ವಾಹನ ಚಾಲನೆ ಮಾಡಲು ಬರದಿದ್ದರೆ ವಾಹನ ಬಾಡಿಗೆಗೆ ಪಡೆಯಬೇಡಿ ಎಂದ ಸಿ‍ಎಂ..!

ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್‍‍ರವರು ಗೋವಾಗೆ ತೆರಳುವ ಪ್ರವಾಸಿಗರಿಗೆ, ವಾಹನ ಚಲಾಯಿಸಲು ಬರದಿದ್ದರೆ ವಾಹನಗಳನ್ನು ಬಾಡಿಗೆಗೆ ಪಡೆಯಬಾರದೆಂದು ಮನವಿ ಮಾಡಿದ್ದಾರೆ. ಗೋವಾದಲ್ಲಿ ನಡೆದ ರಸ್ತೆ ಅಪಘಾತದ ನಂತರ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ವಾಹನ ಚಾಲನೆ ಮಾಡಲು ಬರದಿದ್ದರೆ ವಾಹನ ಬಾಡಿಗೆಗೆ ಪಡೆಯಬೇಡಿ ಎಂದ ಸಿ‍ಎಂ..!

ಇತ್ತೀಚಿಗೆ ಮಹಾರಾಷ್ಟ್ರದ ನಾಗ್ಪುರದಿಂದ ಗೋವಾಗೆ ಪ್ರವಾಸಕ್ಕಾಗಿ ಬಂದಿದ್ದ ಮಹಿಳೆಯೊಬ್ಬರು ಸ್ಕೂಟರ್‍‍ನಲ್ಲಿ ಮಾಂಡವಿ ಬ್ರಿಡ್ಜ್ ಮೇಲೆ ಹೋಗುವಾಗ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಮಹಿಳೆಯು ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ವಾಹನ ಚಾಲನೆ ಮಾಡಲು ಬರದಿದ್ದರೆ ವಾಹನ ಬಾಡಿಗೆಗೆ ಪಡೆಯಬೇಡಿ ಎಂದ ಸಿ‍ಎಂ..!

ಈ ಅಪಘಾತದ ನಂತರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್‍‍ರವರು ಮಾಂಡವಿ ಬ್ರಿಡ್ಜ್ ಮೇಲೆ ನಡೆದ ರಸ್ತೆ ಅಪಘಾತದಲ್ಲಿ ಮಹಿಳೆಯು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರಿಂದ ಮನಸ್ಸಿಗೆ ಬೇಸರವಾಗಿದೆ. ಜನರು ಗಾಡಿ ಚಲಾಯಿಸಲು ಬರದಿದ್ದರೆ, ಯಾಕೆ ವಾಹನಗಳನ್ನು ಪಡೆಯಬೇಕು ಎಂದು ಹೇಳಿದರು.

ವಾಹನ ಚಾಲನೆ ಮಾಡಲು ಬರದಿದ್ದರೆ ವಾಹನ ಬಾಡಿಗೆಗೆ ಪಡೆಯಬೇಡಿ ಎಂದ ಸಿ‍ಎಂ..!

ಈ ಘಟನೆ ನಡೆದ ನಂತರ ಹಲವು ಗಂಟೆಗಳವರೆಗೆ ಪಣಜಿಗೆ ಹೋಗುವ ರಸ್ತೆಗಳು ಬಂದ್ ಆಗಿದ್ದವು. ಗೋವಾಗೆ ಪ್ರವಾಸಕ್ಕೆ ತೆರಳುವ ಪ್ರವಾಸಿಗರು ಅಲ್ಲಿ ತಾವೇ ಓಡಾಡಲು ಕಾರು ಹಾಗೂ ಸ್ಕೂಟರ್‍‍ಗಳನ್ನು ಬಾಡಿಗೆಗೆ ಪಡೆಯುತ್ತಾರೆ.

ವಾಹನ ಚಾಲನೆ ಮಾಡಲು ಬರದಿದ್ದರೆ ವಾಹನ ಬಾಡಿಗೆಗೆ ಪಡೆಯಬೇಡಿ ಎಂದ ಸಿ‍ಎಂ..!

ಟ್ಯಾಕ್ಸಿ ಡ್ರೈವರ್‍‍ಗಳು ಹೆಚ್ಚು ಹಣವನ್ನು ವಸೂಲಿ ಮಾಡುವುದರಿಂದ ಹಾಗೂ ತಾವು ಬಯಸಿದ ಜಾಗಕ್ಕೆ ತೆರಳಲು ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದಿರುವುದರಿಂದ ಪ್ರವಾಸಕ್ಕೆ ತೆರಳುವ ಜನರು ಬಾಡಿಗೆ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ವಾಹನ ಚಾಲನೆ ಮಾಡಲು ಬರದಿದ್ದರೆ ವಾಹನ ಬಾಡಿಗೆಗೆ ಪಡೆಯಬೇಡಿ ಎಂದ ಸಿ‍ಎಂ..!

ಗೋವಾ ಪೊಲೀಸರು ಇ-ಚಲನ್ ಸಂಬಂಧ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಾವಂತ್‍‍ರವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

ವಾಹನ ಚಾಲನೆ ಮಾಡಲು ಬರದಿದ್ದರೆ ವಾಹನ ಬಾಡಿಗೆಗೆ ಪಡೆಯಬೇಡಿ ಎಂದ ಸಿ‍ಎಂ..!

ವಾಹನ ಚಾಲನೆ ಮಾಡಲು ಬಾರದ ಜನರು ಬಾಡಿಗೆಗೆ ವಾಹನಗಳನ್ನು ಪಡೆದು ತಪ್ಪು ದಾರಿಯಲ್ಲಿ ಚಾಲನೆ ಮಾಡುತ್ತಾರೆ. ಇದರಿಂದಾಗಿ ಗೋವಾದಲ್ಲಿ ಹೆಚ್ಚಿನ ಪ್ರಮಾಣದ ಅಪಘಾತಗಳಾಗುತ್ತಿವೆ ಎಂದು ಹೇಳಿದರು.

MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ವಾಹನ ಚಾಲನೆ ಮಾಡಲು ಬರದಿದ್ದರೆ ವಾಹನ ಬಾಡಿಗೆಗೆ ಪಡೆಯಬೇಡಿ ಎಂದ ಸಿ‍ಎಂ..!

ರಾಂಗ್ ಸೈಡಿನಲ್ಲಿ ಚಲಿಸುವ ವಾಹನಗಳಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಪೊಲೀಸರನ್ನು ಟೀಕಿಸಲಾಗುತ್ತಿದೆ. ಪೊಲೀಸರನ್ನು ಟೀಕಿಸುವ ಮೊದಲು ಪೊಲೀಸರು ಜನರ ಸುರಕ್ಷತೆ ದೃಷ್ಟಿಯಿಂದ ದಂಡ ವಿಧಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕೆಂದು ಹೇಳಿದರು.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ವಾಹನ ಚಾಲನೆ ಮಾಡಲು ಬರದಿದ್ದರೆ ವಾಹನ ಬಾಡಿಗೆಗೆ ಪಡೆಯಬೇಡಿ ಎಂದ ಸಿ‍ಎಂ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಸ್ತೆ ಸುರಕ್ಷತೆ ದೃಷ್ಟಿಯಿಂದ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್‍‍ರವರು ನೀಡಿರುವ ಹೇಳಿಕೆಯು ಸರಿಯಾಗಿದೆ. ಪ್ರತಿ ವರ್ಷ ಗೋವಾಗೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಅಲ್ಲಿಗೆ ಭೇಟಿ ನೀಡಿದ ನಂತರ ತಮ್ಮ ಓಡಾಟಕ್ಕಾಗಿ ವಾಹನಗಳನ್ನು ಬಾಡಿಗೆಗೆ ಪಡೆದು, ತಪ್ಪು ದಾರಿಯಲ್ಲಿ ಚಲಿಸಿ ಅಪಘಾತಕ್ಕೀಡಾಗುತ್ತಿದ್ದಾರೆ.

Most Read Articles

Kannada
English summary
If you can't drive don't rent cars says Goa CM - Read in Kannada
Story first published: Saturday, December 28, 2019, 12:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X