Just In
- 3 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 4 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 6 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 6 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- Sports
GT vs RR: ಅಂತಿಮ ಓವರ್ನಲ್ಲಿ ಅತಿ ಹೆಚ್ಚು ಬಾರಿ ರನ್ ಚೇಸ್ ಮಾಡಿದ ಗುಜರಾತ್ ಟೈಟನ್ಸ್ ದಾಖಲೆ
- News
ಶಿವಮೊಗ್ಗ: ಮಳೆಯಲ್ಲಿ ಸಿಲುಕಿದ್ದ 150 ಮಂದಿಗೆ ಆಪತ್ಭಾಂಧವರಾದ ಅಗ್ನಿಶಾಮಕ ದಳ
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
VROOM Drag Meet 2022: 6ನೇ ವ್ರೂಮ್ ಡ್ರ್ಯಾಗ್ ರೇಸ್ ಆವೃತ್ತಿ ಗೆದ್ದ ಕನ್ನಡಿಗ ಹೇಮಂತ್ ಮುದ್ದಪ್ಪ!
ರಾಷ್ಟ್ರೀಯ ಮಟ್ಟದ ಮೋಟಾರ್‌ಸ್ಪೋರ್ಟ್‌ಗಳಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ವ್ರೂಮ್ ಡ್ರ್ಯಾಗ್ ರೇಸ್ ಆರನೇ ಆವೃತ್ತಿಯು ಮುಕ್ತಾಯಗೊಂಡಿದ್ದು, ವ್ರೂಮ್ ಡ್ರ್ಯಾಗ್ ರೇಸ್ ಆರನೇ ಆವೃತ್ತಿಯಲ್ಲಿ ವಿವಿಧ ಮಾದರಿಯ ಹಲವು ಬೈಕ್ ಮತ್ತು ಕಾರು ಮಾದರಿಗಳು ಒಂದೇ ವೇದಿಕೆಯಲ್ಲಿ ಸಮಾಗಮಾವಾಗಿದ್ದು ಸಾಕಷ್ಟು ವಿಶೇಷವಾಗಿತ್ತು.

ಬೆಂಗಳೂರಿನಲ್ಲಿ ನಡೆದ 2022ರ ವ್ರೂಮ್ ಡ್ರ್ಯಾಗ್ ರೇಸ್ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಯಶಸ್ವಿ ಮೂರು ದಿನಗಳ ಕಾಲ ನಡೆದ ಮೋಟಾರ್‌ರ್ಸ್ಪೋರ್ಟ್ ಈವೆಂಟ್‌ನಲ್ಲಿ ವಿವಿಧ ಎಂಜಿನ್ ವಿಭಾಗದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಸ್ಪರ್ಧೆಯಲ್ಲಿ ಆರಂಭಿಕವಾಗಿ 130 ಸಿಸಿ ಬೈಕ್‌ಗಳಿಂದ ಗರಿಷ್ಠ 1650 ಸಿಸಿ ಸಾಮರ್ಥ್ಯದ ಸೂಪರ್‌ಬೈಕ್‌ಗಳು ಭಾಗಿಯಾಗಿದ್ದವು.
ಮಾರ್ಚ್ 4ರಿಂದ 6ರ ತನಕ ನಡೆದ 2022ರ ವ್ರೂಮ್ ಡ್ರ್ಯಾಗ್ ರೇಸ್‌ನಲ್ಲಿ ಕಾರುಗಳ ವಿಭಾಗದಲ್ಲೂ 1,150 ಸಿಸಿಯಿಂದ ಪ್ರಬಲ ಶಕ್ತಿ ಹೊಂದಿರುವ ಹಲವು ಸೂಪರ್ ಕಾರು ಮಾದರಿಗಳು ಈ ಬಾರಿಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಸರ್ವೊ ಎಕ್ಸ್‌ಪಿ95 ಪ್ರಸ್ತುತ ಪಡಿಸಿದ ವ್ರೊಮ್ ಡ್ರ್ಯಾಗ್ ರೇಸ್ ಕಾರ್ಯಕ್ರಮದಲ್ಲಿ ಡ್ರೈವ್‌ಸ್ಪಾರ್ಕ್ ತಂಡವು ಅಧಿಕೃತ ಮಾಧ್ಯಮ ಸಂಸ್ಥೆಯ ಪಾಲುದಾರಿಕೆಯನ್ನು ಹೊಂದಿದೆ.

ಡ್ರ್ಯಾಗ್ ರೇಸಿಂಗ್ ಬಹುಶಃ ಮೋಟಾರ್‌ಸ್ಪೋರ್ಟ್‌ನ ಸರಳ ರೂಪವಾಗಿದ್ದು, ಇದು ಎರಡು ವಾಹನಗಳನ್ನು ಡ್ರ್ಯಾಗ್ ಸ್ಟ್ರಿಪ್ ಅಥವಾ ರನ್‌ವೇ ಮೂಲಕ ನಿಗದಿತ ದೂರವನ್ನು ಅತಿ ಕಡಿಮೆ ಅವಧಿಯಲ್ಲಿ ಗುರಿತಲುಪುದನ್ನು ಒಳಗೊಂಡಿರುತ್ತದೆ. ಹೊಸೂರಿನ ತನೇಜಾ ಏರೋಸ್ಪೇಸ್ ರನ್‍ವೇಯಲ್ಲಿ ನಡೆದ 2022ರ ವ್ರೂಮ್ ಡ್ರ್ಯಾಗ್ ರೇಸ್‌ನಲ್ಲಿ 402 ಮೀಟರ್ ದೂರವನ್ನು ನಿಗದಿತ ಅವಧಿಯಲ್ಲಿ ಗುರಿತಲುಪಿದ ಪ್ರಮುಖ ಸ್ಪರ್ಧಿಗಳು ಪ್ರಶಸ್ತಿ ಮುಡಿಗೇರಿಸಿಕೊಂಡರು.

2022ರ ವ್ರೂಮ್ ಡ್ರ್ಯಾಗ್ ರೇಸ್‌ನಲ್ಲಿ ಹೆಚ್ಚು ಸದ್ದು ಮಾಡಿದ ಬಿಎಂಡಬ್ಲ್ಯುಎಸ್1000ಆರ್‌ಆರ್ ಮತ್ತು ಪೊರ್ಷೆ ಕಯೆನಿ ಟರ್ಬೊ ಅತಿ ಕಡಿಮೆ ಅವಧಿಯಲ್ಲಿ ನಿಗದಿತ ಗುರಿತಲುಪುವಲ್ಲಿ ಯಶಸ್ವಿಯಾಗಿದ್ದು, ವಿವಿಧ ಹಂತದ ಎಂಜಿನ್ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳ ಫಲಿತಾಂಶವನ್ನು ಮುಂದಿನ ಸ್ಲೈಡ್‌ಗಳಲ್ಲಿ ತಿಳಿಯೋಣ.

ಪೂರ್ವ ಪರಿಶೀಲನೆ ಮತ್ತು ಅಭ್ಯಾಸ
ಸ್ಪರ್ಧೆಯ ಮೊದಲ ದಿನ ಅಂದರೆ ಮಾರ್ಚ್ 4ರಂದು ಯಾವುದೇ ಅಧಿಕೃತ ಸ್ಪರ್ಧೆಯಿಲ್ಲವಾದರೂ ಸ್ಪರ್ಧೆಗೆ ಸಂಬಂಧಿಸಿದ ಮಾಹಿತಿಗಳ ತಿಳುವಳಿಕೆ, ಪರಿಶೀಲನೆ ಮತ್ತು ನೋಂದಣಿ ಕಾರ್ಯವಿಧಾನಗಳು ಮತ್ತು ವಾಹನಗಳ ಕಾರ್ಯಕ್ಷಮತೆ ಕುರಿತಂತೆ ನುರಿತ ತಾಂತ್ರಿಕ ತಂಡದಿಂದ ಪರಿಶೀಲನೆ ಮಾಡಲಾಯ್ತು.

ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ (ಎಫ್‌ಎಂಎಸ್‌ಸಿಐ) ಅಧಿಕಾರಿಗಳು ವಾಹನಗಳ ಪರಿಶೀಲನೆಯ ಉಸ್ತುವಾರಿ ವಹಿಸಿದ್ದರೆ ವ್ರೂಮ್ ಡ್ರ್ಯಾಗ್ ಮೀಟ್‌ನ ಉಸ್ತುವಾರಿ ಸಿಬ್ಬಂದಿಯು ವಾಹನಗಳ ಅಂತಿಮ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ದ್ವಿಚಕ್ರ ವಾಹನಗಳಿಗೆ ಮತ್ತು ಕಾರುಗಳಿಗೆ ಪ್ರತ್ಯೇಕ ಪರಿಶೀಲನೆಯ ಟೆಂಟ್‌ಗಳನ್ನು ನಿರ್ಮಿಸಿದ್ದ ಆಯೋಜಕರು ರೇಸಿಂಗ್‌ನಲ್ಲಿ ಭಾಗಿಯಾಗಲು ನುರಿತ ತಾಂತ್ರಿಕ ತಂಡದಿಂದ ಪರಿಶೀಲನೆ ಮಾಡಿಸಿ ಸ್ಪರ್ಧೆಯಲ್ಲಿ ಭಾಗವಹಿಸುವಿಕೆಯನ್ನು ಖಚಿತಪಡಿಸಿತು.

ಮೋಟಾರ್‌ಸೈಕಲ್‌ಗಳು ಕಾರ್ಯನಿರ್ವಹಿಸುವ ಬ್ರೇಕ್ ಲೈಟ್‌ಗಳು, ಬಾಡಿ ಪ್ಯಾನಲ್‌ಗಳನ್ನು ಪರಿಶೀಲಿಸಲಾಯಿತು ಮತ್ತು ಯಾವುದೇ ಸಡಿಲವಾದ ಕೇಬಲ್‌ಗಳು ಅಥವಾ ಪೈಪ್‌ಗಳು ರೈಡ್‌ಗೆ ಅಡೆತಡೆಯಿಲ್ಲವೆಂದು ಅಧಿಕಾರಿಗಳು ಖಚಿತಪಡಿಸಿಕೊಂಡರು.

ಸ್ಪರ್ಧೆಯಲ್ಲಿ ಗರಿಷ್ಠ ಸುರಕ್ಷತೆಗೆ ಒತ್ತು ನೀಡಿದ್ದ ಆಯೋಜಕರು ಸ್ಪರ್ಧಿಗಳಿಗೆ ಬೆನ್ನು ಮತ್ತು ಮೊಣಕಾಲುಗಳಿಗೆ ಗರಿಷ್ಠ ರಕ್ಷಣೆ ನೀಡುವ ಲೆದರ್ ರೇಸ್ ಸೂಟ್, ಪೂರ್ಣ ಪ್ರಮಾಣದ ರೇಸ್ ಬೂಟ್‌ಗಳು, ಪೂರ್ಣ ಪ್ರಮಾಣದ ಗೌಂಟ್ಲೆಟ್ ಕೈಗವಸುಗಳು ಮತ್ತು ಡಬಲ್-ಡಿ ರಿಂಗ್ ಫುಲ್ ಫೇಸ್ ಹೆಲ್ಮೆಟ್‌ಗಳನ್ನು ಒಳಗೊಂಡಂತೆ ಮೋಟಾರ್‌ಸೈಕಲ್ ಸವಾರಿಗೆ ಬೇಕಿರುವ ಎಲ್ಲಾ ಹಂತದ ತಾಂತ್ರಿಕ ಸೌಲಭ್ಯಗಳನ್ನು ಪರಿಶೀಲನೆ ಮಾಡಲಾಯ್ತು.

ಕಾರುಗಳ ತಪಾಸಣಾ ಟೆಂಟ್‌ನಲ್ಲೂ ಕೂಡಾ ದ್ವಿಚಕ್ರ ಮಾದರಿಗಳಿಗಾಗಿ ಪರಿಶೀಲನೆ ಮಾಡಿದಂತೆ ಇಲ್ಲಿಯೂ ಕೂಡಾ ವಿವಿಧ ಹಂತದ ತಪಾಸಣೆ ನಡೆಸಲಾಯ್ತು. ರೇಸಿಂಗ್ ಟ್ಯೂನ್ ಮಾಡಲಾದ ಮಾರುತಿ ಸುಜುಕಿ ಝೆನ್ ಹ್ಯಾಚ್‌ಬ್ಯಾಕ್‌ಗಳಿಂದ ಹಿಡಿದು ಆಡಿ ಆರ್8, ಲಂಬೋರ್ಗಿನಿ ಹುರಾಕನ್ ಸೇರಿದಂತೆ ಹಲವು ಶಕ್ತಿಶಾಲಿ ಸೂಪರ್‌ಕಾರ್‌ಗಳನ್ನು ಇಲ್ಲಿ ಪರಿಶೀಲನೆ ಮಾಡಿ ಕ್ರ್ಯಾಶ್ ಹೆಲ್ಮೆಟ್‌ಗಳು, ರೇಸ್ ಶೂಗಳು ಮತ್ತು ಚಾಲಕರು ಧರಿಸಬೇಕಾದ ಕೈಗವಸುಗಳನ್ನು ಸಹ ಪರಿಶೀಲಿಸಲಾಯಿತು.

ದಿನ 1: ರೇಸಿಂಗ್ ಆರಂಭ
ರೇಸ್ ಆರಂಭವಾದ ಮೊದಲ ದಿನ ಅಂದೆರೆ ಮಾರ್ಚ್ 5 ರಂದು ಭಾರತದಲ್ಲಿಯೇ ತಯಾರಾದ ಅತ್ಯಂತ ವೇಗದ ವಾಹನಗಳು ಟ್ರ್ಯಾಕ್‌ಗೆ ಬಂದವು. ಇದರಲ್ಲಿ ಸ್ಟಾಕ್ ಮೋಟಾರ್‌ಸೈಕಲ್‌ಗಳು ಮತ್ತು ಕಾರ್‌ಗಳನ್ನು ಒಳಗೊಂಡು ರೇಸಿಂಗ್ ಉದ್ದೇಶಕ್ಕಾಯೇ ಭಾರೀ ಪ್ರಮಾಣದಲ್ಲಿ ಮಾರ್ಪಡಿಸಿದ ವಾಹನಗಳು ಸಹ ಭಾಗಿಯಾಗಿದ್ದವು.

ರೇಸಿಂಗ್ ಕ್ರಿಯೆಯು ಪ್ರಾರಂಭವಾದ ಮೊದಲ ಸುತ್ತಿನಲ್ಲಿ A1 ವರ್ಗವು 130ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯದೊಂದಿಗೆ ಎರಡು-ಸ್ಟ್ರೋಕ್ ಮೋಟಾರ್‌ಸೈಕಲ್‌ಗಳನ್ನು ಸಹ ಒಳಗೊಂಡಿತ್ತು. ಜೊತೆಗೆ ಇದೇ ವಿಭಾಗದಲ್ಲಿ ಮಾರ್ಪಡಿಸಿದ ಯಮಹಾ ಆರ್‌ಎಕ್ಸ್100 ಮೋಟಾರ್‌ಸೈಕಲ್‌ಗಳು ಸಹ ಈ ವಿಭಾಗದಲ್ಲಿ ಪ್ರಾಬಲ್ಯ ಪ್ರದರ್ಶನ ಮಾಡಿದವು.

A2 ವಿಭಾಗದಲ್ಲಿ 131 ಸಿಸಿ ಯಿಂದ 165 ಸಿಸಿ ನಡುವಿನ ಎಂಜಿನ್ ಸಾಮರ್ಥ್ಯದೊಂದಿಗೆ ಎರಡು-ಸ್ಟ್ರೋಕ್ ಮೋಟಾರ್‌ಸೈಕಲ್‌ಗಳು ಸ್ಪರ್ಧೆ ನಡೆಸಿದವು. ಈ ವರ್ಗದಲ್ಲಿ ಕೆಲವು ಭಾರೀ ಪ್ರಮಾಣದಲ್ಲಿ ಮಾರ್ಪಡಿಸಿದ ಯಮಹಾ ಆರ್‌ಎಕ್ಸ್135 ಕೂಡಾ ಪ್ರಾಬಲ್ಯ ಹೊಂದಿದ್ದು, ಈ ಮೋಟಾರ್‌ಸೈಕಲ್‌ಗಳು ಕ್ವಾರ್ಟರ್ ಮೈಲಿ(402 ಮೀಟರ್)ನಲ್ಲಿ 13.329 ಸೆಕೆಂಡ್‌ಗಳಲ್ಲಿ ವೇಗವಾಗಿ ಚಲಿಸುವ ಮೂಲಕ ಆಶ್ಚರ್ಯಕರವಾಗಿ ಗುರಿತಲುಪಿದವು.

ವ್ರೂಮ್ 2022ರ ಕಿರಿಯ ರೈಡರ್ 11 ವರ್ಷದ ಶ್ರೇಯಸ್ ಹರೀಶ್ ಎನ್ಎಂಡಬ್ಲ್ಯು ರೇಸಿಂಗ್‌ನಿಂದ ಡ್ರ್ಯಾಗ್-ಬಿಲ್ಟ್ ಯಮಹಾ ಆರ್‌ಎಕ್ಸ್ 135 ನೊಂದಿಗೆ A2 ವಿಭಾಗದಲ್ಲಿ ಭಾಗಿಯಾಗಿ 14.510 ಸೆಕೆಂಡುಗಳಷ್ಟು ಗುರಿತಲುಪಿದ್ದು ವಿಶೇಷವಾಗಿತ್ತು.

ತದನಂತರ A3 ವಿಭಾಗದಲ್ಲಿ ಟ್ಯೂನ್ ಮಾಡಲಾದ ಮತ್ತು ಡ್ರ್ಯಾಗ್-ಬಿಲ್ಟ್ ಯಮಹಾ ಆರ್‌ಡಿ350 ಮೋಟಾರ್‌ಸೈಕಲ್‌ಗಳು ಬೈಕಿಂಗ್ ಪ್ರಿಯರನ್ನು ಸೆಳೆದವು. ಹೈ-ರಿವ್ವಿಂಗ್ ಟು-ಸ್ಟ್ರೋಕ್, ಟ್ವಿನ್-ಸಿಲಿಂಡರ್ ಮೋಟಾರ್‌ಸೈಕಲ್‌ಗಳ ಘರ್ಜನೆಯು ರೇಸ್‌ನ ಪ್ರಮುಖ ಕೇಂದ್ರ ಬಿಂದುವಾಗಿದ್ದವು.

ಜೊತೆಗೆ ನಾಲ್ಕು-ಸ್ಟ್ರೋಕ್ ಮೋಟಾರ್‌ಸೈಕಲ್‌ಗಳು ಸಹ ಡ್ರ್ಯಾಗ್ ರೇಸ್‌ನಲ್ಲಿ ಭಾಗಿಯಾಗಿದ್ದವು. ಬಿ1 ವಿಭಾಗದಲ್ಲಿ 165 ಸಿಸಿ ವರೆಗೆ ಮೋಟಾರ್‌ಸೈಕಲ್‌ಗಳು ಭಾಗಿಯಾಗಿದ್ದವು. ಈ ವರ್ಗದಲ್ಲಿ ಪ್ರಮುಖವಾಗಿ ಯಮಹಾ ಆರ್15 ನಿಂದ ಪ್ರಾಬಲ್ಯ ಹೊಂದಿದೆ. ನಂತರ B2 ವಿಭಾಗದಲ್ಲಿ 166 ಸಿಸಿ ಯಿಂದ 225 ಸಿಸಿ ನಡುವಿನ ಎಂಜಿನ್ ಸಾಮರ್ಥ್ಯದೊಂದಿಗ ಬಜಾಜ್ ಪಲ್ಸರ್ ಎನ್ಎಸ್200 ಮತ್ತು ಕೆಟಿಎಂ 200 ಬೈಕ್‌ಗಳು ಅತ್ಯಂತ ಜನಪ್ರಿಯ ಮೋಟಾರ್‌ಸೈಕಲ್‌ಗಳಾಗಿವೆ.

226 ಸಿಸಿ ಮತ್ತು 360 ಸಿಸಿ ನಡುವಿನ ಎಂಜಿನ್ ಸಾಮರ್ಥ್ಯದ ಬೈಕ್‌ಗಳು B3 ವರ್ಗದಲ್ಲಿ ಸ್ಪರ್ಧಿಸಿದ್ದು, ಈ ವಿಭಾಗದಲ್ಲಿ ಯಮಹಾ ಆರ್3, ಕವಾಸಕಿ ನಿಂಜಾ 300 ಸೇರಿದಂತೆ ಪ್ರಮುಖ ಮೋಟಾರ್‌ಸೈಕಲ್‌ಗಳನ್ನು ಒಳಗೊಂಡಿವೆ.

ಹಾಗೆಯೇ 361 ಸಿಸಿಯಿಂದ 550ಸಿಸಿ ನಡುವಿನ ಎಂಜಿನ್ ಸಾಮರ್ಥ್ಯದೊಂದಿಗೆ B4 ವರ್ಗವಾಗಿದ್ದು, ಈ ವರ್ಗದಲ್ಲಿ ಕೆಟಿಎಂ ಆರ್‌ಸಿ 390 ಮತ್ತು 390 ಡ್ಯೂಕ್ ಪ್ರಾಬಲ್ಯ ಹೊಂದಿವೆ. ಇವು 12.883 ಸೆಕೆಂಡ್‌ಗಳ ವೇಗದೊಂದಿಗೆ ಗುರಿತಲುಪಿದ್ದು, ಪ್ರಮುಖ ಮಾಡಿಫೈ ಮಾದರಿಗಳನ್ನು ಸಹ ಹಿಂದಿಕ್ಕಿವೆ.

551ಸಿಸಿ ಯಿಂದ 850 ಸಿಸಿ ನಡುವಿನ ಎಂಜಿನ್ ಸಾಮರ್ಥ್ಯದ B5 ವಿಭಾದಲ್ಲಿ ಪ್ರಮಖ ಮೋಟಾರ್‌ಸೈಕಲ್‌ಗಳು ಸ್ಪರ್ಧಿಗಳಾಗಿದ್ದು, ಈ ವಿಭಾಗದಲ್ಲಿ ಪ್ರಮುಖ ಸ್ಪರ್ಧಿಗಳು 10.758 ಸೆಕೆಂಡ್‌ಗಳ ವೇಗದೊಂದಿಗೆ ಗುರಿತಲುಪಿದರು.

ಇದೇ ವೇಳೆ D2, D4, D5, D6, ಮತ್ತು D8 ವಿಭಾಗಗಳಲ್ಲಿ ವಿವಿಧ ಕಾರು ಮಾದರಿಗಳನ್ನು ಕ್ವಾರ್ಟರ್-ಮೈಲ್ ಸ್ಪರ್ಧೆಯ ನಂತರ S1, S2, S3, S4, S5, ಮತ್ತು S6 ವಿಭಾಗಗಳಲ್ಲಿ ಸ್ಪರ್ಧಿ ಸಡೆಸಲಾಯ್ತು.

ಕಾರುಗಳ ವಿಭಾಗದಲ್ಲಿ ಟ್ಯೂನ್ ಮಾಡಲಾದ ಮಾರುತಿ ಸುಜುಕಿ ಜೆನ್ ಮತ್ತು ಫೋಕ್ಸ್‌ವ್ಯಾಗನ್ ಪೊಲೊ ಹ್ಯಾಚ್‌ಬ್ಯಾಕ್‌ಗಳಿಂದ ಹಿಡಿದು ಐಷಾರಾಮಿ ಮಾದರಿಗಳಾದ ಸ್ಕೋಡಾ ಆಕ್ಟೇವಿಯಾ, ಹೋಂಡಾ ಸಿಟಿ ಸೆಡಾನ್‌ಗಳು ಸ್ಪರ್ಧಿಸಿದರೆ S ಸರಣಿ ವಿಭಾಗದಲ್ಲಿ ಪೋರ್ಷೆ ಬಾಕ್ಸ್‌ಸ್ಟರ್ 718, ಬಿಎಂಡಬ್ಲ್ಯು 530ಡಿ, ಆಡಿ ಎ6 ಸೇರಿದಂತೆ ಪ್ರಮುಖ ಐಷಾರಾಮಿ ಸ್ಪೋರ್ಟ್ ಕಾರುಗಳು ಸ್ಪರ್ಧೆಯಲ್ಲಿ ಗಮನಸೆಳೆದವು.

ವ್ರೂಮ್ ಡ್ರ್ಯಾಗ್ ರೇಸಿಂಗ್‌ನಲ್ಲಿ ಆಯೋಜಕರು ಮಹಿಳೆಯರಿಗಾಗಿಯೇ ಕೆಲವು ಪ್ರತ್ಯೇಕ ಬೈಕ್ ವಿಭಾಗಗಳನ್ನು ತೆರೆದಿದ್ದು, F1 ಮತ್ತು G1 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ದ್ವಿಚಕ್ರ ವಾಹನ ವಿಭಾಗದಲ್ಲಿ ಸುಮಂತಾ ಡಿಸೋಜಾ ಅವರು ತಮ್ಮ ಕೆಟಿಎಂ 390 ಮೂಲಕ ಕೇವಲ 13.751 ಸೆಕೆಂಡ್‌ಗಳಲ್ಲಿ ವ್ರೂಮ್ ಡ್ರ್ಯಾಗ್ ಮೀಟ್‌ನಲ್ಲಿ ಅತ್ಯಂತ ವೇಗದ ಮಹಿಳಾ ರೈಡರ್ ಆಗಿ ಗುರುತಿಸಿಕೊಂಡರು.

ಹಾಗೆಯೇ ಈ ಮೋಟಾರ್‌ಸ್ಪೋರ್ಟ್ ಸ್ಪರ್ಧೆಯಲ್ಲಿ F1 ವಿಭಾಗದಲ್ಲಿ ಹಳೆಯ ಜಾವಾ ರೈಡ್ ಮಾಡಿದ ಪಿ ತುಳಸಿ ರಾಮ್ ಅವರು 16.709 ಸೆಕೆಂಡ್‌ಗಳಲ್ಲಿ ಗುರಿತಲುಪಿದ್ದು, ರೇಸಿಂಗ್‌ನ 1ನೇ ದಿನದ ಮುಕ್ತಾಯಕ್ಕೆ ಟಿವಿಎಸ್ ರೇಸಿಂಗ್ ತಂಡವು ಟಿವಿಎಸ್ ಅಪಾಚೆ ಆರ್‌ಟಿಆರ್ 200 ಮೋಟಾರ್‌ಸೈಕಲ್‌ಗಳೊಂದಿಗೆ ಅದ್ಭುತ ಪ್ರದರ್ಶನದೊಂದಿಗೆ ಎಲ್ಲರನ್ನೂ ಆಕರ್ಷಿಸಿತು.

ಟಾಪ್ 3 ವೇಗದ ಎರಡು-ಸ್ಟ್ರೋಕ್ ಮೋಟಾರ್‌ಸೈಕಲ್‌ಗಳು [ ಮೊದಲ ದಿನ ]
1. ಆ್ಯಂಟನಿ ರಾಜ್ [317]: A3 ವಿಭಾಗ: 12.418 ಸೆಕೆಂಡುಗಳು
2. ಶಾರುಖ್ ಖಾನ್ [070]: A3 ವಿಭಾಗ: 12.616 ಸೆಕೆಂಡುಗಳು
3. ನಾಸಿರ್ ಜಮಾಲ್ ಅನ್ಸಾರಿ [075]: A3 ವಿಭಾಗ: 12.730 ಸೆಕೆಂಡುಗಳು
ಟಾಪ್ 3 ವೇಗದ ನಾಲ್ಕು-ಸ್ಟ್ರೋಕ್ ಮೋಟಾರ್‌ಸೈಕಲ್‌ಗಳು [ಮೊದಲ ದಿನ]
1. ರಾಹಿಲ್ ಪಿಲ್ಲರಿಸೆಟ್ಟಿ [161]: B5 ವಿಭಾಗ: 10.758 ಸೆಕೆಂಡುಗಳು
2. ಶಾರುಖ್ ಖಾನ್ [070]: B5 ವಿಭಾಗ: 10.878 ಸೆಕೆಂಡುಗಳು
3. ಮಿರ್ಜಾಜಹಾಂಗೀರ್ ಬೇಗ್ [075]: B5 ವಿಭಾಗ: 11.137 ಸೆಕೆಂಡುಗಳು
ಟಾಪ್ 3 ವೇಗದ ಮಹಿಳಾ ಭಾಗವಹಿಸುವವರು [ಮೊದಲ ದಿನ]
1. ಸಮಂತಾ ಡಿ'ಸೋಜಾ [262]: F1 ವಿಭಾಗ: 13.751 ಸೆಕೆಂಡುಗಳು
2. ಸಾರಾ ಖಾನ್ [260]: F1 ವಿಭಾಗ: 14.600 ಸೆಕೆಂಡುಗಳು
3. ಆನ್ ಜೆನ್ನಿಫರ್ ಎಎಸ್ [261]: F1 ವಿಭಾಗ: 14.950 ಸೆಕೆಂಡುಗಳು
ಟಾಪ್ 3 ವೇಗದ ಪೆಟ್ರೋಲ್ ಕಾರುಗಳು [ಮೊದಲ ದಿನ]
1. ಉವಾಶ್ರೀ ಕೆಬಿ [636]: G1 ವಿಭಾಗ: 14.086 ಸೆಕೆಂಡುಗಳು
2. ಪ್ರಣಯ್ ಸೌರಬ್ ಟಿಜೆ [705]: S6 ವಿಭಾಗ: 15.447 ಸೆಕೆಂಡುಗಳು
3. ಆಕಾಶ್ [537]: S6 ವಿಭಾಗ: 15.555 ಸೆಕೆಂಡುಗಳು
ಟಾಪ್ 3 ವೇಗದ ಕಾರುಗಳು [ಮೊದಲ ದಿನ]
1. ಸುಮಂತ್ ಹೆಚ್‌ವಿ [582]: D8 ವಿಭಾಗ: 14.327 ಸೆಕೆಂಡುಗಳು
2. ಮೊಹಮ್ಮದ್ ಖಾಜಾ ಅಬ್ರರುದ್ದೀನ್ (ಹಾಶಿಮ್) [537]: D4 ವಿಭಾಗ: 14.646 ಸೆಕೆಂಡುಗಳು
3. ವಿಕ್ರಮ್ ರಾಜ್ [574]: D5 ವಿಭಾಗ: 14.820 ಸೆಕೆಂಡುಗಳು

ದಿನ 2: ಪ್ರಬಲ ಪ್ರತಿಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ
ಸ್ಪರ್ಧೆಯ ಎರಡನೇ ದಿನದಂದು ಹೆಚ್ಚಿನ ಮಟ್ಟದ ಎಂಜಿನ್ ಆಯ್ಕೆ ಹೊಂದಿರುವ ಪ್ರಮುಖ ಸೂಪರ್ ಬೈಕ್‌ಗಳ ನಡುವೆ ಸ್ಪರ್ಧೆ ನಡೆಯಿತು. ಇದರಲ್ಲಿ ಮಂತ್ರ ರೇಸಿಂಗ್ ಮತ್ತು ಹೇಮಂತ್ ಮುದ್ದಪ್ಪ ಅವರು ತಮ್ಮ ಸೂಪರ್‌ಬೈಕ್‌ಗಳ ಮೂಲಕ ಅಭ್ಯಾಸ ಪಂದ್ಯದಲ್ಲಿ 10 ಸೆಕೆಂಡ್‌ಗಳಿಗಿಂತಲೂ ಕಡಿಮೆ ಸಮಯದೊಂದಿಗೆ ಗುರಿತಲುಪಿ ಮಿಂಚಿದರು.

ಎರಡನೇ ದಿನದ ಸ್ಪರ್ಧೆಯಲ್ಲಿ 551 ಸಿಸಿ 850 ಸಿಸಿ ನಡುವಿನ ಸಿಂಗಲ್/ಟ್ವಿನ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತ ಮೋಟಾರ್‌ಸೈಕಲ್‌ಗಳೊಂದಿಗೆ B6 ವಿಭಾಗದ ಮೊದಲ ಸ್ಪರ್ಧೆ ನಡೆಯಿತು. ಇದರಲ್ಲಿ ಅಲ್ತಾಫ್ ಖಾನ್ 11.764 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಈ ವಿಭಾಗದಲ್ಲಿ ಅತಿ ವೇಗದ ಸವಾರರಾಗಿ ಗುರುತಿಸಿಕೊಂಡರು.

ಆದಾಗ್ಯೂ, ಲಾನಿ ಝೆನಾ ಫೆರ್ನಾಂಡಿಸ್ ರೈಡ್ ಮಾಡಿದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಪ್ರೇಕ್ಷಕರ ಗಮನಸೆಳೆಯಿತು. ಇದು ಇಂಡಿಮೊಟಾರ್ಡ್ ರೇಸಿಂಗ್ ಕಿಟ್ ಮೂಲಕ ಟ್ಯೂನ್ ಮಾಡಲಾಗಿದ್ದು, ಇದು ಕೇವಲ 12.145 ಸೆಕೆಂಡುಗಳಲ್ಲಿ ಗುರಿತಲುಪಿತು. ಇದು ಇಂಟರ್‌ಸೆಪ್ಟರ್ 650 ಮೋಟಾರ್‌ಸೈಕಲ್ ಮಾದರಿಯಲ್ಲಿಯೇ ಹೆಚ್ಚಿನ ವೇಗ ಎನ್ನಬಹುದು.

C1 ವಿಭಾಗದಲ್ಲಿ 851 ಸಿಸಿಯಿಂದ 1050ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯದ ಬೈಕ್‌ಗಳ ನಡುವೆ ನಡೆದ ಸ್ಪರ್ಧೆಯಲ್ಲಿ ನ್ಯಾಷನಲ್ ಚಾಂಪಿಯನ್ ಹೇಮಂತ್ ಮುದ್ದಪ್ಪ ತಮ್ಮ ಬಿಎಂಡಬ್ಲ್ಯು ಎಸ್1000 ಆರ್‌ಆರ್ ಮೂಲಕ ಕೇವಲ 9.820 ಸೆಕೆಂಡುಗಳಲ್ಲಿ ಬಿರುಸಿನ ವೇಗದೊಂದಿಗೆ ವಿಜೇತರಾಗಿ ಹೊರಹೊಮ್ಮಿದರು.

ಮುಂದಿನ c2 ವಿಭಾಗದಲ್ಲಿ ಹೇಮಂತ್ ಮುದ್ದಪ್ಪ ಅವರು ಮಂತ್ರ ರೇಸಿಂಗ್ ತಂಡದ ಸುಜುಕಿ ಹಯಾಬುಸಾ ಮೂಲಕ 9.970 ಸೆಕೆಂಡುಗಳಲ್ಲಿ ಗುರಿತಲಪಿದರು. ಇದು 1051 ಸಿಸಿಯಿಂದ 1650ಸಿಸಿ ನಡುವಿನ ಎಂಜಿನ್ ಸಾಮರ್ಥ್ಯವನ್ನು ಹೊಂದಿರುವ ವರ್ಗವಾಗಿತ್ತು.

ವ್ರೊಮ್ 2022 ಸ್ಪರ್ಧೆಯಲ್ಲಿ 1651ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಮೋಟಾರ್ ಸೈಕಲ್‌ಗಳಿಗೆ ವಿಶೇಷ ವಿಭಾಗವನ್ನು ಸಹ ತೆರೆದಿತ್ತು. ಈ ವಿಭಾಗದಲ್ಲಿ ಕೇವಲ ಒಂದೇ ಮೋಟಾರ್ ಸೈಕಲ್ ಮಾತ್ರ ಭಾಗವಹಿಸಿತ್ತು. ಮಂತ್ರ ರೇಸಿಂಗ್ ವಿಭಾಗದ ರೇಸ್ ಟ್ಯೂನ್ ಹೊಂದಿರುವ ಕವಾಸಕಿ ನಿಂಜಾ ಜೆಡ್ಎಕ್ಸ್-14ಆರ್ ಮಾದರಿಯು 10.785 ಸೆಕೆಂಡುಗಳಲ್ಲಿ ಗುರಿತಲುಪಿತು.

F6 ನೇಕೆಡ್ ಓಪನ್ ಬೈಕ್ ವಿಭಾಗದಲ್ಲಿ 11.092 ಸೆಕೆಂಡ್‌ಗಳಲ್ಲಿ ಗುರಿತಲುಪಿದ ಜುಬೈರ್ ಅಲಿ ಜಂಗ್ ಪ್ರಥಮ ಸ್ಥಾನ ಗಳಿಸಿದ್ದು, 550ಸಿಸಿ ಮೇಲ್ಪಟ್ಟ U2 ಅನಿರ್ಬಂಧಿತ ವಿಭಾಗದಲ್ಲಿ 12.357 ಸೆಕೆಂಡುಗಳಲ್ಲಿ ಗುರಿತಲುಪಿ ಗೌತಮ್ ಆರ್ ವಿಜಯಶಾಲಿಯಾದರು.

ಒಟ್ಟಾರೆಯಾಗಿ ಈ ವಿಭಾಗದಲ್ಲಿ ಮೊದಲ ಸ್ಥಾನವನ್ನು ಮಂತ್ರ ರೇಸಿಂಗ್ ವಿಭಾಗದ ಬಿಎಂಡಬ್ಲ್ಯು ಎಸ್1000 ಆರ್‌ಆರ್ ಮೂಲಕ ಹೇಮಂತ್ ಮುದ್ದಪ್ಪ ಅವರು 9.725 ಸೆಕೆಂಡ್‌ಗಳಲ್ಲಿ ಜಯಸಿದ್ದು, ತದನಂತರ ಜುಬೈರ್ ಅಲಿ ಜಂಗ್ ಮತ್ತು ಹಫೀಜುಲ್ಲಾ ಖಾನ್ ಅವರು ಸುಜುಕಿ ಹಯಾಬುಸಾ ಮಾದರಿಗಳ ಮೂಲಕ ಎರಡು ಮತ್ತು ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಎರಡನೇ ದಿನದ ರೇಸಿಂಗ್‌ನಲ್ಲಿ G2 ಮತ್ತು G3 ವಿಭಾಗಗಳಲ್ಲಿನ ಸ್ಪರ್ಧೆಯಲ್ಲಿ ಮಾರುತಿ ಸುಜುಕಿ ಝೆನ್ ಹ್ಯಾಚ್‌ಬ್ಯಾಕ್ ಸೇರಿದಂತೆ ಕೆಲವು ವಿಶಿಷ್ಟ ವಾಹನಗಳನ್ನು ಕಂಡುಬಂದವು. ತದನಂತರ IN1 ಮತ್ತು IN2 ವಿಭಾಗಗಳ ಜೊತೆ P2, P3, P4, P5, P6, P7, P8, ಮತ್ತು P9 ವಿಭಾಗಗಳನ್ನು ಸ್ಪರ್ಧೆ ನಡೆಸಲಾಯ್ತು. ಇದರಲ್ಲಿ 1151ಸಿಸಿಯಿಂದ 5101 ಸಿಸಿ ಗಿಂತಲೂ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಕಾರುಗಳು ರೇಸಿಂಗ್ ಟ್ರ್ಯಾಕ್‌ನಲ್ಲಿ ಸದ್ದು ಮಾಡಿದವು.

ಕಾರುಗಳ ರೇಸಿಂಗ್ ವಿಭಾಗದಲ್ಲಿ ಟ್ಯೂನ್ ಮಾಡಲಾದ ಸ್ಕೋಡಾ ಆಕ್ಟೇವಿಯಾ ವಿಆರ್‌ಎಸ್, ಫೋಕ್ಸ್‌ವ್ಯಾಗನ್ ಪೊಲೊ, ಹೋಂಡಾ ಸಿಟಿ ಸೆಡಾನ್ ಸೇರಿದಂತೆ ಕೆಲವು ಅಪರೂಪದ ಮತ್ತು ವಿಲಕ್ಷಣ ಕಾರು ಮಾದರಿಗಳು ಸಹ ಭಾಗಿಯಾಗಿದ್ದವು. ಹಾಗೆಯೇ ರೇಸಿಂಗ್ ಟ್ಯೂನ್ ಹೊಂದಿರುವ ಆಡಿ ಎ6, ಹಾರ್ಮೋನಿಕ್ಸ್-ಟ್ಯೂನ್ ಮಾಡಿದ ಆಡಿ ಆರ್‌ಎಸ್7, ಪೊರ್ಷೆ ಕಯೆನಿ ಟರ್ಬೊ ಮಾದರಿಗಳು ಸಹ ಗಮನಸೆಳೆದವು.

ಪ್ರಸಕ್ತ ವರ್ಷದ ಡ್ರ್ಯಾಗ್ ರೇಸ್‌ನಲ್ಲಿ ಗಮನಸೆಳೆದ ಇತರೆ ಗಮನಾರ್ಹ ಕಾರುಗಳಲ್ಲಿ ಪೋರ್ಷೆ ಬಾಕ್ಸ್‌ಸ್ಟರ್ 718, ಲಂಬೋರ್ಗಿನಿ ಹುರಾಕನ್, ನಿಸ್ಸಾನ್ ಆಲ್ಫಾ ಜಿಟಿ-ಆರ್, ಆಸ್ಟನ್ ಮಾರ್ಟಿನ್ ವಾಂಟೇಜ್, ಮಿಟ್ಸುಬಿಷಿ ಇವೊ 8, ಸುಬಾರು ಇಂಪ್ರೆಜಾ ಡಬ್ಲ್ಯುಆರ್‌ಎಕ್ಸ್ಐ ಇತ್ಯಾದಿ ಮಾದರಿಗಳು ಹೆಚ್ಚಿನ ಸದ್ದುಮಾಡಿದವು.

ಇನ್ನು 2022ರ ವ್ರೂಮ್ ಡ್ರ್ಯಾಗ್ ರೇಸ್‌ನಲ್ಲಿ ವ್ಹೀಲಿ ವಿಭಾಗವು ಸಹ ಗಮನಸೆಳೆಯಿತು. F6 ವಿಭಾಗದ ಇಂಡಿಯನ್ ವ್ಹೀಲಿ ಕ್ಲಾಸ್ ಅನ್ನು ಅಕ್ಷಯ್ ಶರ್ಮಾ ಅವರು ತಮ್ಮ ಕೆಟಿಎಂ 390 ಮೂಲಕ 15.616 ಸೆಕೆಂಡುಗಳಲ್ಲಿ ಗುರಿತಲುಪಿದರು.

ಈ ಮೂಲಕ ಪ್ರಸಕ್ತ ವರ್ಷದ ವ್ರೂಮ್ ಡ್ರ್ಯಾಗ್ ರೇಸ್‌ನಲ್ಲಿ ಹೇಮಂತ್ ಮುದ್ದಪ್ಪ ಅವರು 'ಫಾಸ್ಟೆಸ್ಟ್ ರೈಡರ್ ಆಫ್ ದಿ ಡೇ' ಮತ್ತು 'ಫಾಸ್ಟೆಸ್ಟ್ ರೈಡರ್ ಫಾರಿನ್ ಬೈಕ್' ಟ್ರೋಫಿಗಳನ್ನು ಪಡೆದರೆ ಮಂತ್ರ ರೇಸಿಂಗ್ ಕಂಪನಿಯು 'ಬೆಸ್ಟ್ ಟ್ಯೂನರ್ ಫಾರಿನ್ ಬೈಕ್' ಟ್ರೋಫಿಯನ್ನು ಪಡೆಯಿತು. ಮತ್ತೊಂದೆಡೆ ಗೌತಮ್ ಆರ್ 'ಫಾಸ್ಟೆಸ್ಟ್ ರೈಡರ್ ಇಂಡಿಯನ್ ಬೈಕ್' ಟ್ರೋಫಿ ಪಡೆದುಕೊಂಡರು.
ಕಾರುಗಳ ವಿಭಾಗದಲ್ಲಿ ವೆಂಕಟ್ ಸಾಯಿ ರೆಡ್ಡಿ ಅವರು 'ದಿನದ ವೇಗದ ಚಾಲಕ' ಮತ್ತು 'ವೇಗದ ವಿದೇಶಿ ಕಾರುಗಳ ಚಾಲಕ' ಟ್ರೋಫಿಗಳನ್ನು ಪಡೆದುಕೊಂಡರೆ 'ಫಾಸ್ಟೆಸ್ಟ್ ಡ್ರೈವರ್ ಇಂಡಿಯನ್ ಕಾರ್ಸ್' ಟ್ರೋಫಿಯು ಪ್ರಣಯ್ ಸೌರಬ್ ಪಾಲಾಯಿತು.

ಟಾಪ್ 3 ವೇಗದ ಮೋಟಾರ್‌ಸೈಕಲ್‌ಗಳು [ಎರಡನೇ ದಿನ]
1. ಹೇಮಂತ್ ಮುದ್ದಪ್ಪ [241]: U2 ವಿಭಾಗ: 9.752 ಸೆಕೆಂಡುಗಳು: ಬಿಎಂಡಬ್ಲ್ಯು ಎಸ್ 1000ಆರ್‌ಆರ್ | ಮಂತ್ರ ರೇಸಿಂಗ್
2. ಹೇಮಂತ್ ಮುದ್ದಪ್ಪ [173]: C1 ವಿಭಾಗ: 9.820 ಸೆಕೆಂಡುಗಳು: ಬಿಎಂಡಬ್ಲ್ಯು ಎಸ್ 1000ಆರ್‌ಆರ್ | ಮಂತ್ರ ರೇಸಿಂಗ್
3. ಹೇಮಂತ್ ಮುದ್ದಪ್ಪ [194]: C2 ವಿಭಾಗ: 9.970 ಸೆಕೆಂಡುಗಳು: ಸುಜುಕಿ ಹಯಾಬುಸಾ | ಮಂತ್ರ ರೇಸಿಂಗ್
ಟಾಪ್ 3 ವೇಗದ ಕಾರುಗಳು
1. ಕೆ ವೆಂಕಟ್ ಸಾಯಿ ರೆಡ್ಡಿ [647]: ಪಿ9 ವರ್ಗ: 11.401 ಸೆಕೆಂಡುಗಳು: ಪೋರ್ಷೆ ಕಯೆನಿ ಟರ್ಬೊ | ಹಾರ್ಮೋನಿಕ್ಸ್
2. ಇಮ್ರಾನ್ ಮಜಿದ್ [555]: P9 ವರ್ಗ: 11.442 ಸೆಕೆಂಡುಗಳು: ನಿಸ್ಸಾನ್ GTR | ಕಿಕ್‌ಶಿಫ್ಟ್
3. ಸೀನ್ ರೋಜರ್ಸ್ [554]: S9 ವರ್ಗ: 11.524 ಸೆಕೆಂಡುಗಳು: ಆಡಿ R8 V10 | ಮಾಡ್‌ಕ್ರೂ

2022ರ ವ್ರೂಮ್ ಡ್ರ್ಯಾಗ್ ಮೀಟ್‌ನಲ್ಲಿ ವಾಹನ ಪ್ರದರ್ಶನ
ವ್ರೂಮ್ ಡ್ರ್ಯಾಗ್ ಮೀಟ್ 6ನೇ ಆವೃತ್ತಿಯಲ್ಲಿ ಡ್ರ್ಯಾಗ್ ರೇಸಿಂಗ್ ಜೊತೆಗೆ ರೇಸಿಂಗ್ ವಾಹನಗಳಿಗೆ ಪೂರಕವಾದ ರೈಡಿಂಗ್ ಉಡುಪುಗಳ ಅದ್ಭುತ ಪ್ರದರ್ಶನ ಕಂಡುಬಂದಿತು. ಥ್ರೊಟಲ್ ಸ್ಟೋರ್ ಕೆಲವು ಆಸಕ್ತಿದಾಯಕ ಟಿ-ಶರ್ಟ್‌ಗಳು, ಸ್ಟಿಕ್ಕರ್‌ಗಳು, ಕೀ ಚೈನ್ ಇತ್ಯಾದಿಗಳನ್ನು ಪ್ರದರ್ಶಿಸಿತು. ಇದರಲ್ಲಿ ಎನ್ಎಂಡಬ್ಲ್ಯು ರೇಸಿಂಗ್ ಸಿದ್ದಪಡಿಸಿರುವ ಆರ್‌ಡಿ350 ಜೊತೆಗೆ ಬೈಕ್ ಕಾರ್ಯಕ್ಷಮತೆಗೆ ಪೂರಕವಾದ ಬಿಡಿಭಾಗಗಳ ಶ್ರೇಣಿಯನ್ನು ಪ್ರದರ್ಶಿಸಿತು.

ಹಾಗೆಯೇ ಇತರೆ ರೇಸಿಂಗ್ ಕಿಟ್‌ಗಳಿಗೆ ಪೂರಕವಾದ ಗ್ಯಾರೇಜ್‌ಗಳು ತಮ್ಮ ಮಾಡಿಫೈ ವಾಹನಗಳನ್ನು ಪ್ರದರ್ಶಿಸಿದವು. ಮೊದಲ ಬಾರಿಗೆ ಪ್ರಸಕ್ತ ವರ್ಷದ ರೇಸಿಂಗ್‌ನಲ್ಲಿ ನಿಸ್ಸಾನ್ ಆರ್32, ಆರ್34 ಮತ್ತು ಆರ್35 ಗಮನಸೆಳೆದವು.
ಇತರೆ ಗಮನಾರ್ಹವಾದ ಕಾರುಗಳಲ್ಲಿ ಆಡಿ ಆರ್‌ಎಸ್6, ದೈತ್ಯಕಾರದ ಕ್ರೋಮ್ ಚಕ್ರಗಳನ್ನು ಹೊಂದಿರುವ ನಿಸ್ಸಾನ್ ಪೆಟ್ರೋಲ್, ಮತ್ತು ಲಂರ್ಬೊಗಿನಿ ಗಲ್ಲಾರ್ಡೊ ಸ್ಪೈಡರ್ ಸಹ ಸೇರಿವೆ.

ವ್ರೂಮ್ ಡ್ರ್ಯಾಗ್ ರೇಸಿಂಗ್ 2022 ಕುರಿತಾಗಿ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ಅತಿ ಹೆಚ್ಚು ಡ್ರ್ಯಾಗ್ ರೇಸಿಂಗ್ ಉತ್ಸಾಹಿಗಳನ್ನು ಹೊಂದಿರುವ ನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಇದು ಅಂತಿಮವಾಗಿ ವ್ರೂಮ್ ನಂತಹ ರೇಸಿಂಗ್‌ಗಳನ್ನು ಹುಟ್ಟುಹಾಕಿದೆ ಎನ್ನಬಹುದು. ಕೋವಿಡ್ ನಿರ್ಬಂಧಗಳಿಂದ ಕಳೆದ ಎರಡು ವರ್ಷಗಳಿಂದ ಮೊಟಕುಗೊಂಡಿದ್ದ ಡ್ರ್ಯಾಗ್ ರೇಸಿಂಗ್ ಇದೀಗ ಮತ್ತೆ ಹೊಸತನದೊಂದಿಗೆ ಆರಂಭವಾಗಿದ್ದು, ಮೋಟಾರ್‌ಸೈಕಲ್ ಪ್ರಿಯರನ್ನು ಸೆಳೆಯುವಲ್ಲಿ ಇದು ಯಶಸ್ವಿಯಾಗಿದೆ ಎನ್ನಬಹುದು.
ಮೊದಲ ದಿನದ ವಿವಿಧ ವಿಭಾಗಗಳ ಫಲಿತಾಂಶ
A1 - Up to 130 CC | ||
Position | Name | Elapsed Time (s) |
1. | R Madhan Kumar | 14.280 |
2. | Mujahid Pasha | 14.509 |
3. | Khalid Pasha | 14.544 |
A2 - 131 to 165 CC | ||
Position | Name | Elapsed Time (s) |
1. | Aiyaz | 13.329 |
2. | Prashanth | 13.463 |
3. | Amir H Badu | 13.552 |
A3 - 350 CC and Above | ||
Position | Name | Elapsed Time (s) |
1. | A Anthony Raj | 12.418 |
2. | Shahrukh Khan | 12.616 |
3. | Nasir Jamal Ansari | 12.730 |
B1 - Up to 165 CC | ||
Position | Name | Elapsed Time (s) |
1. | Mustafa Siraj Khan | 14.936 |
2. | Saurav Karmakar | 15.011 |
3. | Ganesh B | 15.489 |
B2 - 166 to 225 CC
| ||
Position | Name | Elapsed Time (s) |
1. | Deepak N | 13.690 |
2. | Badhusha M | 13.929 |
3. | Aiyaz | 15.020 |
B3 - 226 to 360 CC
| ||
Position | Name | Elapsed Time (s) |
1. | A Shankar Guru | 13.351 |
2. | Abdul Shaik | 13.652 |
3. | Peddu Sriharsha | 14.007 |
B4 - 361 to 550 CC
| ||
Position | Name | Elapsed Time (s) |
1. | Hussain Khan | 12.883 |
2. | Ayiaz | 12.974 |
3. | Attaulla Baig | 13.032 |
B5 - 551 to 850 CC
| ||
Position | Name | Elapsed Time (s) |
1. | Rahil Pillarisetty | 10.758 |
2. | Siddharth Parmar | 10.878 |
3. | Mirza Jahangir Baig | 11.137 |
D2 - 1151 to 1450 CC
| ||
Position | Name | Elapsed Time (s) |
1. | Mohammed Arshad Ali | 17.707 |
D4 - 1651 to 2050 CC
| ||
Position | Name | Elapsed Time (s) |
1. | Mohd Khaja Abraruddin (Hashim) | 14.646 |
D5 - 2051 to 2550 CC
| ||
Position | Name | Elapsed Time (s) |
1. | Vikram Raj | 14.820 |
2. | Vincent Yalangi | 14.857 |
3. | Darshan Mandara Reddy | 15.360 |
D6 - 2551 to 3060 CC
| ||
Position | Name | Elapsed Time (s) |
1. | D Ashwin | 15.270 |
2. | Sundeep Singh Sokhi | 15.598 |
3. | Norton Singh Sokhi | 16.124 |
D8 - 4001 to 5100 CC
| ||
Position | Name | Elapsed Time (s) |
1. | Sumanth HV | 14.327 |
F1 - WIM Upto 390 CC 4 Stroke
| ||
Position | Name | Elapsed Time (s) |
1. | Samantha D Souza | 13.751 |
2. | Sarah Khan | 14.600 |
3. | Ann Jennifer AS | 14.950 |
F4 - JAWA/YEZDI Open
| ||
Position | Name | Elapsed Time (s) |
1. | P Thulasi Ram | 16.709 |
2. | Suprit S Kumar | 17.610 |
3. | Attaulla Baig | 18.354 |
F5 - 4 Stroke Open upto 500cc
| ||
Position | Name | Elapsed Time (s) |
1. | P Thulasi Ram | 12.754 |
2. | Abdul Shaikh | 12.780 |
3. | Attaulla Baig | 12.898 |
G1 - Women in Motorsport Upto 3000 CC
| ||
Position | Name | Elapsed Time (s) |
1. | Uvashri KB | 14.086 |
2. | Veena Patil | 16.860 |
3. | Dr Asna Zain | 17.613 |
S1 - Upto 1150 CC
| ||
Position | Name | Elapsed Time (s) |
1. | Sharath Raj | 18.523 |
2. | Puneeth N | 18.569 |
3. | Salman Khan A | 20.594 |
S2 - 1151 to 1450 CC
| ||
Position | Name | Elapsed Time (s) |
1. | Mohammed Adnan | 17.767 |
2. | Yash Yadav | 17.888 |
3. | Bhuman Kishor Thakkar | 17.896 |
S3 - 1451 to 1650 CC
| ||
Position | Name | Elapsed Time (s) |
1. | Harneet Singh | 17.486 |
2. | Nikhil SN | 19.456 |
S4 - 1651 to 2050 CC
| ||
Position | Name | Elapsed Time (s) |
1. | Aditya JB | 15.890 |
2. | Ritesh G | 16.158 |
3. | Akshay Premraj | 16.682 |
S6 - 2551 to 3060 CC
| ||
Position | Name | Elapsed Time (s) |
1. | Pranay Sowrab TJ | 15.447 |
2. | Akash | 15.555 |
ಎರಡನೇ ದಿನದ ವಿವಿಧ ವಿಭಾಗಗಳ ಫಲಿತಾಂಶ
B6 - Single / Twin 551 to 850 CC
| ||
Position | Name | Elapsed Time (s) |
1. | Altaf Khan | 11.764 |
2. | Zubair Ali Jung | 12.081 |
3. | Lani Zena Fernandez | 12.145 |
C1 - 851 to 1050 CC
| ||
Position | Name | Elapsed Time (s) |
1. | Hemanth Muddappa | 9.820 |
2. | Sean Rogers | 10.139 |
3. | Yenigalla Avinash Chowdary | 10.402 |
C2 - 1051 to 1650 CC
| ||
Position | Name | Elapsed Time (s) |
1. | Hemanth Muddappa | 9.970 |
2. | Harish Naik M | 10.170 |
3. | Hafizullah Khan | 10.207 |
C3 - 1651 CC and Above
| ||
Position | Name | Elapsed Time (s) |
1. | Sundeep Singh Sokhi | 10.785 |
F6 - Naked Open
| ||
Position | Name | Elapsed Time (s) |
1. | Zubair Ali Jung | 11.092 |
2. | Saurabh | 11.471 |
3. | Karthik Ramachandran | 12.188 |
F7 - Indian Wheelie Class
| ||
Position | Name | Elapsed Time (s) |
1. | Akshay Sharma | 15.616 |
2. | Saurabh Parab | 16.829 |
3. | Ashpak Alam | 17.230 |
G2 - Hatchback Open
| ||
Position | Name | Elapsed Time (s) |
1. | Mohammed Haseeb | 15.563 |
2. | Mohammed Mustafa | 16.006 |
3. | Vasudevan C | 18.099 |
G3 - Exhibition Class
| ||
Position | Name | Elapsed Time (s) |
1. | Karthikeyan CS | 12.590 |
2. | Amol Sawant | 13.362 |
IN1 - Upto 3060 CC
| ||
Position | Name | Elapsed Time (s) |
1. | Yajur | 12.845 |
2. | Abhishek U | 13.246 |
3. | Vasudevan C | 13.806 |
IN2 - 3061 CC and above
| ||
Position | Name | Elapsed Time (s) |
1. | K Venkat Sai Reddy | 11.627 |
2. | Mayank | 12.738 |
3. | JP Suman Naidu | 12.989 |
P2 - 1151 to 1450 CC
| ||
Position | Name | Elapsed Time (s) |
1. | Narayana Swamy | 15.915 |
2. | Hussain Mujawar | 16.490 |
3. | Abhishek U | 16.547 |
P3 - 1451 to 1650 CC
| ||
Position | Name | Elapsed Time (s) |
1. | Ponanna M S | 15.029 |
2. | Praveen Kumar | 15.243 |
3. | Faraaz Ahmed Khan | 15.331 |
P4 - 1651 to 2050 CC
| ||
Position | Name | Elapsed Time (s) |
1. | Adnan Khan | 16.148 |
2. | Aditya Sharma | 16.375 |
3. | Mohammed Shaik Salman | 16.492 |
P5 - 2051 to 2550 CC
| ||
Position | Name | Elapsed Time (s) |
1. | Abhishek U | 14.027 |
2. | Ganesan | 17.505 |
P6 - 2551 to 3060 CC
| ||
Position | Name | Elapsed Time (s) |
1. | Uvashri KB | 13.517 |
2. | Amol Sawant | 13.864 |
3. | Syed Omar | 15.321 |
P7 - 3061 to 4000 CC
| ||
Position | Name | Elapsed Time (s) |
1. | Karthik KV | 12.839 |
2. | Rahul R Kodidini | 13.031 |
3. | Mithun M | 13.069 |
P8 - 4001 to 5100 CC
| ||
Position | Name | Elapsed Time (s) |
1. | Mayank | 12.487 |
2. | Karthikeyan CS | 12.501 |
3. | Raoul | 13.592 |
P9 - 5101 CC and above
| ||
Position | Name | Elapsed Time (s) |
1. | K Venkat Sai Reddy | 11.401 |
2. | Imran Majid | 11.442 |
3. | Karthikeyan CS | 11.967 |
R1 - Unrestricted Class
| ||
Position | Name | Elapsed Time (s) |
1. | Sean Rogers | 11.541 |
2. | Karthikeyan CS | 11.616 |
3. | K Venkat Sai Reddy | 11.734 |
S7 - 3061 to 4000 CC
| ||
Position | Name | Elapsed Time (s) |
1. | Kiran Vijayakumar | 12.700 |
2. | Prem N | 13.818 |
3. | Amith Ashokan | 14.239 |
S8 - 4001 to 5100 CC
| ||
Position | Name | Elapsed Time (s) |
1. | Raoul Kengal Vardhan | 13.325 |
2. | Madhan Babu | 13.757 |
S9 - 5101 CC and above
| ||
Position | Name | Elapsed Time (s) |
1. | Sean Rogers | 11.524 |
2. | Anup Boppana | 11.597 |
3. | K Venkat Sai Reddy | 11.811 |
U1 - Upto 550 CC
| ||
Position | Name | Elapsed Time (s) |
1. | Goutham R | 12.357 |
2. | Nasir Jamal Ansari | 12.430 |
3. | Mujahid Pasha | 12.441 |
U2 - 551 CC and Above
| ||
Position | Name | Elapsed Time (s) |
1. | Hemanth Muddappa | 9.752 |
2. | Zubair Ali Jung | 10.026 |
3. | Hafizullah Khan | 10.086 |