ಕಣ್ಣು ಕುಕ್ಕುವಂತಹ ದೇಹಸಿರಿಯೊಂದಿಗೆ ನಿಸ್ಸಾನ್ 'ಗೊಡ್ಜಿಲ್ಲಾ'
ಮನುಷ್ಯನ ಆಸೆಗೆ ಕೊನೆಯಿಲ್ಲ. 'ಹೆನ್ನು-ಹೊನ್ನು-ಮಣ್ಣು' ಈ ಮೂರರ ಹಿಂದೆ ಸದಾ ಅಲಿದಾಡುತ್ತಿರುತ್ತಾನೆ. ಭಾರತೀಯರಂತೆ ಅತ್ತ ಗಲ್ಫ್ ರಾಷ್ಟ್ರಗಳಲ್ಲೂ ಬಂಗಾರಕ್ಕೆ ಅತಿ ಹೆಚ್ಚಿನ ಬೇಡಿಕೆಯಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.
ಈ ನಡುವೆ ದುಬೈನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಾಹನ ಪ್ರದರ್ಶನ ಮೇಳವೊಂದರಲ್ಲಿ ಕೋಟಿಗಟ್ಟಲೆ ರುಪಾಯಿಗಳಷ್ಟು ಬೆಲೆ ಬಾಳುವ ಚಿನ್ನ ಲೇಪಿತ ನಿಸ್ಸಾನ್ 'ಗೊಡ್ಜಿಲ್ಲಾ' ಕಾರನ್ನು ಪ್ರದರ್ಶನ ಮಾಡಿರುವುದು ಸದ್ಯದ ಹಾಟ್ ಸಮಾಚಾರ.

ಆಟೋಮೆಕ್ಯಾನಿಕಾ ದುಬೈ 2016 ಮೇಳದಲ್ಲಿ ನೈಜ ನಿಸ್ಸಾನ್ ಆರ್35 ಜಿಟಿಆರ್ ಕಾರಿನಲ್ಲಿ ಹಲವಾರು ಮಾರ್ಪಾಡುಗಳನ್ನು ತರುವ ಮೂಖಾಂತರ ಪ್ರದರ್ಶನಗೊಳಿಸಲಾಗಿದೆ.

ವಿಶೇಷ ಚಿನ್ನ ಲೇಪಿತ ನಿಸ್ಸಾನ್ ಗೊಡ್ಜಿಲ್ಲಾ ಕಾರು ಒಂದು ಮಿಲಿಯನ್ ಡಾಲರ್ ಅಮೆರಿಕನ್ ಡಾಲರ್ ಗಿಂತಲೂ ಬೆಲೆ ಬಾಳುತ್ತದೆ. ಇದನ್ನು ಭಾರತೀಯ ರುಪಾಯಿಗೆ ಪರಿವರ್ತಿಸಿದಾಗ ಸರಿ ಸುಮಾರು ಏಳು ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

3.8 ಲೀಟರ್ ವಿ6 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನಿಸ್ಸಾನ್ ಆರ್35 ಜಿಟಿ-ಆರ್ ಕಾರು ಬರೋಬ್ಬರಿ 545 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿರುತ್ತದೆ.

ಆದರೆ ವಿಶೇಷವಾಗಿ ಟ್ಯೂನ್ ಮಾಡಿರುವುದರ ಫಲವಾಗಿ ಮತ್ತಷ್ಟು ಶಕ್ತಿಶಾಲಿ ಎನಿಸಿಕೊಳ್ಳಲಿದ್ದು, ಗರಿಷ್ಠ 820 ಅಶ್ವಶಕ್ತಿ ಉತ್ಪಾದಿಸಲಿದೆ.

ಏರೋಡೈನಾಮಿಕ್ ವೈಶಿಷ್ಟ್ಯಗಳಿಗೆ ಅತಿ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಗಟ್ಟಿಮುಟ್ಟಾದ ದೇಹ ಮತ್ತು ಅತ್ಯುತ್ತಮ ಹ್ಯಾಂಡ್ಲಿಂಗ್ ನತ್ತ ಗಮನ ಹರಿಸಲಾಗಿದೆ.

