Google ಸಿಇಒ ಸುಂದರ್ ಪಿಚೈ ಬಳಿಯಿವೆ ಐಷಾರಾಮಿ ಕಾರುಗಳು: ಬೆಲೆ ಕೇಳಿದ್ರೆ ಅಬ್ಬಾ ಎನಿಸುತ್ತೆ!
ಭಾರತದ ಮೂಲದ Google ಸಿಇಒ ಸುಂದರ್ ಪಿಚೈ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ತಮಿಳುನಾಡಿನ ಮಧುರೈಯಲ್ಲಿ ಜನಿಸಿದ ಅವರು, ಐಐಟಿ ಖರಗ್‌ಪುರದಲ್ಲಿ ಬಿ.ಟೆಕ್ ಪದವಿ ಪಡೆದು ಉದೋಗ್ಯಕಾಗಿ ಅಮೆರಿಕಕ್ಕೆ ತೆರಳಿ, ಅಲ್ಲಿ ವಿಶ್ವದ ಇಂಟರ್ನೆಟ್ ದೈತ್ಯ ಗೂಗಲ್‌ನ ಮುಖ್ಯಸ್ಥರಾಗುವ ಮೂಲಕ ಎಷ್ಟೋ ಯುವ ಜನರಿಗೆ ಮಾದರಿಯಾಗಿದ್ದಾರೆ.
ಇಂತಹ ಸುಂದರ್ ಪಿಚೈ, ಪ್ರಪಂಚದ ಸಿರಿವಂತರಲ್ಲಿ ತನಗೂ ಒಂದು ಸ್ಥಾನವನ್ನು ಸೃಷ್ಟಿಸಿಕೊಂಡಿದ್ದಾರೆ. ಕಳೆದ ಶುಕ್ರವಾರ ಬಿಡುಗಡೆಯಾಗಿರುವ ಸೆಕ್ಯುರಿಟೀಸ್ ಫೈಲಿಂಗ್ ವರದಿ ಪ್ರಕಾರ, ಅವರು 2022ರಲ್ಲಿ ಸರಿ ಸುಮಾರು 226 ಮಿಲಿಯನ್ (ಅಂದಾಜು ರೂ.1,854 ಕೋಟಿ) ಡಾಲರ್ ವೇತನ ಪಡೆಯುತ್ತಿದ್ದರು. ಇದು ಸಂಸ್ಥೆಯ ಇತರ ಉದ್ಯೋಗಿಗಳ ಸಂಬಳಕ್ಕಿಂತ 800 ಪಟ್ಟು ಹೆಚ್ಚಾಗಿದೆ. ಸುಂದರ್ ಪಿಚೈ ಅವರಿಗೆ ಕಾರುಗಳ ಕ್ರೇಜ್ ಸಹ ಇದ್ದು, ದುಬಾರಿ ಹಾಗೂ ಐಷಾರಾಮಿ ಎಸ್‍ಯುವಿಗಳ ಮಾಲೀಕರಾಗಿದ್ದಾರೆ.

ಮೊದಲಿಗೆ ಅವರ ಬಳಿಯಿರುವ ದುಬಾರಿ ಬೆಲೆಯ ಬಿಎಂಡಬ್ಲ್ಯೂ 730LD ಬಗ್ಗೆ ಮಾತನಾಡೋಣ. ಇದು ರೂ.1.35 ಕೋಟಿ (83,650 ಅಮೆರಿಕನ್ ಡಾಲರ್) ಬೆಲೆಯನ್ನು ಹೊಂದಿದ್ದು, ಅದಕ್ಕೆ ತಕ್ಕಂತೆ ಐಷಾರಾಮಿಯಾಗಿದೆ. 3.0-ಲೀಟರ್ 6 ಸಿಲಿಂಡರ್, 2,997 ಸಿಸಿ ಸಾಮರ್ಥ್ಯದ ಡೀಸೆಲ್ ಎಂಜಿನ್ ಪಡೆದಿದ್ದು, 600 bhp ಗರಿಷ್ಠ ಪವರ್ ಹಾಗೂ 500 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 kmpl ಮೈಲೇಜ್ ನೀಡಲಿದ್ದು, 250 kmph ಟಾಪ್ ಸ್ವೀಡ್ ಹೊಂದಿದೆ.
ಈ ಕಾರು, ಹತ್ತಾರು ಭರಪೂರ ವೈಶಿಷ್ಟ್ಯಗಳನ್ನು ಪಡೆದಿದೆ. ಮುಖ್ಯವಾಗಿ 6 ಸ್ವೀಕರ್ ಹೊಂದಿರುವ ಆಪಲ್ ಕಾರ್ ಪ್ಲೇ ಹೊಂದಿದ್ದು, ಇದು ಅದ್ಬುತ ಸೌಂಡ್ ಕ್ವಾಲಿಟಿಯನ್ನು ಒಳಗೊಂಡಿದೆ. ಆಟೋಮೆಟಿಕ್ 4 ಜೋನ್ ಕ್ಲೇಮೇಟ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಪಾರ್ಕಿಂಗ್ ಅಸಿಸ್ಟ್, ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ.

