ಈಕೆ ಮಾಡೆಲಿಂಗ್‌ಗೂ ಸೈ; ರೇಸಿಂಗ್‌ಗೂ ಜೈ

By Nagaraja

ಆಕೆಯ ಹೆಸರು ಸುಸಿ ವೂಲ್ಫ್ (Susie Wolff). ಸ್ಕಾಟ್ಲೆಂಡ್‌ನ ಮಹಿಳಾ ರೇಸಿಂಗ್ ಡ್ರೈವರ್ ಆಗಿರುವ ಈಕೆ ಸದ್ಯದಲ್ಲಿ ಬಿಬಿಸಿ ಸಾಕ್ಷ್ಯಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಮೂಲಕ ಸ್ಪೋರ್ಟ್ಸ್ ಹಾಗೂ ಫಿಲ್ಮ್‌ನಲ್ಲಿ ಕಾಣಿಸಿಕೊಳ್ಳಲಿರುವ ಏಕ ಮಹಿಳಾ ರೇಸರ್ ಎನಿಸಿಕೊಳ್ಳಲಿದ್ದಾರೆ. ಇನ್ನು ವಿಶೇಷವಾದ ಸಂಗತಿ ಏನೆಂದರೆ ಬಾಫ್ತಾ (BAFTA) ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ ಡೇವಿಡ್ ಈಕೆಯ ಸಹೋದರನಾಗಿದ್ದು, ಸ್ವತ: ಅವರೇ ಚಿತ್ರ ನಿರ್ಮಿಸುತ್ತಿದ್ದಾರೆ.

30 ಹರೆಯದ ಸುಸಿ ರೇಸಿಂಗ್‌ನಲ್ಲಿ ಸಕ್ರಿಯವಾಗಿದ್ದಾರೆ. ಹಾಗೆಯೇ ಆಸ್ಟ್ರೀಯಾದ ರೇಸಿಂಗ್ ಡ್ರೈವರ್ ಆದ ಟೊಟೊ ವೂಲ್ಫ್ ವರಿಸಿಕೊಳ್ಳುವ ಮೂಲಕ ರೇಸಿಂಗ್ ಜಗತ್ತಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

Formula One female test driver Susie Wolff

ಸಾಮಾನ್ಯವಾಗಿ ಚಲನಚಿತ್ರ ರಂಗದಲ್ಲಿ ಪುರುಷ ಪ್ರಾಬಲ್ಯ ಹೆಚ್ಚಿರುತ್ತದೆ. ಈ ನಡುವೆ ತಮ್ಮ ಪ್ರತಿಭೆ ತೋರ್ಪಡಿಸಲು ಸುಸಿ ಮುಂದಾಗುತ್ತಿದ್ದಾರೆ.

Formula One female test driver Susie Wolff

ಸುಸಿ ಪ್ರಕಾರ, ಪುರುಷರ ವಿರುದ್ಧ ಮಹಿಳೆಯರೇ ಮೇಲು ಎಂಬುದನ್ನು ಸಾಬೀತುಪಡಿಸಲು ರೇಸಿಂಗ್ ಮಾಡುತ್ತಿಲ್ಲ. ಬದಲಾಗಿ ರೇಸಿಂಗ್ ತನ್ನ ಸರ್ವಸ್ವ ಎಂದಿದ್ದಾರೆ.

Formula One female test driver Susie Wolff

ಟೆಸ್ಟ್ ಡ್ರೈವರ್ ಆಗಿರುವ ಸುಸಿ, ಎಫ್1 ರೇಸಿಂಗ್ ಜಗತ್ತಿನಲ್ಲಿರುವ ಏಕ ಮಾತ್ರ ಮಹಿಳಾ ಡ್ರೈವರ್ ಆಗಿದ್ದಾರೆ. ಇದಕ್ಕೂ ಮೊದಲು 2012ರಲ್ಲಿ ಸ್ಪೇನ್‌ನ ಮರಿಯಾ ಡಿ ವಿಲ್ಲೊಟಾ ರೇಸಿಂಗ್ ದುರ್ಘಟನೆಯೊಂದರಲ್ಲಿ ಬಲಗಣ್ಣನ್ನು ಕಳೆದುಕೊಂಡಿದ್ದರು. ಆ ಬಳಿಕ ರೇಸಿಂಗ್‌ನಿಂದ ನಿವೃತ್ತಿ ಹೊಂದಿದ್ದರು.

Formula One female test driver Susie Wolff

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಸುಸಿ, ಮರಿಯ ತನ್ನ ಪಾಲಿಗೆ ಸ್ಪೂರ್ತಿಯಾಗಿದ್ದು, ತಾನೀಗ ಆಕೆಯನ್ನು ಪ್ರತಿನಿಧಿಸುತ್ತಿದ್ದೇನೆ ಎಂದಿದ್ದಾರೆ.

Formula One female test driver Susie Wolff

ಇದುವರೆಗೆ ಒಟ್ಟು ಐದು ಮಹಿಳಾ ಡ್ರೈವರ್‌ಗಳು ಫಾರ್ಮುಲಾ ಒನ್ ರೇಸಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಬ್ರಿಟ್ ಡಿವಿನಾ ಕಾಲಿಕ ಕೂಡಾ ಸೇರಿದ್ದಾರೆ. 1978ರ ದಕ್ಷಿಣ ಅಮೆರಿಕಾ ಸ್ಪರ್ಧೆಯಲ್ಲಿ ಅರ್ಹತಾ ಸುತ್ತು ಗೆಲ್ಲುವಲ್ಲಿ ಈಕೆ ವಿಫಲವಾಗಿದ್ದರು.

Formula One female test driver Susie Wolff

ಫಾರ್ಮುಲಾ ಒನ್ ಜಗತ್ತಿನ ದಿಗ್ಗಜ ಲೆವಿಸ್ ಹ್ಯಾಮ್ಯಿಲ್ಟನ್ ಹಾಗೂ ರೇಸಿಂಗ್ ಲೆಜೆಂಡ್ ಡೇವಿಡ್ ಕೌಲ್‌ಥಾರ್ಡ್ ಕೂಡಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Formula One female test driver Susie Wolff

ಪ್ರಸ್ತುತ ತನ್ನ ಪತಿಯ ಜತೆ ಸ್ವಿಜರ್ಲೆಂಡ್‌ನಲ್ಲಿ ವಾಸಿಸುತ್ತಿರುವ ಸುಸಿ, ಚಿತ್ರದಲ್ಲಿ ಅಭಿನಯಿಸುವುದು ಕಠಿಣವಾದ ಕೆಲಸ. ಹಾಗಿದ್ದರೂ ಮೋಜಿನಿಂದ ಕೂಡಿರಲಿದೆ ಎಂದಿದ್ದಾರೆ.

 Susie Wolff

Susie Wolff

 Susie Wolff

Susie Wolff

 Susie Wolff

Susie Wolff

 Susie Wolff

Susie Wolff

 Susie Wolff

Susie Wolff

 Susie Wolff

Susie Wolff

 Susie Wolff

Susie Wolff

 Susie Wolff

Susie Wolff

 Susie Wolff

Susie Wolff

 Susie Wolff

Susie Wolff

More from DriveSpark

Article Published On: Friday, February 22, 2013, 10:06 [IST]
English summary
Formula One female test driver Susie Wolff has announced that she will appear in a BBC documentary this spring about her life as the only woman in F1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+