ವಿಡಿಯೋ: ಫಾರ್ಚೂನರ್ ಮತ್ತು ಮಹೀಂದ್ರಾ ನಡುವೆ ಡಿಕ್ಕಿ- ಮೂವರು ದುರ್ಮರಣ

Written By:

ನಿಯಂತ್ರಣ ತಪ್ಪಿದ ಟೊಯೊಟಾ ಫಾರ್ಚೂನರ್ ಕಾರೊಂದು ಮಹೀಂದ್ರಾ ಎಕ್ಸ್‌ಯುವಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಪಂಜಾಬ್‌ನ ಅಮೃತ್‌ಸರ್ ಬಳಿಯೂ ನಿನ್ನೆಯಷ್ಟೇ ರಾಷ್ಟ್ರೀಯ ಹೆದ್ದಾರಿ 1ರಲ್ಲಿ ಭೀಕರ ಅಪಘಾತ ನಡೆದಿದೆ.

ನಿಯಂತ್ರಣ ತಪ್ಪಿದ ಫಾರ್ಚೂನರ್ ಕಾರು ಚಾಲಕ ಮಹೀಂದ್ರಾ ಎಕ್ಸ್‌ಯುವಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಮಹೀಂದ್ರಾದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಘಟನೆ ಕುರಿತು ತನಿಖೆ ನಡೆಸಿದಾಗ ರಸ್ತೆಯ ಪಕ್ಕದಲ್ಲಿದ್ದ ಹೋಟೆಲ್ ಒಂದರ ಸಿಸಿಟಿವಿಯಲ್ಲಿ ಅಪಘಾತಗಳು ದೃಶ್ಯಗಳು ಸೆರೆಯಾಗಿವೆ.

ಫಾರ್ಚೂನರ್ ಕಾರು ಟೈರ್ ಬಸ್ಟ್ ಆದ ಹಿನ್ನೆಲೆ ಈ ದುರಂತ ನಡೆದಿದ್ದು, ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಮಹೀಂದ್ರಾ ಕಾರಿಗೆ ಡಿಕ್ಕಿ ಹೊಡೆದಿದೆ.

ಇನ್ನು ಘಟನೆಯಲ್ಲಿ ಫಾರ್ಚೂನರ್ ಕಾರು ಚಾಲಕ ಬದುಕುಳಿದಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಗೆ ನಿಖರ ಕಾರಣ ಏನು ಎನ್ನುವ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
Read in Kannada about three dead in Toyota Fortuner and Mahindra XUV 500 clash.
Please Wait while comments are loading...

Latest Photos