ಯುಟ್ಯೂಬ್ ವೀಡಿಯೋ ಮಾಡುತ್ತಾ ಗೇಮ್ ಆಡಿ ಕೋಟಿ ಬೆಲೆಯ ಕಾರು ಖರೀದಿಸಿದ 22ರ ಯುವಕ: ಹೇಗೆ ಗೊತ್ತಾ?
ಇಂದು ಸೋಷಿಯಲ್ ಮೀಡಿಯಾಗಳ ಕಾಲ. ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚಿ ಹಲವರು ಸೆಲೆಬ್ರಿಟಿಗಳಾಗಿ ಮಿಂಚುತ್ತಿದ್ದಾರೆ. ಹೆಚ್ಚಿನ ಜನರು ವ್ಲಾಗ್ ಮಾಡುವುದನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಆದಾಯದ ಮೂಲವಾಗಿದ್ದು, ಹಲವರು ತಮ್ಮ ಗಳಿಕೆಯನ್ನು ತೋರಿಸುತ್ತಾರೆ. ಅವರು ದುಬಾರಿ ಕಾರುಗಳು ಮತ್ತು ಐಷಾರಾಮಿ ಬಂಗಲೆ ಖರೀದಿಸುವುದನ್ನು ನಾವು ನೋಡುತ್ತೇವೆ. ಇತ್ತೀಚೆಗೆ, 'ಜೊನಾಥನ್ ಗೇಮಿಂಗ್' ಅವರು ಲ್ಯಾಂಬೋರ್ಗಿನಿ ಹುರಾಕನ್ ಸೂಪರ್ ಕಾರನ್ನು ಖರೀದಿಸಿದ್ದಾರೆ. ಅವರು ಈ ಸೂಪರ್ ಕಾರನ್ನು ವಿತರಣೆ ಪಡೆದುಕೊಳ್ಳುವ ವೀಡಿಯೋವನ್ನು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಜೊನಾಥನ್ ಗೇಮಿಂಗ್ ಚಾನಲ್ 6.5 ಮಿಲಿಯನ್ ಸಬ್‌ಸ್ಕ್ರೈಬ್ ಗಳನ್ನು ಹೊಂದಿದ್ದಾರೆ. ಇವರು ಅಪ್ಲೋಡ್ ಮಾಡಿದ ಹೊಸ ವಿಡಿಯೋದಲ್ಲಿ ತಮ್ಮ ಫ್ಯಾಮಿಲಿಯು ಹೊಂದಿದ್ದ ಕಾರುಗಳ ಬಗ್ಗೆ ವಿವರಿಸಿದ್ದಾರೆ. ಜೊನಾಥನ್ ಅವರು ಬಾಲ್ಯದಿಂದಲೂ ಕಾರುಗಳ ಬಗ್ಗೆ ಹೆಚ್ಚು ಕ್ರೇಜ್ ಅನ್ನು ಹೊಂದಿದ್ದಾರೆ. ಅವರು ಬಳಿ ಬಿಎಂಡಬ್ಲ್ಯು ಮತ್ತು ಮುಸ್ತಾಂಗ್ ಸೂಪರ್ ಕಾರುಗಳನ್ನು ಹೊಂದಿದ್ದಾರೆ. ಇದೀಗ ಹೊಸ ಲ್ಯಾಂಬೂರ್ಗಿನಿ ಹುರಾಕನ್ (Lamborghini Huracan) ಸೂಪರ್ ಕಾರನ್ನು ಖರೀದಿಸಿದ್ದಾರೆ.

ಹೊಸ ವೀಡಿಯೋ ಪ್ರಾರಂಭದಲ್ಲಿ ಜೋನಾಥನ್ ಡೀಲರ್ ಬಳಿಗೆ ಬರುತ್ತಿರುವುದನ್ನು ಕಾಣಬಹುದು. ಅವರು ಡೀಲರ್ ಸ್ಟಾಕ್ ಅನ್ನು ಪರಿಶೀಲಿಸುತ್ತಾರೆ. VW ಬೀಟಲ್, ಬೆಂಟ್ಲಿ ಮತ್ತು ಲ್ಯಾಂಬೋರ್ಗಿನಿ ಉರಸ್ ನಂತಹ ಕೆಲವು ಆಸಕ್ತಿದಾಯಕ ಮಾದರಿಗಳನ್ನು ಕಾಣಬಹುದು. ವಿತರಕರು ಈ ಪ್ರತಿಯೊಂದು ಮಾದರಿಗಳನ್ನು ವಿವರಿಸುತ್ತಾರೆ ಮತ್ತು ಕೇಳುವ ಬೆಲೆಯನ್ನು ಸಹ ವಿವರಿಸಿದ್ದಾರೆ.
ಬೆಂಟ್ಲಿ ಕಾರು 1.85 ಕೋಟಿ ಕೇಳುವ ಬೆಲೆಯನ್ನು ಹೊಂದಿದೆ. ವೀಡಿಯೊದಲ್ಲಿ ತೋರಿಸಿರುವ ಮೂರನೇ ಮಾದರಿಯು ಲ್ಯಾಂಬೋರ್ಗಿನಿ ಉರಸ್ ಆಗಿದ್ದು, ಇದರ ಬೆಲೆ 4 ಕೋಟಿಗಿಂತ ಹೆಚ್ಚು ಆಗಿದೆ. ಆದರೆ ಅವರು ಲ್ಯಾಂಬೋರ್ಗಿನಿ ಹುರಾಕನ್ ಸೂಪರ್ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೋನಾಥನ್ ಮತ್ತು ಅವರ ಫ್ಯಾಮಿಲಿ ತಮ್ಮ ಕನಸಿನ ಕಾರಿನ ವಿತರಣೆಗಾಗಿ ಕ್ರಿಕೆಟ್ ಸ್ಟೇಡಿಯಂಗೆ ಕರೆದೊಯ್ಯಲಾಗುತ್ತದೆ.

