ಹೆಣ್ಮಕ್ಳೆ ನಿಮಗೆ ಇವೆಲ್ಲಾ ಬೇಕಾ? ರೈಲಿನಲ್ಲಿ ಪ್ರಯಾಣಿಕರ ಎದುರು ಇಂತಹ ನೃತ್ಯವೇ!
ಇತ್ತಿಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಯಾವಮಟ್ಟಿಗೆ ಬೆಳೆದು ನಿಂತಿದೆ ಎಂದರೇ ಯಾವುದೇ ಘಟನೆಯಾಗಲಿ ಕ್ಷಣಗಳಲ್ಲಿಯೇ ವೈರಲ್ ಆಗುತ್ತದೆ. ಯುವಜನತೆ ಕೂಡ ತಮ್ಮನ್ನು ತಾವು ಫೇಮಸ್ ಮಾಡಿಕೊಳ್ಳಲು ಹಲವು ವಿಡಿಯೋಗಳನ್ನು ಹರಿಬಿಡುತ್ತಿರುವುದನ್ನು ನಾವು ನೋಡಬಹುದು. ಆದರೆ ಅವಕ್ಕೆ ಮಿತಿ ಕೂಡ ಇರಬೇಕು ಇಲ್ಲದಿದ್ದರೇ ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗುತ್ತದೆ.
ಇತ್ತೀಚೆಗೆ ಯುವತಿಯರ ಗುಂಪೊಂದು ರೈಲಿನಲ್ಲಿ ಹಲವರು ಪ್ರಯಾಣಿಕರು ಇದ್ದಾಗಲೇ ವಿಚಿತ್ರವಾಗಿ ಕುಣಿದು ವೈರಲ್ ಆಗಿದ್ದಾರೆ. ಇದಕ್ಕೆ ಹಲವರು ಶ್ಲಾಘಿಸಿದರೇ ಬಹುತೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ವಿಡಿಯೋ ತೀರಾ ಅಶ್ಲೀಲವಾಗೇನಿಲ್ಲಾ, ಆದ್ರೆ ಯುವತಿಯರು ನೃತ್ಯದ ಹೆಸರಿನಲ್ಲಿ ತೋರುವ ಭಂಗಿಗಳು ಆಕ್ಷೇಪಣೀಯವಾಗಿವೆ. ಇವೆಲ್ಲಾ ಸಾಮಾನ್ಯ ಬಿಡಿ ಇಂಥಹದ್ದೇ ಹಲವು ವಿಡಿಯೋಗಳು ಇವೆ ಎಂದೆನಿಸಬಹುದು.

ಹೌದು ಇಂತಹ ವಿಡಿಯೋಗಳನ್ನು ನಾವು ಹಲವು ನೋಡಿರಬಹುದು, ಆದರೆ ಅವೆಲ್ಲವು ಒಂದು ಚೌಕಟ್ಟಿನೊಳಗೆ ಇರುತ್ತವೆ. ಅಂದರೆ ಸಾರ್ವಜನಿಕವಾಗಿ ಆ ವಿಡಿಯೋಗಳನ್ನು ಮಾಡಿರುವುದಿಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋವನ್ನು ನೀವು ಗಮನಿಸಿದರೆ ರೈಲಿನ ಕೋಚ್ ಒಳಗೆ ಹಲವರು ಪ್ರಯಾಣಿಕರು ಇದ್ದಾರೆ. ಜೊತೆಗೆ ಮಕ್ಕಳು ಕೂಡ ಇರುವುದನ್ನು ನಾವು ನೋಡಬಹುದು.
ಕೆಲ ಟ್ವಿಟ್ಟರ್ ಬಳಕೆದಾರರು ಯುವತಿಯರ ಗುಂಪಿನ್ನು ಮೆಚ್ಚಿಕೊಂಡು ಸಾರ್ವಜನಿಕವಾಗಿ ಹೀಗೆ ನೃತ್ಯ ಮಾಡುವುದು ಖಂಡಿತವಾಗಿಯೂ ಸಣ್ಣ ಸಾಧನೆಯಲ್ಲ ಎಂದು ಶ್ಲಾಘಿಸಿದರೆ, ಹಲವರು ಭಾರತೀಯ ಸಂಸ್ಕೃತಿ ಹಾಳಾಗುತ್ತಿದೆ ಎಂದು ಯುವತಿಯರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿಯವರೆಗೆ, ವಿಡಿಯೋ 45 ಸಾವಿರ ವೀಕ್ಷಣೆಗಳನ್ನು ಪಡೆದಿದ್ದು, ಬಹುತೇಕ ನೆಗೆಟಿವ್ ಕಮೆಂಟ್ ಗಳನ್ನು ಗಿಟ್ಟಿಸಿಕೊಂಡಿದೆ.
ಹೆಣ್ಣುಮಕ್ಕಳು ಭಾರತೀಯ "ಸಂಸ್ಕಾರ"ವನ್ನು ಹೇಗೆ ಹಾಳು ಮಾಡುತ್ತಿದ್ದಾರೆ ನೋಡಿ, ಇದು ಸ್ತ್ರೀ ಪರವಾಗಿ ಮಾತನಾಡಿವುದರ ಪರಿಣಾಮವಾಗಿದೆ. ಸಾರ್ವಜನಿಕವಾಗಿ ಇಂತಹ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೇಯನ್ನು ಒತ್ತಾಯಿಸಿದ್ದಾರೆ. ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಜೋಡಿಯೊಂದು ಚುಂಬಿಸುತ್ತಿದ್ದ ವಿಡಿಯೋ ಎಲ್ಲೆಡೆ ವೈರಲ್ ಆದ ಬೆನ್ನಲ್ಲೇ ಇದೀಗ ಯುವತಿಯರ ವಿಡಿಯೋ ವೈರಲ್ ಆಗಿದೆ.
ಭಾರತವು ಪಾಶ್ಚಾತ್ಯ ಸಂಸ್ಕೃತಿಯನ್ನು ಹೆಚ್ಚಾಗಿ ಅವಲಂಭಿಸಿಕೊಳ್ಳುತ್ತಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದಿನಿಂದಲೂ ಪಾಶ್ಚಾತ್ಯ ಸಂಸ್ಕೃತಿ ತುಸು ಇದೆಯಾದರೂ ನಡುರಸ್ತೆಗಳಲ್ಲಿ ಚುಂಬಿಸುವುದನ್ನು ಎಂದೂ ಕಂಡಿರಲಿಲ್ಲ. ಇತ್ತೀಚೆಗೆ ಇಂತಹ ಕೃತ್ಯಗಳು ಕೂಡ ಹೆಚ್ಚಾಗಿವೆ. ಇವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಹಲವರು ಪ್ರಶ್ನಿಸುವಂತಾಗಿದೆ.
ಇದೀಗ ರೈಲಿನಲ್ಲಿ ಮಾಡಿರುವ ವಿಡಿಯೋ ಕೂಡ ಹಲವರನ್ನು ಕೆರಳಿಸಿರುವುದಂತು ಸತ್ಯ. ಯುವತಿಯರು ಇಂತಹ ವಿಡಿಯೋಗಳನ್ನು ನಾಲ್ಕು ಗೋಡೆಗಳ ಮಧ್ಯೆ ಮಾಡಬೇಕು. ಸಾರ್ವಜನಿಕವಾಗಿ ಇಂತಹ ವಿಡಿಯೋಗಳನ್ನು ಮಾಡಿದರೆ ಸಮಾಜದಲ್ಲಿ ಇನ್ನೂ ಹಲವರನ್ನು ಪ್ರೇರೇಪಿಸುತ್ತದೆ. ಹಾಗಾಗಿ ರೈಲ್ವೆ ಕೂಡ ಇಂತಹ ವಿಡಿಯೋ ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ಮಾಡಲು ಯೋಚನೆ ಇದ್ದವರು ಕೂಡ ಸಕ್ರಮವಾಗಿರುತ್ತಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬದಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications