ಪಾಲ್ ವಾಕರ್ ಅಂತಿಮ ಚಿತ್ರ 'ಫ್ಯೂರಿಯಸ್ 7'
ಕಳೆದ ಕೆಲವು ಸಮಯಗಳಿಂದ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' ಸಿನೆಮಾ ಸರಪಣಿಯ ಏಳನೇ ಅವತರಣಿಕೆಯು 'ಫ್ಯೂರಿಯಸ್ 7' ಅತಿ ಹೆಚ್ಚು ಕುತೂಹಲವನ್ನುಂಟು ಮಾಡಿದೆ.
ಈಗ 2015 ಎಪ್ರಿಲ್ 03ರಂದು ತೆರೆಗೆ ಅಪ್ಪಳಿಸಲಿರುವ ಈ ಬಹುನಿರೀಕ್ಷಿತ ಚಿತ್ರದ ಕೊನೆಯ ಟ್ರೇಲರ್ ಬಿಡುಗಡೆಗೊಂಡಿದೆ. ಇದು ಅಭಿಮಾನಿಗಳಲ್ಲಿ ಅತಿ ಹೆಚ್ಚಿನ ರೋಚಕತೆಗೆ ಕಾರಣವಾಗಿದೆ.

ಸದಾ ಫಾಸ್ಟ್ ಆ್ಯಂಡ್ ಫ್ಲೂಯರಿಸ್ ಚಲನಚಿತ್ರಗಳಲ್ಲಿ ವಾಹನಗಳ ಪಾತ್ರ ಮಹತ್ವದ್ದಾಗಿರುತ್ತದೆ. ಇಲ್ಲೂ ಟ್ರೇಲರ್‌ನಲ್ಲಿ ಈ ಕುತೂಹಲವನ್ನು ಚಿತ್ರ ತಂಡ ಕಾಪಾಡಿಕೊಂಡಿದೆ.
ಕಳೆದ ವರ್ಷ ಕಾರು ಅಪಘಾತವೊಂದರಲ್ಲಿ ಸಾವಿಗೀಡಾಗಿರುವ ಪಾಲ್ ವಾಕರ್ ನಟಿಸಿರುವ ಕೊನೆಯ ಚಿತ್ರ ಇದಾಗಿದೆ. ಈ ಹಿನ್ನೆಲೆಯಲ್ಲಿ ಪಾಲ್ ವಾಕರ್ ಅವರನ್ನು ಚಿತ್ರ ಪರದೆಯಲ್ಲಿ ನೋಡುವ ಕೊನೆಯ ಅವಕಾಶ ದೊರಕಲಿದ್ದು, ಅವರಿಗೆ ನೀಡುತ್ತಿರುವ ಅತ್ಯುನ್ನುತ್ತ ಕೊಡುಗೆ ಇದಾಗಿರಲಿದೆ.
ವೀಡಿಯೋ ವೀಕ್ಷಿಸಿ


Click it and Unblock the Notifications








