ಅತಿ ಕಡಿಮೆ ಬೆಲೆಯ ಬಾಡಿಗೆ ಹೊಂದಿದೆ ಗೋಲ್ಡ್ ಬಣ್ಣದ ಈ ರೋಲ್ಸ್ ರಾಯ್ಸ್ ಕಾರು

ರೋಲ್ಸ್ ರಾಯ್ಸ್‌ ಕಂಪನಿಯ ಕಾರುಗಳು ವಿಶ್ವದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರುಗಳಾಗಿವೆ. ಈ ಕಾರಿನಲ್ಲಿ ಪ್ರಯಾಣಿಸುವುದು ಐಷಾರಾಮಿ ಕ್ರೂಸ್ ಹಡಗಿನಲ್ಲಿ ಪ್ರಯಾಣಿಸುವಂತಹ ಅನುಭವವನ್ನು ನೀಡುತ್ತದೆ.

ಅತಿ ಕಡಿಮೆ ಬೆಲೆಯ ಬಾಡಿಗೆ ಹೊಂದಿದೆ ಗೋಲ್ಡ್ ಬಣ್ಣದ ಈ ರೋಲ್ಸ್ ರಾಯ್ಸ್ ಕಾರು

ರೋಲ್ಸ್ ರಾಯ್ಸ್‌ ಕಾರುಗಳನ್ನು ಖರೀದಿಸುವುದು ಬಹುತೇಕ ಭಾರತೀಯರಿಗೆ ಕನಸಿನ ಮಾತು. ಭಾರತದಲ್ಲಿರುವ ಕೆಲವು ಕಂಪನಿಗಳು ರೋಲ್ಸ್ ರಾಯ್ಸ್ ಕಾರುಗಳನ್ನು ಅತಿ ಹೆಚ್ಚಿನ ಬೆಲೆಗೆ ಬಾಡಿಗೆಗೆ ನೀಡುತ್ತಿವೆ. ಕೇರಳದ ಉದ್ಯಮಿಯಾದ ಬಾಬಿ ಎಂಬುವವರು ಸಹ ತಮ್ಮ ರೋಲ್ಸ್ ರಾಯ್ಸ್ ಕಾರನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಆದರೆ ಅವರು ಈ ಕಾರಿಗೆ ಕಡಿಮೆ ಬಾಡಿಗೆ ಪಡೆಯುತ್ತಿದ್ದಾರೆ.

ಅತಿ ಕಡಿಮೆ ಬೆಲೆಯ ಬಾಡಿಗೆ ಹೊಂದಿದೆ ಗೋಲ್ಡ್ ಬಣ್ಣದ ಈ ರೋಲ್ಸ್ ರಾಯ್ಸ್ ಕಾರು

ಬಾಬಿಯವರು ಆಕ್ಸಿಜನ್ ಎಂಬ ಹೆಸರಿನ ರೆಸಾರ್ಟ್ ನಡೆಸುತ್ತಿದ್ದಾರೆ. ಈ ರೆಸಾರ್ಟಿಗೆ ಬರುವ ಗ್ರಾಹಕರಿಗೆ ಮಾತ್ರ ತಮ್ಮ ರೋಲ್ಸ್ ರಾಯ್ಸ್ ಕಾರನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಈ ಕಾರಣಕ್ಕೆ ಕಡಿಮೆ ಬಾಡಿಗೆ ನಿಗದಿ ಪಡಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅತಿ ಕಡಿಮೆ ಬೆಲೆಯ ಬಾಡಿಗೆ ಹೊಂದಿದೆ ಗೋಲ್ಡ್ ಬಣ್ಣದ ಈ ರೋಲ್ಸ್ ರಾಯ್ಸ್ ಕಾರು

ಬಾಬಿ ತಮ್ಮ ಗ್ರಾಹಕರೊಂದಿಗೆ ರೋಲ್ಸ್ ರಾಯ್ಸ್ ಕಾರಿನಲ್ಲಿ ತೆರಳುತ್ತಿರುವ ವೀಡಿಯೊಗಳನ್ನು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಬಾಬಿ ಈ ಕಾರಿಗೆ ಗೋಲ್ಡನ್ ಬಣ್ಣವನ್ನು ನೀಡಿದ್ದಾರೆ.

ಅತಿ ಕಡಿಮೆ ಬೆಲೆಯ ಬಾಡಿಗೆ ಹೊಂದಿದೆ ಗೋಲ್ಡ್ ಬಣ್ಣದ ಈ ರೋಲ್ಸ್ ರಾಯ್ಸ್ ಕಾರು

ಅವರ ಫೋಟೋವನ್ನು ಕಾರಿನ ಎರಡೂ ಬದಿಗಳಲ್ಲಿ ಸೀಲ್ ಮಾಡಿ ಅಂಟಿಸಲಾಗಿದೆ. ಬಾಬಿ ತಮ್ಮ ರೋಲ್ಸ್ ರಾಯ್ಸ್ ಕಾರನ್ನು ಹೊರಗಿನವರಿಗೆ ಎಂದಿಗೂ ಬಾಡಿಗೆಗೆ ನೀಡುವುದಿಲ್ಲ ಎಂದು ಹೇಳಲಾಗಿದೆ. ಅವರು ಈ ಕಾರಿಗೆ ಒಬ್ಬ ವ್ಯಕ್ತಿಯನ್ನು ಚಾಲಕರಾಗಿ ನೇಮಿಸಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅತಿ ಕಡಿಮೆ ಬೆಲೆಯ ಬಾಡಿಗೆ ಹೊಂದಿದೆ ಗೋಲ್ಡ್ ಬಣ್ಣದ ಈ ರೋಲ್ಸ್ ರಾಯ್ಸ್ ಕಾರು

ಆ ಚಾಲಕ ಅತಿಥಿಗಳನ್ನು ರೋಲ್ಸ್ ರಾಯ್ಸ್ ಕಾರಿನಲ್ಲಿ ಆಕ್ಸಿಜನ್ ರೆಸಾರ್ಟ್‌ಗೆ ಕರೆದೊಯ್ಯುತ್ತಾರೆ. ಜೊತೆಗೆ ಪ್ರವಾಸಗಳಿಗೆ ಕರೆದೊಯ್ಯುತ್ತಾರೆ. ಚಾಲಕನ ಹೊರತಾಗಿ ಬಾಬಿರವರು ಸಹ ಈ ರೋಲ್ಸ್ ರಾಯ್ಸ್ ಕಾರನ್ನು ಚಾಲನೆ ಮಾಡುತ್ತಾರೆ.

ಅತಿ ಕಡಿಮೆ ಬೆಲೆಯ ಬಾಡಿಗೆ ಹೊಂದಿದೆ ಗೋಲ್ಡ್ ಬಣ್ಣದ ಈ ರೋಲ್ಸ್ ರಾಯ್ಸ್ ಕಾರು

ಸ್ಥಳೀಯರ ಪ್ರಕಾರ ಚಾಲಕ ರಜೆ ತೆಗೆದುಕೊಂಡಾಗ ಬಾಬಿರವರು ರೋಲ್ಸ್ ರಾಯ್ಸ್ ಕಾರನ್ನು ಚಾಲನೆ ಮಾಡುತ್ತಾರೆ. ಅಂದ ಹಾಗೆ ಬಾಬಿರವರು ರೋಲ್ಸ್ ರಾಯ್ಸ್ ಫ್ಯಾಂಟಮ್ 7 ಮಾದರಿಯ ಕಾರನ್ನು ಬಾಡಿಗೆಗೆ ನೀಡಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅತಿ ಕಡಿಮೆ ಬೆಲೆಯ ಬಾಡಿಗೆ ಹೊಂದಿದೆ ಗೋಲ್ಡ್ ಬಣ್ಣದ ಈ ರೋಲ್ಸ್ ರಾಯ್ಸ್ ಕಾರು

ಈ ಕಾರಿಗೆ ರೂ.25 ಸಾವಿರ ಬಾಡಿಗೆ ನಿಗದಿ ಪಡಿಸಿದ್ದಾರೆ. ರೆಸಾರ್ಟ್ ನಲ್ಲಿ ವಿಶೇಷ ಪ್ಯಾಕೇಜುಗಳನ್ನು ತೆಗೆದುಕೊಳ್ಳುವವರಿಗೆ 300 ಕಿ.ಮೀಗಳ ಉಚಿತ ಪ್ರಯಾಣವನ್ನು ನೀಡುತ್ತಾರೆ ಎಂದು ಹೇಳಲಾಗಿದೆ. ಅವರು ತಮ್ಮ ಗ್ರಾಹಕರಿಗೆ 2 ದಿನ ಹಾಗೂ 3 ದಿನಗಳ ವಿವಿಧ ಪ್ಯಾಕೇಜ್‌ಗಳನ್ನು ನೀಡುತ್ತಿದ್ದಾರೆ.

ಈ ಯಾವುದೇ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡುವ ಗ್ರಾಹಕರಿಗೆ ಮಾತ್ರ ರೋಲ್ಸ್ ರಾಯ್ಸ್ ಅನ್ನು ಬಾಡಿಗೆಗೆ ನೀಡಲಾಗುತ್ತದೆ. ಬೇರೆ ಕಂಪನಿಗಳು ರೋಲ್ಸ್ ರಾಯ್ಸ್ ಫ್ಯಾಂಟಮ್ 7 ಕಾರಿಗೆ ಕನಿಷ್ಠ ರೂ.4.5 ಲಕ್ಷಗಳನ್ನು ಬಾಡಿಗೆ ಶುಲ್ಕವೆಂದು ನಿಗದಿಪಡಿಸಿವೆ. ಅದೂ ಸಹ ಬಾಡಿಗೆ ಮಿತಿಯನ್ನು ಕೇವಲ 80 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬಾಬಿಯವರ ರೋಲ್ಸ್ ರಾಯ್ಸ್ ಕಾರು ಭಾರತದ ಅಗ್ಗದ ಬೆಲೆಯ ಬಾಡಿಗೆ ರೋಲ್ಸ್ ರಾಯ್ಸ್ ಕಾರಾಗಿದೆ. ರೋಲ್ಸ್ ರಾಯ್ಸ್ ಫ್ಯಾಂಟಮ್ 7 ಕಾರಿನ ಬೆಲೆ ಸುಮಾರು ರೂ.10 ಕೋಟಿಗಳಾಗಿದೆ.

ಅತಿ ಕಡಿಮೆ ಬೆಲೆಯ ಬಾಡಿಗೆ ಹೊಂದಿದೆ ಗೋಲ್ಡ್ ಬಣ್ಣದ ಈ ರೋಲ್ಸ್ ರಾಯ್ಸ್ ಕಾರು

ಈ ಕಾರಣಕ್ಕೆ ಬಾಬಿರವರು ಈ ಕಾರನ್ನು ಚಾಲಕನ ಹೊರತು ಇತರರಿಗೆ ಚಾಲನೆ ಮಾಡಲು ಅನುಮತಿ ನೀಡುವುದಿಲ್ಲ. ಚಾಲಕನಿಲ್ಲದ ವೇಳೆಯಲ್ಲಿ ಅವರೇ ಸ್ವತಃ ಚಾಲಕರಾಗಿ ಚಾಲನೆ ಮಾಡುತ್ತಾರೆ.

Most Read Articles

Kannada
English summary
Gold wrapped Rolls Royce Phantom VII has low rent. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X