ಗೋವಾ ಕಡಲ ತೀರದಲ್ಲಿ ಆಡಿ, ಓಡಿ ನಲಿದಾಡಿದ 'ಕ್ಯೂ3'

Written By:

ಸಹಜವಾಗಿಯೇ ಐಷಾರಾಮಿ ಕಾರನ್ನು ಕೊಂಡುಕೊಳ್ಳುವಾಗ ನಮಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನಿರೀಕ್ಷೆ ಮಾಡುತ್ತೇವೆ. ಭಾರತೀಯ ಮಾರುಕಟ್ಟೆಯಲ್ಲಿ ಕ್ಷಣ ಕ್ಷಣಕ್ಕೂ ಪೈಪೋಟಿ ಹೆಚ್ಚಾಗುತ್ತಲೇ ಇದ್ದು, ಪ್ರತಿಯೊಂದು ವಾಹನ ತಯಾರಿಕ ಸಂಸ್ಥೆಗಳು ಒಂದಕ್ಕೊಂದು ಮೆಚ್ಚುವಂತಹ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ.

ಆಧುನಿಕ ಜಗತ್ತಿನಲ್ಲಿ ಕಾರು ಒಂದು ದೈನಂದಿನ ಪಯಣಕ್ಕೆ ಸೀಮಿತವಾಗಿಲ್ಲ. ಇದು ಪ್ರತಿಷ್ಠೆಯ ಸಂಕೇತವೂ ಹೌದು. ಈ ನಿಟ್ಟಿನಲ್ಲಿ ಗ್ರಾಹಕರ ಬಯಕೆಗಳನ್ನು ಗುರುತಿಸಿಕೊಂಡು ಗರಿಷ್ಠ ಸೌಕರ್ಯಗಳನ್ನು ನೀಡುವಲ್ಲಿ ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಆಡಿ ಸದಾ ಬದ್ಧವಾಗಿದೆ. ನಿಮ್ಮ ಸಾಮಾನ್ಯ ಪಯಣದಲ್ಲಿ ಕಾರಿನೊಳಗಡೆ ತೆರೆದುಕೊಳ್ಳುವ ಪ್ಯಾನರಾಮಿಕ್ ಸನ್ ರೂಫ್‌ಗಳಂತಹ ಸೇವೆ ಲಭ್ಯವಿದ್ದಲ್ಲಿ ನಿಮ್ಮ ಚಾಲನಾ ಅನುಭವ ಹೇಗಿರಬಹುದು? ಈ ಎಲ್ಲ ಐಷಾರಾಮಿ ಸೌಲಭ್ಯದೊಂದಿಗೆ ಮುಂದೆ ಬಂದಿರುವ 2015 ಆಡಿ ಕ್ಯೂ3 ಪರಿಪೂರ್ಣ ಚಾಲನಾ ಅನುಭವ ನಿಮ್ಮದಾಗಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ವಿ.ಸೂ: ವಿಶೇಷವಾಗಿಯೂ ಮಾಧ್ಯಮಗಳಿಗೆ ಗೋವಾದಲ್ಲಿ ಇತ್ತೀಚೆಗಷ್ಟೇ ಏರ್ಪಡಿಸಿದ್ದ ಆಡಿ ಕ್ಯೂ3 ಚಾಲನಾ ಪರೀಕ್ಷೆಯಲ್ಲಿ ಭಾಗವಹಿಸಿದ್ದ ನಮ್ಮ ಡ್ರೈವ್ ಸ್ಪಾರ್ಕ್ '2015 ಆಡಿ ಕ್ಯೂ3' ಸಂಪೂರ್ಣ ಚಾಲನಾ ಪರೀಕ್ಷೆಯೊಂದಿಗೆ ನಿಮ್ಮ ಮುಂದೆ ಬಂದಿದ್ದು, ಇದರೊಂದಿಗೆ ನಮ್ಮ ತಂಡ ರಚಿಸಿರುವ ಚೊಚ್ಚಲ ವಿಮರ್ಶಾತ್ಮಕ ವೀಡಿಯೊವನ್ನು ನಿಮ್ಮ ಮುಂದಿಡುತ್ತಿದ್ದೇವೆ. (ವೀಡಿಯೋ ನೋಡಲು ಮರೆಯದಿರಿ).

ವಿನ್ಯಾಸ - ಮುಂಭಾಗ

ವಿನ್ಯಾಸ - ಮುಂಭಾಗ

ಮೊದಲ ನೋಟದಲ್ಲೇ ನಾಲ್ಕು ಉಂಗುರಗಳ ನಡುವೆ ಗೋಚರಿಸುತ್ತಿರುವ ಸಿಂಗಲ್ ಫ್ರೇಮ್ ಗ್ರಿಲ್ ಪ್ರಮುಖ ಆಕರ್ಷಣೆಯಾಗಿದೆ. ಇದು ಎರಡು ಬದಿಯಲ್ಲಿ ಹೆಡ್ ಲ್ಯಾಂಪ್ ಜೊತೆ ಮಿಲನವಾಗುತ್ತದೆ. ಪರಿಷ್ಕೃತ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಅನ್ನು ಕಲಾತ್ಮಕವಾಗಿ ರಚಿಸಲಾಗಿದೆ.

ವಿನ್ಯಾಸ - ಹಿಂಭಾಗ

ವಿನ್ಯಾಸ - ಹಿಂಭಾಗ

ಹಿಂದುಗಡೆ ಲೈಟ್ ಕ್ಲಸ್ಟರ್ ಜೊತೆ ಹೊಂದಿಕೊಂಡಿರುವ ಡೈನಾಮಿಕ್ ಎಲ್ ಇಡಿ ಟರ್ನ್ (ತಿರುವು) ಸಿಗ್ನಲ್ ಕಾರಿನ ವಿನ್ಯಾಸವನ್ನು ಉತ್ತೇಜಿಸುತ್ತಿದೆ. ಈ ಬಗ್ಗೆ ನಿಖರ ಮಾಹಿತಿಗಾಗಿ ಕೊನೆಯಲ್ಲಿ ಕೊಟ್ಟಿರುವ ವೀಡಿಯೋ ವೀಕ್ಷಿಸಿ.

ವಿನ್ಯಾಸ

ವಿನ್ಯಾಸ

ಇನ್ನುಳಿದಂತೆ 17 ಇಂಚುಗಳ 10 ಸ್ಪೋಕ್ ಅಲಾಯ್ ವೀಲ್, ಕ್ರೋಮ್ ಸ್ಪರ್ಶ ಪಡೆದ ಎಕ್ಸಾಸ್ಟ್ ಕೊಳವೆ, ತೀಕ್ಷ್ಣವಾದ ಹಾಗೂ ಹೆಚ್ಚು ಕ್ರೀಡಾತ್ಮಕ ಹಿಂದುಗಡೆ ವಿನ್ಯಾಸವು ಕಾರಿನ ಒಟ್ಟಾರೆ ವಿನ್ಯಾಸಕ್ಕೆ ಬಲ ತುಂಬುತ್ತಿದೆ. ಮೇಲ್ಗಡೆ ಏರೋಡೈನಾಮಿಕ್ ವಿನ್ಯಾಸದ ಸಂಕೇತವಾದ ಏರೋ ಟಿಪ್ ಕೂಡಾ ಕಾಣಬಹುದಾಗಿದೆ.

ಒಳಮೈ

ಒಳಮೈ

ಮೃದು ಸ್ಪರ್ಶದ ಡ್ಯಾಶ್ ಬೋರ್ಡ್ ಕಾರಿನೊಳಗಿನ ಪ್ರಮುಖ ವೈಶಿಷ್ಟ್ಯವಾಗಿದೆ. ಇದರಲ್ಲಿ ಮಲ್ಟಿ ಮೀಡಿಯಾ ಇಂಟರ್ ಫೇಸ್ (ಎಂಎಂಐ) ಸೇವೆಯನ್ನು ಆನಂದಿಸಬಹುದಾಗಿದೆ. ತನ್ನ ನಿಕಟ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಉನ್ನತ ಗುಣಮಟ್ಟವನ್ನು ಕಾಪಾಡಿಕೊಂಡಿದೆ.

ಸ್ಥಳಾವಕಾಶ

ಸ್ಥಳಾವಕಾಶ

ಹೊಸ ಆಡಿ ಕ್ಯೂ3 ಕಾರಿನಲ್ಲಿರುವ ಲೆಥರ್ ಸೀಟುಗಳು ಪ್ರಯಾಣಿಕರಿಗೆ ಐಷಾರಾಮಿ ಅನುಭವ ಖಾತ್ರಿಪಡಿಸಲಿದ್ದು, ನಾಲ್ವರು ಜನರಿಗೆ ಆರಾಮವಾಗಿ ಪಯಣಿಸಬಹುದಾಗಿದೆ. ಹೆಚ್ಚು ಲೆಗ್ ಹಾಗೂ ಹೆಡ್ ರೂಂ ಇದರಲ್ಲಿರಲಿದೆ.

ಢಿಕ್ಕಿ ಜಾಗ

ಢಿಕ್ಕಿ ಜಾಗ

ಪ್ರತಿಸ್ಪರ್ಧಿ ಬಿಎಂಡಬ್ಲ್ಯು ಎಕ್ಸ್1 (420 ಲೀಟರ್) ಕಾರನ್ನು ಹೋಲಿಸಿದಾಗ ಆಡಿ ಕ್ಯೂ3 460 ಲೀಟರ್ ಗಳ ಲಗ್ಗೇಜ್ ಜಾಗವನ್ನು ಹೊಂದಿರುತ್ತದೆ.

ವಾಸ್ತವಾಂಶ

ಆಡಿ ಕ್ಯೂ3: 460 ಲೀಟರ್

ಮರ್ಸಿಡಿಸ್ ಜಿಎಲ್ ಎ: 421 ಲೀಟರ್

ಬಿಎಂಡಬ್ಲ್ಯು ಎಕ್ಸ್1: 420 ಲೀಟರ್

ವೋಲ್ವೋ ವಿ40 ಸಿಸಿ: 324 ಸಿಸಿ

ಎಂಜಿನ್ ಮತ್ತು ಗೇರ್ ಬಾಕ್ಸ್

ಎಂಜಿನ್ ಮತ್ತು ಗೇರ್ ಬಾಕ್ಸ್

ನೂತನ ಆಡಿ ಕ್ಯೂ3, 2.0 ಟಿಡಿಐ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ 7 ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಸಹ ಇದರಲ್ಲಿರಲಿದೆ. ಇನ್ನು ಆಲ್ ವೀಲ್ ಡ್ರೈವ್ ಕ್ವಾಟ್ರೋ ಸೇವೆಯು ಪರಿಪೂರ್ಣ ಆಫ್ ಡ್ರೈವ್ ಚಾಲನಾ ಅನುಭವ ನಿಮ್ಮದಾಗಿಸಲಿದೆ. ವೇಗವರ್ಧನೆ ಬಗ್ಗೆ ಮಾತನಾಡುವುದಾದ್ದಲ್ಲಿ ಕೇವಲ 8.2 ಸೆಕೆಂಡುಗಳಲ್ಲೇ 0-100 ಕೀ.ಮೀ. ಅಂತೆಯೇ ಗಂಟೆಗೆ ಗರಿಷ್ಠ 212 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ವಾಸ್ತವಾಂಶ

ಬಿಎಂಡಬ್ಲ್ಯು ಎಕ್ಸ್1: 184 ಅಶ್ವಶಕ್ತಿ/ 380 ಎನ್‌ಎಂ (ನ್ಯೂಟನ್ ಮೀಟರ್) ತಿರುಗುಬಲ

ಆಡಿ ಕ್ಯೂ3: 177 ಅಶ್ವಶಕ್ತಿ/ 380 ಎನ್‌ಎಂ (ನ್ಯೂಟನ್ ಮೀಟರ್) ತಿರುಗುಬಲ

ವೋಲ್ವೋ ವಿ40 ಸಿಸಿ: 150 ಅಶ್ವಶಕ್ತಿ/ 350 ಎನ್‌ಎಂ (ನ್ಯೂಟನ್ ಮೀಟರ್) ತಿರುಗುಬಲ

ಮರ್ಸಿಡಿಸ್ ಜಿಎಲ್‌ಇ: 136 ಅಶ್ವಶಕ್ತಿ/ 300 ಎನ್‌ಎಂ (ನ್ಯೂಟನ್ ಮೀಟರ್) ತಿರುಗುಬಲ

ಚಾಲನಾ ಸಾಮರ್ಥ್ಯ

ಚಾಲನಾ ಸಾಮರ್ಥ್ಯ

ಆಡಿ ಕ್ಯೂ3ನಲ್ಲಿರುವ ಎಸ್ ಟ್ರಾನಿಕ್ ಗೇರ್ ಬಾಕ್ಸ್, ಸಂಪೂರ್ಣ ಆಟೋಮ್ಯಾಟಿಕ್ ವಿಧದಲ್ಲಿ ಚಲಿಸಲಿದ್ದು, ಚಾಲಕರಿಗೆ ಡಿ (ಡ್ರೈವ್) ಹಾಗೂ ಎಸ್ (ಸ್ಪೋರ್ಟ್) ಮೋಡ್ ಆಯ್ಕೆ ಮಾಡುವ ಅವಕಾಶವಿರುತ್ತದೆ. ಇಲ್ಲಿ ಡಿ ಮೋಡ್ ಕಂಪ್ಯೂಟರ್ ನಿಯಂತ್ರಿಸಿದರೆ ಎಸ್ ಮೋಡ್ ನಲ್ಲಿ ಮತ್ತಷ್ಟು ಹೆಚ್ಚಿನ ವೇಗದಲ್ಲಿ ಸಂಚರಿಸಬಹುದಾಗಿದೆ. ಸೆಲೆಕ್ಟರ್ ಲಿವರ್ ಅಥವಾ ಸ್ಟೀರಿಂಗ್ ವೀಲ್ ಹಿಂದುಗಡೆಯಿರುವ ಪ್ಯಾಡಲ್ ಶಿಫ್ಟರ್ ಮುಖಾಂತರ ನೀವು ಮ್ಯಾನುವಲ್ ಆಗಿಯೂ ಗೇರ್ ಬದಲಾಯಿಸಬಹುದಾಗಿದೆ.

ಚಾಲನಾ ವಿಧ

ಚಾಲನಾ ವಿಧ

ಇನ್ನು ಚಾಲನೆಯನ್ನು ಮತ್ತಷ್ಟು ಆನಂದದಾಯಕವಾಗಿಸಲು ಕಂಫರ್ಟ್, ಆಟೋ ಮತ್ತು ಡೈನಾಮಿಕ್ ಗಳೆಂಬ ಚಾಲನಾ ವಿಧಗಳನ್ನು ಕೊಡಲಾಗಿದೆ. ನಗರದ ಪ್ರದೇಶದ ವಾಹನ ದಟ್ಟಣೆಯ ರಸ್ತೆಗಳಲ್ಲಿ ಕಂಫರ್ಟ್ ವಿಧ ಹೆಚ್ಚು ಸೂಕ್ತವೆನಿಸಲಿದೆ. ಆಟೋ ಮೋಡ್ ನಲ್ಲಿರಿಸಿದರೆ ನಿಮ್ಮ ಚಾಲನಾ ಸ್ಥಿತಿಗಾನುಸಾರವಾಗಿ ಗೇರ್ ಬದಲಾವಣೆಯಾಗಲಿದೆ. ಅಂತೆಯೇ ಡೈನಾಮಿಕ್ ಮೋಡ್ ನಲ್ಲಿ ಗರಿಷ್ಠ ನಿರ್ವಹಣೆಯ ಸಂಚಾರವನ್ನು ಅನುಭವಿಸಬಹುದಾಗಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಎಂಎಂಐ ನೇವಿಗೇಷನ್ ಸಿಸ್ಟಂ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸೀಟು, ಎಲ್ ಇಡಿ ಇಂಟಿರಿಯರ್ ಲೈಟಿಂಗ್ ಪ್ಯಾಕೇಜ್, ಪಾರ್ಕಿಂಗ್ ಸಿಸ್ಟಂ ಪ್ಲಸ್ ಜೊತೆ ರಿಯರ್ ವ್ಯೂ ಕ್ಯಾಮೆರಾಗಳಂತಹ ವೈಶಿಷ್ಟ್ಯಗಳನ್ನು ಹೊಸ ಆಡಿ ಕ್ಯೂ3 ಪಡೆದುಕೊಂಡಿದೆ. ಆಡಿ ಸೌಂಡ್ ಸಿಸ್ಟಂ ಮಗದೊಂದು ವಿಶೇಷತೆಯಾಗಿದ್ದು, ಮಾಹಿತಿ ಮನರಂಜನಾ ವ್ಯವಸ್ಥೆಯಲ್ಲಿ ಆಡಿ ಮ್ಯೂಸಿಕ್ ಇಂಟರ್ ಫೇಸ್, 20 ಜಿಬಿ ಜ್ಯೂಕ್ ಬಾಕ್ಸ್, 2 ಎಸ್ ಡಿಎಚ್ ಸಿ ಸ್ಲಾಟ್, ಬ್ಲೂಟೂತ್ ಕನೆಕ್ಟಿವಿಟಿ ಸೇವೆಯಿರಲಿದೆ.

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆರು ಏರ್ ಬ್ಯಾಗ್ ಗಳ ಜೊತೆಗೆ ರಾತ್ರಿ ವೇಳೆಯಲ್ಲೂ ಸುರಕ್ಷಿತ ಚಾಲನೆಗಾಗಿ ಹೊರಗಿನ ಹಾಗೂ ಒಳಗಿನ ಮಿರರ್ ಗಳಲ್ಲಿ ಆಟೋಮ್ಯಾಟಿಕ್ ಆ್ಯಂಟಿ ಗ್ಲೇರ್ ಆಕ್ಷನ್ ಸೇವೆ ಇರಲಿದೆ.

ಬೆಲೆ, ಮೈಲೇಜ್, ಪ್ರತಿಸ್ಪರ್ಧಿಗಳು

ಬೆಲೆ, ಮೈಲೇಜ್, ಪ್ರತಿಸ್ಪರ್ಧಿಗಳು

ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ಜಿಎಲ್‌ಎ, ಬಿಎಂಡಬ್ಲ್ಯು ಎಕ್ಸ್1, ವೋಲ್ವೋ ವಿ40 ಕ್ರಾಸ್ ಕಂಟ್ರಿ ಮಾದರಿಗಳಿಗೆ ಆಡಿ ಕ್ಯೂ ಪ್ರತಿಸ್ಪರ್ಧಿಯಾಗಿರಲಿದೆ.

ಆನ್ ರೋಡ್ ಬೆಲೆ, ಮೈಲೇಜ್

ಆಡಿ ಕ್ಯೂ3 - 39.82 ಲಕ್ಷ ರು.

ಮೈಲೇಜ್: 15.73 [ARAI]

ಬಿಎಂಡಬ್ಲು ಎಕ್ಸ್1 - 41.91 ಲಕ್ಷ ರು.

ಮೈಲೇಜ್: 17.05 [ARAI]

ಮರ್ಸಿಡಿಸ್ ಬೆಂಝ್ ಜಿಎಲ್‌ಎ - 42.18 ಲಕ್ಷ ರು.

