IRCTC ಹೊಸ ಆ್ಯಪ್: ರೈಲು ಪ್ರಯಾಣದ ವೇಳೆ ಹತ್ತಿರದ ರೆಸ್ಟಾರೆಂಟ್ ಫುಡ್ ಡೆಲಿವರಿ ಪಡೆಯಿರಿ

ಭಾರತದಲ್ಲಿ ಫುಡ್‌ ಆರ್ಡರ್ ಮಾಡಿದ್ರೆ ಸಾಕು ಡೆಲಿವರಿಯನ್ನು ಸ್ಕೂಟರ್, ಬೈಕ್, ಕುದರೆಯೇರಿ ವಿವಿಧ ರೀತಿಯಲ್ಲಿ ತಲುಪಿಸಿರುವ ಹಲವು ವಿಧಾನಗಳನ್ನು ಕಂಡಿದ್ದೇವೆ. ಆದರೆ ರೈಲಿನ ಪ್ರಯಾಣಿಕರಿಗೆ ಆರ್ಡರ್ ಮಾಡುವ ಸೌಲಭ್ಯವಿರಲಿಲ್ಲ. ಇದೀಗ IRCTC ವೆಬ್‌ಸೈಟ್ ಮೂಲಕ ರೈಲು ಪ್ರಯಾಣಿಕರಿಗೆ ಭಾರತದಾದ್ಯಂತ WhatsApp ಮೂಲಕ ಆರ್ಡರ್ ಮಾಡುವ ಸೇವೆಯನ್ನು ಪ್ರಾರಂಭಿಸಿದೆ.

IRCTC ಇದಕ್ಕಾಗಿ ಮೀಸಲಾದ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ನಲ್ಲಿ ರೈಲನ್ನು ಕಾಯ್ದಿರಿಸಿ ಪ್ರಯಾಣಿಸುವವರು ತಮ್ಮ ಟಿಕೆಟ್‌ನಲ್ಲಿ ಇರುವ ಪಿಎನ್‌ಆರ್ ಸಂಖ್ಯೆಯನ್ನು ನೋಂದಾಯಿಸಿ ಮುಂದಿನ ನಿಲ್ದಾಣಗಳಲ್ಲಿ ಹತ್ತಿರದ ರೆಸ್ಟೋರೆಂಟ್‌ಗಳಿಂದ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಬಹುದು. ಅದನ್ನು ನೇರವಾಗಿ ಅವರು ಕುಳಿತಿರುವ ಆಸನಕ್ಕೆ ಪಡೆಯಬಹುದು. ಈ ಸೇವೆ ಈಗಾಗಲೇ ಜಾರಿಯಲ್ಲಿ ಇದ್ದು ಊಟವನ್ನು ಕಾಯ್ದಿರಿಸಲು https://www.ecatering.irctc.co.in ಗೆ ಭೇಟಿ ನೀಡಬಹುದು.

IRCTC ಹೊಸ ಆ್ಯಪ್: ರೈಲು ಪ್ರಯಾಣದ ವೇಳೆ ಹತ್ತಿರದ ರೆಸ್ಟಾರೆಂಟ್ ಫುಡ್ ಡೆಲಿವರಿ ಪಡಿಯಿರಿ

ಇಲ್ಲಿ ನೀವು ಟಿಕೆಟ್ ಅಥವಾ ರೈಲು ಸಂಖ್ಯೆ ಮತ್ತು ಆಸನದ PNR ಸಂಖ್ಯೆಯನ್ನು ನೋಂದಾಯಿಸಿ ಫುಡ್ ಆರ್ಡರ್ ಮಾಡಬಹುದು. ಇದು ಪ್ರಯಾಣಿಕರಿಗೆ ತಮ್ಮ ವಾಟ್ಸಾಪ್ ಮೂಲಕ ಆಹಾರವನ್ನು ಆರ್ಡರ್ ಮಾಡುವ ಸೌಲಭ್ಯವನ್ನು ಪರಿಚಯಿಸುತ್ತದೆ. ರೈಲ್ವೆ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ, ಎರಡು ರೀತಿಯ WhatsApp ಬುಕಿಂಗ್ ಸೇವೆಗಳನ್ನು ಒದಗಿಸಲು ನಿರ್ಧರಿಸಿದೆ. ಈ ಸೇವೆಗಳನ್ನು ಒದಗಿಸಲು ಬಿಸಿನೆಸ್ WhatsApp ಸಂಖ್ಯೆ +91-8750001323 ಅನ್ನು ಈ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ.

ಈ ಮೂಲಕ ಮೊದಲ ರೀತಿಯಲ್ಲಿ ರೈಲು ಬುಕ್ ಮಾಡಿದ ಪ್ರಯಾಣಿಕರು ಆಹಾರ ಬುಕ್ಕಿಂಗ್ ವೆಬ್‌ಸೈಟ್‌ನ ಲಿಂಕ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸಬಹುದು. ಲಿಂಕ್ ಅನ್ನು ಕ್ಲಿಕ್ ಮಾಡಿ ಆಹಾರದ ಆರ್ಡರ್ ಪಡೆಯಬಹುದು. ಇದು ಸಾಮಾನ್ಯವಾಗಿ ವೆಬ್‌ಸೈಟ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವಂತೆಯೇ ಕಾರ್ಯನಿರ್ವಹಿಸುತ್ತದೆ. ಆದರೆ ಈ ವಿಧಾನವು ಅನೇಕ ಜನರಿಗೆ ಸಮಸ್ಯೆಗಳನ್ನು ಮತ್ತು ಗೊಂದಲಗಳನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ ಎರಡನೇ ವಿಧಾನವನ್ನು ಕೂಡ ಅಳವಡಿಸಲಾಗಿದೆ.

ಕೃತಕ ಬುದ್ಧಿಮತ್ತೆಯ (AI) ಚಾಟ್- ಬಾಟ್ ಅನ್ನು WhatsApp ನೊಂದಿಗೆ ಸಂಪರ್ಕಿಸಲಾಗಿದೆ. ಆ ಮೂಲಕ ನೀವು ನೇರವಾಗಿ ವಾಟ್ಸ್‌ ಆಪ್‌ನಲ್ಲಿ ಯಾವ ನಿಲ್ದಾಣದಲ್ಲಿ ಆಹಾರವನ್ನು ಬಯಸುತ್ತೀರಿ. ಅಲ್ಲಿ ಯಾವ ರೆಸ್ಟೋರೆಂಟ್‌ಗಳು ಸೇವೆ ಸಲ್ಲಿಸುತ್ತಿವೆ ? ಅಲ್ಲಿ ನಿಮಗೆ ಯಾವ ರೀತಿಯ ಆಹಾರ ಬೇಕು ಮತ್ತು ಎಷ್ಟು ಬೇಕು? ಯಾವಾಗ ಬೇಕು? ಸೇರಿದಂತೆ ಎಲ್ಲದರ ಬಗ್ಗೆ ವಿವರಗಳನ್ನು ಪಡೆಯಬಹುದು. ನೀವು ವಾಟ್ಸಾಪ್‌ನಲ್ಲಿ ಪಾವತಿಯನ್ನು ಸಹ ಮಾಡಬಹುದು.

ಆದರೆ ಎರಡನೇ ಚಾಟ್- ಬಾಟ್ ವ್ಯವಸ್ಥೆಯನ್ನು ಪ್ರಸ್ತುತ ಕೆಲವು ನಿಲ್ದಾಣಗಳಲ್ಲಿ ಮಾತ್ರ ಪ್ರಾಯೋಗಿಕ ಯೋಜನೆಯಾಗಿ ಅಳವಡಿಸಲಾಗಿದೆ. ಇದು ಯಶಸ್ವಿಯಾದರೆ ಹಂತಹಂತವಾಗಿ ಇತರೆ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ರೈಲ್ವೆ ನಿಲ್ದಾಣದ ಹೊರಗಿನ ಅಂಗಡಿಗಳಿಂದ ಆನ್‌ಲೈನ್‌ನಲ್ಲಿ ಆಹಾರ ಪಡೆಯುವ ಸೇವೆಯನ್ನು ರೈಲ್ವೇ ಯಶಸ್ವಿಯಾಗಿ ಪರಿಚಯಿಸಿದೆ. ರೈಲ್ವೆ ನಿಲ್ದಾಣದ ಒಳಗಿನ ಕ್ಯಾಂಟೀನ್‌ಗಳಲ್ಲಿ ಆಹಾರ ಇಷ್ಟಪಡದ ಜನರಿಗೆ ಈ ಸೇವೆಯನ್ನು ಪರಿಚಯಿಸುವವರೆಗೆ ಬೇರೆ ಆಯ್ಕೆಯೇ ಇರಲಿಲ್ಲ.

ಈ ಸ್ಥಳದ ವಿಶೇಷ ಆಹಾರದಿಂದ ಹಿಡಿದು ಪ್ರಯಾಣಿಸುವಾಗ ಪ್ರಯಾಣಿಕರು ಬಯಸುವ ಆಹಾರದವರೆಗೆ ಏನು ಬೇಕಾದರೂ ತಿನ್ನಬಹುದಾದ್ದರಿಂದ ಜನರು ಇದನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇಂದಿನ ಸನ್ನಿವೇಶದಲ್ಲಿ ಈ IRCTC ಆನ್‌ಲೈನ್ ಕ್ಯಾಟರಿಂಗ್ ಸೇವೆಯ ಮೂಲಕ ದಿನಕ್ಕೆ 50 ಸಾವಿರಕ್ಕೂ ಹೆಚ್ಚು ಊಟಗಳನ್ನು ವಿತರಿಸಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಸಂಪೂರ್ಣ ಬಳಕೆಗೆ ಬಂದಲ್ಲಿ ರೈಲ್ವೇ ನಿಲ್ದಾಣ ಹಾಗೂ ರೈಲುಗಳಲ್ಲಿ ಆಹಾರವನ್ನು ಮಾರುವವರಿಗೆ ತೀರ್ವ ಹೊಡೆತ ಬೀಳಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, February 8, 2023, 12:35 [IST]
English summary
Get nearby restaurant food delivery while traveling by train
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+