ನಶಿಸುತ್ತಿರುವ ಕರಕುಶಲ ಕಲೆ ನಡುವೆ ಹುಟ್ಟಿದ ಭವಿಷ್ಯತ್ತಿನ ಕಾರು
ಇತ್ತೀಚಿನ ದಿನಗಳಲ್ಲಿ ಕರಕುಶಲ ಕಲೆಗಳು ನಶಿಸಿ ಹೋಗುತ್ತಿದ್ದು, ಕೈ ಕಸುಬುಗಾರರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಬಿದಿರಿನಿಂದ ಮಾಡಲ್ಪಟ್ಟ ಭವಿಷ್ಯತ್ತಿನ ಕಾರೊಂದು ಸೃಷ್ಟಿಯಾಗಿರುವುದು ವಿಶೇಷವೆನಿಸಿದೆ.
ಕರಕುಶಲ ಸಾಮಾಗ್ರಿಗಳಿಂದ ಕಾರುಗಳ ನಿರ್ಮಾಣ ಮಾಡುವುದು ಹೊಸ ವಿಚಾರವೇನಲ್ಲ. ಇನ್ನು ಹೆಚ್ಚು ಹೇಳಬೇಕೆಂದರೆ ಇದು ಪರಿಸರ ಸ್ನೇಹಿ, ಮರು ಬಳಕೆ ಮಾಡಬಹುದಂತಹ ಸಾಮಾಗ್ರಿಗಳನ್ನು ಹೊಂದಿರುತ್ತದೆ. ಆದರೆ ನಾವಿಂದು ಪರಿಚಯಿಸಲಿರುವ ಬಿದಿರಿನ ಕಾರನ್ನೊಮ್ಮೆ ಕಣ್ಣುಬಿಟ್ಟು ನೋಡಿ. ನಯವಾದ ಹಾಗೂ ಅಸಂಪ್ರದಾಯಿಕ ವಿನ್ಯಾಸವನ್ನು ಹೊಂದಿರುವ ಈ ಭವಿಷ್ಯದ ಕಾರು ಸಂಪೂರ್ಣ ಕೈ ಕಸುಬಿನಿಂದ ತಯಾರಿಸಲಾಗಿದೆ.

ಗ್ರೀನ್ ಕಾರು
ಪ್ರಸ್ತುತ ಗ್ರೀನ್ ಕಾರು ಎಂದೆನಿಸಿಕೊಂಡಿರುವ ಈ ಪರಿಸರ ಸ್ನೇಹಿ ವಾಹನ ರಸ್ತೆಗಳಲ್ಲಿ ಒಡಾಟ ನಡೆಸಬಹುದೇ ಎಂಬುದು ನೋಡುಗರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಭವಿಷ್ಯದ ಕಾರು
ಭವಿಷ್ಯದಲ್ಲಿ ಮರು ಬಳಕೆ ಮಾಡಿದ ಪರಿಕರಗಳಿಂದ ಕಾರು ನಿರ್ಮಿಸುವ ಸಾಧ್ಯತೆಯನ್ನು ಮನಗಂಡು ಇಂತಹದೊಂದು ವಿನೂತನ ಕಾರನ್ನು ತಯಾರಿಸಲಾಗಿದೆ.

ವಿನ್ಯಾಸ
ಫಿನಿಕ್ಸ್ (Phoenix) ಎಂಬ ಹೆಸರಿನ ಈ ಬಿದಿರಿನ ಕಾರನ್ನು ವಿನ್ಯಾಸಗಾರರಾದ Kenneth Cobonpue ಹಾಗೂ Albrecht Birkner ಅಭಿವೃದ್ಧಿಪಡಿಸಿದ್ದಾರೆ.

ವಿಲೇವಾರಿ
ಈ ಕಾರಿನ ಮಹತ್ವದ ಫೀಚರ್ ಏನೆಂದರೆ ಇದನ್ನು ಬೇಡವೆಂದಾಗ ವಿಲೇವಾರಿ ಮಾಡಬಹುದಾಗಿದೆ. ನಾವಿಂದು ನೋಡುತ್ತಿರುವಂತೆಯೇ ಕೆಲವೇ ವರ್ಷಗಳಲ್ಲಿ ಆಕರ್ಷಣೆ ಕಳೆದುಕೊಂಡಾಗ ಮಾನವರಿಗೆ ಕಾರುಗಳು ತ್ಯಾಜ್ಯ ವಸ್ತುವಾಗಿ ಬಿಡುತ್ತದೆ.

ಕಾನ್ಸೆಪ್ಟ್ ಕಾರು
ಅಂದ ಹಾಗೆ ಕೇವಲ 10 ದಿನಗಳೊಳಗೆ ಈ ಆಕರ್ಷಕ ಕಾರನ್ನು ತಯಾರಿಸಲಾಗಿದೆ.

ಕರಕುಶಲ ಕಲೆಗೆ ಗೌರವ
ಅಂತಿಮವಾಗಿ ಬಿದಿರಿನ ಕಾರು ಮಾನವನ ಘನತೆಯನ್ನು ಎತ್ತಿ ಹಿಡಿಯುತ್ತಿದ್ದು, ಕುಶಲಕರ್ಮಿ ಕೌಶಲ್ಯಗಳನ್ನು ಗೌರವಿಸುತ್ತಿದೆ.


Click it and Unblock the Notifications








