India
YouTube

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

ಕೇಂದ್ರ ಸರ್ಕಾರವು ಟೋಲ್ ಪ್ಲಾಜಾಗಳನ್ನು ಕಡಿಮೆ ಮಾಡಲು ಮತ್ತು ಟೋಲ್ ಸಂಗ್ರಹವನ್ನು ಪರಿಣಾಮಕಾರಿಯಾಗಿ ಮಾಡಲು ವಿನೂತನ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಿದೆ. 2019 ರಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್ ಸಂಗ್ರಹಕ್ಕಾಗಿ ರೇಡಿಯೊ ಫ್ರೀಕ್ವೆನ್ಸಿ ತಂತ್ರಜ್ಞಾನದ ಆಧಾರದ ಮೇಲೆ ಫಾಸ್ಟ್‌ಟ್ಯಾಗ್ ಟೋಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

ಈಗ ಅದರ ಸ್ಥಳದಲ್ಲಿ ಹೊಸ ಮತ್ತು ಉತ್ತಮ ಟೋಲ್ ವ್ಯವಸ್ಥೆಯನ್ನು ತರುವ ಕೆಲಸ ಪ್ರಾರಂಭವಾಗಿದೆ. ಹೊಸ ಟೋಲ್ ವ್ಯವಸ್ಥೆಯು ಫಾಸ್ಟ್‌ಟ್ಯಾಗ್ ಸ್ಕ್ಯಾನಿಂಗ್ ಮತ್ತು ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

ಈ ವ್ಯವಸ್ಥೆ ಜಾರಿಗೆ ಬಂದರೆ ಟೋಲ್ ಪಾವತಿಗೆ ವಾಹನಗಳು ನಿಲ್ಲುವ ಅಗತ್ಯವಿಲ್ಲ ಮತ್ತು ಹೆದ್ದಾರಿಯಲ್ಲಿನ ಟ್ರಾಫಿಕ್ ಜಾಮ್‌ನಿಂದ ಮುಕ್ತಿ ಸಿಗಲಿದೆ. ಆರು ತಿಂಗಳೊಳಗೆ ಎಲ್ಲಾ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಂದ ಟೋಲ್ ಪ್ಲಾಜಾಗಳನ್ನು ತೆಗೆದುಹಾಕುವ ಮೂಲಕ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

ರಾಜ್ಯಸಭೆಯಲ್ಲಿ ನಡೆದ ಅಸೆಂಬ್ಲಿ ಅಧಿವೇಶನದ ಸಂದರ್ಭದಲ್ಲಿ ಮಾತನಾಡಿ, ಕೇಂದ್ರ ಸಾರಿಗೆ ಇಲಾಖೆಯು ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆಯಂತಹ ಹೊಸ ಆಯ್ಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಗಡ್ಕರಿ ಹೇಳಿದರು. ಇದು ಕಾರಿನಲ್ಲಿ ಅಳವಡಿಸಲಾದ ಜಿಪಿಎಸ್ ಮೂಲಕ ಚಾಲಕನ ಬ್ಯಾಂಕ್ ಖಾತೆಯಿಂದ ಟೋಲ್ ಮೊತ್ತವನ್ನು ಡೆಬಿಟ್ ಮಾಡುತ್ತದೆ.

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

ಟೋಲ್ ಸಂಗ್ರಹಕ್ಕೆ ಚಾಲಕನ ವಾಹನದ ನಂಬರ್ ಪ್ಲೇಟ್ ಓದುವ ಗಣಕೀಕೃತ ವ್ಯವಸ್ಥೆಯನ್ನು ಅನುಸರಿಸಲು ಪರ್ಯಾಯ ಮಾರ್ಗವನ್ನೂ ಅವರು ಸೂಚಿಸಿದರು. ನಂಬರ್ ಪ್ಲೇಟ್ ಓದುವುದು ಟೋಲ್ ಸಂಗ್ರಹದ ಮತ್ತೊಂದು ವಿಧಾನವಾಗಿದೆ ಎಂದು ಅವರು ಹೇಳಿದರು.