ಗೂಗಲ್ ಸಿಇಒ ಸುಂದರ್ ಪಿಚೈ, ಮರ್ಸಿಡಿಸ್ ಎಸ್650 ಕಾರನ್ನು ಹೊಂದಿದ್ದು, ಇದು ರೂ.2.73 ಕೋಟಿ ದರವನ್ನು ಪಡೆದಿದೆ. 6.0-ಲೀಟರ್ ವಿ-12 bi-ಟರ್ಬೊ 12 ಸಿಲಿಂಡರ್ 5980 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 630 bhp ಪವರ್ ಹಾಗೂ 1000 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 7 ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯನ್ನು ಪಡೆದಿದೆ.
ಈ ಕಾರು, 7.08 kmpl ಮೈಲೇಜ್ ನೀಡಲಿದ್ದು, 250 kmph ಟಾಪ್ ಸ್ವೀಡ್ ಹೊಂದಿದೆ. ಕೇವಲ 4.6
ಸೆಕೆಂಡುಗಳಲ್ಲಿ 0 ಯಿಂದ 100 kmph ವೇಗವನ್ನು ಪಡೆಯಲಿದೆ. RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. 4 ಜೋನ್ ಕ್ಲೇಮೇಟ್ ಕಂಟ್ರೋಲ್, ಏರ್ ಕ್ವಾಲಿಟಿ ಕಂಟ್ರೋಲ್, ಮಲ್ಟಿ ಫಂಕ್ಷನಲ್ ಸ್ಟೇರಿಂಗ್ ವೀಲ್ಸ್, ಫ್ರಂಟ್ ಹಾಗೂ ರೇರ್ USB ಚಾರ್ಜಿಂಗ್ ಸಾಕೆಟ್‌ನ್ನು ಹೊಂದಿದೆ.

ಅವರ ಸಮೀಪವಿರುವ ಮತ್ತೊಂದು ಕಾರು, ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಆಗಿದೆ. ಇದು ರೂ.73 ಲಕ್ಷ ಬೆಲೆಯನ್ನು (84,260 USD ಡಾಲರ್) ಹೊಂದಿದೆ. 2.0-ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 160 bhp ಪವರ್, 400 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 195 kmph ಟಾಪ್ ಸ್ವೀಡ್ ಹೊಂದಿದ್ದು, 9.1 ಸೆಕೆಂಡುಗಳಲ್ಲಿ 0 ಯಿಂದ 100 kmph ವೇಗವನ್ನು ಪಡೆಯಲಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಸುಂದರ್ ಪಿಚೈ, ಟೊಯೊಟಾ HiAceನ ಒಡೆಯರು ಆಗಿದ್ದಾರೆ. 2004ರಿಂದ ವಿದೇಶಿ ಮಾರುಕಟ್ಟೆಯಲ್ಲಿ ಸೇಲ್ ಆಗುತ್ತಿರುವ ಈ ಕಾರು, ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲೂ ಬಿಡುಗಡೆಯಾಗಿದ್ದು, ರೂ.55 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 2.8-ಲೀಟರ್ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಕೇವಲ 17 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಪಡೆಯಲಿದ್ದು, ಸುರಕ್ಷತೆಯ ದೃಷ್ಟಿಯಿಂದಲ್ಲೂ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications