ದೆಹಲಿ - ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ

ಮೀರತ್‌ನಿಂದ ಪ್ರಯಾಗರಾಜ್‌ವರೆಗೆ ನಿರ್ಮಿಸಲು ಉದ್ದೇಶಿಸಲಾಗಿರುವ ಗಂಗಾ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪ್ರಕ್ರಿಯೆ ಆರಂಭವಾಗಿದೆ. ಈ ಯೋಜನೆಗಾಗಿ ಬೇಕಾಗಿರುವ 80%ನಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಸೆಪ್ಟೆಂಬರ್‌ನಿಂದ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ದೆಹಲಿ - ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ

ಈ ಯೋಜನೆಯ ಒಟ್ಟು ವೆಚ್ಚ ರೂ.36,000 ಕೋಟಿಗಳಾಗಿದ್ದು, ಕಾಮಗಾರಿಯು ಮುಂದಿನ 26 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಗಂಗಾ ಎಕ್ಸ್‌ಪ್ರೆಸ್‌ವೇ ಮೀರತ್‌ನ ಬಿಜೌಲಿ ಗ್ರಾಮದಿಂದ ಆರಂಭವಾಗಲಿದ್ದು, ಪ್ರಯಾಗರಾಜ್‌ನ ಜುಡಾಪುರ ದಾಂಡು ಗ್ರಾಮದಲ್ಲಿ ಕೊನೆಗೊಳ್ಳಲಿದೆ.

ದೆಹಲಿ - ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ

ಈ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ 12 ಜಿಲ್ಲೆಗಳ 519 ಗ್ರಾಮಗಳ ಮೂಲಕ ಹಾದು ಹೋಗಲಿದ್ದು ಮೀರತ್, ಹಾಪುರ್, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬದೌನ್, ಶಹಜಹಾನಪುರ, ಹಾರ್ಡೊಯ್, ಉನ್ನಾವೊ, ರಾಯ್ ಬರೇಲಿ, ಪ್ರತಾಪಗಢ ಹಾಗೂ ಪ್ರಯಾಗರಾಜ್ ಸೇರಿದಂತೆ ಹಲವು ನಗರಗಳನ್ನು ಸಂಪರ್ಕಿಸಲಿದೆ.

ದೆಹಲಿ - ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ

ಈ ಎಕ್ಸ್‌ಪ್ರೆಸ್‌ವೇ ಮೀರತ್‌ನಲ್ಲಿ 15 ಕಿ.ಮೀ, ಹಾಪುರದಲ್ಲಿ 33 ಕಿ.ಮೀ, ಬುಲಂದ್‌ಶಹರ್‌ನಲ್ಲಿ 11 ಕಿ.ಮೀ, ಅಮ್ರೋಹಾದಲ್ಲಿ 26 ಕಿ.ಮೀ, ಸಂಭಾಲ್‌ನಲ್ಲಿ 39 ಕಿ.ಮೀ, ಬುಡಾನ್‌ನಲ್ಲಿ 92 ಕಿ.ಮೀ, ಶಹಜಹನ್‌ಪುರದಲ್ಲಿ 40 ಕಿ.ಮೀ, ಹಾರ್ಡೊಯ್‌ನಲ್ಲಿ 99 ಕಿ.ಮೀ, ಉನ್ನಾವೊದಲ್ಲಿ 105 ಕಿ.ಮೀ, ರಾಯ್ ಬರೇಲಿಯಲ್ಲಿ 77 ಕಿ.ಮೀ, ಪ್ರತಾಪಗಢದಲ್ಲಿ 41 ಕಿ.ಮೀ ಹಾಗೂ ಪ್ರಯಾಗರಾಜ್'ನಲ್ಲಿ 16 ಕಿ.ಮೀ ಹಾದು ಹೋಗಲಿದೆ.

ದೆಹಲಿ - ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ

ಉದ್ದೇಶಿತ ಗಂಗಾ ಎಕ್ಸ್‌ಪ್ರೆಸ್‌ವೇ 6 ಪಥಗಳನ್ನು ಹೊಂದಿರಲಿದ್ದು, ಅದನ್ನು 8 ಪಥಗಳಿಗೆ ವಿಸ್ತರಿಸಬಹುದು. ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುವ ವಾಹನಗಳ ವೇಗದ ಮಿತಿಯನ್ನು ಪ್ರತಿ ಗಂಟೆಗೆ ಗರಿಷ್ಠ 120 ಕಿ.ಮೀಗಳಿಗೆ ಸೀಮಿತಗೊಳಿಸಲಾಗುತ್ತದೆ.

ದೆಹಲಿ - ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ

ಈ ಎಕ್ಸ್‌ಪ್ರೆಸ್‌ವೇ ದೆಹಲಿ - ಪ್ರಯಾಗರಾಜ್ ನಡುವಿನ ಪ್ರಯಾಣದ ಸಮಯವನ್ನು 10-11 ಗಂಟೆಗಳಿಂದ ಕೇವಲ 6-7 ಗಂಟೆಗಳಿಗೆ ಇಳಿಸಲಿದೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಗಾ ನದಿಯ ಮೇಲೆ ಸುಮಾರು ಒಂದು ಕಿ.ಮೀ ಉದ್ದದ ಸೇತುವೆ ಹಾಗೂ ರಾಮಗಂಗಾ ನದಿಯ ಮೇಲೆ 720 ಮೀಟರ್ ಉದ್ದದ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ.

ದೆಹಲಿ - ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ

ಒಟ್ಟಾರೆಯಾಗಿ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಸುಮಾರು 14 ಪ್ರಮುಖ ಸೇತುವೆಗಳು, 126 ಸಣ್ಣ ಸೇತುವೆಗಳು, 929 ಕಲ್ವರ್ಟ್‌ಗಳು, 7 ಆರ್‌ಒಬಿಗಳು, 28 ಫ್ಲೈಓವರ್‌ಗಳು ಹಾಗೂ 8 ಡೈಮಂಡ್ ಇಂಟರ್‌ಚೇಂಜ್‌ಗಳು ಇರಲಿವೆ.

ದೆಹಲಿ - ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ

ರೈಲ್ವೆ ಓವರ್‌ಬ್ರಿಡ್ಜ್‌ನ ಅಗಲ 120 ಮೀಟರ್ ಆಗಿರಲಿದೆ. ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಮೀರತ್ ಹಾಗೂ ಪ್ರಯಾಗರಾಜ್‌ನಲ್ಲಿ ಎರಡು ಪ್ರಮುಖ ಟೋಲ್ ಪ್ಲಾಜಾಗಳಿರಲಿವೆ. ಇದರ ಜೊತೆಗೆ ಈ ಎಕ್ಸ್‌ಪ್ರೆಸ್‌ವೇಯಲ್ಲಿ 15 ರಾಂಪ್ ಟೋಲ್ ಪ್ಲಾಜಾಗಳು ಸಹ ಇರಲಿವೆ.

ದೆಹಲಿ - ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ

ವಾಯುಪಡೆಯ ಬಳಕೆಗಾಗಿ ಸುಲ್ತಾನಪುರ ಜಿಲ್ಲೆಯ ಗಂಗಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ವಾಯುನೆಲೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದಾರಿ ತಪ್ಪಿ ಬರುವ ಪ್ರಾಣಿಗಳು ಹಾಗೂ ಸ್ಥಳೀಯ ಜನರ ಚಲನವಲನವನ್ನು ಪರೀಕ್ಷಿಸಲು ಎಕ್ಸ್‌ಪ್ರೆಸ್‌ವೇಯ ಉದ್ದಕ್ಕೂ ಕಾಂಕ್ರೀಟ್ ತಡೆ ಗೋಡೆ ನಿರ್ಮಿಸಲಾಗುವುದು.

ದೆಹಲಿ - ಪ್ರಯಾಗ್ ರಾಜ್ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ ಈ ಎಕ್ಸ್‌ಪ್ರೆಸ್‌ವೇ

ಗಂಗಾ ಎಕ್ಸ್‌ಪ್ರೆಸ್ ವೇ ಯೋಜನೆಯನ್ನು ಸಕಾಲಕ್ಕೆ ಪೂರ್ಣಗೊಳಿಸಲು 12 ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ ಎಂದು ಉತ್ತರ ಪ್ರದೇಶ ಎಕ್ಸ್‌ಪ್ರೆಸ್ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಹೇಳಿದೆ. ಈ ಯೋಜನೆಯ ಕಾಮಗಾರಿಯನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುವುದು ಎಂದು ಪ್ರಾಧಿಕಾರ ಹೇಳಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Ganga expressway to reduce travel time between Delhi and Prayagraj. Read in Kannada.
Story first published: Wednesday, July 7, 2021, 17:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X