ಇಯರ್‌ ಫೋನ್ಸ್‌ ತಂದ ಅವಾಂತರ- ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ..!!

Written By:

ಇಯರ್ ಫೋನ್ಸ್ ಹಾಕೊಂಡು ಕಾರು ಡ್ರೈವಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬಳು 2 ವರ್ಷದ ಬಾಲಕನ ಮೇಲೆ ಕಾರ್ ಹರಿಸಿದ್ದು, ಘಟನೆಯಲ್ಲಿ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

To Follow DriveSpark On Facebook, Click The Like Button
ಇಯರ್‌ ಫೋನ್ಸ್‌ ತಂದ ಅವಾಂತರ- ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ..!!

ದೆಹಲಿಯ ಪಾಲಾಮ್ ಪ್ರದೇಶದಲ್ಲಿ ಈ ದುರಂತ ನಡೆದಿದ್ದು, ಕಾರ್ ಚಾಲನೆ ಮಾಡುತ್ತಿದ್ದ ಮಹಿಳೆಯು ಕಿವಿಗೆ ಇಯರ್‍ ಫೋನ್ಸ್ ಹಾಕಿಕೊಂಡಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಮತ್ತು ಪೋಷಕರು ಆರೋಪಿಸಿದ್ದಾರೆ.

ಇಯರ್‌ ಫೋನ್ಸ್‌ ತಂದ ಅವಾಂತರ- ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ..!!

ನಿನ್ನೇ ಮಧ್ಯಾಹ್ನ 1.30ಕ್ಕೆ ಈ ಘಟನೆ ನಡಿದ್ದು, ಘಟನೆಗೆ ಕುರಿತಂತೆ ತನಿಖೆಯ ವೇಳೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.

ಇಯರ್‌ ಫೋನ್ಸ್‌ ತಂದ ಅವಾಂತರ- ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ..!!

ಘಟನೆಯಲ್ಲಿ ಮೃತಪಟ್ಟ ಬಾಲಕನನ್ನು 2 ವರ್ಷದ ದೀಪಕ್ ಎಂದು ಗುರುತಿಸಲಾಗಿದ್ದು, ಮಧ್ಯಾಹ್ನದ ವೇಳೆ ದೀಪಕ್ ತಾಯಿ ಊಟ ಮಾಡಲು ಬಂದಾಗ ನಿರಾಕರಿಸಿರುವ ಬಾಲಕ ಹೊರಗೆ ಓಡಿ ಹೋಗಲು ಯತ್ನಿಸಿದ್ದಾನೆ.

ಇಯರ್‌ ಫೋನ್ಸ್‌ ತಂದ ಅವಾಂತರ- ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ..!!

ಈ ವೇಳೆ 26 ವರ್ಷದ ಮಹಿಳೆಯೊಬ್ಬಳು ಐ20 ಕಾರಿನಲ್ಲಿ ಅದೇ ರಸ್ತೆಯಲ್ಲಿ ಬಂದಿದ್ದು, ಅಡ್ಡಲಾಗಿ ಬಂದ ಮಗುವಿನ ಮೇಲೆ ಕಾರು ಹರಿಸಿದ್ದಾಳೆ.

ಇಯರ್‌ ಫೋನ್ಸ್‌ ತಂದ ಅವಾಂತರ- ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ..!!

ಇನ್ನು ನಿಧಾನ ಚಾಲನೆಯಲ್ಲಿದ್ದ ಕಾರು ಮಗು ಅಡ್ಡ ಬಂದಾಗ ನಿಯಂತ್ರಣ ಮಾಡಬಹುದಾದ ಸಾಧ್ಯತೆಯಿತ್ತು. ಆದ್ರೆ ಇಯರ್ ಫೋನ್ಸ್ ಹಾಕಿಕೊಂಡು ತನ್ನದೇ ಲೋಕದಲ್ಲಿದ್ದ ಮಹಿಳೆಗೆ ಮಗು ಅಡ್ಡ ಬಂದಿದ್ದೇ ಗೊತ್ತಾಗಿಲ್ಲ.

ಇಯರ್‌ ಫೋನ್ಸ್‌ ತಂದ ಅವಾಂತರ- ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ..!!

ದೀಪಕ್ ತಾಯಿ ಖಾಸಗಿ ವಾಹಿನಿಯೊಂದಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದು, ಕಾರು ನಿಲ್ಲಿಸಲು ನಾನು ಕಾರಿನ ಕಿಟಕಿಯನ್ನ ಬಡಿಯುತ್ತಲೇ ಇದ್ದೆ. ಆದ್ರೆ ಇಯರ್ ಫೋನ್ಸ್ ಹಾಕಿದ್ದ ಆಕೆಗೆ ಕೇಳಿಸಿಕೊಳ್ಳಲೇ ಇಲ್ಲ. ಆಕೆಯ ಕಾರ್ ನನ್ನ ಮಗುವಿಗೆ ಡಿಕ್ಕಿ ಹೊಡೆಯಿತು ಎಂಬುದನ್ನ ಆಕೆ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದೆಹಲಿಯ ಪಾಲಮ್ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್ 304ಎ ಹಾಗೂ 279ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬಂಧನವಾಗಿದ್ದ ಮಹಿಳೆಯನ್ನು ಇದೀಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಇಯರ್‌ ಫೋನ್ಸ್‌ ತಂದ ಅವಾಂತರ- ಮಗುವಿನ ಮೇಲೆ ಕಾರು ಹರಿಸಿದ ಮಹಿಳೆ..!!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನಗರ ಪ್ರದೇಶಗಳಲ್ಲಿ ಇಯರ್ ಫೋನ್ಸ್ ಹಾಕಿಕೊಂಡು ವಾಹನಗಳ ಚಾಲನೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದ್ದು, ದಯವಿಟ್ಟು ಇಯರ್ ಫೋನ್ಸ್ ಹಾಕಿಕೊಂಡು ವಾಹನ ಚಾಲನೆ ಮಾಡುವುದನ್ನು ನಿಲ್ಲಿಸಿಸುವುದು ನಿಮಗೆ ಒಳಿತು.

English summary
Read in Kannada about Delhi woman driving car with headphones on crushes toddler to death.
Story first published: Monday, August 7, 2017, 14:55 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark