ಮುಂಬೈ ರೋಡ್‌ಗಳಲ್ಲಿ ಕಮಾಲ್ ಮಾಡಿದ ಭಾರತ ಮೊದಲ ಟೆಸ್ಲಾ ಮಾಡೆಲ್ ಎಕ್ಸ್

ಟೆಸ್ಲಾ ನಿರ್ಮಾಣದ ಮೊದಲ ಕಾರು ಮಾಡೆಲ್ ಎಕ್ಸ್ ಕುರಿತು ಮಾಹಿತಿ ನೀಡೆದ್ದೇವು. ಅದೇ ಮಾದರಿಯ ಬಗ್ಗೆ ಮತ್ತಷ್ಟು ವರದಿಗಳು ಇಲ್ಲಿದ್ದು, ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು ಮುಂಬೈನ ಜನರಲ್ಲಿ ಕುತೂಹಲ ಹುಟ್ಟು ಹಾಕಿದ್ದು ಸುಳ್ಳಲ್ಲ.

By Praveen

ಕಳೆದ ವಾರವಷ್ಟೇ ನಾವು ಭಾರತಕ್ಕೆ ಲಗ್ಗೆಯಿಟ್ಟಿದ್ದ ಜನಪ್ರಿಯ ಟೆಸ್ಲಾ ನಿರ್ಮಾಣದ ಮೊದಲ ಕಾರು ಮಾಡೆಲ್ ಎಕ್ಸ್ ಕುರಿತು ಮಾಹಿತಿ ನೀಡೆದ್ದೇವು. ಅದೇ ಮಾದರಿಯ ಬಗ್ಗೆ ಮತ್ತಷ್ಟು ವರದಿಗಳು ಇಲ್ಲಿದ್ದು, ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು ಮುಂಬೈನ ಜನರಲ್ಲಿ ಕುತೂಹಲ ಹುಟ್ಟು ಹಾಕಿದ್ದು ಸುಳ್ಳಲ್ಲ.

ಮುಂಬೈ ರೋಡ್‌ಗಳಲ್ಲಿ ಕಮಾಲ್ ಮಾಡಿದ ಭಾರತ ಮೊದಲ ಟೆಸ್ಲಾ ಮಾಡೆಲ್ ಎಕ್ಸ್

ಸಂಘಟಿತ ವ್ಯಾಪಾರಗಳ ಸಂಸ್ಥೆಯಾದ ಎಸ್ಸಾರ್‌ನ ಸಿಇಒ ಆಗಿರುವಂತಹ ಪ್ರಶಾಂತ್ ರೂಯಾ ಅವರು ಟೆಸ್ಲಾ ಎಲೆಕ್ಟ್ರಿಕ್ ಕಾರನ್ನು ಕೊಳ್ಳುವ ಮೂಲಕ ಟೆಸ್ಲಾ ಕಂಪನಿಯ ಭಾರತದ ಮೊದಲ ಗ್ರಾಹಕ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದು, ಟೆಸ್ಲಾ ಮಾಡೆಲ್ ಎಕ್ಸ್ ನೋಡಲು ಮುಂಬೈ ಜನ ಮುಗಿಬಿದ್ದಿದ್ದಾರೆ.

ಮುಂಬೈ ರೋಡ್‌ಗಳಲ್ಲಿ ಕಮಾಲ್ ಮಾಡಿದ ಭಾರತ ಮೊದಲ ಟೆಸ್ಲಾ ಮಾಡೆಲ್ ಎಕ್ಸ್

ಕಳೆದ ವಾರ ಭಾರತಕ್ಕೆ ಟೆಸ್ಲಾ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಕಾರನ್ನು ಆಮದು ಮಾಡಿಕೊಂಡಿರುವ ಪ್ರಶಾಂತ್ ರೂಯಾ, ಮುಂಬೈ ರಸ್ತೆಗಳ ಮೇಲೆ ಹೊಸ ಕಾರನ್ನು ಚಲಾಯಿಸುವ ಮೂಲಕ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಭಾರತದಲ್ಲಿ ಸದ್ಯ ಈ ಕಾರು ಅಧಿಕೃತವಾಗಿ ಮಾರಾಟವಾಗುತ್ತಿಲ್ಲ.

Recommended Video

Tata Motors Delivers First Batch Of Tigor EV To EESL - DriveSpark
ಮುಂಬೈ ರೋಡ್‌ಗಳಲ್ಲಿ ಕಮಾಲ್ ಮಾಡಿದ ಭಾರತ ಮೊದಲ ಟೆಸ್ಲಾ ಮಾಡೆಲ್ ಎಕ್ಸ್

ವಿಶೇಷ ಪರವಾನಿಗೆ ಮೂಲಕ ಈ ಎಕ್ಸ್ ಮಾದರಿಯನ್ನು ಶ್ರೀ ರೂಯಾ ಆಮದು ಮಾಡಿಕೊಂಡಿದ್ದಾರೆ. ಅಮೆರಿಕಾದಲ್ಲಿ ಸುಮಾರು 120,000 ಯುಎಸ್ ಡಾಲರ್ ಅಥವಾ ಸುಮಾರು ರೂ.75 ಲಕ್ಷ ದರವನ್ನು ಈ ಕಾರು ಹೊಂದಿದೆ.