ಮೈಲೇಜ್: 17.9 [ARAI]

ವೋಲ್ವೋ ವಿ40 ಸಿಸಿ - 39.39 ಲಕ್ಷ ರು.

ಮೈಲೇಜ್: 16.81 [ARAI]

ಅಂತಿಮ ತೀರ್ಪು

ಅಂತಿಮ ತೀರ್ಪು

ಮುನ್ನಡೆ

 • ಹೊಂದಾಣಿಸಬಹುದಾದ ಚಾಲನಾ ಸ್ಥಾನ,
 • ಸ್ಟ್ಯಾಂಡರ್ಡ್ ಪ್ಯಾನರಾಮಿಕ್ ಸನ್ ರೂಫ್,
 • ಅತ್ಯುತ್ತಮ ಚಾಲನೆ, ಹ್ಯಾಂಡ್ಲಿಂಗ್,
 • 20 ಜಿಬಿ ಹಾರ್ಡ್ ಡ್ರೈವ್ (ಸಂಗೀತ ಆಲಿಸಲು)
 • ಕ್ವಾಟ್ರೊ ಆಲ್ ವೀಲ್ ಡ್ರೈವ್ ವ್ಯವಸ್ಥೆ

ಹಿನ್ನಡೆ

 • ಢಿಕ್ಕಿ ಜಾಗ,
 • ವೇಗವರ್ಧನೆ,
 • ಸ್ಥಾನಪಲ್ಲಟ (ಕ್ಲೈಮೇಟ್ ಕಂಟ್ರೋಲ್)

ಹಣಕ್ಕೆ ತಕ್ಕ ಮೌಲ್ಯ - ಡ್ರೈವ್ ಸ್ಪಾರ್ಕ್ ತೀರ್ಪು

ನಿಸ್ಸಂಶಯವಾಗಿಯೂ ಗರಿಷ್ಠ ಐದು ಅಂಕಗಳಲ್ಲಿ ನಾಲ್ಕು ತಾರೆಗಳ ರೇಟಿಂಗನ್ನು ಗಿಟ್ಟಿಸಿಕೊಳ್ಳುವಲ್ಲಿ ನೂತನ ಆಡಿ ಕ್ಯೂ7 ಯಶಸ್ವಿಯಾಗಿದೆ.

ಹದ್ದು ನೋಟ

ಹದ್ದು ನೋಟ

ಎಂಜಿನ್, ಚಾಲನಾ ವಿಧ

 • 35 ಟಿಡಿಐ (177 ಅಶ್ವಶಕ್ತಿ) ಜೊತೆ ಏಳು ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್,
 • ಎಸ್ ಟ್ರಾನಿಕ್ ಜೊತೆ ಫ್ರೀವೀಲ್ ಕ್ರಿಯಾತ್ಮಕತೆ (ಆಡಿ ಡ್ರೈವ್ ಆಯ್ಕೆ)
 • ಕ್ವಾಟ್ರೊ ಆಲ್ ವೀಲ್ ಡ್ರೈವ್

ಸೌಲಭ್ಯಗಳು

 • ಎಂಎಂಐ ನೇವಿಗೇಷನ್,
 • ಆಡಿ ಸೌಂಡ್ ಸಿಸ್ಟಂ,
 • ಧ್ವನಿ ಸಂಭಾಷಣೆ ವ್ಯವಸ್ಥೆ,
 • ಆಡಿ ಪಾರ್ಕಿಂಗ್ ಸಿಸ್ಟಂ ಪ್ಲಸ್ ಜೊತೆ ರಿಯರ್ ವ್ಯೂ ಕ್ಯಾಮೆರಾ,
 • ಡಿಲಕ್ಸ್ ಆಟೋಮ್ಯಾಟಿಕ್ ಎಸಿ,
 • ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಜೊತೆ ಗೇರ್ ಶಿಫ್ಟ್ ಪೆಡಲ್,
 • ಚಾಲಕ ಬದಿಯಲ್ಲಿ ಹೊರಮೈ ಮಿರರ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ, ಹೀಟಡ್ ಮತ್ತು ಬಾಗುವಿಕೆ, ಚಾಲಕ ಬದಿಯಲ್ಲಿ ಆಟೋಮ್ಯಾಟಿಕ್ ಆ್ಯಂಟಿ ಗ್ಲೇರ್ ಆ್ಯಕ್ಷನ್,
 • ಎಲ್ ಇಡಿ ಹೆಡ್ ಲೈಟ್ ಜೊತೆ ಡೈನಾಮಿಕ್ ಟರ್ನ್ ಇಂಡಿಕೇಟರ್,
 • ಆರು ಏರ್ ಬ್ಯಾಗ್

ಕಾನ್ಸೆಪ್ಟ್, ವಿನ್ಯಾಸ, ದೇಹ

 • 4.39 ಮೀಟರ್ ಉದ್ದ,
 • ಹೊಸ ಬಣ್ಣಗಳು (ಮಿಸಾನೊ ರೆಡ್, ಯುಟೋಪಿಯಾ ಬ್ಲೂ, ಟಂಡ್ರಾ ಬ್ರೌನ್),
 • ಎಲ್ ಇಡಿ ಹೆಡ್ ಲೈಟ್, ಡೈನಾಮಿಕ್ ಟರ್ನ್ ಸಿಂಗ್ನಲ್ ಜೊತೆ ಎಲ್ ಇಡಿ ಟೈಲ್ ಲೈಟ್

ಚಾಸೀ

 • ಎಲೆಕ್ಟ್ರೊ ಮೆಕ್ಯಾನಿಕಲ್ ಪವರ್ ಸ್ಟೀರಿಂಗ್,
 • ಫೋರ್-ಲಿಂಕ್ ರಿಯರ್ ಸಸ್ಫೆಷನ್,
 • ಆಡಿ ಡ್ರೈವ್ ಸೆಲೆಕ್ಟ್,
 • ಹೊಸತಾ ಎಲೆಕ್ಟ್ರಾನಿಕ್ ಸ್ಥಿರತೆ ಕಂಟ್ರೋಲ್ (ಇಎಸ್‌ಸಿ)

ಡ್ರೈವ್ ಸ್ಪಾರ್ಕ್ ಚೊಚ್ಚಲ ವಿಮರ್ಶಾತ್ಮಕ ವೀಡಿಯೋ

ವಿಮರ್ಶಾತ್ಮಕ ವೀಡಿಯೋ ಸಾಲಿಗೆ ಎಂಟ್ರಿ ಕೊಟ್ಟಿರುವ ನಿಮ್ಮ ಡ್ರೈವ್ ಸ್ಪಾರ್ಕ್ ತನ್ನ ಚೊಚ್ಚಲ ವೀಡಿಯೋವನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ಯೂಟ್ಯೂಬ್ ನಲ್ಲಿ ಭಾರಿ ವೀಕ್ಷಣೆ ಗಿಟ್ಟಿಸಿಕೊಳ್ಳುತ್ತಿದೆ. ಇನ್ಯಾಕೆ ತಡ ಈಗಲೇ 2015 ಆಡಿ ಕ್ಯೂ3 ಟೆಸ್ಟ್ ಡ್ರೈವ್ ವಿಮರ್ಶಾತ್ಮಕ ವೀಡಿಯೋ ವೀಕ್ಷಿಸಿ.

ಡ್ರೈವ್ ಸ್ಪಾರ್ಕ್ ಚೊಚ್ಚಲ ವಿಮರ್ಶಾತ್ಮಕ ಯೂಟ್ಯೂಬ್ ವೀಡಿಯೋ ವೀಕ್ಷಿಸಿ

ಕಾರು ಹೋಲಿಸಿ

ಆಡಿ ಕ್ಯೂ3
ಆಡಿ ಕ್ಯೂ3 ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
DriveSpark gets behind the wheel of the 2015 Audi Q3. Read the test drive report to discover how the Q3 drives, exterior styling, interior design, features, and verdict.
Please Wait while comments are loading...

Latest Photos