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

ಕೇಂದ್ರ ಸರ್ಕಾರವು ಈ ಎರಡೂ ಆಯ್ಕೆಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ಎರಡು ವಿಧಾನಗಳಲ್ಲಿ ಒಂದನ್ನು ಒಂದು ತಿಂಗಳಲ್ಲಿ ಅಂತಿಮಗೊಳಿಸಲಾಗುವುದು. ಟೋಲ್ ಸಂಗ್ರಹಣೆಯ ಇಂತಹ ಸುಧಾರಿತ ವಿಧಾನವನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲಿದ್ದು, ಟೋಲ್ ತೆರಿಗೆ ಪಾವತಿಸಲು ವಿಫಲರಾದವರಿಗೆ ದಂಡ ವಿಧಿಸಲಾಗುತ್ತದೆ.

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

ಇದು ಟೋಲ್ ಸಂಗ್ರಹಕ್ಕಾಗಿ RFID ವಿಧಾನವನ್ನು ಬಳಸುತ್ತದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರತಿ ದಿನ ಸುಮಾರು 120 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗುತ್ತಿದೆ. ಫಾಸ್ಟ್‌ಟ್ಯಾಗ್ ಮೂಲಕ ಟೋಲ್ ಸಂಗ್ರಹ ಪ್ರಾರಂಭವಾದಾಗಿನಿಂದ ಸುಮಾರು 5.56 ಕೋಟಿ ಫಾಸ್ಟ್‌ಟ್ಯಾಗ್ ಅನ್ನು ಸಾರ್ವಜನಿಕರಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

ಟೋಲ್ ಪ್ಲಾಜಾಗಳಲ್ಲಿ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡುವ ಪ್ರಯತ್ನವಾಗಿ 2019 ರಲ್ಲಿ ಟೋಲ್ ಸಂಗ್ರಹದ ಫಾಸ್ಟ್‌ಟ್ಯಾಗ್ ವಿಧಾನವನ್ನು ಪರಿಚಯಿಸಲಾಯಿತು. ಟೋಲ್ ಮೊತ್ತವನ್ನು ಡಿಜಿಟಲ್ ರೂಪದಲ್ಲಿ ಪಾವತಿಸುವಲ್ಲಿ ಈ ಕಲ್ಪನೆಯು ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ.

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

2024ರ ವೇಳೆಗೆ ಅಮೆರಿಕಾ ಮಾದರಿ ರಸ್ತೆ ನಿರ್ಮಾಣ

2024ರ ವೇಳೆಗೆ ಭಾರತದ ರಸ್ತೆಗಳನ್ನು ಅಮೆರಿಕದ ರಸ್ತೆಗಳಂತೆ ಮಾಡಲು ಯೋಜಿಸಲಾಗಿದೆ ಎಂದು ಗಡ್ಕರಿ ಅವರು ಹೇಳಿದ್ದಾರೆ. ರಸ್ತೆಗಳು ದೇಶದ ಸಮೃದ್ಧಿಯೊಂದಿಗೆ ಸಂಪರ್ಕ ಹೊಂದಿವೆ ಮತ್ತು ಉತ್ತಮ ರಸ್ತೆಗಳು ಸಾರಿಗೆ ವೆಚ್ಚ ಮತ್ತು ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಇದು ತ್ವರಿತ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಗಡ್ಕರಿ ಹೇಳಿದರು.

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

ಡಿಸೆಂಬರ್ 24 ರ ಒಳಗೆ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದ ಅವರು, ಅಮೇರಿಕಾ ಶ್ರೀಮಂತ ದೇಶ ಎಂಬ ಕಾರಣಕ್ಕೆ ಅಮೇರಿಕಾದ ರಸ್ಯೆಗಳು ಉತ್ತಮವಾಗಿಲ್ಲ. ಬದಲಾಗಿ ಅಮೇರಿಕಾದಲ್ಲಿ ರಸ್ತೆಗಳು ಚೆನ್ನಾಗಿರುವ‌ ಹಿನ್ನೆಲೆಯಲ್ಲಿ ಅಮೇರಿಕಾ ಅಭಿವೃದ್ಧಿಯಲ್ಲಿ ಮತ್ತಷ್ಟು ಎತ್ತಕ್ಕೆ ಏರಿದೆ ಎಂದರು.

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

ಭಾರತವನ್ನು ಸಂಪದ್ಭರಿತವಾಗಿಸಲು 2024ರ ಡಿಸೆಂಬರ್ ಒಳಗೆ ಭಾರತದ ರಸ್ತೆ ಮೂಲಸೌಕರ್ಯವು ಅಮೆರಿಕದಂತೆಯೇ ಇರುವಂತೆ ನೋಡಿಕೊಳ್ಳುತ್ತೇನೆ ಎಂದು ಗಡ್ಕರಿ ಹೇಳಿದರು. ರಸ್ತೆ ನಿರ್ಮಾಣವನ್ನು ಸುಧಾರಿಸಲು ಸರ್ಕಾರವು ಹೊಸ ತಂತ್ರಜ್ಞಾನಗಳನ್ನು ಅಳವಡಿಸುತ್ತಿದೆ ಎಂದ ಅವರು, ರಸ್ತೆ ನಿರ್ಮಾಣದಲ್ಲಿ ನಾಲ್ಕು ವಿಶ್ವದಾಖಲೆಗಳನ್ನು ಸ್ಥಾಪಿಸುವ ಬಗ್ಗೆ ಮಾಹಿತಿ ನೀಡಿದರು.

ಹೈವೇ ಪ್ರಯಾಣಿಕರೇ ಇನ್ಮುಂದೆ ನಿಮಗೆ ಟೋಲ್ ಪ್ಲಾಜಾ ಸಿಗೋದಿಲ್ಲ: ಕಾರಣ ಇಲ್ಲಿದೆ ನೋಡಿ...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಇದು ಟೋಲ್ ಪ್ಲಾಜಾಗಳಲ್ಲಿನ ಟ್ರಾಫಿಕ್ ದಟ್ಟಣೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಿಲ್ಲ. ಫಾಸ್ಟ್‌ಟ್ಯಾಗ್ ವ್ಯವಸ್ಥೆ ಜಾರಿಯಾಗಿದ್ದರೂ ವಾಹನಗಳು ರೈಲುಗಳಂತೆ ಉದ್ದನೆಯ ಸರತಿ ಸಾಲುಗಳು ಇರುವ ಹಲವು ನಿದರ್ಶನಗಳಿವೆ. ಕೇಂದ್ರ ಸರ್ಕಾರವು ಈ ಕಾಳಜಿಯನ್ನು ಅರ್ಥಮಾಡಿಕೊಂಡಂತಿದೆ. ನಿತಿನ್ ಗಡ್ಕರಿ ಅವರು ಪ್ರಸ್ತಾಪಿಸಿರುವ ಎರಡು ಹೊಸ ವಿಧಾನಗಳ ರೂಪದಲ್ಲಿ ಉತ್ತಮ ಪರ್ಯಾಯವನ್ನು ಹುಡುಕುವ ಕೆಲಸ ಮಾಡುತ್ತಿದೆ. ಫಾಸ್ಟ್‌ಟ್ಯಾಗ್ ಆಧಾರಿತ ಟೋಲ್ ಸಂಗ್ರಹದ ಹೊಸ ನೀತಿಯ ಬಗ್ಗೆ ಎಲ್ಲರೂ ಶ್ಲಾಘಿಸಿದ್ದು, ಮುಂದಿನ ಆರು ತಿಂಗಳೊಳಗೆ ಟೋಲ್ ಸಂಗ್ರಹದ ಹೊಸ ವಿಧಾನವನ್ನು ಪರಿಚಯಿಸುವ ನಿರೀಕ್ಷೆಯಿದೆ.

Most Read Articles

Kannada
English summary
Gadkari promises to eliminate toll plazas on National Highways
Story first published: Friday, August 5, 2022, 11:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X