ಸುಳಿ ಸುತ್ತುವ ಸುಂಟರಗಾಳಿಗೆ ಕೊಚ್ಚಿ ಹೋದ ಕಾರು
ತೈವಾನ್‌ಗೆ ಕಳೆದ ವಾರ ಅಪ್ಪಳಿಸಿದ ಚಂಡಮಾರುತದಲ್ಲಿ ಭಾರಿ ನಾಶನಷ್ಟ ಸಂಭವಿಸಿದೆ. ಅಲ್ಲಿ ಬೀಸಿದ ಸುಂಟರಗಾಳಿಯ ಪ್ರಭಾವ ಎಷ್ಟರ ಮಟ್ಟಿಗಿತ್ತೆಂದರೆ ರಸ್ತೆಯಲ್ಲಿ ಸಂಚರಿಸುವ ಕಾರೊಂದು ಕೊಚ್ಚಿ ಹೋಗುವ ದೃಶ್ಯಗಳು ತಡವಾಗಿ ಬೆಳಕಿಗೆ ಬಂದಿದೆ.
ಪ್ರಕೃತಿ ವಿಕೋಪಗಳು ಉಂಟಾದಾಗ ಮಾನವರಾದ ನಾವು ಮೂಕ ಪ್ರೇಕ್ಷಕರಾಗಿ ನೋಡುವುದಲ್ಲದೆ ಇನ್ನೇನು ಮಾಡುವಂತಿಲ್ಲ. ಇದಕ್ಕೊಂದು ತಾಜಾ ನಿದರ್ಶನ ಇದಾಗಿದೆ.
ಪ್ರಸ್ತುತ ವೀಡಿಯೋವನ್ನು ಹಿಂಬದಿಯಲ್ಲಿದ್ದ ಸಂಚರಿಸುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ನಿಂದ ಸೆರೆಹಿಡಿಯಲಾಗಿದೆ. ಸುಳಿ ಸುತ್ತುತ್ತಾ ಬೀಸುತ್ತಿದ್ದ ಸುಂಟರಗಾಳಿ ಭಾರಿ ಗಾಳಿ ಮಳೆಯೊಂದಿಗೆ ರಸ್ತೆಗಪ್ಪಳಿಸುವುದನ್ನು ನೀವಿಲ್ಲಿ ನೋಡಬಹುದಾಗಿದೆ.
ವೀಡಿಯೋದ ಕೊನೆಯಲ್ಲಿ ಮಹಿಳೆಯೊಬ್ಬಾಕೆ ಪವಾಡ ಸದೃಶ ಪಾರಾಗಿರುವುದನ್ನು ನೀವು ಕಾಣಬಹುದಾಗಿದೆ. ಆದರೆ ಈಕೆ ಹೇಗೆ ರಸ್ತೆ ಪ್ರವೇಶಿಸಿದಳು ಎಂಬುದು ಇನ್ನೂ ನಿಗೂಢ. ಬಹುಶ: ಸುಂಟರಗಾಳಿ ಪ್ರಭಾವಕ್ಕೆ ಸಿಲುಕಿರಬಹುದೇನೋ?
ವಿಡಿಯೋ ವೀಕ್ಷಿಸಿ


Click it and Unblock the Notifications