ಈವೆಂಟ್ ರಾತ್ರಿಯಲ್ಲಿ ನಡೆಯುತ್ತದೆ. ನಿಜವಾದ ವಿತರಣೆಯನ್ನು ಪ್ರಾರಂಭಿಸುವ ಮೊದಲು ವಿತರಕರು ಗೇಮ್ಸ್ ಮತ್ತು ಕುಚೇಷ್ಟೆಗಳ ಸರಣಿಯನ್ನು ಯೋಜಿಸಿದ್ದಾರೆ. ಜೊನಾಥನ್ ಮತ್ತು ಅವರ ಕುಟುಂಬವು ಈ ಸಂದರ್ಭವನ್ನು ಸಂಪೂರ್ಣವಾಗಿ ಸಂಭ್ರಮಿಸುವುದನ್ನು ಕಾಣಬಹುದು. ಈ ವೀಡಿಯೋದಲ್ಲಿ ಅವರ ಫ್ಯಾಮಿಲಿ ಧ್ವನಿ ಕ್ಲಿಪ್‌ಗಳನ್ನು ಸಹ ಒಳಗೊಂಡಿದೆ. ಇನ್ನು ಈ ವೀಡಿಯೋದಲ್ಲಿ ಗೇಮರ್ ತನ್ನ ಕುಟುಂಬದೊಂದಿಗೆ ಹುರಾಕನ್ ಅನ್ನು ಅನಾವರಣಗೊಳಿಸುತ್ತಾರೆ.
ಜೊನಾಥನ್ ಅವರು ಹೊಸ ಲ್ಯಾಂಬೋರ್ಗಿನಿ ಹುರಾಕನ್ ಸೂಪರ್ ಕಾರನ್ನು ಪರಿಶೀಲಿಸುತ್ತಾರೆ. ಈ ಕಾರಿನ ಜೋರಾದ ಎಕ್ಸಾಸ್ಟ್ ನೋಟ್ ಅನ್ನು ಚೆಕ್ ಮಾಡುತ್ತಾರೆ. ಜೊನಾಥನ್ ಅವರ ಹೊಸ ಕಾರಿನ ಬಗ್ಗೆ ಹೇಳುವುದಾದರೆ, ಲ್ಯಾಂಬೋರ್ಗಿನಿ ಹುರಾಕನ್ ಬ್ಲ್ಯಾಕ್ ವ್ಹೀಲ್ ಗಳು ಮತ್ತು ಫ್ಲೋರೊಸೆಂಟ್ ಗ್ರೀನ್ ಕ್ಯಾಲಿಪರ್‌ಗಳೊಂದಿಗೆ ಸ್ಯಾಟಿನ್ ಗ್ರೇ ಬಣ್ಣವನ್ನು ಹೊಂದಿದೆ. ಈ ಹುರಾಕನ್‌ನ ಯಾವ ವೆರಿಯೆಂಟ್ ಎಂಬುವುದು ಇನ್ನು ತಿಳಿದುಬಂದಿಲ್ಲ. ಈ ಲ್ಯಾಂಬೋರ್ಗಿನಿ ಹುರಾಕನ್ ಸೂಪರ್ ಕಾರು RWD ಮತ್ತು AWD ಎಂಬ ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

ಈ ಲ್ಯಾಂಬೋರ್ಗಿನಿ ಹುರಾಕನ್ ಕಾರಿನಲಿ 5.2 ಲೀಟರ್ V10 ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 640 hp ಮತ್ತು 600 Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಕಾರು ಕೂಪ್ ಮತ್ತು ಸ್ಪೈಡರ್ ರೂಪಗಳನ್ನು ಹೊಂದಿದೆ ಮತ್ತು ಜೊನಾಥನ್ ಮೊದಲನೆಯದನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications