ಹೈವೇಯಲ್ಲಿ ದೆವ್ವದ ಕಾಟ... ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆ... ಆದ್ರೆ ಚಾಲಕ ಹೇಳಿದ್ದೇ ಬೇರೆ

ಪ್ರಸ್ತುತ ಕಾರುಗಳನ್ನು ಹೊಂದಿರುವ ಎಲ್ಲರೂ ತಮ್ಮ ವಾಹನಗಳಲ್ಲಿ ಡ್ಯಾಶ್‌ಕ್ಯಾಮ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನಮ್ಮ ತಪ್ಪಿಲ್ಲದೇ ಅಪಘಾತಗಳು, ಅನಿರೀಕ್ಷಿತ ಅನಾಹುತಗಳು ನಡೆದರೆ ವಿಡಿಯೋ ಸಾಕ್ಷ್ಯವು ನಮ್ಮನ್ನು ಪ್ರಕರಣದಿಂದ ಪಾರಾಗಿಸುತ್ತದೆ. ಆದರೆ ಈಗ ದೆವ್ವವೊಂದು ಡ್ಯಾಶ್‌ಕ್ಯಾಮ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದೆ.

ರಸ್ತೆಯಲ್ಲಿ ನಡೆಯುವ ಕೆಲವು ಅಪರೂಪದ ಘಟನೆಗಳು ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ದಾಖಲಾಗುತ್ತವೆ. ಈಗಾಗಲೇ ನಾವು ಯ್ಯೂಟ್ಯೂಬ್ ತೆರೆದು ಡ್ಯಾಶ್‌ಬೋರ್ಡ್ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿರುವ ಅನೇಕ ವೈರಲ್ ವೀಡಿಯೊಗಳನ್ನು ನೋಡಿದ್ದೇವೆ. ಆದರೆ ಈಗ ದೆವ್ವ ಕಾಣಿಸಿಕೊಂಡಿರುವ ವಿಡಿಯೋ ಸಂಚಲನ ಮೂಡಿಸಿದೆ. ಈ ಘಟನೆ ಅಮೆರಿಕಾದ ಪ್ರಮುಖ ರಾಜ್ಯವಾದ ಅರಿಜೋನಾದಲ್ಲಿ ನಡೆದಿದೆ. ಈ ಹಿಂದೆಯು ಈ ರಸ್ತೆಯಲ್ಲಿ ಹಲವರಿಗೆ ಇಂತಹ ಅನುಭವಗಳು ಆಗಿರುವ ಕುರಿತು ಸಾಲು ಸಾಲು ಕಥೆಗಳಿವೆ.

ಹೈವೇಯಲ್ಲಿ ದೆವ್ವದ ಕಾಟ... ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆ... ಆದ್ರೆ ಚಾಲಕ ಹೇಳಿದ್ದೇ ಬೇರೆ

ಈ ಅರಿಜೋನಾ ಪ್ರಾಂತ್ಯದ ರಸ್ತೆ 'ಮಾರ್ಗ 87' ರಲ್ಲಿ ಅನೇಕ ಅಪಘಾತಗಳು ನಡೆದಿವೆ. ಈ ಮಾರ್ಗದಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಭಯಂಕರ ಅನುಭವಗಳು ಆಗುತ್ತವೆ ಎಂದು ಹೇಳಲಾಗುತ್ತದೆ. ಏಕಾಏಕಿ ಆತ್ಮಗಳು ಅಡ್ಡ ಬರುವುದು, ಯಾರೋ ವಾಹನವನ್ನು ತಡೆಯುವಂತಾಗುವ ಅನುಭವಗಳು ಆಗುತ್ತವೆ ಎಂದು ಹಲವರು ಹೇಳಿದ್ದಾರೆ. ಇತ್ತೀಚೆಗೆ ವಿಲಿಯಂ ಚರ್ಚ್ ಎಂಬಾತ ಕೂಡ ಇದೇ ರಸ್ತೆಯಲ್ಲಿ ಲಾರಿಯನ್ನು ಚಲಾಯಿಸಿದ್ದು, ಅವರ ಡ್ಯಾಶ್‌ಕ್ಯಾಮ್‌ನಲ್ಲಿ ವಿಚಿತ್ರ ದೇಹದ ಆಕೃತಿ ಕಾಣಿಸಿಕೊಂಡಿದೆ.

ಅವರು ನೀಡಿರುವ ಡ್ಯಾಶ್‌ಕ್ಯಾಮ್ ವಿಡಿಯೋದಲ್ಲಿ ತೆವಳುವ ಭೂತದಂತಹ ಆಕೃತಿಯನ್ನು ತೋರಿಸುತ್ತದೆ. ಆದರೆ ಚಾಲಕ ಹೇಳುವುದನ್ನು ಕೇಳಿದರೆ ಆಶ್ಚರ್ಯವಾಗುತ್ತದೆ, ಏಕೆಂದರೆ ವಿಡಿಯೋದಲ್ಲಿ ಅಷ್ಟು ಸ್ಪಷ್ಟವಾಗಿ ಕಾಣುವ ಆಕೃತಿಯು ಆತ ಡ್ರೈವಿಂಗ್‌ನಲ್ಲಿ ಇದ್ದಾಗ ಕಾಣಿಸಿಲ್ಲವಂತೆ. ಅವರು ಚಾಲನೆ ಮಾಡುವಾಗ 287 ಮೈಲಿ ಮಾರ್ಗದಲ್ಲಿ ಯಾರನ್ನೂ ನೋಡಲಿಲ್ಲ ಎಂದು ಮಿರರ್ ವರದಿ ಮಾಡಿದೆ. ಮನೆಗೆ ಬಂದ ನಂತರ, ವಿಲಿಯಂ ಚರ್ಚ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ ದೃಶ್ಯಗಳನ್ನು ವೀಕ್ಷಿಸಿದ ಬಳಿಕವಷ್ಟೇ ವಿಷಯ ಬೆಳಕಿಗೆ ಬಂದಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ವೈಜ್ಞಾನಿಕ ದೃಷ್ಟಿಕೋನದಿಂದ, ಪ್ರೇತಗಳ ಅಸ್ತಿತ್ವವು ಇನ್ನೂ ಸಾಬೀತಾಗಿಲ್ಲ. ಹಾಗಾದರೆ ಭೂತದ ಆಕೃತಿ ಕ್ಯಾಮರಾದಲ್ಲಿ ಸಿಕ್ಕಿದ್ದು ಹೇಗೆ? ಸರಿಯಾಗಿ ಗೊತ್ತಿಲ್ಲ. ಇದು ಬೇರೆ ಯಾವುದಾದರೂ ಬೆಳಕು ಆಗಿರಬಹುದು ಎಂದು ಹಲವರು ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ರಸ್ತೆ ಮಾರ್ಗದಲ್ಲಿ ನಮಗೂ ಇಂತಹ ಅನುಭವಗಳು ಆಗಿವೆ ಇದನ್ನು ಹಲ್ಲಗೆಳೆಯುವಂತಿಲ್ಲ ಎನ್ನುತ್ತಿದ್ದಾರೆ.

ಇಂತಹ ಘಟನೆಗಳು ಕೇವಲ ಅಮೆರಿಕಾ ಮಾತ್ರವಲ್ಲ ವಿಶ್ವದ ಹಲವೆಡೆ ನಡೆದಿರುವ ಕುರಿತ ವಿಡಿಯೋಗಳು ಯ್ಯೂಟ್ಯೂಬ್‌ನಲ್ಲಿ ಸಿಗುತ್ತವೆ. ಕ್ಯಾಮೆರಾದಲ್ಲಿ ದೆವ್ವದಂತಹ ಆಕೃತಿಗಳು ಸೆರೆಹಿಡಿಯಲ್ಪಟ್ಟ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ, ವಿಶೇಷವಾಗಿ ಭಾರತದ ವಿವಿಧ ಭಾಗಗಳಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಬಹುತೇಕ ವಿಡಿಯೋಗಳನ್ನು ಬೇಕಂತಲೇ ಎಡಿಟ್ ಮಾಡಿರುವುದು ತಿಳಿದುಬಂದಿದೆ. ಹಾಗೆಯೇ ಈಗ ಸೆರೆಯಾಗಿ ವೈರಲ್ ಆಗಿರುವ ಈ ಅರಿಜೋನಾ ವಿಡಿಯೋ ಕುರಿತು ವೈಜ್ಞಾನಿಕ ಸ್ಪಷ್ಟನೆ ಹೊರಬರಬೇಕಿದೆ.

ಕ್ಯಾಮರಾದಲ್ಲಿ ದಾಖಲಾಗಿದ್ದು ದೆವ್ವ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಕೆಲವೊಮ್ಮೆ ಎದರು ಬರುವ ವಾಹನಗಳ ಲೈಟನ್ನು ಸುತ್ತಮಮುತ್ತಲಿನ ಗಾಜು ಅಥವಾ ಕನ್ನಡಿಗಳಿಂದ ಹೊರಹೊಮ್ಮುವ ಪ್ರತಿಬಿಂಬವು ರಸ್ತೆಯ ಮೇಲೆ ವಿಚಿತ್ರ ಆಕೃತಿಯಂತೆ ಕಾಣುತ್ತದೆ. ವಾಹನಗಳು ಕೂಡ ಚಾಲನೆಯಲ್ಲಿರುವುದರಿಂದ ಕ್ಯಾಮರಾಗಳು ಕೂಡ ಕೆಲವೊಮ್ಮೆ ತೆವಳುವ ರೀತಿಯಲ್ಲಿ ಅದನ್ನು ಸೆರೆ ಹಿಡಿಯುತ್ತವೆ. ಹಾಗಾಗಿ ಇದನ್ನು ಆತ್ಮವೆಂದು ಒಪ್ಪಿಕೊಳ್ಳುವುದು ಕಷ್ಟ, ವೈಜ್ಞಾನಿಕವಾಗಿ ಇದೇನೆಂಬುದು ರುಜುವಾದ ಬಳಿಕವಷ್ಟೇ ವಿಡಿಯೋ ಅಸಲಿಯತ್ತು ಹೊರಬೀಳಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, April 10, 2023, 18:29 [IST]
English summary
Ghost highway viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+