ಆನಂದ್ ಮಹೀಂದ್ರಾ ಬಳಿ ಓಡೋಡಿ ಬಂದು 7 ವರ್ಷದ ಹಿಂದಿನ ಕಥೆ ನೆನಪಿಸಿದ ಬಾಲಕಿ
ಆನಂದ್ ಮಹೀದ್ರಾ (Anand Mahindra) ಅವರು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮನ್ನು ತಾವು ಸೋಷಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಂಡು ಇರುತ್ತಾರೆ. ಆಗಾಗ ಟ್ವೀಟ್ ಮಾಡಿ ವಿಷಯಗಳನ್ನು ಶೇರ್ ಮಾಡಿಕೊಳ್ಳುವ ಅವರು ಸಾಮಾಜಿಕ ಜಾಲತಾಣಗಳಲ್ಲಿ 10 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಇದೀಗ ಆನಂದ್ ಮಹೀಂದ್ರಾ ಮತ್ತೊಂದು ಟ್ವೀಟ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ. ಕಳೆದ 7 ವರ್ಷಗಳ ಹಿಂದೆ ನಡೆದಿದ್ದ ಘಟನೆಯೊಂದು ಈ ಟ್ವೀಟ್‌ಗೆ ಸಂಭಂಧಿಸಿದೆ. ಹೀಗಾಗಿಯೇ ಇದು ಎಲ್ಲರ ಗಮನ ಸೆಳೆದಿದ್ದು ಈ ಇದರ ಕುರಿತು ಅರಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಸುಮಾರು ಏಳು ವರ್ಷಗಳ ಹಿಂದೆ ಮಗುವೊಂದು ಒಂದೂವರೆ ವರ್ಷವಿದ್ದಾಗ ಮಹೀಂದ್ರಾ ಕಾರಿನ ಒಳಗಡೆ ಕೂತು ಅದರ ಸ್ಟಿಯರಿಂಗ್ ಹಿಡಿದುಕೊಂಡಿರುವ ಫೋಟೋ ಒಂದನ್ನು ಆ ಮಗುವಿನ ತಂದೆ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಆ ಫೋಟೋ ತಲೆ ಬರಹದಲ್ಲಿ ನನಗೆ ಯಾವಾಗ 18 ವರ್ಷ ತುಂಬುತ್ತದೆ? ಇನ್ನೂ 16.5 ವರ್ಷ ಕಳೆಯಬೇಕು, ಎಂದು ಬರೆದಿದ್ದರು.
ಈ ರೀತಿಯ ಕ್ಯಾಪ್ಷನ್ ಅನ್ನು ಕೊಟ್ಟು ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್ ಮಾಡಿದ್ದರು. ಇದನ್ನು ಕಂಡು ಖುಷಿಗೊಂಡ ಆನಂದ್ ಮಹೀಂದ್ರಾ ಅಂದು ಅದನ್ನು ರೀಟ್ವೀಟ್ ಮಾಡಿ ಈ ಫೋಟೋ ನಮ್ಮ ಆಟೋ ಆರ್ಕೈವನ್ನು ಸೇರುತ್ತದೆ ಎಂದು ಬರೆದುಕೊಂಡಿದ್ದರು, ಇದು ಜನರ ಭಾರೀ ಮೆಚ್ಚುಗೆಗೆ ಒಳಗಾಗಿತ್ತು.
ಇದೀಗ 7 ವರ್ಷಗಳ ಬಳಿಕ ಅದೇ ಹುಡುಗಿ ಆನಂದ್ ಮಹೀಂದ್ರಾ ಅವರನ್ನು ಭೇಟಿಯಾಗಿ ತನ್ನ ಪರಿಚಯ ಮಾಡಿಕೊಂಡಿದ್ದಾಳೆ. ನೀವು ಅಂದು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ ಆ ಪುಟ್ಟ ಬಾಲಕಿ ನಾನೇ ಎಂದಿದ್ದಾಳೆ. ಆನಂದ್ ಮಹೀಂದ್ರಾ ಅವರ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದು ಅದನ್ನು ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ.
ನಿನ್ನೆ ಸಂಜೆ ಒಂದು ಸುಂದರ ಹುಡುಗಿ ರಿಯಾ, ನನ್ನ ಬಳಿ ಬಂದು ನಾನು ರೀಟ್ವೀಟ್ ಮಾಡಿದ ಹಳೆಯ ಟ್ವೀಟ್ ಒಂದನ್ನು ನೆನಪಿಸಿ ಅದು ನಾನೇ ಎಂದಿದ್ದಾಳೆ. ಈ ಹುಡುಗಿ ಖಂಡಿತವಾಗಿಯೂ ನಮ್ಮ ಕಾರೊಂದನ್ನು ಓಡಿಸುತ್ತಾಳೆ. ಬಹುತೇಕ ಅದು ಎಲೆಕ್ಟ್ರಿಕ್ ಕಾರಾಗಿರಲಿದೆ ಎಂದು ಆ ಫೋಟೋ ಕೆಳಗೆ ಬರೆದುಕೊಂಡಿದ್ದಾರೆ.
ಈ ಟ್ವೀಟ್‌ಗೆ ನೆಟ್ಟಿಗರಿಂದ ಭಾರೀ ಸ್ಪಂದನೆ ದೊರಕಿದ್ದು ನೂರಾರು ಕಾಮೆಂಟ್‌ಗಳು ಬಂದಿವೆ. ಅದರಲ್ಲಿ ಹಲವರು ಒಂದಿಲ್ಲಾ ಒಂದು ದಿನ ಈ ಬಾಲಕಿ ಮಹೀಂದ್ರಾ ಕಾರನ್ನು ಕೊಳ್ಳಲಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚಟುವಟಿಕೆಯಿಂದ ಇರುತ್ತಿದ್ದು ಆಗಾಗ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications