ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಈಗ ಪ್ರಪಂಚದೆಲ್ಲೆಡೆ ಒಂದೇ ಆತಂಕ, ಒಂದೇ ಭಯ. ಅದುವೇ ಕರೋನಾ ವೈರಸ್ ಎಂಬ ಮಹಾಮಾರಿ. ಬಹುತೇಕ ಎಲ್ಲಾ ದೇಶಗಳು ಈ ಮಹಾಮಾರಿ ಬರದಂತೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೂ ಈ ವೈರಸ್ 77ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಈ ಮಾರಣಾಂತಿಕ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡ ಚೀನಾದಲ್ಲಿಯೇ ಸುಮಾರು 3,000ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಈಗ ಚೀನಾದಲ್ಲಿರುವ ಅತಿ ದೊಡ್ಡ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಗೀಲಿ, ಕರೋನಾ ವೈರಸ್ ಬರದಂತೆ ತಡೆಯುವ ಎಸ್‍‍ಯುವಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಗೀಲಿ ಕಂಪನಿ ತನ್ನ ಹೊಸ ಐಕಾನ್ ಎಲೆಕ್ಟ್ರಿಕ್ ಎಸ್‍‍ಯುವಿಯು ಕರೋನಾ ವೈರಸ್ ಬರದಂತೆ ತಡೆಯುತ್ತದೆ ಎಂದು ಹೇಳಿಕೊಂಡಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ ಐಕಾನ್ ಎಸ್‍‍ಯುವಿಯಲ್ಲಿರುವ ಎನ್ 95 ಏರ್ ಫಿಲ್ಟ್ರೇಷನ್ ಸಿಸ್ಟಂ ಕರೋನಾ ವೈರಸ್ ಸೇರಿದಂತೆ ಬೇರೆ ಯಾವುದೇ ರೀತಿಯ ಸೂಕ್ಷ್ಮಾಣು ಜೀವಿಗಳು ಒಳಗೆ ಬರದಂತೆ ತಡೆಯುತ್ತದೆ ಎಂದು ಹೇಳಲಾಗಿದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಇಂಟೆಲಿಜೆಂಟ್ ಏರ್ ಪ್ಯೂರಿಫಿಕೇಶನ್ ಸಿಸ್ಟಮ್ (ಐಎಪಿಎಸ್) ಎಂದು ಕರೆಯಲ್ಪಡುವ ಈ ಟೆಕ್ನಾಲಜಿಯು ಕ್ಯಾಬಿನ್‌ನಿಂದ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳನ್ನು ಬೇರೆ ಮಾಡಲು ಹಾಗೂ ತೆಗೆದುಹಾಕಲು ವಾಹನದ ಏರ್‍‍ಕಂಡೀಷನ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಕರೋನಾ ವೈರಸ್‍‍ನಿಂದಾಗಿ ಇಡೀ ಪ್ರಪಂಚವೇ ಭಯಗೊಂಡಿದೆ. ಈ ವೇಳೆಯಲ್ಲಿ ಈ ಎಸ್‍‍ಯುವಿಯಲ್ಲಿರುವ ಆಧುನಿಕ ಏರ್ ಫಿಲ್ಟ್ರೇಷನ್ ಸಿಸ್ಟಂನ ಅಗತ್ಯವಿದೆ. ಇದು ಕೇವಲ ಮಾರ್ಕೆಟಿಂಗ್ ಗಿಮಿಕ್ ಆಗಿರದೇ ಕಂಪನಿಯು ಹೇಳಿಕೊಂಡಂತೆ ಈ ಸಿಸ್ಟಂ ಕಾರ್ಯನಿರ್ವಹಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಚೀನಾವು ಈ ಎಸ್‍‍ಯುವಿಯ ಮೊದಲ ಮಾರುಕಟ್ಟೆಯಾಗಿರಲಿದೆ. ವೋಲ್ವೊ ಹಾಗೂ ಲೋಟಸ್ ಬ್ರಾಂಡ್‌ಗಳನ್ನು ಹೊಂದಿರುವ ಗೀಲಿ ಕಂಪನಿಯು ವಾಯು ಮಾಲಿನ್ಯವನ್ನು ತಡೆಗಟ್ಟಲು ಆಧುನಿಕ ಏರ್ ಫಿಲ್ಟ್ರೇಶನ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಎನ್ 95 ಸರ್ಟಿಫಿಕೇಟ್ ಐಕಾನ್‌ ಎಸ್‍‍ಯುವಿಯ ಬಿಡುಗಡೆಯು ಇದರ ಭಾಗವಾಗಿದೆ. ಈಗಾಗಲೇ 30,000ಕ್ಕೂ ಹೆಚ್ಚು ಗೀಲಿ ಐಕಾನ್ ಎಸ್‌ಯುವಿಯನ್ನು ಬುಕ್ಕಿಂಗ್‍ ಮಾಡಲಾಗಿದೆ. ಚೀನಾದಲ್ಲಿಯೇ ಹೆಚ್ಚಿನ ಸಂಖ್ಯೆಯ ಬುಕ್ಕಿಂಗ್‍‍ಗಳನ್ನು ಮಾಡಲಾಗಿದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಈ ಎಸ್‍‍ಯುವಿಯನ್ನು 2018ರ ಬೀಜಿಂಗ್ ಆಟೋ ಶೋದಲ್ಲಿ ಪ್ರದರ್ಶಿಸಲಾದ ಕಾನ್ಸೆಪ್ಟ್ ಕಾರಿನ ಆಧಾರದ ಮೇಲೆ ತಯಾರಿಸಲಾಗಿದೆ. ಐಕಾನ್ ಎದ್ದು ಕಾಣುವಂತಹ ಲೈನ್ ಹಾಗೂ ಸರ್ಫೆಸ್‍‍ಗಳನ್ನು ಹೊಂದಿದೆ. ಪ್ರಪಂಚದದ್ಯಾಂತವಿರುವ ಗೀಲಿ ಕಂಪನಿಯ ಐದು ವಿನ್ಯಾಸ ಕೇಂದ್ರಗಳಿಂದ ಈ ಎಸ್‍‍‍ಯುವಿಯ ವಿನ್ಯಾಸವನ್ನು ಪಡೆಯಲಾಗಿದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಈ ಎಸ್‍‍ಯುವಿಯ ಇಂಟಿರಿಯರ್‍‍‍ನಲ್ಲಿ 10.25 ಇಂಚಿನ ಡಿಸ್‍‍‍ಪ್ಲೇಯಲ್ಲಿ ಇನ್ಸ್ ಟ್ರೂಮೆಂಟ್ ಕಂಸೋಲ್ ಹಾಗೂ ಇನ್ಫೋಟೆನ್‍‍ಮೆಂಟ್ ಫಂಕ್ಷನ್‍‍ಗಳಿವೆ. ಬಲಭಾಗದಲ್ಲಿರುವ ಬೀಜ್ ಡ್ಯಾಶ್‍‍ಬೋರ್ಡ್ ಎಸಿ ವೆಂಟ್‍‍ಗಳನ್ನು ಹೊಂದಿದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಈ ಎಸ್‍‍ಯುವಿಯಲ್ಲಿರುವ ಇಂಟಿರಿಯರ್ ಡಿಸೈನ್ ಮಾಡ್ರನ್ ಸಿಟ್ರಿಯೊನ್‍ ಕಾರಿ‍ನಲ್ಲಿರುವಂತಿದೆ. ಗೀಲಿ ಐಕಾನ್ ಎಸ್‍‍ಯುವಿಯು 1.5 ಲೀಟರಿನ ಪೆಟ್ರೋಲ್ ಎಂಜಿನ್ ಹಾಗೂ ಇದರ ಜೊತೆಯಲ್ಲಿ 48 ವೋಲ್ಟ್ ನ ಮೈಲ್ಡ್ ಹೈಬ್ರಿಡ್ ಸಿಸ್ಟಂ ಹೊಂದಿದೆ. ಈ ಹೈಬ್ರಿಡ್ ಸಿಸ್ಟಂ 10 ಕಿ.ವ್ಯಾ ಹಾಗೂ 45 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಒಟ್ಟಾರೆಯಾಗಿ ಈ ಎಸ್‍‍ಯುವಿಯು 140 ಕಿ.ವ್ಯಾ ಅಂದರೆ 188 ಬಿ‍‍ಹೆಚ್‍‍ಪಿ ಪವರ್ ಹಾಗೂ 300 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍‍ನಲ್ಲಿ 7 ಸ್ಪೀಡ್‍‍ನ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಗೀಲಿ ಕಂಪನಿಯ ಐಕಾನ್ ಎಸ್‍ಯುವಿ 0 - 100 ಕಿ.ಮೀ ವೇಗವನ್ನು 7.9 ಸೆಕೆಂಡುಗಳಲ್ಲಿ ಆಕ್ಸೆಲರೇಟ್ ಮಾಡುತ್ತದೆ. ಈ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 17.54 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಗೀಲಿ ಕಂಪನಿಯು ಹೇಳಿದೆ.

ಈ ಕಾರು ಖರೀದಿಸಿದರೆ ಕರೋನಾ ಬರೋದಿಲ್ವಂತೆ..!

ಐಕಾನ್ ಎಸ್‍‍ಯುವಿಯು ಎಡಿಎಎಸ್ ಸೂಟ್‌ನಲ್ಲಿ ಆಕ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟೆನ್ಸ್, ಪಾದಚಾರಿಗಳು ಅಡ್ಡ ಬಂದಾಗ ಆಟೊನಾಮಸ್ ಎಮರ್ಜೆನ್ಸಿ ಬ್ರೇಕಿಂಗ್, ಆಟೋಮ್ಯಾಟಿಕ್ ಪಾರ್ಕಿಂಗ್ ಹಾಗೂ 360 ಡಿಗ್ರಿ ಕ್ಯಾಮರಾವನ್ನು ಹೊಂದಿದೆ.

Article Published On: Thursday, March 5, 2020, 11:29 [IST]
English summary
Geely claims new SUV can fight Corona Virus. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+