Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಷ್ಟ್ರ ಮಟ್ಟದ ಡ್ರ್ಯಾಗ್ ರೇಸ್‌ನಲ್ಲಿ ಸತತವಾಗಿ 5ನೇ ಬಾರಿ ಗೆಲುವು ಸಾಧಿಸಿದ ಮುದ್ದಪ್ಪ
ಭಾರತೀಯ ಡ್ರ್ಯಾಗ್ ರೇಸ್‌ನಲ್ಲಿ ಖ್ಯಾತಿ ಪಡೆದಿರುವ ಚಾಂಪಿಯನ್ ಕೊಡಗಿನ ಹೇಮಂತ್ ಮುದ್ದಪ್ಪ, ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಚೆನ್ನೈನ ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್ (ಎಂಎಂಆರ್‌ಟಿ)ನಲ್ಲಿ ನಡೆದ ಎಂಎಂಎಸ್ ಸಿಎಫ್ಎಂಎಸ್‌ಸಿ ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್‌ಶಿಪ್ 2021ರ ಮೂರನೇ ಮತ್ತು ಅಂತಿಮ ಸುತ್ತಿನ ಅಗ್ರ ಎರಡು ಕ್ಲಾಸ್‌ಗಳಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅನ್ನು ಗೆದ್ದಿದ್ದಾರೆ.

ಈ ಮೂಲಕ ಹೇಮಂತ್ ಮುದ್ದಪ್ಪ ಮತ್ತು ಶರಣ್ ಪ್ರತಾಪ್ (ಟ್ಯೂನರ್) ಅವರ ಸಂಯೋಜನೆಯು ಪ್ರಧಾನ ಸೂಪರ್ ಸ್ಪೋರ್ಟ್ 1051 ಸಿಸಿ ಮತ್ತು 851 ಸಿಸಿಯಿಂದ 1050 ಸಿಸಿ ಕ್ಲಾಸ್‌ನ ಎರಡು ಮಾದರಿಗಳಲ್ಲಿ ರಾಷ್ಟ್ರೀಯ ದಾಖಲೆ ಮಾಡುವ ಮೂಲಕ ಡ್ರ್ಯಾಗ್ ಸ್ಟ್ರಿಪ್ ಅನ್ನು ಕೆಡವಿ ತಮ್ಮದಾಗಿಸಿಕೊಂಡಿದ್ದಾರೆ.

ಈ ದಾಖಲೆಯಿಂದ ಮುದ್ದಪ್ಪ ಡಬಲ್ ಚಿನ್ನವನ್ನು ಗೆದ್ದು 2021ರ ಡ್ರ್ಯಾಗ್ ನ್ಯಾಷನಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಹೇಮಂತ್ ಮುದ್ದಪ್ಪ ಒಂಬತ್ತು ಬಾರಿ ಭಾರತೀಯ ರಾಷ್ಟ್ರೀಯ ಡ್ರ್ಯಾಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಪ್ರಧಾನ ಸೂಪರ್ ಸ್ಪೋರ್ಟ್ 1051 ಸಿಸಿ ಮತ್ತು ಇದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸತತ ಐದನೇ ಬಾರಿ ಗೆಲುವು ಸಾಧಿಸಿ, ಭಾಗವಹಿಸಿದ ಪ್ರತಿ ಸುತ್ತಿನಲ್ಲೂ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ.

"ನಾನು ಕ್ಲೌಡ್ ನೈನ್‌ನಲ್ಲಿದ್ದೇನೆ. ನನ್ನ ಪ್ರದರ್ಶನದ ಹಿಂದೆ ಹಗಲಿರುಳು ದಣಿವರಿಯದೆ ಶ್ರಮಿಸಿದ ರೇಸಿಂಗ್ ಮಂತ್ರ ಇದೆ. ನನಗೆ ತಿಳಿದಿರುವ ಪ್ರಕಾರ ತಂಡದ ಪ್ರತಿಯೊಬ್ಬ ಸದಸ್ಯರ ಬದ್ಧತೆ ನನ್ನ ಈ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಇದು ಕ್ಲಿಪ್ಪಿಂಗ್ ಡ್ರ್ಯಾಗ್‌ನಲ್ಲಿ ಬಹಳ ದೊಡ್ಡ ಸಾಧನೆಯಾಗಿದೆ.

ನನ್ನ ಫಿಟ್ನೆಸ್‌ಗಾಗಿ ತುಂಬಾ ಕಷ್ಟಪಟ್ಟಿದ್ದೇನೆ, ರೇಸ್‌ಗೂ ಮೊದಲು ವಿಜುವಲೈಜೇಷನ್ ನನಗೆ ಸಾಕಷ್ಟು ಸಹಾಯ ಮಾಡಿದೆ. ಇಂತಹ ಕಷ್ಟಕರದವಾದ ರೇಸ್ ಅನ್ನು ಸಾಧಿಲೇಬೇಕೆಂಬ ಕಠಿಣ ಪರಿಶ್ರಮ ಇಂದು ನನ್ನನ್ನು ರೋಮಾಂಚನಗೊಳಿಸಿದೆ" ಎಂದು ಎಂಎಂಎಸ್‌ಸಿ ಎಫ್ಎಂಎಸ್‌ಸಿ ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್ ಹೇಮಂತ್ ಮುದ್ದಪ್ಪ ಹೇಳಿದರು.

ಭಾನುವಾರ ನಿಗದಿಪಡಿಸಿದ ನಂಬರ್ ಆಫ್ ಸೆಟ್‌ಗಳಲ್ಲಿ, ಮುದ್ದಪ್ಪ ತನ್ನ ಹಿಂದಿನ ರನ್‌ಗಳಿಗಿಂತ ಸೆಕೆಂಡಿನ ಹತ್ತನೇ ಒಂದು ಭಾಗವನ್ನು ಟ್ರಿಮ್ ಮಾಡಿದರು. ತಮ್ಮ ಕಪ್ಪು ಸುಜುಕಿ ಹಯಾಬುಸಾದಲ್ಲಿ ದಾಖಲೆಯ 7.749 ಸೆಕೆಂಡುಗಳಲ್ಲಿ ಸೆಟ್ ಅನ್ನು ಮುಗಿಸಿದರು. ಇದಕ್ಕಾಗಿ ಮುದ್ದಪ್ಪ 302 ಮೀಟರ್ ಮದ್ರಾಸ್ ಮೋಟಾರ್ ರೇಸ್ ಸರ್ಕ್ಯೂಟ್‌ನ ಕೊನೆಯಲ್ಲಿ ಗಂಟೆಗೆ 239.58 ಕಿ.ಮೀ ವೇಗದ ಹಿಡಿತ ಸಾಧಿಸಿದರು.

ಹಫೀಜುಲ್ಲಾ ಖಾನ್ ಮತ್ತು ಹರೀಶ್ ನಾಯಕ್‌ರಂತಹ ಸವಾರರು ಕ್ರಮವಾಗಿ 8.031 ಮತ್ತು 8.315 ಸೆಕೆಂಡುಗಳ ಅಂತರದಲ್ಲಿ ಉತ್ತಮ ಪೈಪೋಟಿ ನೀಡಿದರು. ಆದರೆ ಮಂತ್ರ ರೇಸಿಂಗ್‌ನಿಂದ ಟ್ಯೂನ್ ಮಾಡಲಾಗಿದ್ದ ಸುಜುಕಿ ಹಯಾಬುಸಾ ತನ್ನದೇ ಕ್ಲಾಸ್‌ನಲ್ಲಿತ್ತು. ತಜಮುಲ್ ಹುಸೇನ್ 7.966 ಸೆಕೆಂಡ್ ಮತ್ತು ಮೊಹಮ್ಮದ್ ರಿಯಾಜ್ 8.135 ಸೆಕೆಂಡುಗಳ ಅಂತರದಲ್ಲಿ ಸೂಪರ್ ಸ್ಪೋರ್ಟ್ 851 ಸಿಸಿಯಿಂದ 1050 ಸಿಸಿಯ ಸ್ಪರ್ಧೆಯು ಹೆಚ್ಚು ಹತ್ತಿರವಾಗಿತ್ತು. ಆದರೂ ಹೇಮಂತ್ ಮುದ್ದಪ್ಪ ಮತ್ತು ಮಂತ್ರ ರೇಸಿಂಗ್ ಅವರ ಅದ್ಬುತ ಕೋಆರ್ಡಿನನ್ಸ್‌ನಿಂದ 7.755 ಸೆಕೆಂಡುಗಳಲ್ಲಿ ರೇಸ್ ಮುಗಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದರು.

ಮುದ್ದರ ಇವೆರಡೂ ಇಂದು ರಾಷ್ಟ್ರ ಮಟ್ಟದ ದಾಖಲೆಗಳಾಗಿವೆ. ಎಂಎಂಆರ್‌ಟಿಯಲ್ಲಿ ಅತ್ಯುತ್ತಮ ಇಂಡಿಯನ್ ಡ್ರ್ಯಾಗ್ ನ್ಯಾಷನಲ್ಸ್ ಅನ್ನು ಗೆಲ್ಲುವುದು ತನ್ನದೇ ಆದ ಸಾಧನೆಯಾಗಿದೆ. ದಾಖಲೆಯ ರನ್‌ಗಳೊಂದಿಗೆ ಸತತವಾಗಿ ಐದು ವರ್ಷಗಳಿಂದ ತಮ್ಮ ಸ್ಥಾನವನ್ನು ಉಳಿಸಿಕೊಂಡಿರುವುದು ಮುದ್ದಪ್ಪರ ದೃಢನಿಶ್ಚಯ ಮತ್ತು ಸಂಕಲ್ಪವನ್ನು ತೋರಿಸುತ್ತದೆ.

ಹಯಾಬುಸಾ ವಶ್ವದ ಅತಿ ವೇಗವಾಗಿ ಚಲಿಸುವ ಬೈಕ್‌ಗಳಲ್ಲಿ ಒಂದಾಗಿದ್ದು, ಈ ಬೈಕ್‌ನಲ್ಲಿ ಸಾಧನೆ ಮಾಡಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಮುದ್ದಪ್ಪ ಅವರು ಇದಕ್ಕಾಗಿಯೇ ಒಂದು ವರ್ಷವನ್ನು ಮೀಸಲಿಟ್ಟಿದ್ದರು ಎಂದು ಎಫ್ಎಂಎಸ್ ಸಿಐನ ಡ್ರ್ಯಾಗ್ ಕಮಿಷನ್ ಅಧ್ಯಕ್ಷ ಪ್ರತಾಪ್ ಜಯರಾಮ್ ತಿಳಿಸಿದರು.