ಇದು ಟಾಟಾ ಅಲ್ಲ, ಮತ್ತೊಂದು ಸ್ವದೇಶಿ ವಾಹನ! ಗ್ಯಾರೇಜ್ ಮೇಲ್ಛಾವಣಿ ಕುಸಿದರೂ ಬಂಡೆಯಂತೆ ನಿಂತ ಕಾರ್
ಹೊಸ ಕಾರನ್ನು ಖರೀದಿಸುವಾಗ ಜನರು ಮೈಲೇಜ್, ಬೆಲೆಯ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಆಧ್ಯತೆಯನ್ನು ನೀಡುತ್ತಿದೆ. ಟಾಟಾ ಮೋಟಾರ್ಸ್ ಕಂಪನಿಯು ಸುರಕ್ಷತೆಯ ವಿಷಯದಲ್ಲಿ ಹೆಚ್ಚು ಮೆಚ್ಚುಗೆಯನ್ನು ಪಡೆದುಕೊಂಡಿದೆ. ಭೀಕರ ಅಪಘಾತದಲ್ಲಿ ಟಾಟಾ ಕಾರಿನ ಪ್ರಯಾಣಿಕರು ಪಾರಾಗಿರುವ ವಿಡಿಯೋಗಳು ಆಗಾಗ ಸೋಷಿಯಲ್ ವಿಡಿಯೋಗಳಲ್ಲಿ ವೈರಲ್ ಆಗುತ್ತಿದೆ.
ಆ ವಿಡಿಯೋಗಳ ಕೆಳಗೆ ನೆಟ್ಟಿಗರು ಟಾಟಾ ಕಾರುಗಳ ಸುರಕ್ಷತೆ ಮೆಚ್ಚುಗೆ ವ್ಯಕ್ತಪಡಿಸುವ ಹಲವಾರು ಕಾಮೆಂಟ್ ಗಳನ್ನು ನೋಡಬಹುದು. ಇದೀಗ ಮತ್ತೊಂದು ಜನಪ್ರಿಯ ಸ್ವದೇಶಿ ವಾಹನ ತಯಾರಕ ಮಹೀಂದ್ರಾ ಕೂಡ ಅತ್ಯಂತ ಸುರಕ್ಷತೆ ಕಾರುಗಳನ್ನು ಬಿಡುಗಡೆಗೊಳಿಸಿ ಗ್ರಾಹಕತ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಮಹೀಂದ್ರಾ ಕಂಪನಿಯ ಸೂಪರ್ ಹಿಟ್ ಮಾಡೆಲ್ ಮಹೀಂದ್ರಾ ಥಾರ್ (Mahindra Thar) ಎಷ್ಟು ಸುರಕ್ಷಿತ ಎಂಬುದಕ್ಕೆ ಇತ್ತೀಚಿನ ಅಪಘಾತದ ವೀಡಿಯೋ ಉತ್ತಮ ಉದಾಹರಣೆ ಎಂದು ಹೇಳಬಹುದು.

ಮಹೀಂದ್ರಾ ಥಾರ್ ಎಸ್‍ಯುವಿಯು ಮೇಲೆ ಗ್ಯಾರೇಜ್ ಮೇಲ್ಛಾವಣಿ ಕುಸಿದಿದೆ. ಈ ಘಟನೆಯಿಂದ ಬಲಿಷ್ಠ್ ಮಹೀಂದ್ರಾ ಥಾರ್ ಎಷ್ಟು ಉತ್ತಮ ನಿರ್ಮಾಣ ಗುಣ್ಣಮಟ್ಟವನ್ನು ಹೊಂದಿದೆ ಎಂದು ತಿಳಿದುಕೊಳ್ಳಬಹುದು. ಈ ಥಾರ್ ಎಸ್‍ಯುವಿಯ ಮಾಲೀಕ ರತನ್ ಧಿಲ್ಲೋನ್ ಅವರು ಘಟನೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಘಟನೆಯು ಕಳೆದ ವರ್ಷ ಸಂಭವಿಸಿರುವುದಾಗಿದೆ.
ಗ್ಯಾರೇಜ್‌ನ ಮೇಲ್ಛಾವಣಿ ಕುಸಿದ ನಂತರ ಅವಶೇಷಗಳಡಿಯಲ್ಲಿ ಥಾರ್ ನಿಂತಿರುವ ಚಿತ್ರ ಈ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ಧಿಲ್ಲೋನ್ ಅವರು ವಿವರಿಸಿರುವುದು ಹೀಗೆ, ಧಿಲ್ಲೋನ್ ನಾಲ್ವರು ಕಾರ್ಮಿಕರೊಂದಿಗೆ ಕುಸಿದ ಛಾವಣಿಯ ಅವಶೇಷಗಳನ್ನು ಸ್ವಚ್ಛಗೊಳಿಸಿದರು. ಅದರ ಮೇಲೆ ಇಟ್ಟಿಗೆ ಮತ್ತು ಕಾಂಕ್ರೀಟ್ ಭಾಗಗಳು ಬಿದ್ದಿದ್ದರೂ ಥಾರ್ ಎಸ್‍ಯುವಿ ಮಾತ್ರ ಹಾನಿಗೊಳಗಾಗಲಿಲ್ಲ. ಚಿತ್ರಗಳನ್ನು ನೋಡಿದಾಗ ನಿಮಗೇ ಅರ್ಥವಾಗುತ್ತದೆ.

ಮಹೀಂದ್ರಾ ಥಾರ್ ಎಸ್‍ಯುವಿ ಬಗ್ಗೆ ಹೇಳುವುದಾದರೆ. ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್ ರೋಡರ್ ಎಸ್‍ಯುವಿ ಮಾದರಿಯಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಭಾರತದಲ್ಲಿ ಅಪಾರ ಅಭಿಮಾನಿ ಬಳಗವಿದೆ.
ಸುರಕ್ಷತೆಯ ದೃಷ್ಟಿಯಿಂದಲೂ ಮಹೀಂದ್ರಾ ಥಾರ್ ಅತ್ಯುತ್ತಮವಾಗಿದ್ದು, ಡ್ಯೂಯಲ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್),ಹಿಲ್ ಡಿಸೆಂಟ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್ಸ್, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ. ಈ ಮಹೀಂದ್ರಾ ಥಾರ್ ಭಾರತದ ಮಾರುಕಟ್ಟೆಯಲ್ಲಿ ಆಫ್-ರೋಡ್ ಎಸ್‌ಯುವಿಗಾಳದ ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಜಿಮ್ನಿಗೆ ನೇರ ಪ್ರತಿಸ್ಪರ್ಧಿಯಾಗಿದೆ.
ಮಹೀಂದ್ರಾ ಥಾರ್ 3 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದರ RWD (ರೇರ್ ವೀಲ್ ಡ್ರೈವ್) ವೇರಿಯೆಂಟ್ 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 118 PS ಗರಿಷ್ಠ ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 6 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದ್ದು, 15.2 ಕಿ.ಮೀ ಮೈಲೇಜ್ ನೀಡಲಿದೆ.
ಈ ಮಹೀಂದ್ರಾ ಥಾರ್ 4WD (ಫೋರ್ ವೀಲ್ ಡ್ರೈವ್) ವೇರಿಯೆಂಟ್ ನ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 PS ಗರಿಷ್ಠ ಪವರ್, 320 Nm ಪೀಕ್ ಟಾರ್ಕ್, 2.2 ಲೀಟರ್ ಡೀಸೆಲ್ ಎಂಜಿನ್ 130 PS ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ವೀಡ್ ಮ್ಯಾನುವಲ್ ಹಾಗೂ 6 ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications