ನಟ ರಿತೇಶ್ ದೇಶಮುಖ್ ಹುಟ್ಟುಹಬ್ಬಕ್ಕೆ ಲಗ್ಷುರಿ ಗಿಫ್ಟ್ ಕೊಟ್ಟ ಪತ್ನಿ ಜೆನಿಲಿಯಾ

ನಟ ರಿತೇಶ್ ದೇಶಮುಖ್ ಮೊನ್ನೆಯಷ್ಟೇ ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ವೇಳೆ ಪತ್ನಿ ಜೆನಿಲಿಯಾ ರಿತೇಶ್ ಬರ್ತ್‌ಡೇ ವಿಶೇಷವಾಗಿ ಐಷಾರಾಮಿ ಕಾರೊಂದನ್ನು ಗಿಫ್ಟ್ ಮಾಡಿದ್ದಾರೆ.

By Praveen

ಬಾಲಿವುಡ್‌ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆದಿರುವ ನಟ ರಿತೇಶ್ ದೇಶಮುಖ್ ಮೊನ್ನೆಯಷ್ಟೇ ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ವೇಳೆ ಪತ್ನಿ ಜೆನಿಲಿಯಾ ರಿತೇಶ್ ಬರ್ತ್‌ಡೇ ವಿಶೇಷವಾಗಿ ಐಷಾರಾಮಿ ಕಾರೊಂದನ್ನು ಗಿಫ್ಟ್ ಮಾಡಿದ್ದಾರೆ.

ರಿತೇಶ್ ದೇಶಮುಖ್ ಹುಟ್ಟುಹಬ್ಬಕ್ಕೆ ಲಗ್ಷುರಿ ಗಿಫ್ಟ್ ಕೊಟ್ಟ ಜೆನಿಲಿಯಾ

ನಟ ರಿತೇಶ್ ದೇಶಮುಖ್ ಹುಟ್ಟುಹಬ್ಬಕ್ಕಾಗಿ ನಟಿ ಜೆನಿಲಿಯಾ ಅವರು ಟೆಸ್ಲಾ ಮಾಡೆಲ್ ಎಕ್ಸ್ ಕಾರನ್ನು ಗಿಫ್ಟ್ ಮಾಡಿದ್ದು, ಈ ಬಗ್ಗೆ ಟ್ಪೀಟ್ ಮಾಡಿರುವ ನಟ ರಿತೇಶ್ ದೇಶಮುಖ್ ಅವರು ತಮ್ಮ ಪತ್ನಿ ನೀಡಿರುವ ವಿಶೇಷ ಉಡುಗೊರೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ರಿತೇಶ್ ದೇಶಮುಖ್ ಹುಟ್ಟುಹಬ್ಬಕ್ಕೆ ಲಗ್ಷುರಿ ಗಿಫ್ಟ್ ಕೊಟ್ಟ ಜೆನಿಲಿಯಾ

ಈ ಮೂಲಕ ಭಾರತದಲ್ಲಿ ಟೆಸ್ಲಾ ಮಾಡೆಲ್ ಎಕ್ಸ್ ಹೊಂದಿರುವ ಎರಡನೇ ಮಾಲೀಕ ಎಂಬ ಖ್ಯಾತಿಗೆ ನಟ ರಿತೇಶ್ ದೇಶಮುಖ್ ಪಾತ್ರರಾಗಿದ್ದು, ಈ ಮೊದಲ ಮುಂಬೈ ಮೂಲದ ಉದ್ಯಮಿ ಪ್ರಶಾಂತ್ ರೂಯಾ ಎಂಬುವವರು ಟೆಸ್ಲಾ ಮಾಡೆಲ್ ಎಕ್ಸ್ ಕಾರನ್ನು ಆಮದು ಮಾಡಿಕೊಂಡಿದ್ದರು.

Recommended Video

Second-Generation Tesla Roadster Revealed
ನಟ ರಿತೇಶ್ ದೇಶ್‌ಮುಖ್ ಹುಟ್ಟುಹಬ್ಬಕ್ಕೆ ಲಗ್ಷುರಿ ಗಿಫ್ಟ್

ಇನ್ನು ನಟಿ ಜೆನಿಲಿಯಾ ಅವರು ನಟ ರಿತೇಶ್ ದೇಶಮುಖ್ ಅವರಿಗೆ ನೀಡಿರುವ ಟೆಸ್ಲಾ ಮಾಡೆಲ್ ಎಕ್ಸ್ ಹಲವು ವಿಶೇಷತೆಗಳಿಂದ ಕೂಡಿದ್ದು, ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ಅತಿ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ಐಷಾರಾಮಿ ಕಾರು ಆವೃತ್ತಿಯಾಗಿದೆ.

ನಟ ರಿತೇಶ್ ದೇಶ್‌ಮುಖ್ ಹುಟ್ಟುಹಬ್ಬಕ್ಕೆ ಲಗ್ಷುರಿ ಗಿಫ್ಟ್

ಟೆಸ್ಲಾ ಮಾಡೆಲ್ ಎಕ್ಸ್ ಕಾರುಗಳ ಮತ್ತೊಂದು ವಿಶೇಷ ಅಂದ್ರೆ ಒಂದು ಬಾರಿ ಚಾರ್ಜ್ ಮಾಡಿದ್ದಲ್ಲಿ 550 ಕಿಮಿ ಮೈಲೇಜ್ ನೀಡಬಲ್ಲ ಸುಧಾರಿತ ಲಿಥಿಯಂ ಅಯಾನ್ ಬ್ಯಾಟರಿ ಹೊಂದಿದ್ದು, ಅಮೆರಿಕ ಮಾರುಕಟ್ಟೆಯಲ್ಲಿ ಮಾತ್ರ ಟೆಸ್ಲಾ ಕಾರುಗಳು ಮಾರಾಟ ಜಾಲ ಹೊಂದಿದೆ.

ನಟ ರಿತೇಶ್ ದೇಶ್‌ಮುಖ್ ಹುಟ್ಟುಹಬ್ಬಕ್ಕೆ ಲಗ್ಷುರಿ ಗಿಫ್ಟ್

ಹೀಗಾಗಿ ನಟ ರಿತೇಶ್ ದೇಶಮುಖ್ ಅವರ ಹುಟ್ಟುಹಬ್ಬಕ್ಕಾಗಿ ಅಮೆರಿಕದಿಂದ ಟೆಸ್ಲಾ ಕಾರನ್ನು ಆಮದು ಮಾಡಿಕೊಂಡಿರುವ ನಟಿ ಜೆನಿಲಿಯಾ ಅವರು ಕಾರಿನ ಬೆಲೆ 80 ಲಕ್ಷ ಮತ್ತು ವಿಶೇಷ ಕಾರು ವಿನಿಯಮ ಶುಲ್ಕ 2 ಕೋಟಿ ಪಾವತಿಸಿದ್ದಾರೆ ಎನ್ನಲಾಗಿದೆ.

ತಪ್ಪದೇ ಓದಿ-ಮುಂಬೈ ರೋಡ್‌ಗಳಲ್ಲಿ ಕಮಾಲ್ ಮಾಡಿದ ಭಾರತ ಮೊದಲ ಟೆಸ್ಲಾ ಮಾಡೆಲ್ ಎಕ್ಸ್

ನಟ ರಿತೇಶ್ ದೇಶ್‌ಮುಖ್ ಹುಟ್ಟುಹಬ್ಬಕ್ಕೆ ಲಗ್ಷುರಿ ಗಿಫ್ಟ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ಅತಿಹೆಚ್ಚು ಜನಪ್ರಿಯತೆ ಸಾಧಿಸುತ್ತಿರುವ ಟೆಸ್ಲಾ ಮಾಡೆಲ್ ಎಕ್ಸ್ ಕಾರುಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಉದ್ಯಮಿ ಪ್ರಶಾಂತ್ ರೂಯಾ ನಂತರ ನಟ ರಿತೇಶ್ ದೇಶಮುಖ್ ಭಾರತದಲ್ಲಿ ಎರಡನೇ ಮಾಲೀಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ ಎನ್ನಬಹುದು.

ಡ್ರೈವ್ ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟ್ರೆಂಡಿಂಗ್ ವಿಡಿಯೋ ಇಲ್ಲಿದೆ ನೋಡಿ.

Article Published On: Wednesday, December 20, 2017, 13:19 [IST]
English summary
Actor Genelia D'Souza Gifts Tesla Model X Electric SUV To Husband Ritesh Deshmukh For His Birthday.
Read more on celebrity cars tesla
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+