ಪೆಟ್ರೋಲ್ ಮಿತವ್ಯಯ; ಜನಪ್ರತಿನಿಧಿಗಳಿಗೆ ಬಾಧಕವಲ್ಲವೇ?

By Nagaraja

ದೇಶದ್ಯಾಂತ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪೆಟ್ರೋಲ್ ಪಂಪ್‌ಗಳನ್ನು ರಾತ್ರಿ ಸಮಯದಲ್ಲಿ ಬಂದ್ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಕೊನೆಗೂ ಕೈಬಿಟ್ಟಿದೆ. ದೇಶದ್ಯಾಂತ 24 ಗಂಟೆಯೂ ಇಂಧನ ಪೂರೈಸಲು ಕಠಿಣವಾಗಿದ್ದರಿಂದ ಪೆಟ್ರೋಲ್ ಬಳಕೆ ಪ್ರಮಾಣ ತಗ್ಗಿಸುವ ಕುರಿತು ಸರಕಾರ ಯೋಚನೆ ನಡೆಸಿತ್ತು. ಈ ಮುಖಾಂತರ ರುಪಾಯಿ ಮೌಲ್ಯ ಕುಸಿತವನ್ನು ತಡೆಗಟ್ಟುವುದರ ಜೊತೆಗೆ ಆರ್ಥಿಕತೆಗೆ ಉತ್ತೇಜನ ನೀಡುವ ಗುರಿ ಹೊಂದಿತ್ತು.

ಆದರೆ ಈ ಪ್ರಸ್ತಾಪದಿಂದ ದೇಶದ ಆರ್ಥಿಕ ಪರಿಸ್ಥಿತಿ ಹದೆಗೆಡಲಿದೆಯೆಂದು ಬೊಟ್ಟು ಮಾಡಿ ತೋರಿಸಿರುವ ವಿಪಕ್ಷಗಳು, ಸಂಸತ್‌ನಲ್ಲಿ ಭಾರಿ ಗದ್ದಲವೆಬ್ಬಿಸಿತ್ತು. ಅಂತೂ ಇಂತೂ ಪೆಟ್ರೋಲ್ ಸಾಧಕ ಬಾಧಕಗಳನ್ನು ಪರಿಗಣಿಸಿರುವ ಸಚಿವಾಲಯ ಡೀಸೆಲ್ ದರ ಏರಿಕೆ ಪ್ರಸ್ತಾಪದೊಂದಿಗೆ ರಾತ್ರಿ ವೇಳೆ ಪೆಟ್ರೋಲ್ ಬಂಕ್ ಬಂದ್ ಮಾಡುವ ಯೋಜನೆಯಿಂದ ಹಿಂದೆ ಸರಿದಿದೆ.

ಪೆಟ್ರೋಲ್ ಬಳಕೆ ಕಡಿತಗೊಳಿಸಲು ಸರಕಾರ ಬೃಹತ್ ಅಭಿಯಾನಕ್ಕೆ ಹೊರಟಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ. ಸಣ್ಣ ದೂರದ ಪ್ರದೇಶಗಳಿಗೂ ಕಾರು, ಬೈಕ್ ಓಡಾಟ ನಿಲ್ಲಿಸಬೇಕೆಂಬ ಪ್ರಸ್ತಾಪವನ್ನು ಸರಕಾರ ಹೊಂದಿದೆ. ಹಾಗೆಯೇ ಮಹಾನಗರಗಳಲ್ಲಿ ಸೈಕಲ್ ಬಳಕೆಗೆ ಹೆಚ್ಚು ಪ್ರೋತ್ಸಾಹ ನೀಡುವ ಯೋಜನೆ ಹೊಂದಿದೆ.

ಇವೆಲ್ಲವೂ ಜನಸಾಮ್ಯಾನರ ವಿಚಾರವಾದರೆ ಸ್ವತ: ರಾಜಕಾರಣಿಗಳ ಬೆಂಗಾವಾಲು ವಾಹನಗಳಿಗಾಗಿಯೇ ಭಾರಿ ಪ್ರಮಾಣದಲ್ಲಿ ಪೆಟ್ರೋಲ್ ಪೋಲು ಮಾಡಲಾಗುತ್ತಿದೆ ಎಂಬುದನ್ನು ಸರಕಾರ ಮರೆತಂತಿದೆ. ರಾಜಕಾರಣಿಗಳ ಹಿಂಬಾಲಕರಾಗಿ ಬರುವ ಸಾಲು ಸಾಲು ಕಾರುಗಳಿಗಾಗಿ ದುಂದು ವೆಚ್ಚ ಮಾಡಲಾಗುತ್ತಿದೆ. ಪೆಟ್ರೋಲ್ ಮಿತವ್ಯಯ ಮಾಡಲು ಘೋಷಣೆ ಕೂಗುತ್ತಿರುವ ಜನಪ್ರತಿನಿಧಿಗಳಿಂದಲೇ ಇಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಪೋಲಾಗುತ್ತಿರುವುದು ಭಾರಿ ವಿರೋಧಕ್ಕೆ ಕಾರಣವಾಗಿದೆ.

ಪ್ರಧಾನಿ ಮನಮೋಹನ್ ಸಿಂಗ್

ಪ್ರಧಾನಿ ಮನಮೋಹನ್ ಸಿಂಗ್

ವೈಯಕ್ತಿಕವಾಗಿ ದೇಶದ ಪ್ರಧಾನಿ ಮನಮೋಹನ್ ಸಿಂಗ್ ಬಳಿ ಮಾರುತಿ ಆಲ್ಟೊ 800 ಕಾರಿರುವುದು ನಿಜ. ಆದರೆ ಅಧಿಕೃತ ಪಯಣಕ್ಕಾಗಿ 10 ವಾಹನಗಳು ಬೆಂಗಾವಲು ಪಡೆಯಾಗಿ ಸುತ್ತುತ್ತಿರುತ್ತವೆ. ಈ ಪೈಕಿ ಎರಡು ಬಿಎಂಡಬ್ಲ್ಯು 7 ಸಿರೀಸ್ ಸೆಡಾನ್, ಆರು ಬಿಎಂಡಬ್ಲ್ಯು ಎಕ್ಸ್3 ಮತ್ತು ಮರ್ಸಿಡಿಸ್ ಬೆಂಝ್ ಅಂಬುಲೆನ್ಸ್ ಸೇರಿವೆ.

ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್

ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್

ಇತರ ಹಿಂದುಳಿದ ವರ್ಗದ ಧ್ಯೇಯವಾಕ್ಯದೊಂದಿಗೆ ಸೈಕಲ್‌ನಲ್ಲಿ ಅಧಿಕಾರ ಗದ್ದುಗೇರಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಷ್ ಯಾದವ್ ಹಿಂಬಾಲಕರಾಗಿ ಅಂಬಾಸಿಡರ್, ಎಸ್‌ಯುವಿ ಸೇರಿದಂತೆ ಒಟ್ಟು 30ರಷ್ಟು ವಾಹನಗಳು ಓಡಾಡುತ್ತಿರುತ್ತವೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್‌ಸಿ) ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಂಗಾವಲಾಗಿ 4ರಿಂದ 5 ವಾಹನಗಳು ಸುತ್ತುತ್ತಿರುತ್ತವೆ. ಇವುಗಳಲ್ಲಿ 4 ಟಾಟಾ ಸಫಾರಿ ಹಾಗೂ 1 ಸೂಪರ್ ಲಗ್ಷುರಿ ರೇಂಜ್ ರೋವರ್ ಎಸ್‌ಯುವಿ ಕಾರು ಕೂಡಾ ಸೇರಿವೆ.

ಹರಿಯಾಣ ಸಿಎಂ ಭೂಪೇಂದ್ರ ಸಿಂಗ್ ಹೂಡಾ

ಹರಿಯಾಣ ಸಿಎಂ ಭೂಪೇಂದ್ರ ಸಿಂಗ್ ಹೂಡಾ

ಹರಿಯಾಣ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ನೇತಾರ ಕೂಡಾ ಆಗಿರುವ ಭೂಪೇಂದ್ರ ಸಿಂಗ್ ಹೂಡಾ ಸಹ ಕ್ರೀಡಾ ಬಳಕೆಯ ವಾಹನಗಳನ್ನು ಹೆಚ್ಚು ಇಷ್ಟಪಡುತ್ತಾರೆ. 2005 ಹಾಗೂ 2009ರಲ್ಲಿ ಸತತ ಎರಡನೇ ಬಾರಿಗೆ ಹರಿಯಾಣ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಭೂಪೇಂದ್ರ ಸಿಂಗ್ ಹೂಡಾ ಅವರಿಗೆ ಬೆಂಗಾವಲಾಗಿ ಫೋರ್ಡ್ ಎಂಡೋವರ್ ಸೇರಿದಂತೆ 25 ವಾಹನಗಳು ಚಲಿಸುತ್ತಿದೆ.

ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ

ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಹಿಂಬಾಲಕರಾಗಿ ಆರು ವಾಹನಗಳು ಸಂಚರಿಸುತ್ತವೆ. ಇದರಲ್ಲಿ 5 ಸರಕಾರಿ ಅಂಬಾಸಿಡರ್ ಹಾಗೂ ಒಂದು ಜ್ಯಾಮರ್ ತಂತ್ರಗಾರಿಕೆ ಹೊಂದಿರುವ ಸುಸ್ಸಜಿತವಾದ ಟಾಟಾ ಸಫಾರಿ ಎಸ್‌ಯುವಿ ಸೇರಿದೆ.

ಪಂಜಾಬ್ ಮುಖ್ಯಮಂತ್ರಿ ಬಾದಲ್

ಪಂಜಾಬ್ ಮುಖ್ಯಮಂತ್ರಿ ಬಾದಲ್

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಎಸ್‌ಯುವಿ ಕಾರುಗಳ ಬಗ್ಗೆ ಹೆಚ್ಚು ಉತ್ಸುಕತೆಯನ್ನು ಹೊಂದಿದ್ದಾರೆ. ಪಂಜಾಬ್ ಸಿಎಂ ಸೇರಿದಂತೆ ಪುತ್ರ ಹಾಗೂ ಉಪ ಮುಖ್ಯಮಂತ್ರಿ ಕೂಡಾ ಆಗಿರುವ ಸುಖ್‌ಬೀರ್ ಸಿಂಗ್ ಬಾದಲ್ ಬಳಿಯಲ್ಲಿ ಒಟ್ಟು 51 ಕಾರುಗಳಿವೆ. ಅಂದ ಹಾಗೆ ಪಂಜಾಬ್ ಸಿಎಂ ಬುಲೆಟ್ ಫ್ರೂಪ್ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಸಂಚರಿಸುತ್ತಾರೆ.

ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲಾ

ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲಾ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬೆಂಗಾವಲು ವಾಹನಗಳ ಸಂಖ್ಯೆ 10-25ರಷ್ಟಿದೆ. ಇದರಲ್ಲಿ ಮಹೀಂದ್ರ ಸ್ಕಾರ್ಪಿಯೊ, ಟಾಟಾ ಸಫಾರಿ ಹಾಗೂ ರೇಂಜ್ ರೋವರ್ ಪ್ರಮುಖವಾಗಿದೆ.

ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್ ಚೌವ್ಹಾಣ್

ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್ ಚೌವ್ಹಾಣ್

ಅದೇ ರೀತಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌವ್ಹಾಣ್ ಬೆಂಗಾವಲು ವಾಹನಗಳ ಸಂಖ್ಯೆ 6 ಆಗಿದೆ. ಈ ಪೈಕಿ ಟಾಟಾ ಸಫಾರಿ, ಮಹೀಂದ್ರ ಸ್ಕಾರ್ಪಿಯೊ ಮತ್ತು ಮಾರುತಿ ಜಿಪ್ಸಿ ಪ್ರಮುಖವಾಗಿದೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ

ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿರುವ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ನೇತಾರ ಆಗಿರುವ ನರೇಂದ್ರ ಮೋದಿ ಅಧಿಕೃತ ಪಯಣಕ್ಕಾಗಿ 10ರಿಂದ 12 ಕಾರುಗಳು ಸಂಚರಿಸುತ್ತವೆ. ಈ ಪೈಕಿ ಮಹೀಂದ್ರ ಸ್ಕಾರ್ಪಿಯೊ ಫೇವರಿಟ್ ಎನಿಸಿಕೊಂಡಿದೆ.

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಷೆವರ್ಲೆ ಕ್ಯಾಪ್ಟಿವಾ ಕಾರಿನಲ್ಲಿ ಸಂಚರಿಸುತ್ತಾರೆ. ಅವರ ಬಳಿ ಮಾರುತಿ ಜಿಪ್ಸಿ ಸಹ ಇದ್ದು, ಪೈಲಟ್ ಕಾರು ರೂಪದಲ್ಲಿ ಬಳಸಲಾಗುತ್ತದೆ. ಇದರ ಜೊತೆ ನಾಲ್ಕು ಅಂಬಾಸಿಡರ್ ಕೂಡಾ ಇವೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಹಠಾತ್ ಆಗಿ ಕೋಪೋದ್ರೇಕಗೊಳ್ಳುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನೇತಾರೆ ಮಮತಾ ಬ್ಯಾನರ್ಜಿ ಬೆಂಗಾವಲು ವಾಹನಗಳ ಸಂಖ್ಯೆ ಐದು. ಆದರೆ ರಾಜ್ಯ ಬಿಟ್ಟು ತೆರಳುವಾಗ ಬೆಂಗಾವಲು ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಗಾವಲು ವಾಹನಗಳ ಸಂಖ್ಯೆ 12. ಹಾಗಿದ್ದರೂ ನಿತೀಶ್ ಅಧಿಕೃತ ಪಯಣಕ್ಕಾಗಿ ಅಂಬಾಸಿಡರ್‌ನಲ್ಲಿ ಸಂಚರಿಸುವುದನ್ನು ಇಷ್ಟಪಡುತ್ತಾರೆ. ಇನ್ನು ದೂರ ಪ್ರಯಾಣದ ಸಂದರ್ಭದಲ್ಲಿ ಎಸ್‌ಯುವಿ ಕಾರುಗಳನ್ನು ಬಳಕೆ ಮಾಡುತ್ತಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಕಾಂಗ್ರೆಸ್‌ನಿಂದ ಮೋದಿ ಎದುರಾಳಿ ಪ್ರಧಾನಿ ಅಭ್ಯರ್ಥಿಯಾಗಿ ಕಾಣಿಸಿಕೊಂಡಿರುವ ರಾಹುಲ್ ಗಾಂಧಿ ಬಳಿ ಮೂರು ಕಾರುಗಳಿವೆ. ಅವುಗಳೆಂದರೆ ಟೊಯೊಟಾ ಇನ್ನೋವಾ, ಮಿಟ್ಸುಬಿಸಿ ಪಜೆರೊ ಮತ್ತು ಟಾಟಾ ಸಫಾರಿ. ರಾಹುಲ್ ಗಾಂಧಿ ಸಮಾರಂಭಗಳಿಗೆ ಎಸ್‌ಯುವಿ ಕಾರುಗಳಲ್ಲಿ ತೆರಳುತ್ತಾರೆ.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ

ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ 10ಕ್ಕೂ ಹೆಚ್ಚು ಬೆಂಗಾವಲು ವಾಹನಗಳನ್ನು ಹೊಂದಿದ್ದು, ಈ ಪೈಕಿ ಅಧಿಕೃತ ಪ್ರವಾಸಕ್ಕಾಗಿ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ200 ಕಾರನ್ನು ಬಳಕೆ ಮಾಡುತ್ತಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ದೇಶದ 'ಪ್ರಥಮ ಪ್ರಜೆ' ಎಂದೇ ಬಿಂಬಿಸಲ್ಪಡುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಅಧಿಕೃತ ಪಯಣಕ್ಕಾಗಿ ಮರ್ಸಿಡಿಸ್ ಬೆಂಝ್‌ನ ಅತಿ ದುಬಾರಿ ಲಿಮೊಸಿನ್ ಪುಲ್‌ಮ್ಯಾನ್ ಕಾರುಗಳನ್ನು ಬಳಕೆ ಮಾಡುತ್ತಾರೆ. ಇದರ ಜತೆ ಭದ್ರತೆಗಾಗಿ ಗರಿಷ್ಠ ಸಂಖ್ಯೆಯ ಬೆಂಗಾವಲು ವಾಹನಗಳನ್ನು ಬಳಸಲಾಗುತ್ತಿದೆ.

ನಮ್ಮ ಸಿಎಂ ಸಿದ್ಧರಾಮಯ್ಯ

ನಮ್ಮ ಸಿಎಂ ಸಿದ್ಧರಾಮಯ್ಯ

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ಕರ್ನಾಟಕ ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಳಿ ಆಡಿ ಕ್ಯೂ7 ಕಾರಿದೆ. ಇನ್ನು ಅಧಿಕೃತ ಪಯಣಕ್ಕಾಗಿ ಟೊಯೊಟಾ ಫಾರ್ಚ್ಯುನರ್ ಕೂಡಾ ಬಳಕೆ ಮಾಡುತ್ತಾರೆ. ಅದೇ ರೀತಿ ಸಂಪುಟ ಸಚಿವರ ಕಾರುಗಳಿಗಾಗಿ ದುಂದು ವೆಚ್ಚ ಮಾಡಲಾಗುತ್ತದೆ.

More from DriveSpark

Article Published On: Saturday, September 7, 2013, 7:04 [IST]
English summary
Petroleum Minister Veerappa Moily has asked for petrol pumps to be shut post 8PM. The logic being wastage of fuel by consumers. But is this practical? Could this actually start illegal petrol trade? Most of all, does this hypocritic decision take into account excessive fuel use by MPs?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+