ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಎಫೆಕ್ಟ್ ಹೇಗಿದೆ ನೋಡಿ... ಕಂಡಕ್ಟರ್ ಕನಸಲ್ಲೂ ಊಹಿಸಿರೋಲ್ಲ!

ಕರ್ನಾಟಕದಲ್ಲಿ ಸದ್ಯ ಶಕ್ತಿ ಯೋಜನೆಯದ್ದೇ ಚರ್ಚೆ, ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಯೋಜನೆ ತಂದಿರುವುದು ಬಹುಶಾಃ ಇದೇ ಮೊದಲು. ಇತ್ತೀಚೆಗೆ ಈ ಶಕ್ತಿ ಯೋಜನೆಯ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದ್ದಾರೆ. ಆದ್ರೆ ಇದರ ಎಫೆಕ್ಟ್ ಹೇಗಿದೆ ಎಂಬುದನ್ನು ತಿಳಿಯಲು ಹಲವರಿಗೆ ಕುತೂಹಲವಿರಬಹುದಲ್ಲವೇ ಹಾಗಾದ್ರೆ ಈ ವಿಡಿಯೋ ನೋಡಿ.

ಸಾಮಾನ್ಯ ಜನ ಬಸ್ ಪಾಸ್ ಇದ್ರೆನೇ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಇಲ್ಲದಿದ್ದರೇ ಪಾಸ್‌ ಕೊಂಡ ಹಣಕ್ಕೆ ಬೆಲೆ ಇರುವುದಿಲ್ಲ ಎಂದು ಯೋಚಿಸುತ್ತಾರೆ. ಅಂಥದರಲ್ಲಿ ಈಗ ಉಚಿತ ಬಸ್ ಪ್ರಯಾಣ ಅಂದ್ರೆ ಸುಮ್ಮನಿರಲು ಸಾಧ್ಯವೇ? ಹೌದು ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣವು ಮಹಿಳೆಯರಿಗೆ ಕುತೂಹಲ ಹೆಚ್ಚಿಸಿದೆ.

free-bus-travel

ಮನೆಗಳಲ್ಲಿ ಸುಮ್ಮನಿದ್ದವರು ಕೂಡ ಬಸ್‌ಗಳಲ್ಲಿ ಪ್ರಯಾಣ ಬೆಳೆಸಲು ಹೊರಬಂದಿದ್ದಾರೆ. ಇವುಗಳ ಮೇಲೆ ಹಲವರು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಕರ್ನಾಟಕದಾದ್ಯಂತ ಸ್ಪೆಷಲ್ ಬಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರದ್ದೇ ಸದ್ದು, ಕರ್ನಾಟಕದಾದ್ಯಂತ ಎಲ್ಲಿಗಾದರೂ ಪ್ರಯಾಣಿಸುವ ಅವಕಾಶವಿರುವುದರಿಂದ ಬಸ್ಸುಗಳು ಭಾಗಶಃ ಮಹಿಳೆಯರಿಂದಲೇ ತುಂಬುತ್ತಿವೆ.

ಇದರ ಎಫೆಕ್ಟ್ ಹೇಗಿದೆ ಎಂಬುದಕ್ಕೆ ಸಣ್ಣ ಜಲಕ್ ನೀಡುವ ವಿಡಿಯೋವೊಂದು ವೈರಲ್ ಆಗಿದ್ದು, ತುಂಬಾ ತಮಾಷೆಯಾಗಿದೆ. ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕಂಡಕ್ಟರ್‌ಗೇ ಜಾಗವಿಲ್ಲದಿರುವುದು ವಿಪರ್ಯಾಸ. ಇದು ಕರ್ನಾಟಕದ ಯಾವ ಭಾಗದಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲವಾದ್ರೂ ಸಖತ್ ವೈರಲ್ ಆಗುತ್ತಿದೆ. ಬಸ್‌ನಲ್ಲಿ ಕಾಲಿಡಲು ಸಹ ಜಾಗವಿಲ್ಲದ ದೃಷ್ಯಗಳನ್ನು ಇಲ್ಲಿ ಕಾಣಬಹುದು.

ವೈರಲ್ ವಿಡಿಯೋದಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಪೂರ್ಣ ಮಹಿಳೆಯರು ತುಂಬಿಕೊಂಡಿದ್ದು, ಆಲ್ಲೊಬ್ಬರು ಇಲ್ಲೊಬ್ಬರು ಪುರುಷರನ್ನು ಕಾಣಬಹುದು. ಹಾಗೆಯೇ ಇಲ್ಲಿ ತಮಾಷೆಯ ವಿಷಯವೆಂದರೆ ಕಂಡೆಕ್ಟರ್ ಸೀಟಿನ ಮೇಲೆ ಹತ್ತಿ ಕುಳಿತಿರುವುದು. ಪ್ರಯಾಣಿಕರನ್ನು ನಿಯಂತ್ರಿಸಲಾಗದೇ ಕಂಡಕ್ಟರ್ ಪರದಾಡುವ ದೃಷ್ಯಗಳನ್ನು ಇಲ್ಲಿ ನೋಡಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಾರಿಗೆ ಇಲಾಖೆಯ ಪ್ರಕಾರ ಕಳೆದ ಮಂಗಳವಾರದಂದು (13-06-2023) KSRTC ನಲ್ಲಿ 13,97,665 ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. BMTC ನಲ್ಲಿ 20,56,856 ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. NWKRTC ನಲ್ಲಿ 11,08,930 ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. KKRTC ನಲ್ಲಿ 5,89,318 ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿರುವುದಾಗಿ ಸಾರಿಗೆ ಇಲಾಖೆ ತಿಳಿಸಿದೆ.

ಅಲ್ಲಿಗೆ ಕರ್ನಾಟಕದಾದ್ಯಂತ ಒಟ್ಟು 51,52,769 ಮಂದಿ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ. ಈ ಉಚಿತ ಪ್ರಯಾಣದ ಖರ್ಚು 10,82,02,191 ರೂ. ಆಗಿದೆ ಎಂದು ಇಲಾಖೆ ತಿಳಿಸಿದೆ. ಒಟ್ಟಾರೆ ಮಹಿಳೆಯರಿಗೆ ನೀಡಲಾಗಿರುವ ಈ ಸೌಲಭ್ಯವನ್ನು ಯಾರೂ ಕೂಡ ನಿರ್ಲಕ್ಷಿಸುತ್ತಿಲ್ಲ ಎಂಬುದು ಈ ಅಂಕಿ ಅಂಶಗಳನ್ನು ನೊಡಿದ್ರೆ ತಿಳಿಯುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ಗಳಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.

video Source: https://www.msn.com/en-in/video/news/karnataka-news-karnataka-bus-free-bus-service-for-women-in-karnataka-leads-to-overcrowding/vi-AA1cwWyf?ocid=msedgntp&cvid=b0f76534ec3e4a8a9c01b78e77f5e889&ei=43

Article Published On: Wednesday, June 14, 2023, 16:39 [IST]
English summary
Free bus travel for women viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+