ನೆಲದಿಂದ ನೀರಲ್ಲಿ ಸರಾಗವಾಗಿ ಚಲಿಸುವ ಬೈಕ್

By Nagaraja

ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುತ್ತಿದ್ದು, ನಾವಿಂದು ಪರಿಚರಿಸಲಿರುವ ದ್ವಿಚಕ್ರ ವಾಹನ ಇದಕ್ಕೊಂದು ಪರಿಪೂರ್ಣ ಉದಾಹರಣೆಯಾಗಲಿದೆ. ನಿಮಗೆಲ್ಲರಿಗೂ ಗೊತ್ತಿರುವಂತೆಯೇ ಸಾಮಾನ್ಯ ಬೈಕ್ ನಲ್ಲಿ ನೀರಿನ ಮೇಲೆ ಚಲಿಸಲು ಸಾಧ್ಯವಾಗುವುದಿಲ್ಲ.

Also Read : ಪ್ರಪಂಚದ ಅತಿದೊಡ್ಡ ರೊಬೊಟಿಕ್ ಪಾರ್ಕಿಂಗ್ ಟವರ್

ಆದರೆ ನಾವೀನ್ಯತೆಗೆ ಕೈಗನ್ನಡಿ ಹಿಡಿದಿರುವ ವಿನ್ಯಾಸಕ ಅಲನ್ ಗಿಬ್ಸ್ ಎಂಬವರು ಅತಿ ನೂತನ ನೆಲದಲ್ಲೂ ನೀರಿನ ಮೇಲೂ ಚಲಿಸುವ ಅತಿ ವಿಶಿಷ್ಟ ಮೋಟಾರ್ ಸೈಕಲ್ (amphibious motorcycle) ಕಂಡುಹುಡುಕಿದ್ದಾರೆ.

ನೆಲದಿಂದ ನೀರಲ್ಲಿ ಸರಾಗವಾಗಿ ಚಲಿಸುವ ಬೈಕ್

ಈಗಾಗಲೇ ಫ್ಲೋರಿಡಾದಲ್ಲಿ ನಡೆದ ಅಮೆರಿಕನ್ ಇಂಟರ್ ನ್ಯಾಷನಲ್ ಮೋಟಾರ್ ಸೈಕಲ್ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಈ ಭೂಜಲಚರ ಗಾಡಿಯು ಸೂಪರ್ ಬೈಕ್ ತರಹನೇ ಹೈಸ್ಪೀಡ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ನೆಲದಿಂದ ನೀರಲ್ಲಿ ಸರಾಗವಾಗಿ ಚಲಿಸುವ ಬೈಕ್

ಉಭಯಚರ ವಾಹನಗಳ ಬಗ್ಗೆ ಮಾತನಾಡುವಾಗ ಕ್ವಾಡ್ ಬೈಕ್ ಮುಂತಾದ ಗಾಡಿಗಳು ಮೊದಲು ಯೋಚನೆ ಹೊಳೆಯುತ್ತದೆ. ಇದರಿಂದ ಪ್ರಭಾವಿತರಾಗದ ವಿನ್ಯಾಸಗಾರರು ಬೈಕ್ ಗೆ ವಿನೂತನ ಅವಿಷ್ಕಾರ ನೀಡಿದ್ದಾರೆ.

ನೆಲದಿಂದ ನೀರಲ್ಲಿ ಸರಾಗವಾಗಿ ಚಲಿಸುವ ಬೈಕ್

ಕೇವಲ ಐದು ಸೆಕೆಂಡುಗಳ ಅವಧಿಯೊಳಗೆ ಇದು ನೆಲದ ಮೇಲಿಂದ ನೀರಲ್ಲಿ ಚಲಿಸುವ ವಾಹನವಾಗಿ ಮಾರ್ಪಾಡುಗೊಳ್ಳುತ್ತದೆ. ಅಂದರೆ ಈ ಪರಿವರ್ತನೆಯು ಇದು ನಿಮ್ಮ ಅನುಭವಕ್ಕೆ ಬರುವುದಿಲ್ಲ. ಅಲ್ಲದೆ ಸಹಜ ಚಾಲನೆಯ ಮನರಂಜನೆಯನ್ನು ಪಡೆಯಬಹುದಾಗಿದೆ.

ನೆಲದಿಂದ ನೀರಲ್ಲಿ ಸರಾಗವಾಗಿ ಚಲಿಸುವ ಬೈಕ್

ಕಡಿಮೆ ಬೆಲೆಯ ಹೆಚ್ಚು ಪ್ರಾಯೋಗಿಕ ಉಭಜಚರ ವಾಹನದ ಕಲ್ಪನೆಯೇ ಇಂತಹದೊಂದು ನೂತನ ಸೃಷ್ಟಿಗೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ ಸಾಹಸ ಪ್ರಿಯ ಚಾಲಕರಿಗೆ ಪರಿಪೂರ್ಣ ಚಾಲನಾ ಅನುಭವ ಒದಗಿಸಲಿದೆ.

ನೆಲದಿಂದ ನೀರಲ್ಲಿ ಸರಾಗವಾಗಿ ಚಲಿಸುವ ಬೈಕ್

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಗಿಬ್ಸ್ ಉಭಯಚರ ವಾಹನಗಳನ್ನು ಹೊರ ತರುತ್ತಿರುವುದು. ಇದಕ್ಕೂ ಮೊದಲು ನೀರಿನಲ್ಲೂ ನೆಲದ ಮೇಲೂ ಸಂಚರಿಸುವ ಎಟಿವಿ, ಕ್ವಾಡ್ ಹಾಗೂ ತ್ರಿಚಕ್ರ ವಾಹನಗಳನ್ನು ಪರಿಚಯಿಸಿತ್ತು.

ನೆಲದಿಂದ ನೀರಲ್ಲಿ ಸರಾಗವಾಗಿ ಚಲಿಸುವ ಬೈಕ್

ಒಟ್ಟಿನಲ್ಲಿ ಗಿಬ್ಸ್ ನೂತನ ಬೈಕ್ ತಂತ್ರಜ್ಞಾನಕ್ಕೆ ಹೆಚ್ಚಿನ ಯಶಸ್ಸು ದೊರಕಲಿ ಎಂಬುದು ವಾಹನ ಪ್ರೇಮಿಗಳ ಹಾರೈಕೆಯಾಗಿದೆ.

ನೆಲದಿಂದ ನೀರಲ್ಲಿ ಸರಾಗವಾಗಿ ಚಲಿಸುವ ಬೈಕ್

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು: ಮುಂದಕ್ಕೆ ಓದಿ

More from DriveSpark

Article Published On: Monday, October 26, 2015, 12:21 [IST]
English summary
Gibbs introduces new high speed amphibious motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+