ಹಣದ ವಿಚಾರವಾಗಿ ಜಗಳ: ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಕಾರಿಗೆ ಬೆಂಕಿಯಿಟ್ಟ ಸ್ನೇಹಿತರು

ಬರೋಬ್ಬರಿ 1 ಕೋಟಿ ಬೆಲೆಯ ಲ್ಯಾಂಬೊರ್ಘಿನಿ ಗಲ್ಲಾರ್ಡೊ ಸೂಪರ್ ಕಾರ್‌ ಬೆಂಕಿಗೆ ಆಹುತಿಯಾದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಹಳದಿ ಬಣ್ಣದ ಲ್ಯಾಂಬೊರ್ಘಿನಿ ಸೂಪರ್ ಕಾರು ಬೆಂಕಿಯಲ್ಲಿ ಸುಡುವ ವೀಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಈ ಸೂಪರ್ ಕಾರ್ ಅನ್ನು ಸ್ನೇಹಿತರ ಗುಂಪೊಂದು ಸುಟ್ಟುಹಾಕಿದೆ.

ಹಣದ ವಿಚಾರವಾಗಿ ಪುಂಡರ ಗುಂಪು ಸೇಡು ತೀರಿಸಿಕೊಳ್ಳಲು, ಕಾನೂನನ್ನು ಮೀರಿ ಈ ಮೂರ್ಖ ಕೆಲಸವನ್ನು ಮಾಡಿದ್ದಾರೆ. ದುಬಾರಿ ಲ್ಯಾಂಬೊರ್ಘಿನಿ ಗಲ್ಲಾರ್ಡೊ ಸಾರ್ವಜನಿಕ ರಸ್ತೆಯ ಮಧ್ಯದಲ್ಲಿ ಬೆಂಕಿಗೆ ಆಹುತಿಯಾದ ವೀಡಿಯೊವನ್ನು ಕಾರ್ ಕ್ರೇಜಿ ಇಂಡಿಯಾ ಎಂಬ ಖಾತೆಯು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಇದು ಮೊದಲ ತಲೆಮಾರಿನ ಲ್ಯಾಂಬೊರ್ಘಿನಿ ಗಲ್ಲಾರ್ಡೊ ಸ್ಪೈಡರ್ ಸೂಪರ್ ಕಾರ್ ಆಗಿದೆ.

friends-set-fire-to-lamborghini-after-quarreling-over-money

ಇದು ಹೈದರಾಬಾದ್ ಮೂಲದ ನೀರಜ್ ಎಂಬ ವ್ಯಕ್ತಿಗೆ ಸೇರಿದ್ದು, ಇವರು ಕಾರನ್ನು ಮಾರಾಟ ಮಾಡಲು ನೋಡುತ್ತಿದ್ದರು. ಅದಕ್ಕಾಗಿ, ಖರೀದಿದಾರನನ್ನು ಹುಡುಕುವ ಮೂಲಕ ಸಹಾಯ ಮಾಡುವಂತೆ ತನ್ನ ಸ್ನೇಹಿತರನ್ನು ಕೇಳಿದ್ದರು ಎಂದು ತಿಳಿದುಬಂದಿದೆ. ಇದಾದ ಸ್ವಲ್ಪ ದಿನಗಳ ನಂತರ, ನೀರಜ್ ಅವರ ಸ್ನೇಹಿತರಾದ ಅಮನ್ ಹೈದರ್ ಅವರನ್ನು ಅಹ್ಮದ್ ಎಂಬ ಇನ್ನೊಬ್ಬ ಸ್ನೇಹಿತ ಸಂಪರ್ಕಿಸಿದ್ದರು.

ಅಮನ್ ಅವರ ಸ್ನೇಹಿತ ಅಹ್ಮದ್ ಅವರು ಈ ಸೂಪರ್ ಕಾರ್ ಖರೀದಿಸಲು ಆಸಕ್ತಿ ಹೊಂದಿರುವುದಾಗಿ ಹೇಳಿದ್ದರು. ಆದ್ದರಿಂದ ಏಪ್ರಿಲ್ 13ರ ಸಂಜೆ ಖರೀದಿ ಬಗ್ಗೆ ವಿಚಾರಿಸಲು ಇಲ್ಲಿನ ಮಾಮಿಡಿಪಲ್ಲಿಯಲ್ಲಿರುವ ತೋಟದ ಮನೆಗೆ ಕಾರನ್ನು ತರಲು ಹೇಳಿದ್ದರು. ಅಮನ್, ಹಮ್ದಾನ್ ಎಂಬ ಇನ್ನೊಬ್ಬ ಸ್ನೇಹಿತನೊಂದಿಗೆ ಅಹ್ಮದ್‌ಗೆ ತೋರಿಸಲು ಕಾರನ್ನು ತೆಗೆದುಕೊಂಡು ಹೋಗಿದ್ದರು.

friends-set-fire-to-lamborghini-after-quarreling-over-money

ಅವರು ಮಾಮಿಡಿಪಲ್ಲಿ ವಿವೇಕಾನಂದ ಜಂಕ್ಷನ್ ಅನ್ನು ದಾಟಿ ತೋಟದ ಮನೆಯತ್ತ ತಿರುಗುವ ಬದಲು, ಅವರು ಹೈದರಾಬಾದ್ ವಿಮಾನ ನಿಲ್ದಾಣ ಮಾರ್ಗದ ಕಡೆಗೆ ತಿರುಗಿದ್ದರು. ಏಕೆಂದರೆ ಕಾರು ಮಾಲೀಕ ನೀರಜ್ ಅವರೊಂದಿಗೆ ಅಹ್ಮದ್‌ಗೆ ಈ ಹಿಂದೆ ಹಣದ ವಿಚಾರವಾಗಿ ಜಗಳವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರನ್ನು ತೋರಿಸಲು ಬಾರದ ಕಾರಣ ಅಹ್ಮದ್' ಸ್ನೇಹಿತನಾದ ಅಮನ್ ಅವರನ್ನು ಸಂಪರ್ಕಿಸಿ, ಸ್ಪೋರ್ಟ್ಸ್ ಕಾರಿನ ಮಾಲೀಕ ನೀರಜ್, ತಮಗೆ ಹಣ ನೀಡಬೇಕಾಗಿದೆ ಎಂದು ಹೇಳಿದ್ದಾರೆ. ಈ ಸಂಭಾಷಣೆಯ ಸಮಯದಲ್ಲಿ, ಅಹ್ಮದ್ ಮತ್ತು ಆತನ ಸ್ನೇಹಿತರ ಗುಂಪು ಕಾರು ಇರುವ ಸ್ಥಳಕ್ಕೆ ಹುಡುಕಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

friends-set-fire-to-lamborghini-after-quarreling-over-money

ಈ ವೇಳೆ ಸೇಡು ತೀರಿಸಿಕೊಳ್ಳಲು ಪೆಟ್ರೋಲ್ ಸುರಿದು ಲ್ಯಾಂಬೊರ್ಘಿನಿಯನ್ನು ಸುಟ್ಟುಹಾಕಿದ್ದಾರೆ ಎಂದು ಸದ್ಯ ಪಹಾಡಿ ಶರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ, ಅಹ್ಮದ್ ಅಥವಾ ಈ ಸೂಪರ್ ಕಾರ್ ಅನ್ನು ಸುಟ್ಟುಹಾಕಿದ ಗುಂಪಿನ ಯಾವುದೇ ಸದಸ್ಯರನ್ನು ಈವರೆಗೆ ಪೊಲೀಸರು ಬಂಧಿಸಿಲ್ಲ.

ಮೇಲೆ ಹೇಳಿದ ಲ್ಯಾಂಬೊರ್ಘಿನಿ ಗಲ್ಲಾರ್ಡೊ ಸ್ಪೈಡರ್ ಕಾರು ಮೊದಲ ತಲೆಮಾರಿನ ಮಾದರಿಯಾಗಿದ್ದು, ಇದನ್ನು "ಪ್ರಿ ಎಲ್ ಪಿ" ಗಲ್ಲಾರ್ಡೊ ಎಂದೂ ಕರೆಯಲಾಗುತ್ತದೆ. ಇದು 5.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ವಿ 10 ಎಂಜಿನ್ ಹೊಂದಿದೆ. ಈ ಎಂಜಿನ್ 513 ಬಿಹೆಚ್‌ಪಿ ಪವರ್ ಮತ್ತು 510 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದನ್ನು ಇ-ಗೇರ್ ಮತ್ತು ಆರು-ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ನೀಡಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 16, 2024, 8:30 [IST]
English summary
Friends set fire to lamborghini after quarreling over money
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+