಲ್ಲಿ ಪ್ರಮುಖವಾಗಿಯೂ ರೇಸ್ ಚಾಲಕರ ಚಾಲನಾ ಕೌಶಲ್ಯವನ್ನು ಪರೀಕ್ಷಿಸಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಶಿಲೆಗಳಿಂದ ಆವೃತ್ತವಾದ ಅತ್ಯಂತ ಕಠಿಣ ಗುಡ್ಡ ಬೆಟ್ಟವನ್ನು ಹತ್ತಿ ಹೋಗಬೇಕಾಗಿದೆ. ಹಾಗೆಯೇ ಸ್ಪರ್ಧಿಗಳು ತಮಗೆ ಇಷ್ಟವಿರುವ ಫೋರ್ ವೀಲ್ ಡ್ರೈವ್ ವಾಹನಗಳನ್ನು ಆಯ್ಕೆ ಮಾಡಬಹುದಾಗಿದೆ.
ಇಲ್ಲಿ 2014 ಫಾರ್ಮುಲಾ ಆಫರ್ ರೋಡ್ ಬ್ಯಾಕ್‌ಡೋರ್ ಚಾಲೆಂಜ್ ವೀಡಿಯೋವನ್ನು ವಾಹನ ಪ್ರೇಮಿಗಳಿಗಾಗಿ ಹಂಚಲಾಗಿದೆ.


Click it and Unblock the Notifications








