ರೇಸ್ ಮಧ್ಯೆ ಎಂಜಿನ್ ಸ್ಪೋಟ; ಹೊತ್ತಿ ಉರಿದ ಕಾರು (ವಿಡಿಯೋ)
ರೇಸಿಂಗ್ ಟ್ರ್ಯಾಕ್ ಗೆ ಕಾಲಿಟ್ಟ ಬಳಿಕ ಪ್ರಾಣದ ಬಗ್ಗೆ ಭಯ ಇಟ್ಟುಕೊಳ್ಳಬಾರದು. ಯಾವುದೇ ಕ್ಷಣ ಬೇಕಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಹಾಗೆಂದ ಮಾತ್ರಕ್ಕೆ ಛಲವಾದಿ ರೇಸರ್ ಗಳು ತಮ್ಮ ಗುರಿ ಮುಟ್ಟದೇ ಹಿಂದೆ ತಿರುಗಿ ನೋಡುವವರೇ ಅಲ್ಲ.
'ಡ್ರಾಗ್ ರೇಸ್' ಜಗತ್ತಿನ ಅತ್ಯಂತ ಸ್ಪರ್ಧಾತ್ಮಕ ಮತ್ತು ಅಪಾಯಕಾರಿ ರೇಸ್ ಗಳಲ್ಲಿ ಒಂದಾಗಿದೆ. ಇಂಗ್ಲೆಂಡ್ ನಲ್ಲಿ ನಡೆದ ಡ್ರಾಗ್ ರೇಸ್ ವೊಂದರ ವೇಳೆ ಕಾರೊಂದು ತಾಂತ್ರಿಕ ತೊಂದರೆಯಿಂದಾಗಿ ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಪ್ರಕರಣ ಬೆಳಕಿಗೆ ಬಂದಿದೆ.

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ 2016 ಎನ್‌ಎಚ್‌ಆರ್ ಎ ಡ್ರಾಗ್ ರೇಸ್ ನಲ್ಲಿ ಫನ್ನಿ ಕಾರ್ ಚಾಲಕ ಜಾಕ್ ಬೆಕ್ ಮ್ಯಾನ್ ಚಾಲನೆ ಮಾಡಿದ ಡಾಡ್ಜ್ ಚಾರ್ಜರ್ ಕಾರು ಅವಘಡಕ್ಕೀಡಾಗಿದೆ.

ಬರೋಬ್ಬರಿ 8000 ಅಶ್ವಶಕ್ತಿ ಉತ್ಪಾದಿಸುವ ಕಾರಿನ ಕ್ವಾರ್ಟರ್ ಮೈಲು ರೇಸ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿತ್ತು.

ಕಾರು ಚಲಿಸುತ್ತಿರುವ ರಭಸಕ್ಕೆ ಬಿಡಿಭಾಗಗಳು ರೇಸ್ ಟ್ರ್ಯಾಕ್ ನಲ್ಲಿ ಚಲ್ಲಾಪಿಲ್ಲಿಯಾಗಿದೆ. ಕ್ಷಣಾರ್ಧದಲ್ಲಿ ಸಂಪೂರ್ಣ ಕಾರಿಗೆ ಬೆಂಕಿ ತಗುಲಿತ್ತು.

ಅದೃಷ್ಟವಶಾತ್ ಚಾಲಕ ಯಾವುದೇ ಅಪಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಗಲೂ ಛಲ ಬಿಡದ ಚಾಲಕ ತನ್ನ ಗುರಿ ಮುಟ್ಟುವ ಪ್ರಯತ್ನದಲ್ಲಿ ಮುಂದುವರಿದಿದ್ದರು.

ನ್ಯೂ ಇಂಗ್ಲೆಂಡ್ ಡ್ರಾಗ್ ವೇನಲ್ಲಿ ನಡೆದ 2016 ಎನ್ ಎಚ್ ಆರ್ ಎ ನ್ಯೂ ಇಂಗ್ಲೆಂಡ್ ನ್ಯಾಷನಲ್ಸ್ ನ ಮೂರನೇ ಅರ್ಹತಾ ಸುತ್ತಿನ ರೇಸಿಂಗ್ ಸ್ಪರ್ಧೆಯಲ್ಲಿ ಈ ದುರದೃಷ್ಟಕರ ಘಟನೆ ಸಂಭವಿಸಿತ್ತು.

ಅತ್ಯಂತ ಶಕ್ತಿಶಾಲಿ ವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಪ್ರಸ್ತುತ ಕಾರು 9500 ಎನ್ ಎಂ ತಿರುಗುಬಲದಲ್ಲಿ ಬರೋಬ್ಬರಿ 8000 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅಪಘಾತಕ್ಕೀಡಾಗುವ ವೇಳೆಯಲ್ಲಿ ಪ್ರಸ್ತುತ ರೇಸ್ ಕಾರು ಗಂಟೆಗೆ 520 ಕೀ.ಮೀ. ವೇಗವನ್ನು ಕಾಪಾಡಿಕೊಂಡಿತ್ತು ಎಂದು ಆಯೋಜಕರು ತಿಳಿಸುತ್ತಾರೆ.

ಪ್ರಾಥಮಿಕ ತನಿಖಾ ವರದಿಯಲ್ಲಿ ಎಂಜಿನ್ ಸ್ಪೋಟಗೊಂಡಿರುವುದೇ ಅವಘಡಕ್ಕೀರುವ ಕಾರಣ ಎನ್ನಲಾಗಿದೆ.
ರೋಚಕ ವಿಡಿಯೋ ವೀಕ್ಷಿಸಿ


Click it and Unblock the Notifications








