ಇನೋವಾ ಕಾರಿನ ಮೇಲೆ ಕುಳಿತ ಕೂಡಲೇ ರೂಫ್ ಜಖಂ: ಚೆನ್ನಾಗಿದ್ದ ಕಾರಿನ ಗುಣಮಟ್ಟಕ್ಕೆ ಏನಾಯ್ತು?

ಯಾವುದೋ ಕಾರಣಕ್ಕೆ ಭಾರತದಲ್ಲಿ ಹಲವರು ಕಾರಿನ ಮೇಲ್ಭಾಗದಲ್ಲಿ ಕುಳಿತುಕೊಳ್ಳುವುದು ಒಳ್ಳೆಯ ಅಭ್ಯಾಸ ಎಂದು ಭಾವಿಸಿದ್ದಾರೆ. ಅದರಲ್ಲಿ ಇನ್ನೂ ಕೆಲವರಿಗೆ ಕಾರಿನ ರೂಫ್‌ ಮೇಲೆ ಕುಳಿತುಕೊಂಡು ಫೋಟೋ ತೆಗೆಯುವ ಮಜವೇ ಬೇರೆ. ತಮ್ಮ ಕಾರಾಗಲಿ ಅಥವಾ ಇನ್ಯಾರದೇ ಕಾರಾಗಿರಲಿ ಅದರ ಮೇಲೆ ಕುಳಿತು ಒಂದು ಫೋಟೋ ತೆಗೆಸಿಕೊಳ್ಳಲಿಲ್ಲ ಎಂದರೆ ಸಮಾಧಾನವಾಗುವುದಿಲ್ಲ.

ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಒಂದು ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ಮೇಲೆ ಕುಳಿತ ಪರಿಣಾಮವಾಗಿ ಕಾರಿನ ರೂಫ್‌ ಜಖಂ ಆಗಿರುವುವ ಘಟನೆಯೊಂದು ಸಂಭವಿಸಿದೆ. ಗೆಳೆಯರೊಂದಿಗೆ ಟೊಯೋಟಾ ಇನ್ನೋವಾದಲ್ಲಿ ಗೋವಾಗೆ ಪ್ರವಾಸ ಹೋದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ಕಾಣುವಂತೆ ಗೋವಾದ ವಾಗಟಾರ್‌ ಬೀಚ್‌ ಪಕ್ಕ ಘಟನೆ ಸಂಭವಿಸಿದ್ದು, ವ್ಯಕ್ತಿ ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರಿನ ಮೇಲೆ ಕುಳಿತು ಇಳಿದಾಗ ಕಾರಿನ ಮೇಲ್ಭಾಗ ಜಖಂ ಆಗಿರುವುದನ್ನು ಗಮನಿಸಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯು ತನ್ನ ಗೆಳೆಯರೊಂದಿಗೆ ಬೀಚ್‌ ಪಕ್ಕದಲ್ಲಿ ನಿಲ್ಲಿಸಿದ್ದ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರಿನ ಮೇಲ್ಬಾಗದಲ್ಲಿ ಕುಳಿತಿದ್ದಾನೆ. ಆತ ಕುಳಿತ ಮೇಲೆ ಕಾರಿನ ಮೇಲ್ಬಾಗ ಜಖಂ ಆಗಿದೆ. ನಂರದಲ್ಲಿ ಆತ ಅಲ್ಲಿಂದ ಇಳಿದು ಕಾರಿನ ಡೋರ್‌ ತೆರೆದು, ಒಳ ಭಾಗದಿಂದ ಕಾರಿನ ಮೇಲಗಬಾಗವನ್ನು ಮೇಲಕ್ಕೆ ತಳ್ಳುವುದರ ಮೂಲಕ ಜಖಂ ಆಗಿದ್ದ ಟೋಯೋಟಾ ಇನ್ನೋವಾ ಕ್ರಿಸ್ಟಾ ಕಾರಿನ ಮೇಲ್ಬಾಗವನ್ನು ಸರಿ ಮಾಡುತ್ತಾನೆ.

ಘಟನೆಯ ನಂತರ ನೀಲ್‌ ಡಿಸೋಜಾ ಎಂದು ಹೆಸರಿರುವ ವ್ಯಕ್ತಿಯು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದು ನೆಟ್ಟಿಗರು ಕುರಿತಾಗಿ ಹಲವಾರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಕೂತಿದ್ದ ವ್ಯಕ್ತಿಯನ್ನು ಬೈದರೆ ಇನ್ನು ಹಲವರು ಕಾರಿನ ಗುಣಮಟ್ಟದ ಕುರಿತು ಮಾತನಾಡುವವರೆಗೆ ಇಳಿದಿದ್ದಾರೆ. ಇನ್ನು ಘಟನೆಗೆ ಸಂಭಂಧಿಸಿದ ಟೋಯೋಟಾ ಇನ್ನೋವಾ ಕ್ರಿಸ್ಟಾ ಕಾರು ಗೋವಾ ರಿಜಿಸ್ಟ್ರೇಷನ್‌ ವಾಹನವಾಗೊದ್ದು ಕಾರಿನ ನಂಬರನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.

ಇನೋವಾ ಕಾರಿನ ಮೇಲೆ ಕುಳಿತ ಕೂಡಲೇ ರೂಫ್ ಜಖಂ

ಯಾಕೆ ಕಾರಿನ ಮೇಲ್ಬಾಗದಲ್ಲಿ ಕುಳಿತುಕೊಳ್ಳಬಾರದು? ಹಲವರಿಗೆ ಕಾರಿನ ಮೇಲ್ಬಾಗದಲ್ಲಿ ಯಾಕೆ ಕುಳಿತುಕೊಳ್ಳಬಾರದು ಎಂಬುದರ ಕುರಿತಾಗ ಅಷ್ಟಾಗಿ ಅರಿವಿರುವುದಿಲ್ಲ. ಕಾರಿನ ಮೇಲ್ಬಾಗ ಕುಳಿತುಕೊಳ್ಳುವುದಕ್ಕೋಸ್ಕರ ವಿನ್ಯಾಸಗೊಳಿಸಿಲ್ಲ. ಕಾರ್‌ ರೂಫ್‌ ಅನ್ನು ಹವಾಮಾನದಿಂದ ಕಾರನ್ನು ಸಂರಕ್ಷಣೆ ಮಾಡುವ ಸಲುವಾಗಿ ವಿನ್ಯಾಸಗೊಳಿಸಿದ್ದಾರೆ. ಕಾರಿನ ಕ್ಯಾಬಿನ್‌ ಒಳಗೆ ಮಳೆ, ಗಾಳಿ, ಬಿಸಿಲು, ಧೂಳಿನಿಂದ ಕಾಪಾಡಲು ಕಾರಿಗೆ ರೂಫನ್ನು ತಯಾರಿಸಿರುತ್ತಾರೆ. ಕಾರಣಕ್ಕಾಗಿಯೇ ಕಾರಿನ ಇತರ ಭಾಗಗಳಿಗಿಂತ ಮೇಲ್ಭಾಗವನ್ನು ಬಹಳ ತೆಳುವಾಗಿ ತಯಾರಿಸಿರುತ್ತಾರೆ.

ಅಷ್ಟು ಮಾತ್ರವಲ್ಲದೇ, ಕಾರು ಅಪಘಾತವಾಗಿ ಪಲ್ಟಿಯಾಗುವ ಸಮಯದಲ್ಲಿ ಕಾರಿನ ಒಳಗಿರುವವರನ್ನು ರಕ್ಷಿಸಲು ಕಾರಿನ ಮೇಲ್ಬಾಗ ಸಹಾಯ ಮಾಡುತ್ತದೆ. ಎಲ್ಲಾ ಕಾರಣಗಳಿಂದ ಕಾರಿಗೆ ಮೇಲ್ಬಾಗ ಅಥವಾ ರೂಫನ್ನು ನೀಡುತ್ತಾರೆ. ಇನ್ನು ಹಲವು ರೋಡ್‌ಸ್ಟರ್‌ ಕಾರುಗಳಲ್ಲಿ ಮೇಲ್ಬಾಗವಿರುವುದಿಲ್ಲ. ಅದಕ್ಕೆ ಬದಲಾಗಿ ಸಾಫ್ಟ್‌ ಟಾಪನ್ನು ನಿಡಿರುತ್ತಾರೆ. ಕಾರನ್ನು ಬಳಸುವಾಗ ಅದರ ಉದ್ದೇಶ ಏನು ಎಂದು ತಿಳಿದು ಬಳಸುವುದರಿಂದ ಕಾರಿಗೆ ವಿನ್ಹಾ ಕಾರಣ ಆಗುವಂತಹ ಹಾನಿಗಳನ್ನು ತಪ್ಪಿಸಬಹುದಾಗಿದೆ.

ಇನ್ನು ಇದರ ಜೊತೆಗೆ ಕಾರಿನ ಮೇಲ್ಭಾಗದಲ್ಲಿ ಕುಳಿತ ತಕ್ಷಣ ಅದು ಜಖಂ ಆಗಿರುವುದರಿಂದ ಕಾರಿನ ಗುಣಮಟ್ಟದ ಕುರಿತಾಗಿಯೂ ಹಲವರು ಕಾಮೆಂಟ್‌ ಮಾಡಿದ್ದಾರೆ. ಕಾರಿನ ನಿರ್ಮಾಣದ ಗುಣಮಟ್ಟ ಸರಿ ಇಲ್ಲ, ಕಾರು ಗಟ್ಟಿಮುಟ್ಟಾಗಿಲ್ಲ ಎಂಬ ಕಾಮೆಂಟ್‌ಗಳನ್ನು ಸಹ ನಾವು ವಿಡಿಯೋ ಕೆಳಗಡೆ ಕಾಣಬಹುದು. ರೀತಿ ಕಾಮೆಂಟ್‌ ಮಾಡುವವರು ಗಮನಿಸಬೇಕಾದ ಅಂಶವೇನೆಂದರೆ ಕಾರಿನ ಗುಣಮಟ್ಟಕ್ಕೂ ಕಾರಿನ ಮೇಲ್ಭಾಗದಲ್ಲಿ ಕುಳಿತಾಗ ಜಖಂ ಆಗುವುದಕ್ಕೂ ಸಂಭಂಧವಿಲ್ಲ.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ: ರೀತಿಯ ಘಟನೆಗಳು ಇದೇ ಮೊದಲೇನಲ್ಲ. ಇದೇ ವರ್ಷ ಜನವರಿ ತಿಂಗಳಲ್ಲಿ ಕೆಲವು ವಿದೇಶಿ ಪ್ರವಾಸಿಗರು ಗೋವಾದಲ್ಲಿ ಚಲಿಸುತ್ತಿರುವ ಬೈಕ್‌ನಲ್ಲಿ ಮೂರ್ಖತನದ ವರ್ತನೆಗಳನ್ನು ಮಾಡಿರುವುದು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಮಾಡೆಲ್‌ ಒಬ್ಬಳು ಸಾರ್ವಜನಿಕ ರಸ್ತೆಯಲ್ಲಿ ಬೈಕ್‌ನಲ್ಲಿ ಸ್ಟಂಟ್‌ ಮಾಡುವುದನ್ನು ಇನ್ನೊಂದು ಬೈಕ್‌ನಲ್ಲಿ ಸಾಹಸಮಯ ರೀತಿಯಲ್ಲಿ ರೆಕಾರ್ಡ್‌ ಮಾಡುತ್ತಿದ್ದ ಫೋಟೋ ವೈರಲ್‌ ಆಗಿತ್ತು. ರೀತಿಯ ವರ್ತನೆಗಳನ್ನು ಆದಷ್ಟು ಖಾಸಗಿ ಸ್ಥಳಗಳಲ್ಲಿ ಮಾಡುವುದು ಉತ್ತಮ.

Article Published On: Tuesday, March 7, 2023, 17:55 [IST]
English summary
Goa tourist sits on the roof of toyota innova crystas roof and dents it
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+