ಮುಂಬೈ ರೋಡ್‌ಗಳಲ್ಲಿ ಕಮಾಲ್ ಮಾಡಿದ ಭಾರತ ಮೊದಲ ಟೆಸ್ಲಾ ಮಾಡೆಲ್ ಎಕ್ಸ್

ಆದ್ರೆ ಭಾರತಕ್ಕೆ ಆಮದು ಮಾಡಿಕೊಳ್ಳಲು ಪ್ರಶಾಂತ್ ರೂಯಾ ಅವರು ನೀಡಿದ ಸುಂಕದ ಮೊತ್ತ ಕೇಳಿದರೆ ಖಂಡಿತವಾಗಿ ತಲೆ ಸುತ್ತುವುದಂತೂ ಗ್ಯಾರಂಟಿ. ಹೌದು.. ಮಾಡೆಲ್ ಎಕ್ಸ್ ಆಮದು ಮಾಡಿಕೊಳ್ಳಲು ಬರೋಬ್ಬರಿ 2 ಕೋಟಿ ಮೊತ್ತ ಪಾವತಿಸಿ ಕಾರನ್ನು ಭಾರತಕ್ಕೆ ತರಲಾಗಿದೆ.

ಮುಂಬೈ ರೋಡ್‌ಗಳಲ್ಲಿ ಕಮಾಲ್ ಮಾಡಿದ ಭಾರತ ಮೊದಲ ಟೆಸ್ಲಾ ಮಾಡೆಲ್ ಎಕ್ಸ್

ಇದಲ್ಲದೇ ಟೆಸ್ಲಾ ಸಂಸ್ಥೆಯ ಲೈನ್ ಅಪ್‌ನ ಏಕೈಕ ಎಸ್‌ಯುವಿ ಕಾರು ಮಾದರಿಯಾಗಿ ಮಾಡೆಲ್ ಎಕ್ಸ್ ಜನಪ್ರಿಯತೆ ಪಡೆದಿದ್ದು, ಇದು ಎಸ್‌ಯುವಿಗಿಂತಲೂ ಹೆಚ್ಚು ಕ್ರಾಸ್ಒವರ್ ಆಗಿದ್ದು ಮೂಲತಃ 7 ಆಸನಗಳನ್ನು ಪಡೆದುಕೊಂಡಿದೆ.

ಟೆಸ್ಲಾ ಮಾಡೆಲ್ ಎಕ್ಸ್ ವಿಶೇಷತೆ ಏನು?

ಮಾಡೆಲ್ ಎಕ್ಸ್‌ನಲ್ಲಿ 2 ಎಲೆಕ್ಟ್ರಿಕ್ ಮೋಟರ್‌ಗಳನ್ನು ಬಳಸಲಾಗಿದ್ದು, ಒಂದು ಎಂಜಿನ್ ಮುಂಭಾಗದ ಚಕ್ರಗಳಿಗೆ ಶಕ್ತಿ ಪೂರೈಕೆ ಮಾಡಿದರೇ ಇನ್ನೊಂದು ಎಲೆಕ್ಟ್ರಿಕ್ ಮೋಟಾರ್ ಹಿಂಬದಿ ಚಕ್ರಗಳಿಗೆ ಎಲೆಕ್ಟ್ರಿಕ್ ಶಕ್ತಿಯನ್ನು ಒದಗಿಸುತ್ತದೆ.

ಮುಂಬೈ ರೋಡ್‌ಗಳಲ್ಲಿ ಕಮಾಲ್ ಮಾಡಿದ ಭಾರತ ಮೊದಲ ಟೆಸ್ಲಾ ಮಾಡೆಲ್ ಎಕ್ಸ್

ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ 750 ಬಿಎಚ್‌ಪಿ ಮತ್ತು 967 ಎನ್ಎಂ ಟಾರ್ಕ್ ಶಕ್ತಿಯನ್ನು ಉತ್ಪಾದಿಸುತ್ತದೆ. ಇದೇ ಕಾರಣಕ್ಕೆ ಮಾಡೆಲ್ ಎಕ್ಸ್ ಕಾರು ಹೆಚ್ಚು ವೇಗವರ್ಧಕವಾಗಿದ್ದು, ಕೇವಲ 4.8 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗ ಪಡೆದುಕೊಳ್ಳುವಷ್ಟು ಶಕ್ತವಾಗಿದೆ.

ಮುಂಬೈ ರೋಡ್‌ಗಳಲ್ಲಿ ಕಮಾಲ್ ಮಾಡಿದ ಭಾರತ ಮೊದಲ ಟೆಸ್ಲಾ ಮಾಡೆಲ್ ಎಕ್ಸ್

ಭಾರತದಲ್ಲಿ ಬಿಡುಗಡೆ ಯಾವಾಗ?

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಅಧಿಕೃತವಾಗಿ ಪ್ರಾರಂಭಿಸುವ ಯೋಜನೆಗಳನ್ನು ಹೊಂದಿರುವ ಟೆಸ್ಲಾ, ಸದ್ಯದಲ್ಲೇ ಹೊಸ ಯೋಜನೆ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ.

ಡ್ರೈವ್ ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟ್ರೆಂಡಿಂಗ್ ವಿಡಿಯೋ ಇಲ್ಲಿದೆ ನೋಡಿ.

Most Read Articles

Kannada
English summary
Watch This Tesla Model X In Action On The Indian Roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X