ರೋಚಕ 2022ರ VROOM ಡ್ರ್ಯಾಗ್ ರೇಸ್‌ಗೆ ದಿನಗಣನೆ ಆರಂಭ
VROOM ಡ್ರ್ಯಾಗ್ ಮೀಟ್ ಮತ್ತೆ ಬರುತ್ತಿದೆ, VROOM ದೇಶದ ಅತಿ ದೊಡ್ಡ ಡ್ರ್ಯಾಗ್ ರೇಸಿಂಗ್ ಈವೆಂಟ್‌ಗಳಲ್ಲಿ ಒಂದಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ನಡೆಯಲಿರುವ ಮೋಟಾರ್‌ಸ್ಪೋರ್ಟ್ ರೇಸಿಂಗ್‌ನಲ್ಲಿ ದೇಶದಾದ್ಯಾಂತ ಹಲವು ಜನಪ್ರಿಯ ರೇಸರ್‌ಗಳು ಭಾಗಿಯಾಗಲಿದ್ದಾರೆ.

ಡ್ರ್ಯಾಗ್ ಮೀಟ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಪರಸ್ಪರ ಸ್ಪರ್ಧಿಸುತ್ತಾರೆ. ಈ ಡ್ರ್ಯಾಗ್ ಮೀಟ್‌ನ 6ನೇ ಆವೃತ್ತಿಯು 2022ರ ಮಾರ್ಚ್ ತಿಂಗಳ 4 ಮತ್ತು 6ರ ನಡುವೆ ಬೆಂಗಳೂರಿನ ಹೊರವಲಯದಲ್ಲಿರುವ ಹೊಸೂರಿನ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಟ್ರ್ಯಾಕ್‌ನಲ್ಲಿ ನಡೆಯಲಿದೆ. ಡ್ರ್ಯಾಗ್ ಮೀಟ್ ರನ್‌ವೇಯ ಕ್ವಾಟರ್ -ಮೈಲ್ ವಿಭಾಗದಲ್ಲಿ ಸ್ಪರ್ಧಿಸುವ ದೇಶಾದ್ಯಂತ ಇರುವ ಜನಪ್ರಿಯ ರೇಸರ್‌ಗಳು ಮತ್ತು ರೇಸಿಂಗ್ ಉತ್ಸಾಹಿಗಳಿಗೆ ಸಾಕ್ಷಿಯಾಗಲಿದೆ. ಟ್ರಾಕ್ನಲ್ಲೆ ಜೋರು ಸೌಂಡ್ ಮಾಡುತ್ತಾ ನೋಡುಗರ ಮೈ ಜುಂ ಎನಿಸುವಂತೆ ವಾಹನಗ್ಳನ್ನು ಚಲಾಯಿಸುವ ಡ್ರ್ಯಾಗ್ ರೇಸಿಂಗ್ ಈವೆಂಟ್ ಪ್ರಾರಂಭವಾಗಲು ದಿನಗಣನೆ ಶುರವಾಗಿದೆ.

ಅಧಿಕೃತವಾಗಿ ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ (FMSCI)ದ ಅಧ್ಯಕ್ಷತೆಯಲ್ಲಿ ಈ ಡ್ರ್ಯಾಗ್ ಮೀಟ್ ನಡೆಯಲಿದೆ. ಭಾರತದ ಪ್ರೀಮಿಯರ್ ಡ್ರ್ಯಾಗ್ ರೇಸಿಂಗ್ ಈವೆಂಟ್ ಕುರಿತು ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

ಮಾರ್ಚ್ 04(ಮೊದಲ ದಿನ)
2022ರ VROOM ಡ್ರ್ಯಾಗ್ ಮೀಟ್‌ನ 1ನೇ ದಿನದಂದು ಯಾವುದೇ ರೇಸ್‌ಗಳು ನಡೆಯದಿದ್ದರೂ ಸಹ, ಪ್ರಕ್ರಿಯೆಗಳು ಬಹಳ ಬೇಗನೆ ಪ್ರಾರಂಭವಾಗುತ್ತವೆ. ಮೊದಲ ದಿನ ಪರಿಶೀಲನೆ ಮತ್ತು ಅಂತಿಮ ನೋಂದಣಿ ಸಂಬಂಧಿತ ಕಾರ್ಯವಿಧಾನಗಳು ನಡೆಯುತ್ತವೆ.

ಭಾಗವಹಿಸುವವರನ್ನು ಮತ್ತು ಅವರ ವಾಹನಗಳನ್ನು ಅಧಿಕಾರಿಗಳು ಪರಿಶೀಲಿಸಲಾಗುತ್ತದೆ. ಗುಣಮಟ್ಟದ ಸುರಕ್ಷತಾ ಅಭ್ಯಾಸಗಳನ್ನು ಅನುಸರಿಸಲಾಗಿದೆಯೇ ಎಂದು ನೋಡಲು ವಾಹನಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಈವೆಂಟ್‌ನಲ್ಲಿ ಬೈಕ್ ರೇಸ್'ಗೆ ಅಡ್ಡಿಯಾಗುವ ಯಾವುದೇ ಅಸಹಜತೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ.

ಅದೇ ಸಮಯದಲ್ಲಿ, ಭಾಗವಹಿಸುವವರು ಧರಿಸಿರುವ ರೈಡಿಂಗ್ ಗೇರ್ ಅನ್ನು ಸಹ ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ. ಎಲ್ಲಾ ದ್ವಿಚಕ್ರ ವಾಹನ ವಿಭಾಗಗಳಲ್ಲಿ ಭಾಗವಹಿಸುವವರು ಬೆನ್ನು ಮತ್ತು ಮೊಣಕಾಲು ರಕ್ಷಕಗಳೊಂದಿಗೆ ಲೆದರ್ ರೇಸ್ ಸೂಟ್ ಅನ್ನು ಧರಿಸುವುದು ಕಡ್ಡಾಯವಾಗಿದೆ, ಜೊತೆಗೆ ಪೂರ್ಣ-ಉದ್ದದ ರೇಸ್ ಬೂಟ್‌ಗಳು, ಪೂರ್ಣ-ಗೌಂಟ್ಲೆಟ್ ಗ್ಲೌಸ್ ಮತ್ತು ಡಬಲ್-ಡಿ ರಿಂಗ್‌ಗಳೊಂದಿಗೆ ಸರಿಯಾದ ಪೂರ್ಣ-ಮುಖ ಹೆಲ್ಮೆಟ್ ಅನ್ನು ಧರಿಸಬೇಕು.

ತಮ್ಮ ವೇಗದ ಕಾರುಗಳ ಡ್ರೈವ್ ಮಾಡುವವರು ಕ್ರ್ಯಾಶ್ ಹೆಲ್ಮೆಟ್, ಸರಿಯಾದ ರೇಸ್ ಶೂಗಳು ಮತ್ತು ಗ್ಲೌಸ್ ಗಳನ್ನು ಧರಿಸಬೇಕಾಗುತ್ತದೆ. ರೈಡಿಂಗ್ ಮತ್ತು ಡ್ರೈವಿಂಗ್ ಗೇರ್, ಜೊತೆಗೆ ವಾಹನ ಸಂಪೂರ್ಣ ಪರಿಶೀಲನೆಗೆ ಒಳಗಾಗುತ್ತದೆ.

ಮಾರ್ಚ್ 05(ಎರಡನೇ ದಿನ)
ಈ ಸಮಯದಲ್ಲಿ ಡ್ರ್ಯಾಗ್ ರೇಸಿಂಗ್ ಪ್ರಾರಂಭವಾಗುತ್ತದೆ. ಮಾರ್ಚ್ 5 ರಂದು ಶನಿವಾರದಂದು, ಭಾರತೀಯ ಕಾರುಗಳು ಮತ್ತು ಬೈಕ್‌ಗಳು ಸಾಧ್ಯವಾದಷ್ಟು ವೇಗದ ರೇಸಿಂಗ್ ಅನ್ನು ನೋಡಬಹುದು. ಸ್ಟಾಕ್ ಕಾರುಗಳು ಮತ್ತು ಬೈಕುಗಳಿಂದ ಹಿಡಿದು, ವ್ಹೀಲ್ ಗಳನ್ನು ಮಾರ್ಪಡಿಸಿದವರಿಗೆ ಭಾರತದಲ್ಲಿ ತಯಾರಾದ ತ್ವರಿತವಾದ ಕ್ವಾಟರ್ ಮೈಲಿಯಲ್ಲಿ ಭಾಗವಹಿಸಬಹುದು.

ಎರಡು-ಸ್ಟ್ರೋಕ್ ಅಥವಾ ನಾಲ್ಕು-ಸ್ಟ್ರೋಕ್, ಸಣ್ಣ ಬೈಕುಗಳು ಅಥವಾ ದೊಡ್ಡ ಬೈಕುಗಳು, ನಿಮ್ಮ ಆಯ್ಕೆಯನ್ನು ತೆಗೆದುಕೊಳ್ಳಿ. ಕಾರುಗಳು ನಿಮ್ಮ ವಿಷಯವಾಗಿದ್ದರೆ, ಮಾರುತಿ ಸುಜುಕಿ ಝೆನ್‌ನಿಂದ ಹಿಡಿದು ಹೈಪರ್ ಹೋಂಡಾ ಸಿಟಿ ಸೆಡಾನ್‌ಗಳವರೆಗೆ ಎಲ್ಲವೂ ತಮ್ಮ ರೇಸಿಂಗ್ ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಡ್ರ್ಯಾಗ್ ಸ್ಟ್ರಿಪ್‌ನಲ್ಲಿ ಅತ್ಯಾಕರ್ಷಕ ಸಮಯವನ್ನು ಕಳೆಯಬೇಕು.
ಮಾರ್ಚ್ 06(ಮೂರನೇ ದಿನ)
ಅಂತಿಮ ದಿನವು ಹೆಚ್ಚಿನ ಡ್ರ್ಯಾಗ್ ರೇಸ್ ಉತ್ಸಾಹಿಗಳು ಎದುರು ನೋಡುತ್ತಿರುವ ದಿನವಾಗಿದೆ. ವಿದೇಶಿ ಬೈಕ್‌ಗಳು ಮತ್ತು ಕಾರುಗಳ ವರ್ಗಗಳು ಡ್ರ್ಯಾಗ್ ಸ್ಟ್ರಿಪ್‌ಗೆ ಹೋಗುವಾಗ ನೋಡುವುದು ಬಲು ರೋಚಕವಾಗಿರುತ್ತದೆ.

ಇದು ಸೂಪರ್ ಬೈಕ್‌ಗಳು ಮತ್ತು ಸೂಪರ್ ಕಾರ್ಸ್ ಎಂದು ಹೊಂದಿಸಲಾಗಿದೆ. ದೇಶಾದ್ಯಂತದ ಅತಿ ವೇಗದ ಮತ್ತು ಬಲಿಷ್ಠ ಕಾರುಗಳು ಮತ್ತು ಬೈಕ್‌ಗಳು ಪ್ರಬಲ ಪೈಪೋಟಿಯಿಂದ ಪರಸ್ಪರ ಸ್ಪರ್ಧಿಸುತ್ತವೆ. ಸೂಪ್-ಅಪ್ ಸುಜುಕಿ ಹಯಾಬುಸಾ ಮತ್ತು BMW S1000RR ಮೋಟಾರ್‌ಸೈಕಲ್‌ಗಳು ಇರುತ್ತದೆ, ನಿಮ್ಮ ಸೂಪರ್‌ಕಾರ್‌ಗಳನ್ನು ನೀವು ಪ್ರೀತಿಸುತ್ತಿದ್ದರೆ, ಲಾಂಬ್ಯೂಗಿನಿ, ಪೋರ್ಷೆ, ಫೆರಾರಿ, ಆಡಿ ಇತ್ಯಾದಿಗಳ ಕಾರುಗಳೊಂದಿಗೆ ನೀವು ಖಂಡಿತವಾಗಿಯೂ ಇಲ್ಲಿ ನೋಡಬಹುದು.

ರೇಸಿಂಗ್ ವಿಭಾಗಗಳು
VROOM ಡ್ರ್ಯಾಗ್ ಮೀಟ್‌ನಲ್ಲಿ ಭಾಗವಹಿಸುವ ಎಲ್ಲರಿಗೂ ನ್ಯಾಯೋಚಿತ ಸ್ಪರ್ಧೆಯನ್ನು ಖಚಿತಪಡಿಸಿಕೊಳ್ಳಲು ಅವರ ವಾಹನಗಳ ಆಧಾರದ ಮೇಲೆ ಭಾಗವಹಿಸುವವರ ವರ್ಗೀಕರಣವು ಬಹಳ ಮುಖ್ಯವಾಗಿದೆ. ಪ್ರಸ್ತುತ 4-ವ್ಹೀಲರ್ ಅಡಿಯಲ್ಲಿ 35 ವರ್ಗೀಕರಣಗಳು ಮತ್ತು ದ್ವಿಚಕ್ರ ವಾಹನಗಳ ಅಡಿಯಲ್ಲಿ 20 ವರ್ಗೀಕರಣಗಳಿವೆ.

ಆದರೆ ವರ್ಗವನ್ನು ರೂಪಿಸಲು ಕನಿಷ್ಠ 10 ನಮೂದುಗಳ ಅಗತ್ಯವಿದೆ ಎಂದು ನಮೂದಿಸುವುದು ಯೋಗ್ಯವಾಗಿದೆ. ಇದಲ್ಲದೆ, ಮೋಟಾರ್‌ಸ್ಪೋರ್ಟ್‌ಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಭಾಗವಾಗಿ, ಮಹಿಳಾ ಸವಾರರು ಮತ್ತು ಚಾಲಕರಿಗೆ ಪ್ರತ್ಯೇಕ ವರ್ಗೀಕರಣವಿದೆ.

ಭಾಗವಹಿಸುವಿಕೆ
ರೇಸಿಂಗ್‌ನಲ್ಲಿ ಭಾಗವಹಿಸವವರು ನೋಂದಾಯಿಸಿಕೊಳ್ಳಲು 2022ರ ಮಾರ್ಚ್ 1 ರಂದು ಕೊನೆಯ ದಿನವಾಗಿದ್ದು, ಆಸಕ್ತರು ಆನ್‌ಲೈನ್ ಮೂಲಕ www.vroomgeneva.com ನಲ್ಲಿ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಈವೆಂಟ್‌ಗೆ ಭಾಗವಹಿಸುವ ಶುಲ್ಕವು ಕೇವಲ ರೂ. 2,000 ಆಗಿದೆ. ಆಯ್ಕೆ ಮಾಡಿದ ವರ್ಗೀಕರಣದ ಪ್ರಕಾರ ಹೆಚ್ಚಾಗುತ್ತದೆ. ಡ್ರ್ಯಾಗ್ ಮೀಟ್ ಕುರಿತು ಹೆಚ್ಚಿನ ಮಾಹಿತಿಗಾಗಿ ಭಾಗವಹಿಸುವವರು +91-99864 50500 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.

ಪಾಸ್‌ಗಳು/ಟಿಕೆಟ್‌ಗಳು
ಡ್ರ್ಯಾಗ್ ರೇಸ್‌ಗಳನ್ನು ವೀಕ್ಷಿಸಲು ಪಾಸ್‌ಗಳು/ಟಿಕೆಟ್‌ಗಳು ಟೂ ವ್ಹೀಲರ್ ಮತ್ತು ಫೋರ್ ವ್ಹೀಲರ್ ರೇಸ್ ವೀಕ್ಷಿಸಲು ಲಭ್ಯವಿದೆ. Vroom ಡ್ರ್ಯಾಗ್ ಮೀಟ್‌ಗೆ ಟಿಕೆಟ್‌ಗಳನ್ನು ನಿಮ್ಮ ಅನುಕೂಲಕ್ಕಾಗಿ ಆನ್‌ಲೈನ್‌ನಲ್ಲಿ ಖರೀದಿಸಬಹುದು ಮತ್ತು ಪ್ರತಿ ವ್ಯಕ್ತಿಗೆ ಕೇವಲ ರೂ.300 ಗಳಿಂದ ಪ್ರಾರಂಭ. ತಮಿಳುನಾಡು ರಾಜ್ಯದ ಎಲ್ಲಾ ಕೋವಿಡ್ ಸಂಬಂಧಿತ ಪ್ರೋಟೋಕಾಲ್‌ಗಳನ್ನು ಸ್ಥಳದಲ್ಲಿ ಪ್ರತಿಯೊಬ್ಬರೂ ಅನುಸರಿಸಬೇಕು ಮತ್ತು ಇದು ಎರಡು-ಲಸಿಕೆ ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ ಎಂಬುದನ್ನು ನಮೂದಿಸುವುದು ಯೋಗ್ಯವಾಗಿದೆ.

VROOM ಡ್ರ್ಯಾಗ್ ಮೀಟ್ ಭಾರತದಲ್ಲಿ ನಡೆಸಲಾದ ಅತಿ ದೊಡ್ಡ ಡ್ರ್ಯಾಗ್ ರೇಸಿಂಗ್ ಈವೆಂಟ್‌ಗಳಲ್ಲಿ ಒಂದಾಗಿದೆ. 2022 ರ ಈವೆಂಟ್ ಅದರ 6ನೇ ಆವೃತ್ತಿಯಾಗಿದೆ ಮತ್ತು ಇದು ದೇಶದ ಕೆಲವು ದೊಡ್ಡ ಬ್ರ್ಯಾಂಡ್‌ಗಳಿಂದ ಪ್ರಾಯೋಜಿಸಲ್ಪಟ್ಟಿದೆ. ಇದರ ಹೊರತಾಗಿ, VROOM ಡ್ರ್ಯಾಗ್ ಮೀಟ್ ಅನೇಕ ಮಹತ್ವಾಕಾಂಕ್ಷಿ ರೇಸರ್‌ಗಳು, ಟ್ಯೂನರ್‌ಗಳು ಮತ್ತು ರೇಸಿಂಗ್ ತಂಡಗಳಿಗೆ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ಅವಕಾಶವನ್ನು ನೀಡುತ್ತದೆ. ಅಲ್ಲದೆ, ಈ ಅತ್ಯಾಕರ್ಷಕ ಡ್ರ್ಯಾಗ್ ರೇಸಿಂಗ್ ಈವೆಂಟ್‌ಗೆ ಡ್ರೈವ್‌ಸ್ಪಾರ್ಕ್ ವಿಶೇಷ ಮಾಧ್ಯಮ ಪಾಲುದಾರ ಸಂಸ್ಥೆಯಾಗಿದ್ದು, ಆದ್ದರಿಂದ VROOM 2022ರ ಎಲ್ಲಾ ಎಕ್ಸ್‌ಕ್ಲೂಸಿವ್ ಅಪ್‌ಡೆಟ್ ಪಡೆಯಲು ನಮ್ಮ ಎಲ್ಲಾ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ತಪ್ಪದೇ ನೋಡಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ವ್ರೂಮ್ ಡ್ರ್ಯಾಗ್ ಮೀಟ್ ಲಿಂಕ್ ಬಳಸಿ.


Click it and Unblock the Notifications