ಇದರಲ್ಲಿರುವ ವಿ6 ಎಂಜಿನ್, ಆರು ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡಲಿದೆ. ಅಂದರೆ ರೇಸ್ ಕಾರಿನಷ್ಟು ವೇಗ ಪ್ರದಾನ ಮಾಡಲಿದೆ.

ಕ್ರೀಡಾ ಕಾರುಗಳನ್ನು ಕಸ್ಟಮೈಸ್ಡ್ ಮತ್ತು ಟ್ಯೂನ್ ಮಾಡುವ ಕುಹ್ಲ್ ರೇಸಿಂಗ್ ತಂಡವು ಈ ಬಹುಕೋಟಿ ದುಬಾರಿಯ ನಿಸ್ಸಾನ್ ಆರ್35 ಜಿಟಿಆರ್ ಕಾರನ್ನು ತಯಾರಿಸಿದೆ.

ಕುಹ್ಲ್ ರೇಸಿಂಗ್ ಸಂಸ್ಥೆಯು ಮಾಸ್ಟರ್ ಎಂಗ್ರೇವರ್ ತಕಹಿಕೊ ಇಝವಾ ಮತ್ತು ಆರ್ಟಿಸ್ ಸಹಭಾಗಿತ್ವದಲ್ಲಿ ನಿಸ್ಸಾನ್ ಚಿನ್ನ ಲೇಪಿತ ಕಾರನ್ನು ನಿರ್ಮಿಸಿದೆ.

ಜಗತ್ತಿನ ಅತ್ಯಂತ ಆಕರ್ಷಕ ಸೂಪರ್ ಕಾರುಗಳಲ್ಲಿ ಒಂದಾಗಿದೆ. ಇದರಲ್ಲಿ ದೊಡ್ಡದಾದ 20 ಸ್ಪೋಕ್ ಅಲಾಯ್ ಚಕ್ರಗಳನ್ನು ಜೋಡಣೆ ಮಾಡಲಾಗಿದೆ.

ಹೊರಮೈ ನೋಟವು ಪ್ರತಿಯೊಬ್ಬ ವಾಹನ ಪ್ರೇಮಿಯ ಕಣ್ಣು ಕುಕ್ಕುವಂತಿದೆ. ಅಲ್ಲದೆ ವಿಶೇಷ ಕಲಾಕೃತಿಯ ವಿನ್ಯಾಸವನ್ನು ರಚಿಸಲಾಗಿದೆ.

ಕಾರಿನೊಳಗೂ ಐಷಾರಾಮಿ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದೆ. ಆದರೆ ಇದನ್ನು ಮಾರಾಟಕ್ಕಿಡಲಾಗುವುದೇ ಎಂಬುದು ಇನ್ನು ತಿಳಿದು ಬಂದಿಲ್ಲ.

ಅಂದ ಹಾಗೆ ಮೇ ಅಥವಾ ಜೂನ್ ವೇಳೆಯಾಗುವಾಗ ಭಾರತದಲ್ಲಿ ಬಿಡುಗಡೆಯಾಗಲಿರುವ ನಿಸ್ಸಾನ್ ಜಿಟಿಆರ್ ಸೂಪರ್ ಕಾರು ಅಂದಾಜು ಎರಡು ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ನಿಸ್ಸಾನ್ ಜಿಟಿಆರ್ ಭಾರತ ಮಾದರಿಯು 3.8 ಲೀಟರ್ ಎಂಜಿನ್ ನಿಯಂತ್ರಿಸಲ್ಪಡಲಿದ್ದು, 612 ಎನ್ ಎಂ ತಿರುಗುಬಲದಲ್ಲಿ 542 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ನಿಸ್ಸಾನ್ ಜಿಟಿಆರ್ ಸೂಪರ್ ಕಾರು ಕೇವಲ ಮೂರು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.


Click it and Unblock the Notifications








