Vande Bharat Express: ದೇಶಾದ್ಯಂತ ಸಂಚರಿಸಲಿವೆ 500 ವಂದೇ ಭಾರತ್ ಎಕ್ಸ್‌ಪ್ರೆಸ್, ನಿಮ್ಮೂರಿಗೂ ಬರಲಿದೆ?

ರೈಲು ಪ್ರಯಾಣಿಕರು ಖುಷಿ ಪಡುವ ವಿಚಾರವೊಂದು ಇಲ್ಲಿದೆ. ಮುಂದಿನ ವರ್ಷ ಸುಮಾರು 500 ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳನ್ನು ಪ್ರಾರಂಭಿಸಲು ಯೋಜಿಸಲಾಗುತ್ತಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆಂದು ವರದಿಯಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಜನರಲ್ ಮ್ಯಾನೇಜರ್ ಬಿ.ಜಿ.ಮಲ್ಯ, 'ಮುಂದಿನ ವರ್ಷ, ಐಸಿಎಫ್ ಘಟಕವು 500 - 550 ವಂದೇ ಭಾರತ್ ರೈಲುಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿದೆ. ಈ ವರ್ಷ ಒಟ್ಟು 75 ವಂದೇ ಭಾರತ್ ರೈಲುಗಳನ್ನು ತಯಾರಿಸಲು ಯೋಜಿಸಲಾಗಿದ್ದು, ಅದರಲ್ಲಿ 8-ಕಾರ್ ಗಳ 63 ಹಾಗೂ 16 ಕಾರ್ ಗಳ 12 ರೈಲುಗಳಿವೆ' ಎಂದು ಖಾಸಗಿ ಮಾಧ್ಯಮವೊಂದಿಕ್ಕೆ ಮಾಹಿತಿ ನೀಡಿದ್ದಾರೆ.

Vande Bharat Express: ದೇಶಾದ್ಯಂತ ಸಂಚರಿಸಲಿವೆ 500 ವಂದೇ ಭಾರತ್ ಎಕ್ಸ್‌ಪ್ರೆಸ್, ನಿಮ್ಮೂರಿಗೂ ಬರಲಿದೆ?

ಇದಿಷ್ಟೇ ಅಲ್ಲದೆ, ಭಾರತೀಯ ರೈಲ್ವೆ ಸುಮಾರು 1,700 LHB (ಲಿಂಕ್ ಹಾಫ್‌ಮನ್ ಬುಷ್) ಕೋಚ್‌ಗಳು ಹಾಗೂ 700 ವಂದೇ ಭಾರತ್ ರೈಲಿನ ಕೋಚ್‌ಗಳನ್ನು ತಯಾರಿಸಲು ತೀರ್ಮಾನಿಸಿದೆ. ಜೊತೆಗೆ 750 EMU (ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ಕೋಚ್‌ಗಳು ಹಾಗೂ 100 ಸ್ಪೆಷಲ್ ಕೋಚ್‌ಗಳನ್ನು ಉತ್ಪಾದಿಸಲು ಯೋಜಿಸಿರುವುದರಿಂದ ಒಟ್ಟು 3,250 ಕೋಚ್‌ಗಳನ್ನು ತಯಾರಿಸಬೇಕಾಗಿದೆ.

ರೈಲ್ವೆ ಇಲಾಖೆಯು, ಅವಘಡಗಳು ಸಂಭವಿಸಿದಾಗ ಪ್ರಯಾಣಿಕರಿಗೆ ಗಾಯಗಳಾಗುವುದನ್ನು ತಪ್ಪಿಸಲು ತನ್ನ ಕೋಚ್‌ಗಳಲ್ಲಿ 'ಆಂಟಿ ಇಂಜುರಿ' ಫಿಟ್ಟಿಂಗ್‌ಗಳನ್ನು ಪರಿಚಯಿಸಲು ಕೆಲಸ ಮಾಡುತ್ತಿದೆ. ಜೊತೆಗೆ ಐಸಿಎಫ್ ವಿನ್ಯಾಸದ ಕೋಚ್‌ಗಳನ್ನು ಲಿಂಕ್ ಹಾಫ್‌ಮನ್ ಬುಷ್ (LHB) ಕೋಚ್‌ಗಳಿಗೆ ಬದಲಾಯಿಸಲು ಯೋಜಿಸುತ್ತಿದೆ. ಇದು, ಜರ್ಮನ್ ವಿನ್ಯಾಸವನ್ನು ಹೊಂದಿದ್ದು, ಹಳಿತಪ್ಪಿದ ವೇಳೆ ಕೋಚ್‌ಗಳು ಒಂದರ ಮೇಲೊಂದು ಬೀಳುವುದನ್ನು ತಪ್ಪಿಸುತ್ತದೆ.

Vande Bharat Express: ದೇಶಾದ್ಯಂತ ಸಂಚರಿಸಲಿವೆ 500 ವಂದೇ ಭಾರತ್ ಎಕ್ಸ್‌ಪ್ರೆಸ್, ನಿಮ್ಮೂರಿಗೂ ಬರಲಿದೆ?

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವಿಚಾರಕ್ಕೆ ಬರುವುದಾದರೆ, ದೇಶದಲ್ಲಿ ಮೊದಲ ಬಾರಿಗೆ ಈ ರೈಲು 2019ರ ಫೆಬ್ರವರಿಯಲ್ಲಿ ನವದೆಹಲಿ - ವಾರಣಾಸಿ ನಡುವೆ ಸಂಚಾರವನ್ನು ಶುರು ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಹಸಿರು ನಿಶಾನೆ ತೋರಿಸಿದ್ದರು. ವಿವಿಧ ರಾಜ್ಯಗಳಲ್ಲಿ ಪ್ರಸ್ತುತ 34 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಚರಣೆ ನಡೆಸುತ್ತಿದ್ದು, ಕರ್ನಾಟಕದ ಮೂರು ಮಾರ್ಗದಲ್ಲಿ ಈ ರೈಲು ಓಡಾಟ ನಡೆಸುತ್ತಿದೆ.

ಶೀಘ್ರದಲ್ಲೆಯೇ ಮಂಗಳೂರು - ಮಡಗಾಂ ನಡೆವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ. ಮಂಗಳೂರು - ಬೆಂಗಳೂರು ನಡುವೆಯೂ ಈ ರೈಲು ಕಾರ್ಯಚರಣೆ ನಡೆಸುವ ಕಾಲ ಹತ್ತಿರಬಂದಿದ್ದು, ಬೆಂಗಳೂರು - ಬೆಳಗಾವಿ ಮಧ್ಯೆಯು ಓಡಾಟ ನಡೆಸುವ ಸಾಧ್ಯತೆಯಿದೆ. ಮಧುರೈ - ಬೆಂಗಳೂರು ನಡುವೆಯೂ ಸಂಚಾರಿಸಲಿದೆ ಎಂದು ಹೇಳಲಾಗಿದೆ.

ರೈಲ್ವೆ ಇಲಾಖೆಯು ಮುಂದಿನ ವರ್ಷ ಹಲವು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಬಿಡಲು ಯೋಜಿಸಿರುವುದರಿಂದ ಬೆಂಗಳೂರು - ಕಲಬುರಗಿ, ಬೆಂಗಳೂರು - ಶಿವಮೊಗ್ಗ ನಡುವೆಯೂ ಈ ರೈಲು ಸೇವೆ ಆರಂಭವಾಗಬಹುದು. ಸದ್ಯ, ವಂದೇ ಭಾರತ್ ರೈಲುಗಳು ಗಂಟೆಗೆ 130 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ವೈಫೈ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ಜೈವಿಕ ಶೌಚಾಲಯ ಹಾಗೂ ಅಗ್ನಿ ನಿರೋಧನ ಸಾಧನಗಳನ್ನು ಹೊಂದಿದೆ.

ರಾತ್ರಿ ವೇಳೆ ಪ್ರಯಾಣಿಕರ ಅನುಕೂಲಕ್ಕಾಗಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ತಯಾರಿಸಲಾಗುತ್ತಿದ್ದು, 2024ರ ಫೆಬ್ರವರಿ ವೇಳೆಗೆ ಸಂಚಾರ ಆರಂಭಿಸುವ ಸಾಧ್ಯತೆಯಿದೆ. ಈ ರೈಲು, 857 ಬರ್ತ್‌ಗಳನ್ನು ಒಳಗೊಂಡಿರುತ್ತದೆ. ಕಡಿಮೆ ಖರ್ಚಿನಲ್ಲಿ ವಂದೇ ಸಾಧಾರಣ್ ರೈಲು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದ್ದು, ನವೆಂಬರ್ 8ರಂದು (ಬುಧವಾರ) ಅಹಮದಾಬಾದ್ ಮತ್ತು ಮುಂಬೈ ನಡುವೆ ಪ್ರಾಯೋಗಿಕ ಸಂಚಾರ ನಡೆಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, November 11, 2023, 16:25 [IST]
English summary
Good news vande bharat express 500 trains launched next year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+